ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪ್ರೇಯಸಿಯ ಮನೆಗೆ ಪತ್ನಿಯನ್ನು ಕರೆದೊಯ್ದು ಗುಂಡಿಟ್ಟು ಕೊಂದ ಪತಿ: ನೇಪಾಳಕ್ಕೆ ಪರಾರಿಯಾದ ಜೋಡಿ ಹಕ್ಕಿ ಸಿಕ್ಕಿ ಬಿದ್ದಿದ್ದಿ ಹೇಗೆ?

Crime News: ವ್ಯಕ್ತಿಯೊಬ್ಬ ತನ್ನ ಗೆಳತಿಯ ಸಹಾಯದಿಂದ ಮದುವೆಯಾದ ಕೇವಲ ಮೂರು ತಿಂಗಳಲ್ಲೇ ತನ್ನ ಪತ್ನಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಹರಿಯಾಣದ ಗುರುಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೇ 22ರಂದು ಸಂತ್ರಸ್ತೆಯ ತಾಯಿ ಮನೇಸರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದಾಗ ಪ್ರಕರಣ ಬೆಳಕಿಗೆ ಬಂದಿತು.

ಪತ್ನಿಯನ್ನು ಗುಂಡಿಕ್ಕಿ ಕೊಂದ ಪತಿಯನ್ನು ಬಂಧಿಸಿದ ಪೊಲೀಸರು

ಚಂಡೀಗಢ, ಜು. 6: ಮಹಾರಾಷ್ಟ್ರದ ಪುಣೆಯ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್ ಅವರನ್ನು ಭಾವಿ ಪತ್ನಿ ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಚೇತನ್‌ ಚೌಧರಿ ಕೊಲೆ ಮಾಡಿದ ಪ್ರಕರಣವು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಈ ಪ್ರಕರಣ ಮಾಸುವ ಮುನ್ನವೇ, ಹರಿಯಾಣದ (Haryana) ಗುರುಗ್ರಾಮದಲ್ಲಿ ಇದೇ ರೀತಿಯ ಭಯಾನಕ ಪ್ರಕರಣ ಬೆಳಕಿಗೆ ಬಂದಿದೆ. ಪತ್ನಿಯನ್ನು ಪ್ರೇಯಸಿಯ ಮನೆಗೆ ಕರೆದೊಯ್ದು, ಪತಿ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ (Crime News). ಬಳಿಕ ಪತಿ ಮತ್ತು ಆತನ ಪ್ರೇಯಸಿ ನೇಪಾಳಕ್ಕೆ ಪರಾರಿಯಾಗಿದ್ದಾರೆ.

ಮನೇಸರ್‌ನಲ್ಲಿ 25 ವರ್ಷದ ವ್ಯಕ್ತಿಯೊಬ್ಬ ತನ್ನ ಗೆಳತಿಯ ಸಹಾಯದಿಂದ ಮದುವೆಯಾದ ಕೇವಲ ಮೂರು ತಿಂಗಳಲ್ಲೇ ತನ್ನ ಹೆಂಡತಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಗೆಳತಿಯ ಬಾಡಿಗೆ ಮನೆಯಲ್ಲಿ ಈ ಕೊಲೆ ನಡೆದಿದೆ. ಈ ಜೋಡಿ ತಮ್ಮ ಮೂರು ವರ್ಷಗಳ ಸಂಬಂಧವನ್ನು ಮುಂದುವರಿಸಲು ಪತ್ನಿಯನ್ನು ಕೊಲ್ಲಲು ಸಂಚು ರೂಪಿಸಿತ್ತು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ಮೇ 22ರಂದು ಸಂತ್ರಸ್ತೆಯ ತಾಯಿ ಮನೇಸರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದಾಗ ಪ್ರಕರಣ ಬೆಳಕಿಗೆ ಬಂತು. ತನ್ನ 22 ವರ್ಷದ ಮಗಳು ಫೆಬ್ರವರಿಯಲ್ಲಿ ಮನೇಸರ್ ನಿವಾಸಿ ಅಂಕಿತ್‌ನನ್ನು ವಿವಾಹವಾಗಿದ್ದರು ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ.

ಮದುವೆಯಾದ ಎರಡೇ ತಿಂಗಳಿಗೆ ನವವಿವಾಹಿತೆ ಸಾವು; ಕುಟುಂಬಸ್ಥರ ವಿರುದ್ಧ ಕೊಲೆ ಆರೋಪ

ದೂರಿನ ಪ್ರಕಾರ, ಮಹಿಳೆ ಮೇ 21ರಂದು ನಾಪತ್ತೆಯಾಗಿದ್ದರು. ಆಕೆಯ ಕುಟುಂಬವು ಆಕೆಯನ್ನು ಹುಡುಕಾಡಿ ವಳಿಕ ಅತ್ತೆ-ಮಾವಂದಿರನ್ನು ಸಂಪರ್ಕಿಸಿತು. ಆದರೆ ಯಾವುದೇ ಸೂಕ್ತ ಪ್ರತಿಕ್ರಿಯೆ ಸಿಗಲಿಲ್ಲ. ಇದರಿಂದ ಅನುಮಾನಗೊಂಡ ತಾಯಿ ಮಗಳ ಪತಿ ಮತ್ತು ಕುಟುಂಬ ಸದಸ್ಯರು ಇದರಲ್ಲಿ ಭಾಗಿಯಾಗಿದ್ದಾರೆಂದು ಶಂಕಿಸಿ, ಸಂತ್ರಸ್ತೆಯ ತಾಯಿ ಪೊಲೀಸರನ್ನು ಸಂಪರ್ಕಿಸಿದರು. ನಂತರ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಯಿತು.

ತನಿಖೆಯ ಸಮಯದಲ್ಲಿ, ಪೊಲೀಸರು ಮೇ 22ರಂದು ಮನೇಸರ್‌ನ ಮನೆಯಿಂದ ಮಹಿಳೆಯ ಮೃತದೇಹವನ್ನು ವಶಪಡಿಸಿಕೊಂಡರು. ಪೊಲೀಸ್ ತನಿಖೆಯಲ್ಲಿ ಆಕೆಯನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂತು. ಈ ಸಂಬಂಧ ಕೊಲೆ ಪ್ರಕರಣವನ್ನು ದಾಖಲಾಗಿಸಲಾಗಿದ್ದು, ತನಿಖೆಯನ್ನು ತೀವ್ರಗೊಳಿಸಲಾಯಿತು.

ನಂತರ ಪೊಲೀಸರು ಆರೋಪಿ ಪತಿ ಗುರುಗ್ರಾಮದ ಮನೇಸರ್ ನಿವಾಸಿ 25 ವರ್ಷದ ಅಂಕಿತ್ ಮತ್ತು ಹರಿಯಾಣದ ಝಜ್ಜರ್ ಜಿಲ್ಲೆಯ ನಿವಾಸಿ 38 ವರ್ಷದ ಗೆಳತಿ ರಜನಿ ದೇವಿಯನ್ನು ಬಂಧಿಸಿದರು. ತನಿಖಾಧಿಕಾರಿಗಳ ಪ್ರಕಾರ, ಅಂಕಿತ್ ಮನೇಸರ್‌ನಲ್ಲಿ ತಂಬಾಕು ಅಂಗಡಿ ನಡೆಸುತ್ತಿದ್ದರೆ, ರಜನಿ ಅದೇ ಪ್ರದೇಶದಲ್ಲಿ ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದಳು.

ಪತ್ನಿಯನ್ನು ಮನವೊಲಿಸಲು ತೆರಳಿದ್ದ ಪತಿಯನ್ನು ಬೆಂಕಿ ಹಚ್ಚಿ ಕೊಲೆ ಮಾಡಿದ ಭಾವ; ಭಯಾನಕ ದೃಶ್ಯ ಕ್ಯಾಮರಾದಲ್ಲಿ ಸೆರೆ

ವಿಚಾರಣೆಯ ಸಮಯದಲ್ಲಿ, ಅಂಕಿತ್ ಮತ್ತು ರಜನಿ ಮೂರು ವರ್ಷಗಳಿಂದ ಎಂದು ಪೊಲೀಸರಿಗೆ ತಿಳಿದು ಬಂತು. ಅಪರಾಧ ನಡೆದ ದಿನ, ಅಂಕಿತ್ ತನ್ನ ಪತ್ನಿಯನ್ನು ಗೆಳತಿಯ ಬಾಡಿಗೆ ಮನೆಗೆ ಕರೆದೊಯ್ದಿದ್ದ. ಅಲ್ಲಿ ಇಬ್ಬರು ಸೇರಿ ಆಕೆಯನ್ನು ಗುಂಡಿಕ್ಕಿ ಕೊಂದಿದ್ದಾರೆ.

ಕೊಲೆಗೆ ಬಳಸಲಾದ ಆಯುಧವನ್ನು ಅಪರಾಧ ನಡೆಯುವ ಎರಡು ತಿಂಗಳ ಮೊದಲು ಉತ್ತರ ಪ್ರದೇಶದಿಂದ ಖರೀದಿಸಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ. ಕೊಲೆಯ ನಂತರ, ಅಂಕಿತ್ ಮತ್ತು ರಜನಿ ಹರಿದ್ವಾರಕ್ಕೆ ಓಡಿಹೋಗಿ ನಂತರ ನೇಪಾಳಕ್ಕೆ ಪರಾರಿಯಾದರು. ಆರೋಪಿಗಳು ಜೂನ್ 30ರಂದು ಭಾರತಕ್ಕೆ ಮರಳುವವರೆಗೂ ತಲೆಮರೆಸಿಕೊಂಡಿದ್ದರು. ಇದೀಗ ಅವರನ್ನು ಬಂಧಿಸಲಾಗಿದೆ.