ಅಮೆರಿಕದಲ್ಲಿ ಭಾರತೀಯ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಇದೀಗ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದೆ. ಕ್ಷುಲಕ ಕಾರಣಕ್ಕಾಗಿ ನಡೆದ ಕೊಲೆಯಲ್ಲಿ ಭಾರತೀಯ ಮೂಲದ ವ್ಯಕ್ತಿಯ ಶಿರಚ್ಛೇದನ ಮಾಡಲಾಗಿದೆ. ಅಮೆರಿಕದ ಡಲ್ಲಾಸ್ ನಗರದ ಮೋಟೆಲ್‌ನಲ್ಲಿ ತನ್ನ ಉದ್ಯೋಗಿಯೊಂದಿಗೆ ವಾಗ್ವಾದ ನಡೆಸಿದ ಅಮೆರಿಕದ ಪ್ರಜೆ ಈ ಕೃತ್ಯವನ್ನು ನಡೆಸಿದ್ದಾನೆ. ಬುಧವಾರ ಈ ಘಟನೆ ನಡೆದಿದ್ದು, ಮೂಲತಃ ಕರ್ನಾಟಕ ಮೂಲದ ಚಂದ್ರ ನಾಗಮಲ್ಲಯ್ಯ ಎಂಬ ವ್ಯಕ್ತಿಯ ಅವರ ಕೊಲೆ ನಡೆದಿದೆ.
ಡಲ್ಲಾಸ್ ಪೊಲೀಸ್ ಇಲಾಖೆಯ ಪ್ರಕಾರ, ನಾಗಮಲ್ಲಯ್ಯ ತನ್ನ ಸಹೋದ್ಯೋಗಿ ಯೋರ್ಡಾನಿಸ್ ಕೊಬೋಸ್-ಮಾರ್ಟಿನೆಜ್ ಜೊತೆ ಮುರಿದ ತೊಳೆಯುವ ಯಂತ್ರದ ವಿಚಾರವಾಗಿ ವಾಗ್ವಾದಕ್ಕಿಳಿದರು. ನೇರವಾಗಿ ಆತನಿಗೆ ಹೇಳುವ ಬದಲಿಗೆ ಬೇರೋಬ್ಬ ಉದ್ಯೋಗಿಯ ಬಳಿ ಹೇಳಿದ್ದಾರೆ. ಇದರನ್ನು ಆರೋಪಿ ಸಿಟ್ಟಿಗೆದ್ದಿದ್ದಾನೆ. ನಂತರ ಆತ ಮಚ್ಚು ತೆಗೆದುಕೊಂಡು ಬಂದಿದ್ದಾನೆ. ಆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಾಗಮಲ್ಲಯ್ಯಗೆ ಹಲವು ಬಾರಿ ಇರಿಯಲಾಗಿದೆ. ನಾಗಮಲ್ಲಯ್ಯ ಪಾರ್ಕಿಂಗ್ ಸ್ಥಳದಿಂದ ಮುಂಭಾಗದ ಕಚೇರಿಯ ಕಡೆಗೆ ಓಡಲು ಪ್ರಯತ್ನಿಸಿದ್ದಾರೆ. ಆದರೂ ಬಿಡದ ಆರೋಪಿ ನಾಗಮಲ್ಲಯ್ಯನನ್ನು ಬೆನ್ನಟ್ಟಿ ಹೋಗಿದ್ದಾನೆ.
ನಾಗಮಲ್ಲಯ್ಯ ಅವರ ಪತ್ನಿ ಮತ್ತು 18 ವರ್ಷದ ಮಗ ಕೂಡ ಮುಂಭಾಗದ ಕಚೇರಿಯಿಂದ ಹೊರಬಂದು ಕೋಬೋಸ್-ಮಾರ್ಟಿನೆಜ್ ಅವರನ್ನು ತಡೆಯಲು ಪ್ರಯತ್ನಿಸಿದರು. ಆರೋಪಿ ಅವರನ್ನು ತಳ್ಳಿದ್ದಾನೆ. ನಂತರ ನಾಗಮಲ್ಲಯ್ಯನ ತಲೆಯನ್ನೇ ಕತ್ತರಿಸಿದ್ದಾನೆ. ಕೊಬೊಸ್-ಮಾರ್ಟಿನೆಜ್ ಕತ್ತರಿಸಿದ ತಲೆಯನ್ನು ಎತ್ತಿಕೊಂಡು ಕಸದ ಬುಟ್ಟಿಗೆ ಕೊಂಡೊಯ್ಯುತ್ತಿರುವುದನ್ನು ತೋರಿಸುವ ವೀಡಿಯೊ ವೈರಲ್ ಆಗಿದೆ. ರಕ್ತಸಿಕ್ತವಾಗಿ, ಮಚ್ಚನ್ನು ಹಿಡಿದುಕೊಂಡು ಕಸದ ಬುಟ್ಟಿ ಪ್ರದೇಶದಿಂದ ಹೊರಬರುತ್ತಿದ್ದಾಗ ಪೊಲೀಸರು ಆತನನ್ನು ಬಂಧಿಸಿದ್ದಾರೆ. ನಾಗಮಲ್ಲಯ್ಯ ಅವರ "ದುರಂತ" ಸಾವಿಗೆ ಭಾರತೀಯ ರಾಯಭಾರ ಕಚೇರಿ ಸಂತಾಪ ಸೂಚಿಸಿದ್ದು, ಅವರ ಕೆಲಸದ ಸ್ಥಳದಲ್ಲಿ ಅವರನ್ನು "ಕ್ರೂರವಾಗಿ ಕೊಲ್ಲಲಾಗಿದೆ" ಎಂದು ಹೇಳಿದೆ. ನಾವು ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದೇವೆ ಮತ್ತು ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತೇವೆ. ಆರೋಪಿ ಡಲ್ಲಾಸ್ ಪೊಲೀಸರ ವಶದಲ್ಲಿದ್ದಾನೆ. ನಾವು ಈ ವಿಷಯದ ಬಗ್ಗೆ ಗಮನ ಹರಿಸಿದ್ದೇವೆ ಎಂದು ಹೇಳಿದೆ.
ಈ ಸುದ್ದಿಯನ್ನೂ ಓದಿ: Murder Case: ತಮಾಷೆಯಿಂದ ಶುರುವಾಗಿ ಕೊಲೆಯಲ್ಲಿ ಮುಕ್ತಾಯವಾದ ಹಣ್ಣಿನ ವ್ಯಾಪಾರಿಗಳ ಜಗಳ
ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಕೊಬೋಸ್-ಮಾರ್ಟಿನೆಜ್, ಹೂಸ್ಟನ್‌ನಲ್ಲಿ ವಾಹನ ಕಳ್ಳತನ ಮತ್ತು ಹಲ್ಲೆಗಾಗಿ ಬಂಧನಗಳು ಸೇರಿದಂತೆ ಹಿಂದಿನ ಅಪರಾಧ ಇತಿಹಾಸವನ್ನು ಹೊಂದಿದ್ದಾನೆ ಎಂದು ವರದಿಯಾಗಿದೆ. ಅಪರಾಧ ಸಾಬೀತಾದರೆ, ಅವರು ಪೆರೋಲ್ ಇಲ್ಲದೆ ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆಯನ್ನು ಎದುರಿಸಬೇಕಾಗುತ್ತದೆ. ದುಃಖಿತ ಕುಟುಂಬಕ್ಕೆ ಸಹಾಯ ಮಾಡಲು ಸ್ನೇಹಿತರು ಮತ್ತು ಸಮುದಾಯದ ಸದಸ್ಯರು ಮುಂದೆ ಬಂದಿದ್ದಾರೆ. ಅವರ ಮಗನ ಕಾಲೇಜು ಶಿಕ್ಷಣವನ್ನು ಬೆಂಬಲಿಸಲು ನಿಧಿಸಂಗ್ರಹಣೆಯನ್ನು ಪ್ರಾರಂಭಿಸಲಾಗಿದೆ. ನಾಗಮಲ್ಲಯ್ಯ ಅವರ ಅಂತ್ಯಕ್ರಿಯೆ ಶನಿವಾರ ನಿಗದಿಯಾಗಿದೆ.