ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Woman Missing case: ಮದುವೆಗೆ ಬಂದ ಮಹಿಳೆ ನಿಗೂಢ ನಾಪತ್ತೆ, ಮೈಮೇಲಿದ್ದ ಚಿನ್ನಾಭರಣಕ್ಕಾಗಿ ಕೊಲೆಯಾದ ಶಂಕೆ

ರಾಷ್ಟ್ರೀಯ ಹೆದ್ದಾರಿ 373ರ ಸಮೀಪ ಇರುವ ಕೆರೆಯ ಬಳಿ ಚಪ್ಪಲಿ, ಬಟ್ಟೆ, ವ್ಯಾನಿಟಿ ಬ್ಯಾಗ್ ಹಾಗೂ ಎಲ್ಲವೂ ಪತ್ತೆಯಾಗಿದೆ. ಹಾಗಾಗಿ ನಿಗೂಢವಾಗಿ ನಾಪತ್ತೆಯಾಗಿರುವ ಪ್ರಿಯಾಂಕರನ್ನು ತೀವ್ರವಾಗಿ ಹುಡುಕಾಟ ನಡೆಸಲಾಗುತ್ತಿದೆ. ಕುಟುಂಬಸ್ಥರ ಮಾಹಿತಿ ಪ್ರಕಾರ ಸುಮಾರು 25 ರಿಂದ 30 ಲಕ್ಷ ರೂ. ಮೌಲ್ಯದ ಒಡವೆ ಆಕೆಯ ಮೈಮೇಲೆ ಮೇಲೆ ಇತ್ತು. ಹಾಗಾಗಿ ಆಕೆಯನ್ನು ಅದಕ್ಕೋಸ್ಕರ ಯಾರಾದರೂ ಕೊಲೆ ಮಾಡಿರಬಹುದು ಎನ್ನುವ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ಮದುವೆಗೆ ಬಂದ ಮಹಿಳೆ ನಿಗೂಢ ನಾಪತ್ತೆ, ಮೈಮೇಲಿದ್ದ ಚಿನ್ನಕ್ಕಾಗಿ ಕೊಲೆ ಶಂಕೆ

ನಾಪತ್ತೆಯಾದ ಪ್ರಿಯಾಂಕ -

ಹರೀಶ್‌ ಕೇರ
ಹರೀಶ್‌ ಕೇರ Feb 14, 2026 1:27 PM

ಹಾಸನ, ಫೆ.14 : ಮದುವೆಗೆ ಬಂದಿದ್ದ ಮಹಿಳೆಯೊಬ್ಬರು ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ (Woman Missing case) ಹಾಸನ (Hassan) ತಾಲೂಕಿನ ಕಲ್ಕೆರೆ ಗ್ರಾಮದಲ್ಲಿ ನಡೆದಿದೆ. ಮಹಿಳೆಯ ಉಡುಪು, ಚಪ್ಪಲಿ ಹಾಗೂ ವ್ಯಾನಿಟಿ ಬ್ಯಾಗ್ ಪತ್ತೆಯಾಗಿದೆ. ತುಮಕೂರು (Tumkur) ಜಿಲ್ಲೆಯ ಕುಣಿಗಲ್ ನಿವಾಸಿಯಾಗಿರುವ ಪ್ರಿಯಾಂಕ ನಿಗೂಢವಾಗಿ ನಾಪತ್ತೆಯಾಗಿದ್ದಾರೆ.

ಮದುವೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಪ್ರಿಯಾಂಕ ಚಿಕ್ಕಮಗಳೂರಿಗೆ ಗುರುವಾರ ಬಂದಿದ್ದರು. ನಿಗೂಢವಾಗಿ ನಾಪತ್ತೆಯಾದ ಬೆನ್ನಲ್ಲೇ ಈ ವಿಚಾರವಾಗಿ ದೂರು ಕೊಟ್ಟರೂ ಪೊಲೀಸರು ಸ್ಪಂದಿಸುತ್ತಿಲ್ಲ ಎಂದು ಸಂಬಂಧಿಕರು ಗಂಭೀರವಾಗಿ ಆರೋಪಿಸಿದ್ದಾರೆ. ಇದೀಗ ಅರೆಹಳ್ಳಿ ಹಾಗೂ ಬೇಲೂರು ಠಾಣೆ ಪೊಲೀಸರ ವಿರುದ್ಧ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಧರ್ಮಸ್ಥಳಕ್ಕೆ ಪಾದಯಾತ್ರೆಗೆ ಹೊರಟಿರುವ ಜನರಿಗೆ ಪ್ರಿಯಾಂಕಾ ಆಧಾರ್ ಕಾರ್ಡ್ ಸಿಕ್ಕಿದೆ. ಅವರು ತಕ್ಷಣ ಆಧಾರ್ ಕಾರ್ಡನಲ್ಲಿದ್ದ ನಂಬರ್‌ಗೆ ಕರೆ ಮಾಡಿದ್ದರು. ಅದು ಅವರ ಪತಿಗೆ ಹೋಗಿದೆ. ನಿಮ್ಮ ಪತ್ನಿಯ ಆಧಾರ್ ಕಾರ್ಡ್ ನಮಗೆ ಸಿಕ್ಕಿದೆ ಎಂದು ಮಾಹಿತಿ ನೀಡಿದ್ದಾರೆ. ತಕ್ಷಣ ಕುಟುಂಬಸ್ಥರು ಸ್ಥಳಕ್ಕೆ ಬಂದಾಗ ಅಲ್ಲಿ ಅವರ ವಸ್ತುಗಳು ಸಿಕ್ಕಿವೆ. ಆದರೆ ಅವರು ಕಂಡುಬಂದಿಲ್ಲ.

ಮಾರಿಷಸ್ ಬಳಿ ಒಡಿಶಾ ಮೂಲದ ನೌಕಾಪಡೆ ಅಧಿಕಾರಿ ನಾಪತ್ತೆ; ಹುಡುಕಿಕೊಡುವಂತೆ ಕೇಂದ್ರ ಸರ್ಕಾರಕ್ಕೆ ಕುಟುಂಬ ಮನವಿ

ರಾಷ್ಟ್ರೀಯ ಹೆದ್ದಾರಿ 373ರ ಸಮೀಪ ಇರುವ ಕೆರೆಯ ಬಳಿ ಚಪ್ಪಲಿ, ಬಟ್ಟೆ, ವ್ಯಾನಿಟಿ ಬ್ಯಾಗ್ ಹಾಗೂ ಎಲ್ಲವೂ ಪತ್ತೆಯಾಗಿದೆ. ಹಾಗಾಗಿ ನಿಗೂಢವಾಗಿ ನಾಪತ್ತೆಯಾಗಿರುವ ಪ್ರಿಯಾಂಕರನ್ನು ತೀವ್ರವಾಗಿ ಹುಡುಕಾಟ ನಡೆಸಲಾಗುತ್ತಿದೆ. ಕುಟುಂಬಸ್ಥರ ಮಾಹಿತಿ ಪ್ರಕಾರ ಸುಮಾರು 25 ರಿಂದ 30 ಲಕ್ಷ ರೂ. ಮೌಲ್ಯದ ಒಡವೆ ಆಕೆಯ ಮೈಮೇಲೆ ಮೇಲೆ ಇತ್ತು. ಹಾಗಾಗಿ ಆಕೆಯನ್ನು ಅದಕ್ಕೋಸ್ಕರ ಯಾರಾದರೂ ಕೊಲೆ ಮಾಡಿರಬಹುದು ಎನ್ನುವ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿಗಳು ಬಂದು ಶೋಧ ಕಾರ್ಯ ನಡೆಸುತ್ತಿದ್ದಾರೆ.

ಆನ್‌ಲೈನ್ ಜೂಜಿಗೆ ಬ್ಯಾಂಕ್‌ನಿಂದಲೇ ಚಿನ್ನ ಕದ್ದ ನೌಕರ

ಬೆಂಗಳೂರು: ರಾಜ್ಯದಲ್ಲೊಬ್ಬ ಲಕ್ಕಿ ಭಾಸ್ಕರ್ ಸಿನಿಮಾ ಶೈಲಿಯಲ್ಲಿ ಬ್ಯಾಂಕ್ ದರೋಡೆ ಮಾಡಿದ್ದಾನೆ. ಅಸಿಸ್ಟೆಂಟ್ ಮ್ಯಾನೇಜರ್‌ನಿಂದಲೇ ನಾಲ್ಕು ಕೋಟಿ ರೂ. ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ. ಇಂಡಿಯನ್ ಬ್ಯಾಂಕ್ ಅಸಿಸ್ಟೆಂಟ್ ಮ್ಯಾನೇಜರ್ ಕಿರಣ್ ಕುಮಾರ್ ಎಂಬಾತ ಈ ಕೃತ್ಯ ಎಸಗಿದ್ದಾನೆ.

ಇಂಡಿಯನ್ ಬ್ಯಾಂಕ್‌ನಲ್ಲಿ ಅಡಮಾನ ಇಟ್ಟಿದ್ದವರ ಚಿನ್ನವನ್ನು ಕಿರಣ್ ಕದ್ದಿದ್ದಾನೆ. ಬೆಂಗಳೂರಿನ ಗಿರಿನಗರದ ಇಂಡಿಯನ್ ಬ್ಯಾಂಕ್ ಶಾಖೆಯಲ್ಲಿ ಕಳ್ಳತನವಾಗಿದೆ. ಆನ್ ಲೈನ್ ಬೆಟ್ಟಿಂಗ್ ದಂಧೆ ಮಾಡುತ್ತಿದ್ದ ಅಸಿಸ್ಟೆಂಟ್ ಮ್ಯಾನೇಜರ್ ಕಿರಣ್ ಅದಕ್ಕಾಗಿ ನಾಲ್ಕು ಕೋಟಿ ರೂ. ಮೌಲ್ಯದ ಚಿನ್ನಾಭರಣ ಕದ್ದು ಆನ್ಲೈನ್ ಜೂಜಾಟಕ್ಕೆ ಬಳಸಿದ್ದಾನೆ. ಸದ್ಯ ಆರೋಪಿ ಕಿರಣ್ ಅನ್ನು ಪೊಲೀಸರ ಅರೆಸ್ಟ್ ಮಾಡಿದ್ದಾರೆ.