ಪತ್ನಿಯನ್ನು ಮನವೊಲಿಸಲು ತೆರಳಿದ್ದ ಪತಿಯನ್ನು ಬೆಂಕಿ ಹಚ್ಚಿ ಕೊಲೆ ಮಾಡಿದ ಭಾವ; ಭಯಾನಕ ದೃಶ್ಯ ಕ್ಯಾಮರಾದಲ್ಲಿ ಸೆರೆ
Crime News: ತನ್ನ ಪರಿತ್ಯಕ್ತ ಪತ್ನಿಯನ್ನು ಮನೆಗೆ ಹಿಂತಿರುಗಿಸಲು ಮನವೊಲಿಸಲು ಹೋದ ವ್ಯಕ್ತಿಯೊಬ್ಬನನ್ನು ಅವನ ಭಾವ ಬೆಂಕಿ ಹಚ್ಚಿ ಸುಟ್ಟುಹಾಕಿರುವ ಘಟನೆ ಪಂಜಾಬ್‌ನಲ್ಲಿ ನಡೆದಿದೆ. ಪತ್ನಿ ತನ್ನ ಕುಟುಂಬದೊಂದಿಗೆ ಇರಲು ಹೋಗಿದ್ದ ಕಾರಣ, ಮನೆಗೆ ಮರಳುವಂತೆ ಮನವೊಲಿಸಲು ತನ್ನ ಅತ್ತೆಯ ಮನೆಗೆ ಹೋಗಿದ್ದಾಗ ಈ ಘಟನೆ ಸಂಭವಿಸಿದೆ.
ಸಾಂದರ್ಭಿಕ ಚಿತ್ರ -
ಚಂಡೀಗಢ, ಜು.5: ತನ್ನ ಪರಿತ್ಯಕ್ತ ಪತ್ನಿಯನ್ನು ಮನೆಗೆ ಹಿಂತಿರುಗಿಸಲು ಮನವೊಲಿಸಲು ಹೋದ ವ್ಯಕ್ತಿಯೊಬ್ಬನನ್ನು ಅವನ ಭಾವ ಬೆಂಕಿ ಹಚ್ಚಿ ಸುಟ್ಟುಹಾಕಿರುವ ಘಟನೆ ಪಂಜಾಬಿನ (Punjab) ತರಣ್ ಜಿಲ್ಲೆಯಲ್ಲಿ ನಡೆದಿದೆ. ಆತನನ್ನು ರಕ್ಷಿಸಲು ಧಾವಿಸಿದ ಮಹಿಳೆಯೊಬ್ಬರು ತೀವ್ರ ಸುಟ್ಟ ಗಾಯಗಳಿಂದ ಬಳಲುತ್ತಿದ್ದು, ನಂತರ ಚಿಕಿತ್ಸೆಯ ಸಮಯದಲ್ಲಿ ಸಾವಿಗೀಡಾಗಿದ್ದಾರೆ (Crime News).
ಮೃತರನ್ನು ಲವ್‌ಪ್ರೀತ್ ಸಿಂಗ್ ಮತ್ತು ಗುರ್ಜಿತ್ ಕೌರ್ ಎಂದು ಗುರುತಿಸಲಾಗಿದೆ. ಜೂನ್ 13 ರಂದು ಲವ್‌ಪ್ರೀತ್ ಸಿಂಗ್‌ನ ಪತ್ನಿ ಸಂದೀಪ್ ಕೌರ್ ತನ್ನ ಕುಟುಂಬದೊಂದಿಗೆ ಇರಲು ಹೋಗಿದ್ದ ಕಾರಣ, ಮನೆಗೆ ಮರಳುವಂತೆ ಮನವೊಲಿಸಲು ತನ್ನ ಅತ್ತೆಯ ಮನೆಗೆ ಹೋಗಿದ್ದರು. ಈ ವೇಳೆ ಅವರ ಭಾವ ಸಜನ್ ಸಿಂಗ್, ಲವ್‌ಪ್ರೀತ್ ಮೇಲೆ ದಹನಕಾರಿ ವಸ್ತುವನ್ನು ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ಆರೋಪಿಸಲಾಗಿದೆ.
ಸಜನ್ ಸಿಂಗ್ ಅವರ ಅತ್ತಿಗೆ ಗುರ್ಜಿತ್ ಕೌರ್ ಅವರು ಲವ್‌ಪ್ರೀತ್ ಅವರನ್ನು ರಕ್ಷಿಸಲು ಧಾವಿಸಿದರು. ಆದರೆ ಘಟನೆಯಲ್ಲಿ ಅವರಿಗೂ ತೀವ್ರ ಸುಟ್ಟ ಗಾಯಗಳಾಗಿದ್ದವು. ನಂತರ ಇಬ್ಬರೂ ಚಿಕಿತ್ಸೆಯ ಸಮಯದಲ್ಲಿ ಮೃತಪಟ್ಟರು. ಆರೋಪಿ ಸಜನ್ ಸಿಂಗ್‌ಗೂ ಸುಟ್ಟ ಗಾಯಗಳಾಗಿದ್ದು, ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಲ್ಲಿದೆ ವಿಡಿಯೊ:
पंजाब के अमृतसर से दिल दहला देने वाली घटना सामने आई है। पत्नी को मनाने पहुंचे एक व्यक्ति पर कथित तौर पर उसके साले ने पेट्रोल डालकर आग लगा दी। गंभीर रूप से झुलसे व्यक्ति की इलाज के दौरान मौत हो गई। घटना का वीडियो सामने आने के बाद मामला चर्चा का विषय बन गया है। पुलिस ने मामले की… pic.twitter.com/kdX6XlRmdL
— सर्वेश कुमार शर्मा (@advocate_sharma) July 4, 2026
ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ವಿಡಿಯೊದಲ್ಲಿ ಒಬ್ಬ ವ್ಯಕ್ತಿ ಇದ್ದಕ್ಕಿದ್ದಂತೆ ಬಂದು ಮೈಮೇಲೆ ದಹನಕಾರಿ ವಸ್ತು ಸುರಿದು, ಬೆಂಕಿ ಹಚ್ಚುತ್ತಿರುವುದನ್ನು ಕಾಣಬಹುದು. ಈ ವೇಳೆ ಮಹಿಳೆಯೊಬ್ಬರು ಬೆಂಕಿಯನ್ನು ನಂದಿಸಲು ಓಡುತ್ತಿರುವುದು ಕಂಡುಬಂದಿದೆ.
ಪತಿಯನ್ನು ಕೊಂದು ಬಾತ್‌ರೂಂನಲ್ಲಿ ಹೂತು ಹಾಕಿದ್ದ ಪತ್ನಿ! 45 ದಿನಗಳ ಬಳಿಕ ಹೊರ ಬಿತ್ತು ಕೊಲೆ ರಹಸ್ಯ
ಸಂತ್ರಸ್ತನನ್ನು ರಕ್ಷಿಸಲು ಮುಂದಾದ ಗುರ್ಜಿತ್ ಕೌರ್ ಎಂಬ ಮಹಿಳೆಯೂ ಸಹ ಬೆಂಕಿಯಲ್ಲಿ ಸಿಲುಕಿಕೊಂಡಿದ್ದಾಳೆ. ಕೆಲವು ಸೆಕೆಂಡುಗಳ ನಂತರ, ಆ ಮಹಿಳೆಯ ಹಿಂದೆ ನಿಂತಿದ್ದ ಮೂರನೇ ವ್ಯಕ್ತಿ ಆಕೆಗೆ ಸಹಾಯ ಮಾಡಲು ಪ್ರಯತ್ನಿಸುತ್ತಿರುವುದು ಕಂಡುಬರುತ್ತದೆ. ಬೆಂಕಿ ವೇಗವಾಗಿ ಹರಡುತ್ತಿರುವುದನ್ನು ಹಾಗೂ ಲವ್‌ಪ್ರೀತ್ ಮತ್ತು ಗುರ್ಜಿತ್ ಇಬ್ಬರೂ ಬೆಂಕಿಯಲ್ಲಿ ಬೇಯುತ್ತಿರುವುದನ್ನು ನೋಡಿದ ಜನರು ಭಯಭೀತರಾಗಿ ಓಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸಜನ್ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಗುಡಿಸಲಿಗೆ ಬೆಂಕಿ ಹಚ್ಚಿ ಲೀವ್ ಇನ್ ಜೋಡಿಯ ಕೊಲೆ
53 ವರ್ಷದ ಮಧ್ಯ ವಯಸ್ಕ ಮತ್ತು ಆತನ ಲೀವ್ ಇನ್ ಪಾರ್ಟನರ್, 40 ವರ್ಷದ ಮಹಿಳೆಯನ್ನು ಗ್ರಾಮಸ್ಥರು ಸಜೀವವಾಗಿ ಸುಟ್ಟು ಹಾಕಿದ ಘಟನೆ ಇತ್ತೀಚೆಗೆ ತಮಿಳುನಾಡಿನಲ್ಲಿ ನಡೆದಿತ್ತು. ಇವರು ವಾಸಿಸುತ್ತಿದ್ದ ಗುಡಿಸಲಿಗೆ ಬೆಂಕಿ ಹಚ್ಚಿ ಹತ್ಯೆ ಮಾಡಲಾಗಿತ್ತು. ಕೃಷಿಕ ಪಿ. ಶಕ್ತಿವೇಲು ಮತ್ತು ಆತನ ಸಂಗಾತಿ, ಪಕ್ಕಿರಿಪಾಲಯಂ ನಿವಾಸಿ ಎಸ್. ಅಮೃತಂ ಮೃತ ದುರ್ದೈವಿಗಳು.
ಇಬ್ಬರಿಗೂ ಬೇರೆ ಬೇರೆ ಮದುವೆಯಾಗಿದ್ದು, ತಮ್ಮ ಸಂಗಾತಿಯಿಂದ ದೂರವಾಗಿ ಹೊಸದಾಗಿ ಸಂಸಾರ ನಡೆಸುತ್ತಿದ್ದರು. ಶಕ್ತಿವೇಲು 3 ವರ್ಷಗಳಿಂದ ಪತ್ನಿ ಎಸ್. ತಮಿಳರಸಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಮಕ್ಕಳು ತಾಯಿಯೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಇತ್ತ ಅಮೃತಂ ತನ್ನ ಪತಿಯಿಂದ ದೂರವಾಗಿದ್ದಳು. ಈ ದಂಪತಿಗೂ ಮೂವರು ಮಕ್ಕಳಿದ್ದಾರೆ. ಶಕ್ತಿವೇಲು ಮತ್ತು ಅಮೃತಂ 3 ವರ್ಷಗಳಿಂದ ಜತೆಯಾಗಿದ್ದರು.