ಟೊರೊಂಟೊ: ಭಾರತೀಯ ವಿದ್ಯಾರ್ಥಿಯೊಬ್ಬನನ್ನು (Indian student) ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಕೆನಡಾದ (canada) ಟೊರೊಂಟೊ ವಿಶ್ವವಿದ್ಯಾಲಯದ ಸ್ಕಾರ್ಬರೋ ಕ್ಯಾಂಪಸ್ (Toronto University Scarborough) ಬಳಿ ಡಿಸೆಂಬರ್ 23ರಂದು ಮಂಗಳವಾರ ನಡೆದಿದೆ. ಶಿವಂಕ್ ಅವಸ್ಥಿ (20) ಗುಂಡಿಗೆ ಬಲಿಯಾದ ಭಾರತೀಯ ವಿದ್ಯಾರ್ಥಿ (Indian student dead). ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಲು ಪೊಲೀಸರು ಸಾರ್ವಜನಿಕರ ಸಹಾಯ ಕೋರಿದ್ದಾರೆ. ಈ ಘಟನೆಯು ಭಾರತೀಯ ಮತ್ತು ಅಂತಾರಾಷ್ಟ್ರೀಯ ವಿದ್ಯಾರ್ಥಿ ಸಮುದಾಯವನ್ನು ಬೆಚ್ಚಿ ಬೀಳಿಸಿದೆ.
ಈ ಕುರಿತು ಬುಧವಾರ ಮಾಹಿತಿ ನೀಡಿರುವ ಪೊಲೀಸರು, ಡಾಕ್ಟರೇಟ್ ವಿದ್ಯಾರ್ಥಿಯಾಗಿದ್ದ ಶಿವಂಕ್ ಅವಸ್ಥಿ ಮೇಲೆ ಮಂಗಳವಾರ ಗುಂಡಿನ ದಾಳಿಯಾಗಿದೆ. ಆರೋಪಿ ಪರಾರಿಯಾಗಿದ್ದಾನೆ. ಈ ವರ್ಷದಲ್ಲಿ ನಗರದಲ್ಲಿ ನಡೆದ 41ನೇ ಕೊಲೆ ಪ್ರಕರಣ ಇದಾಗಿದೆ ಎಂದು ತಿಳಿಸಿದ್ದಾರೆ.
ಭಾರತದೊಂದಿಗೆ ಭಿನ್ನಾಭಿಪ್ರಾಯ; ಅಮೆರಿಕದ ವರದಿಯನ್ನು ಖಂಡಿಸಿದ ಚೀನಾ
ಹೈಲ್ಯಾಂಡ್ ಕ್ರೀಕ್ ಟ್ರೈಲ್ ಮತ್ತು ಓಲ್ಡ್ ಕಿಂಗ್‌ಸ್ಟನ್ ರಸ್ತೆ ಪ್ರದೇಶದಲ್ಲಿ ನಡೆದ ಗುಂಡಿನ ದಾಳಿಯ ಬಗ್ಗೆ ಮಂಗಳವಾರ ಮಧ್ಯಾಹ್ನ 3.34ರ ಸುಮಾರಿಗೆ ಪೊಲೀಸ್ ಠಾಣೆಗೆ ಅಪರಿಚಿತರಿಂದ ಕರೆ ಬಂದಿದ್ದು, ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿಯನ್ನು ಪರೀಕ್ಷಿಸಿ, ಅದಾಗಲೇ ಆತ ಮೃತ ಪಟ್ಟಿರುವುದಾಗಿ ಘೋಷಿಸಿದರು. ಪೊಲೀಸರು ಬರುವ ಮೊದಲೇ ಆರೋಪಿ ಸ್ಥಳದಿಂದ ಪರಾರಿಯಾಗಿದ್ದನು. ಗುಂಡಿನ ದಾಳಿಯ ತನಿಖೆಯ ಸಮಯದಲ್ಲಿ ಕ್ಯಾಂಪಸ್ ಅನ್ನು ಲಾಕ್ ಮಾಡಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಶಿವಂಕ್ ಅವಸ್ಥಿ ಸಾವಿಗೆ ಟೊರೊಂಟೊದಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಆತನ ಕುಟುಂಬಕ್ಕೆ ಅಗತ್ಯ ನೆರವು ನೀಡುವುದಾಗಿ ಹೇಳಿದೆ.
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿರುವ ಟೊರೊಂಟೊ ಭಾರತೀಯ ರಾಯಭಾರ ಕಚೇರಿಯು, ಟೊರೊಂಟೊ ವಿಶ್ವವಿದ್ಯಾಲಯದ ಸ್ಕಾರ್ಬರೋ ಕ್ಯಾಂಪಸ್ ಬಳಿ ನಡೆದ ಗುಂಡಿನ ದಾಳಿಯಲ್ಲಿ ಯುವ ಭಾರತೀಯ ಡಾಕ್ಟರೇಟ್ ವಿದ್ಯಾರ್ಥಿ ಶಿವಂಕ್ ಅವಸ್ಥಿ ಅವರು ಸಾವನ್ನಪ್ಪಿದ್ದಾರೆ. ನಾವು ಇದಕ್ಕೆ ತೀವ್ರ ದುಃಖ ವ್ಯಕ್ತಪಡಿಸುತ್ತೇವೆ. ಈ ಕಷ್ಟದ ಸಮಯದಲ್ಲಿ ದುಃಖಿತ ಕುಟುಂಬದೊಂದಿಗೆ ಕಾನ್ಸುಲೇಟ್ ಸಂಪರ್ಕದಲ್ಲಿದೆ ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ನಿಕಟ ಸಮನ್ವಯದೊಂದಿಗೆ ಅಗತ್ಯವಿರುವ ಎಲ್ಲಾ ಸಹಾಯವನ್ನು ನೀಡುತ್ತಿದೆ ಎಂದು ತಿಳಿಸಿದೆ.
ಲಕ್ಷ ಲಕ್ಷ ಸುರಿದು ಅದ್ಧೂರಿ ವಿವಾಹ; ಹನಿಮೂನ್ ಅರ್ಧಕ್ಕೇ ಮೊಟಕು, ನವವಿವಾಹಿತೆ ಆತ್ಮಹತ್ಯೆ!
ಇದಕ್ಕೂ ಮೊದಲು ಟೊರೊಂಟೊದಲ್ಲಿ 30 ವರ್ಷದ ಭಾರತೀಯ ಮಹಿಳೆ ಹಿಮಾಂಶಿ ಖುರಾನಾ ಅವರನ್ನು ಕೊಲೆ ಮಾಡಲಾಗಿತ್ತು. ಸ್ಟ್ರಾಚನ್ ಅವೆನ್ಯೂ ಮತ್ತು ವೆಲ್ಲಿಂಗ್ಟನ್ ಸ್ಟ್ರೀಟ್ ಡಬ್ಲ್ಯೂ. ಪ್ರದೇಶದ ಮನೆಯಲ್ಲಿ ಇವರು ಶವವಾಗಿ ಪತ್ತೆಯಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ಘಫೂರಿ ಕೆನಡಾ ನಿವಾಸಿ 32 ವರ್ಷದ ಅಬ್ದುಲ್ ಘಫೂರಿ ವಿರುದ್ಧ ಪೊಲೀಸರು ವಾರಂಟ್ ಹೊರಡಿಸಿದ್ದಾರೆ. ಗಫೂರಿ ಮತ್ತು ಖುರಾನಾ ನಡುವೆ ಆತ್ಮೀಯ ಸಂಬಂಧವಿತ್ತು ಎನ್ನಲಾಗಿದೆ.