ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Viral News: ಯೂಟ್ಯೂಬ್‌ ನೋಡಿ ಗಂಡನ ಕೊಲೆಗೆ ಸ್ಕೆಚ್‌; ಪತಿ ಮಲಗಿದ್ದಾಗ ಕುದಿಯುವ ಎಣ್ಣೆ ಸುರಿದ ಪತ್ನಿ!

ರಾಜಸ್ಥಾನದ (Rajasthan) ಝಾಲಾವಾಡ್ ಜಿಲ್ಲೆಯ ಭವಾನಿ ಮಂಡಿ ಪಟ್ಟಣದ ರಾಮನಗರದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಪ್ರಿಯಕರನಿಗಾಗಿ ಪತ್ನಿಯೊಬ್ಬಳು ತನ್ನ ಪತಿಯ ಮೇಲೆ ಕುದಿಯುವ ಎಣ್ಣೆಯನ್ನು (Boiling Oil) ಸುರಿದು, ಕೊಲೆಗೆ (Murder) ಯತ್ನಿಸಿದ ಆರೋಪದ ಮೇಲೆ ಝಾಲಾವಾಡ್ ಪೊಲೀಸರು ಆಕೆಯನ್ನು ವಶಕ್ಕೆ ಪಡೆದಿದ್ದಾರೆ.

ಜೈಪುರ: ರಾಜಸ್ಥಾನದ (Rajasthan) ಝಾಲಾವಾಡ್ ಜಿಲ್ಲೆಯ ಭವಾನಿ ಮಂಡಿ ಪಟ್ಟಣದ ರಾಮನಗರದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಪ್ರಿಯಕರನಿಗಾಗಿ ಪತ್ನಿಯೊಬ್ಬಳು ತನ್ನ ಪತಿಯ ಮೇಲೆ ಕುದಿಯುವ ಎಣ್ಣೆಯನ್ನು (Boiling Oil) ಸುರಿದು, ಕೊಲೆಗೆ (Murder) ಯತ್ನಿಸಿದ ಆರೋಪದ ಮೇಲೆ ಝಾಲಾವಾಡ್ ಪೊಲೀಸರು ಆಕೆಯನ್ನು ವಶಕ್ಕೆ ಪಡೆದಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಗಂಡ (Viral News) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಕೆಲ ವರ್ಷಗಳ ಹಿಂದೆ ಮನೀಷ್ ರಾಠೋರ್ ಎಂಬ ಕೂಲಿಕಾರ್ಮಿಕನ ವಿವಾಹವು ಉತ್ತರ ಪ್ರದೇಶದ ಸರೋಜ್ ಎಂಬಾಕೆಯೊಂದಿಗೆ ನಡೆದಿತ್ತು. ದಂಪತಿಗೆ ನಾಲ್ಕು ಮಕ್ಕಳಿದ್ದಾರೆ. ಮೂರು ವರ್ಷಗಳ ಹಿಂದೆ, ಮನೀಷ್ ತಮ್ಮ ಮನೆಗೆ ರಾಮಸೇವಕ್ ಎಂಬಾತನನ್ನು ಬಾಡಿಗೆದಾರನಾಗಿ ಇರಿಸಿಕೊಂಡಿದ್ದ. ಮನೀಷ್ ಕೂಲಿಕೆಲಸಕ್ಕಾಗಿ ಹೆಚ್ಚಾಗಿ ಹೊರಗೆ ಇರುತ್ತಿದ್ದಾಗ, ಸರೋಜ್ ಮತ್ತು ರಾಮಸೇವಕ್ ನಡುವೆ ಅನೈತಿಕ ಸಂಬಂಧ ಬೆಳೆಯಿತು ಎಂದು ತಿಳಿದುಬಂದಿದೆ.

ಮನೀಷ್ ತನ್ನ ಪತ್ನಿಗೆ ಬುದ್ಧಿ ಹೇಳಲು ಯತ್ನಿಸಿದರೂ, ಸರೋಜ್ ರಾಮಸೇವಕ್ ಜೊತೆಗಿನ ಸಂಬಂಧವನ್ನು ಮುಂದುವರೆಸಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಮನೀಷ್ ಕೆಲ ತಿಂಗಳ ಹಿಂದೆ ರಾಮಸೇವಕ್‌ನನ್ನು ಮನೆಯಿಂದ ಹೊರ ಹಾಕಿದ್ದ. ಇದರಿಂದ ಕೋಪಗೊಂಡ ಸರೋಜ್, ಪತಿಯೊಂದಿಗೆ ಮಾತನಾಡುವುದನ್ನೇ ನಿಲ್ಲಿಸಿದ್ದಳು. ಆಕೆ ರಾಮಸೇವಕ್‌ನನ್ನು ಆಗಾಗ ಮನೆಗೆ ಕರೆಯುತ್ತಿದ್ದಳು ಎಂದು ಆರೋಪಿಸಲಾಗಿದೆ.

ಆಶ್ಚರ್ಯಕರ ಸಂಗತಿಯೆಂದರೆ, ಸರೋಜ್ ಪತಿಯನ್ನು ಕೊಲ್ಲುವ ವಿಧಾನವನ್ನು ಯೂಟ್ಯೂಬ್‌ನಲ್ಲಿ ಹುಡುಕಿ ಕಲಿತಿದ್ದಳು. ಆಕೆ ಮನೆಯವರ ಎದುರಿಗೇ ಪತಿಯಿಂದ ತಪ್ಪಿಸಿಕೊಂಡು ಹೋಗುವ ಬಗ್ಗೆ ವಿಡಿಯೋಗಳನ್ನು ವೀಕ್ಷಿಸುತ್ತಿದ್ದಳು. ದಂಪತಿ ಮನೆಯೊಳಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಮೂರು ದಿನಗಳ ಹಿಂದೆ, ರಾತ್ರಿ ಮನೀಷ್ ಮಲಗಿದ್ದಾಗ, ಸರೋಜ್ ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ನೀರಿನೊಂದಿಗೆ ಕಾಯಿಸಿ, ಅದನ್ನು ಪತಿಯ ಮೇಲೆ ಸುರಿದಳು. ಮನೀಷ್‌ಗೆ ಯಾರೂ ಸಹಾಯ ಮಾಡಬಾರದೆಂದು ಆಕೆ ಬಾಗಿಲನ್ನು ಹೊರಗಿನಿಂದ ಬಂದ್ ಮಾಡಿದ್ದಳು.

ಈ ಸುದ್ದಿಯನ್ನೂ ಓದಿ: Murder Case: ಇಂದೋರ್‌ ಹತ್ಯೆ ರೀತಿಯಲ್ಲೇ ಮತ್ತೊಂದು ಮರ್ಡರ್‌; ಬಾಯ್‌ಫ್ರೆಂಡ್‌ಗಾಗಿ ಮದುವೆಯಾದ ಒಂದೇ ತಿಂಗಳಿಗೇ ಗಂಡನನ್ನು ಕೊಂದಳಾ ಪತ್ನಿ?

ಕಿರುಚಾಟದ ಸದ್ದಿಗೆ ಯಾರೋ ಬಾಗಿಲು ತೆರೆದಾಗ, ಮನೀಷ್ ಗಂಭೀರವಾಗಿ ಸುಟ್ಟ ಗಾಯಗಳೊಂದಿಗೆ ಕಂಡುಬಂದಿದ್ದಾನೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಝಾಲಾವಾಡ್ ಪೊಲೀಸರು ಸರೋಜ್‌ನನ್ನು ಬಂಧಿಸಿದ್ದು, ಈ ಸಂಚಿನಲ್ಲಿ ಭಾಗಿಯಾಗಿರುವ ರಾಮಸೇವಕ್‌ನಿಗಾಗಿ ಶೋಧ ನಡೆಸುತ್ತಿದ್ದಾರೆ.

Vishakha Bhat Heggar

View all posts by this author