ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮೈದುನನೊಂದಿಗೆ ಅಕ್ರಮ ಸಂಬಂಧ; ವಿಷಯ ತಿಳಿದ ಪತಿಯನ್ನೇ ಕೊಂದು ಆತ್ಮಹತ್ಯೆ ಎಂದು ಬಿಂಬಿಸಿದ ಪತ್ನಿ

Crime news: ಕುಟುಂಬದೊಳಗಿನ ಅಕ್ರಮ ಸಂಬಂಧವು ದುರಂತ ಅಂತ್ಯ ಕಂಡ ಘಟನೆ ಬೆಳಕಿಗೆ ಬಂದಿದೆ. ಮೈದುನನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ, ವಿಷಯ ತಿಳಿದುಕೊಂಡ ಪತಿಯನ್ನು ಕೊಲೆಗೈದು ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದ್ದಾಳೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸಿ ಮಹಿಳೆಯನ್ನು ಬಂಧಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಲಖನೌ, ಫೆ. 14: ಪತ್ನಿಯ ಅಕ್ರಮ ಸಂಬಂಧದ ವಿಚಾರ ತಿಳಿದ ಪತಿಯೊಬ್ಬ ಆಕೆಯೊಂದಿಗೆ ತಗಾದೆ ತೆಗೆದಿದ್ದಾನೆ. ತನ್ನ ವಿಚಾರ ತಿಳಿದ ಗಂಡನನ್ನೇ ಹತ್ಯೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಿದ ಪ್ರಕರಣವಿದು (crime news). ಮೈದುನನೊಂದಿಗೆ ಸೇರಿ ತನ್ನ ಪತಿಯನ್ನೇ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಆಗ್ರಾದಲ್ಲಿ ನಡೆದಿದೆ.

ಸೀರೆಯನ್ನು ಕುಣಿಕೆಯಾಗಿ ಬಳಸಿ, ಶವವನ್ನು ಸೀಲಿಂಗ್ ಫ್ಯಾನ್‌ಗೆ ನೇತುಹಾಕಿ ಆತ್ಮಹತ್ಯೆ ಎಂದು ಬಿಂಬಿಸಿದ್ದಾಳೆ. ನಂತರ ತನ್ನ ಪತಿ ಆತ್ಮಹತ್ಯೆ ಮಾಡಿಕೊಂಡ ಎಂದು ಗೋಳಾಡಿದ್ದಾಳೆ. ಇದನ್ನು ಆರಂಭದಲ್ಲಿ ನಂಬಿದ ಕುಟುಂಬಸ್ಥರು ಪೊಲೀಸರಿಗೆ ತಿಳಿಸದೆ ಶವವನ್ನು ದಹನ ಮಾಡಿದರು.

ಆದರೆ ಆಕೆಯ ವರ್ತನೆ ಬಗ್ಗೆ ಅನುಮಾನಗೊಂಡ ಪತಿಯ ಕೆಲವು ಸಂಬಂಧಿಕರು ಪ್ರಶ್ನೆ ಮಾಡಿದರು. ಈ ವೇಳೆ ಆಕೆಯ ಉತ್ತರದಲ್ಲಿ ಬದಲಾವಣೆ ಕಂಡುಬಂತು. ಬಹಳ ಪ್ರಶ್ನೆಗಳನ್ನು ಕೇಳಿದ ಬಳಿಕ ಕೊನೆಗೆ ತಾನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಳು. ಆತನ ತಂದೆ-ತಾಯಿಗೆ ಒಬ್ಬನೇ ಮಗನಾಗಿದ್ದ. ಹೀಗಾಗಿ ಆತನ ಸಾವು ಕುಟುಂಬವನ್ನು ಶೋಕದಲ್ಲಿ ಮುಳುಗಿಸಿತು. ಮೃತನ ತಂದೆಯ ದೂರಿನ ಆಧಾರದ ಮೇಲೆ ಏಕ್ತಾ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಪತ್ನಿ ಮತ್ತು ಸೋದರ ಮಾವನನ್ನು ಬಂಧಿಸಿದ್ದಾರೆ.

ಕೇರಳದ 16 ವರ್ಷದ ಬಾಲಕಿಯ ಆತ್ಮಹತ್ಯೆಯ ಹಿಂದೆಯೂ ಕೊರಿಯನ್‌ ಕರಿ ನೆರಳು

ಘಟನೆ ವಿವರ

ಏಕ್ತಾ ಪೊಲೀಸ್ ಠಾಣೆ ವ್ಯಾಪ್ತಿಯ ಲೋಧೆ ಗ್ರಾಮದ ನಿವಾಸಿ 24 ವರ್ಷದ ಲವೇಕೇಶ್ ತೋಮರ್, ನಾಲ್ಕು ವರ್ಷಗಳ ಹಿಂದೆ ರಾಜಸ್ಥಾನದ ಧೋಲ್ಪುರದ ಸಹಪೌ ಭೋಲಾ ಗ್ರಾಮದ ನಿವಾಸಿ ಗೌರಿ ಎಂಬಾಕೆಯನ್ನು ವಿವಾಹವಾಗಿದ್ದರು. ಮದುವೆಯಾದ ಸ್ವಲ್ಪ ಸಮಯದ ನಂತರ, ಗೌರಿಗೆ ಪತಿ ಲವೇಕೇಶ್‌ನ ಚಿಕ್ಕಪ್ಪನ ಮಗ ಸುಂದರ್ ತೋಮರ್ ಮೇಲೆ ಪ್ರೀತಿ ಹುಟ್ಟಿತು. ಇಬ್ಬರು ಕೂಡ ಪರಸ್ಪರ ಕದ್ದುಮುಚ್ಚಿ ಪ್ರೀತಿಸುತ್ತಿದ್ದರು. ಕೆಲವು ದಿನಗಳ ಹಿಂದೆ ಲವೇಕೇಶ್‌ಗೆ ಇವರಿಬ್ಬರ ಚೆಲ್ಲಾಟ ತಿಳಿದು ಆಕ್ಷೇಪ ವ್ಯಕ್ತಪಡಿಸಿದರು. ಇದು ದಂಪತಿಯ ನಡುವೆ ಜಗಳಕ್ಕೆ ಕಾರಣವಾಯಿತು.

ಫೆಬ್ರವರಿ 9ರಂದು ಬೆಳಗಿನ ಜಾವ 1 ಗಂಟೆಗೆ ಗೌರಿಯು ಸುಂದರ್‌ಗೆ ಕರೆ ಮಾಡಿದ್ದಳು ಎಂದು ಲವೇಕೇಶ್ ತಂದೆ ಸುರೇಶ್ ಚಂದ್ರ ಹೇಳಿದ್ದಾರೆ. ತಮ್ಮ ಮಗ ಮಲಗಿದ್ದಾಗ ಆರೋಪಿಗಳು ದಿಂಬಿನಿಂದ ಉಸಿರುಗಟ್ಟಿಸಿ ಕೊಂದರು. ಆತ್ಮಹತ್ಯೆಯಂತೆ ಕಾಣುವಂತೆ ಸೀರೆಯಿಂದ ಕುಣಿಕೆಯನ್ನು ಮಾಡಿ ಶವವನ್ನು ಸೀಲಿಂಗ್ ಫ್ಯಾನ್‌ಗೆ ನೇತು ಹಾಕಿದರು ಎಂದು ಆರೋಪಿಸಿದ್ದಾರೆ.

ಫೆಬ್ರವರಿ 10ರಂದು ಬೆಳಗಿನ ಜಾವ ನಾಲ್ಕು ಗಂಟೆಗೆ ಕರೆ ಮಾಡಿ ಆತ್ಮಹತ್ಯೆಯ ಬಗ್ಗೆ ತಿಳಿಸಿದಳು. ಕುಟುಂಬದವರು ಗೌರಿಯ ಕಥೆಯನ್ನು ನಂಬಿ ಫೆಬ್ರವರಿ 10ರಂದು ಲವೇಕೇಶ್‌ ಶವವನ್ನು ದಹನ ಮಾಡಿದರು. ಫೆಬ್ರವರಿ 11ರಂದು ಶಾಂತಿ ಪ್ರಾರ್ಥನೆ ನಡೆಸಲಾಯಿತು.

ಆತ್ಮಹತ್ಯೆಗೆ ಯಾವುದೇ ನಿರ್ದಿಷ್ಟ ಕಾರಣ ಸಿಗದಿದ್ದಾಗ ತಂದೆ ಮತ್ತು ಸಂಬಂಧಿಕರು ಅನುಮಾನಗೊಂಡರು. ಸಂಬಂಧಿ ಸಂಜಯ್ ಚೌಹಾಣ್ ಆರೋಪಿ ಪತ್ನಿಯನ್ನು ಪ್ರಶ್ನಿಸಿದಾಗ, ಆಕೆ ಪ್ರತಿ ಬಾರಿಯೂ ಆತ್ಮಹತ್ಯೆಗೆ ಬೇರೆ ಬೇರೆ ಕಾರಣಗಳನ್ನು ನೀಡಿ ದಾರಿ ತಪ್ಪಿಸುತ್ತಲೇ ಇದ್ದಳು.

ಮದುವೆಗೆ ಬಂದ ಮಹಿಳೆ ನಿಗೂಢ ನಾಪತ್ತೆ, ಮೈಮೇಲಿದ್ದ ಚಿನ್ನಾಭರಣಕ್ಕಾಗಿ ಕೊಲೆಯಾದ ಶಂಕೆ

ಆಕೆಯ ಕುಟುಂಬದವರು ಪದೇ ಪದೆ ಪ್ರಶ್ನಿಸಿದಾಗ ಗೌರಿ ತನ್ನ ಅಕ್ರಮ ಸಂಬಂಧಿ ಮೈದುನನೊಂದಿಗೆ ಸೇರಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಳು. ಆಕೆಯ ತಂದೆಯ ಮಾಹಿತಿಯ ಆಧಾರದ ಮೇಲೆ, ಏಕ್ತಾ ಪೊಲೀಸ್ ಠಾಣೆಯ ಪೊಲೀಸರು ಶುಕ್ರವಾರ (ಫೆಬ್ರವರಿ 13) ಮನೆಗೆ ಆಗಮಿಸಿ ತನಿಖೆ ನಡೆಸಿದರು. ಗೌರಿ ಮತ್ತು ಸುಂದರ್ ತೋಮರ್ ವಿರುದ್ಧ ಪ್ರಕರಣ ದಾಖಲಿಸಲಾಯಿತು, ಇಬ್ಬರನ್ನೂ ಬಂಧಿಸಲಾಯಿತು.

ಮೃತನ ತಂದೆ ಸುರೇಶ್ ಚಂದ್ರ ವಿಜಯನಗರದಲ್ಲಿರುವ ವ್ಯಕ್ತಿಯೊಬ್ಬರ ಮನೆಯಲ್ಲಿ ಕೆಲಸ ಮಾಡುತ್ತಾ ಅಲ್ಲಿ ವಾಸಿಸುತ್ತಿದ್ದಾರೆ. ಅವರು ವಾರಕ್ಕೊಮ್ಮೆ ಮನೆಗೆ ಬರುತ್ತಿದ್ದರು. ಅವರ ಪತ್ನಿ ಮಾಲತಿ ದೇವಿ 2019ರಲ್ಲಿ ನಿಧನರಾದರು. ಲವೇಕೇಶ್‌ಗೆ 3 ವರ್ಷದ ಮಗನಿದ್ದಾನೆ.

ʼʼಲವೇಕೇಶ್ ಎಲೆಕ್ಟ್ರಿಕಲ್ ಫಿಟ್ಟರ್ ಆಗಿ ಕೆಲಸ ಮಾಡುತ್ತಿದ್ದರು. ತಂದೆಯ ದೂರಿನ ಆಧಾರದ ಮೇಲೆ ಕೊಲೆ ಪ್ರಕರಣ ದಾಖಲಿಸಲಾಗಿದೆʼʼ ಎಂದು ನಗರ ಡಿಸಿಪಿ ಸೈಯದ್ ಅಲಿ ಅಬ್ಬಾಸ್ ತಿಳಿಸಿದ್ದಾರೆ.