ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಹಾಸಿಗೆಯಲ್ಲಿ ಮೂತ್ರ ಮಾಡಿದ ಮಗುವಿನ ಖಾಸಗಿ ಅಂಗವನ್ನೇ ಸುಟ್ಟ ಮಲತಾಯಿ

ಪುಟ್ಟ ಮಗುವೊಂದು ಮಲಗಿರುವಾಗ ಹಾಸಿಗೆಯಲ್ಲಿ ಮೂತ್ರ ಮಾಡಿದ್ದಕ್ಕೆ ಮಲತಾಯಿಯೊಬ್ಬಳು ಅದರ ಖಾಸಗಿ ಅಂಗವನ್ನೇ ಸುಟ್ಟಿರುವ ಘಟನೆ ಉತ್ತರ ಕೇರಳದ ಕಾಂಜಿಕೋಡ್ ನಡೆದಿದೆ. ಈ ಬಗ್ಗೆ ಅಂಗನವಾಡಿಯಲ್ಲಿ ಶಿಕ್ಷಕಿಗೆ ತಿಳಿದ ಬಳಿಕ ಆಕೆ ಪೊಲೀಸರಿಗೆ ದೂರು ನೀಡಿದ್ದಾರೆ. ಆ ಬಳಿಕ ಮಗುವಿನ ಮಲತಾಯಿಯನ್ನು ಬಂಧಿಸಲಾಗಿದೆ.

ಮಗುವಿನ ಖಾಸಗಿ ಅಂಗ ಸುಟ್ಟ ಮಲತಾಯಿ

(ಸಂಗ್ರಹ ಚಿತ್ರ) -

ಪಾಲಕ್ಕಾಡ್: ಮಗುವಿಗೆ ಸಣ್ಣ ನೋವಾದರೂ ಸಾಕು ಎಂತಹ ಕಲ್ಲು ಹೃದಯವಾದರೂ ಕರಗುತ್ತದೆ. ಆದರೆ ಇಲ್ಲೊಬ್ಬಳು ತಾಯಿ ಮಗುವಿನ ಖಾಸಗಿ ಅಂಗವನ್ನೇ (burns private part of child ) ಸುಟ್ಟಿದ್ದಾಳೆ. ಹಾಸಿಗೆಯಲ್ಲಿ ಮಗು ಮೂತ್ರ (bedwetting child) ಮಾಡಿತ್ತು ಎನ್ನುವ ಕಾರಣಕ್ಕೆ ಮಲತಾಯಿಯೊಬ್ಬಳು (Stepmother) ಮಗುವಿನ ಖಾಸಗಿ ಅಂಗವನ್ನು ಬಿಸಿ ಸೌಟಿನಿಂದ ಸುಟ್ಟಿದ್ದಾಳೆ: ಈ ಘಟನೆ ಕಳೆದ ವಾರ ಉತ್ತರ ಕೇರಳ (Kerala) ಜಿಲ್ಲೆಯ ಕಾಂಜಿಕೋಡ್ (Kanjikode) ಬಳಿ ನಡೆದಿದ್ದು, ಅಂಗನವಾಡಿ ಶಿಕ್ಷಕಿಗೆ (Anganwadi teacher) ವಿಷಯ ತಿಳಿದ ಬಳಿಕ ಆಕೆ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದಾರೆ.

ಕಾಂಜಿಕೋಡ್ ನ ಅಂಗನವಾಡಿಯೊಂದರಲ್ಲಿ ಐದು ವರ್ಷದ ಮಗು ಕುಳಿತುಕೊಳ್ಳಲು ತುಂಬಾ ಕಷ್ಟ ಪಡುತ್ತಿತ್ತು. ಇದನ್ನು ಗಮನಿಸಿದ ಅಂಗನವಾಡಿ ಶಿಕ್ಷಕಿ ಮಗುವಿನ ಬಳಿ ಏನಾಗಿದೆ ಎಂದು ಕೇಳಿದ್ದಾರೆ. ಆಗ ಮಗು ಎಲ್ಲ ವಿಷಯವನ್ನು ಹೇಳಿದೆ.

Harassment: ಯುವತಿಯನ್ನು ತಬ್ಬಿ ಅಸಭ್ಯವಾಗಿ ವರ್ತಿಸಿದ ಡೆಲಿವರಿ ಬಾಯ್‌ ಬಂಧನ

ಮಗು ಹಾಸಿಗೆಯಲ್ಲಿ ಮೂತ್ರ ಮಾಡಿದ ಕಾರಣಕ್ಕೆ ಮಲತಾಯಿ ಬಿಸಿ ಸ್ಟೀಲ್ ಸೌಟಿನಿಂದ ಖಾಸಗಿ ಅಂಗದ ಮೇಲೆ ಗಾಯಗೊಳಿಸಿದ್ದಾಳೆ. ಈ ಕುರಿತು ಅಂಗನವಾಡಿ ಶಿಕ್ಷಕಿ ಪೊಲೀಸರಿಗೆ ಶುಕ್ರವಾರ ಮಾಹಿತಿ ನೀಡಿದರು. ಮಗುವಿಗೆ ಕೂಡಲೇ ಸೂಕ್ತ ಚಿಕಿತ್ಸೆ ನೀಡಲಾಯಿತು.

ಅಂಗನವಾಡಿ ಶಿಕ್ಷಕಿ ನೀಡಿದ ದೂರಿನ ಮೇರೆಗೆ ಬಿಹಾರ ಮೂಲದ ಮಲತಾಯಿಯನ್ನು ಬಂಧಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಮಹಿಳೆಯ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಮತ್ತು ಬಾಲ ನ್ಯಾಯ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಲೆಕ್ಚರರ್‌ ಕಿರುಕುಳಕ್ಕೆ ಬೇಸತ್ತು ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ

ಮಗುವಿನ ತಂದೆ ನೇಪಾಳದ ಪ್ರಜೆಯಾಗಿದ್ದು, ಹೊಟೇಲ್ ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಯ (ಸಿಡಬ್ಲ್ಯೂಸಿ) ಆರೈಕೆಗೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ: ಪೊಲೀಸ್ ಅಧಿಕಾರಿ ಭಾಗಿ

ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ಇತ್ತೀಚಿಗೆ ನಡೆದಿದೆ. ಈ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿ ಕೂಡ ಭಾಗಿಯಾಗಿದ್ದಾನೆ ಎನ್ನಲಾಗಿದೆ. ಯುವಕನೊಬ್ಬನೊಂದಿಗೆ ಸೇರಿ ಪೊಲೀಸ್ ಅಧಿಕಾರಿಯೊಬ್ಬ ಅಪ್ರಾಪ್ತ ಬಾಲಕಿಯನ್ನು ಬಲವಂತವಾಗಿ ಕಾರಿನಲ್ಲಿ ಕರೆದುಕೊಂಡು ಹೋಗಿ ಎರಡು ಗಂಟೆಗಳ ಕಾಲ ಅತ್ಯಾಚಾರ ನಡೆಸಿ ಬಳಿಕ ಆಕೆಯನ್ನು ಮನೆಯ ಬಳಿ ಎಸೆದು ಪರಾರಿಯಾಗಿದ್ದಾನೆ. ಈ ಘಟನೆ ಸಚೇಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಪ್ರಕರಣದಲ್ಲಿ ಇನ್ಸ್‌ಪೆಕ್ಟರ್ ಅಮಿತ್ ಮೌರ್ಯ ಭಾಗಿಯಾಗಿರುವುದು ದೃಢಪಟ್ಟಿದ್ದು, ಅವರನ್ನು ಹುದ್ದೆಯಿಂದ ಅಮಾನತುಗೊಳಿಸಲಾಗಿದೆ. ಯುವಕ ಶಿವಬರನ್ ಎಂದು ಗುರುತಿಸಲಾಗಿದೆ. ಪ್ರಕರಣದ ಕುರಿತು ಎಫ್ ಐಆರ್ ದಾಖಲಿಸದ ಸಚೆಂಡಿ ಪೊಲೀಸ್ ಠಾಣೆ ಉಸ್ತುವಾರಿ ವಿಕ್ರಮ್ ಸಿಂಗ್ ವಿರುದ್ದವೂ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಶಿವಬರನ್‍ನನ್ನು ಕಾನ್ಪುರ ಪೊಲೀಸರು ಬಂಧಿಸಲಾಗಿದ್ದು, ಅಮಿತ್ ಮೌರ್ಯ ಬಂಧನಕ್ಕೆ ನಾಲ್ಕು ತಂಡಗಳನ್ನು ರಚಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.