ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಉತ್ತರ ಪ್ರದೇಶದಲ್ಲಿ ಶಂಕಿತ ಐಸಿಸ್ ಭಯೋತ್ಪಾದಕನ ಬಂಧನ; ಮದ್ದುಗುಂಡು, ದಾಖಲೆ ವಶ

ಐಸಿಸ್ ಜೊತೆ ನಂಟು ಹೊಂದಿರುವ ಶಂಕಿತ ಭಯೋತ್ಪಾದಕನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ಮದ್ದುಗುಂಡುಗಳು, ಹಲವು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯು ಹಲವಾರು ವ್ಯಕ್ತಿಗಳ ಬ್ರೈನ್ ವಾಶ್ ಮಾಡಿ ಉಗ್ರಗಾಮಿ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಪ್ರೇರೇಪಿಸುತ್ತಿದನು ಎನ್ನಲಾಗಿದೆ. ಶಂಕಿತ ಐಸಿಸ್ ಭಯೋತ್ಪಾದಕನನ್ನು ರಿಜ್ವಾನ್ ಅಹ್ಮದ್‌ ಎಂದು ಗುರುತಿಸಲಾಗಿದೆ.

ಸಂಗ್ರಹ ಚಿತ್ರ

ಉತ್ತರಪ್ರದೇಶ: ಭಯೋತ್ಪಾದಕ ಚಟುವಟಿಕೆಗಳಲ್ಲಿ (Terrorist activity) ತೊಡಗಿಕೊಂಡಿದ್ದ ವ್ಯಕ್ತಿಯೊಬ್ಬನನ್ನು ಉತ್ತರ ಪ್ರದೇಶದಲ್ಲಿ (uttar pradesh) ಬಂಧಿಸಲಾಗಿದೆ. ದೆಹಲಿ ಪೊಲೀಸರ ವಿಶೇಷ ಘಟಕವು (Delhi Polices Special Cell) ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (Uttar Pradesh Anti-Terrorism Squad) ದೊಂದಿಗೆ ಸೇರಿ ಭಯೋತ್ಪಾದನಾ ನಿಗ್ರಹ ಜಂಟಿ ಕಾರ್ಯಾಚರಣೆ ನಡೆಸಿ ಉತ್ತರ ಪ್ರದೇಶದ ಖುಷಿನಗರದಲ್ಲಿ ಶಂಕಿತ ಐಸಿಸ್ ಭಯೋತ್ಪಾದಕ ರಿಜ್ವಾನ್ ಅಹ್ಮದ್‌ ಎಂಬಾತನನ್ನು ಬಂಧಿಸಿದೆ. ಆತನನ್ನು ದೆಹಲಿಯ ಟ್ರಾನ್ಸಿಟ್ ರಿಮಾಂಡ್‌ಗೆ ಕರೆ ತಂದು ವಿಚಾರಣೆ ನಡೆಸಲಾಗುವುದು ಹಾಗೂ ಈ ಪ್ರಕರಣಕ್ಕೆ ಸಂಬಂಧಿಸಿ ಹೆಚ್ಚಿನ ಬಂಧನದ ಸಾಧ್ಯತೆಯನ್ನು ತನಿಖಾಧಿಕಾರಿಗಳು ನಿರೀಕ್ಷಿಸಿದ್ದಾರೆ ಎನ್ನಲಾಗಿದೆ.

ಐಸಿಸ್‌ನೊಂದಿಗೆ 2015ರಿಂದ ರಿಜ್ವಾನ್ ಅಹ್ಮದ್ ಸಂಪರ್ಕ ಹೊಂದಿದ್ದು, ಆತ ಭಾರತದೊಳಗಿನ ನೇಮಕಾತಿ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ. ಆತ ಅನೇಕರ ಬ್ರೈನ್ ವಾಶ್ ಮಾಡಿ ಉಗ್ರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಮಾಡುತ್ತಿದ್ದನು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್‌ ಜಿಹಾದ್‌ ಪ್ರಕರಣ; ಪ್ರೀತಿಸಿದ ಯುವತಿ ಮೇಲೆ ಅತ್ಯಾಚಾರ, ಬ್ಲಾಕ್‌ಮೇಲ್ ಆರೋಪ

ರಿಜ್ವಾನ್ ಅಹ್ಮದ್ ಬಂಧನದಿಂದ ದೊಡ್ಡ ಜಾಲವನ್ನು ಬೇಧಿಸುವ ನಿರೀಕ್ಷೆ ಇದೆ. ಇದರಿಂದ ಇನ್ನೂ ಹೆಚ್ಚಿನ ಬಂಧನಗಳಾಗಬಹುದು. ರಿಜ್ವಾನ್ ಬಂಧನದ ವೇಳೆ ಆತನ ಬಳಿ ಇದ್ದ ಬಾಂಬ್ ತಯಾರಿಸುವ ವಸ್ತುಗಳು, ಅಪರಾಧ ದಾಖಲೆಗಳು ಮತ್ತು ಜಿಹಾದಿ ಸಾಹಿತ್ಯವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಹಿಂದೆಯೂ ಭಯೋತ್ಪಾದನೆ ಚಟುವಟಿಕೆ ಸಂಬಂಧಿಸಿ ಬಂಧಿಸಲಾಗಿತ್ತು. 2015ರಲ್ಲಿ ಬಂಧನಕ್ಕೆ ಒಳಗಾಗಿದ್ದ ಆತನನ್ನು ಮುಂಬೈನ ಆರ್ಥರ್ ರಸ್ತೆ ಜೈಲಿನಲ್ಲಿ ಇರಿಸಲಾಗಿತ್ತು.

ರಿಜ್ವಾನ್ ಅಹ್ಮದ್ ಬಂಧನದಿಂದ ದೇಶದಲ್ಲಿ ಸ್ಲೀಪರ್ ಸೆಲ್‌ಗಳು, ಹಳೆಯ ಭಯೋತ್ಪಾದಕ ಜಾಲಗಳ ಸಕ್ರಿಯಗೊಂಡಿರುವ ಸಾಧ್ಯತೆ ಬಗ್ಗೆ ಭದ್ರತಾ ಸಂಸ್ಥೆಗಳಲ್ಲಿ ಕಳವಳ ವ್ಯಕ್ತಪಡಿಸಿವೆ.

ರಿಜ್ವಾನ್ ಅಹ್ಮದ್ ಉಗ್ರರ ನೇಮಕ ಕಾರ್ಯದಲ್ಲಿ ತೊಡಗಿಕೊಂಡಿದ್ದರಿಂದ ಆತ ವಿದೇಶಿ ಉಗ್ರರೊಂದಿಗೆ ನೇರ ಸಂಪರ್ಕ ಹೊಂದಿರುವ ಸಾಧ್ಯತೆ ಇದೆ. ಐಸಿಸ್ ನಲ್ಲಿ ಆತನ ಪಾತ್ರದ ಕುರಿತು ತನಿಖೆ ನಡೆಸಲಾಗುತ್ತಿದೆ.

ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳವು ಪಾಕಿಸ್ತಾನ ಮೂಲದ ಹ್ಯಾಂಡ್ಲರ್‌ಗಳೊಂದಿಗೆ ಸಂಪರ್ಕ ಹೊಂದಿರುವ ಶಂಕಿತ ಭಯೋತ್ಪಾದಕ ಮಾಡ್ಯೂಲ್ ಅನ್ನು ಭೇದಿಸಿದ ಒಂದು ದಿನದ ಬಳಿಕ ರಿಜ್ವಾನ್ ಅಹ್ಮದ್ ನನ್ನು ಬಂಧಿಸಲಾಗಿದೆ.

Kalaburagi News: ಕಮಲಾಪುರದಲ್ಲಿ ಯುವತಿಯನ್ನು ಕೊಂದು, ಶವ ಸುಟ್ಟು ಹಾಕಿದ ದುಷ್ಕರ್ಮಿಗಳು!

ರೈಲ್ವೇ ಮೂಲ ಸೌಕರ್ಯಗಳ ಮೇಲೆ ದಾಳಿಗೆ ಯೋಜನೆ ಮಾಡುತ್ತಿದ್ದ ನಾಲ್ವರನ್ನು ಬಂಧಿಸಲಾಗಿದೆ. ಇದರ ಪ್ರಮುಖ ಆರೋಪಿ ಸಾಕಿಬ್ ಅಲಿಯಾಸ್ ಹಲವು ಸಾಮಾಜಿಕ ಮಾಧ್ಯಮಗಳ ಮೂಲಕ ಹ್ಯಾಂಡ್ಲರ್‌ಗಳೊಂದಿಗೆ ನೇರ ಸಂಪರ್ಕದಲ್ಲಿದ್ದ ಎನ್ನಲಾಗಿದೆ. ಇವರ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವಿದ್ಯಾ ಇರ್ವತ್ತೂರು

View all posts by this author