terrorist: ವಿದ್ಯಾರ್ಥಿಗೆ ʼಟೆರರಿಸ್ಟ್ʼ ಎಂದ ಪಿಇಎಸ್ ವಿವಿ ಉಪನ್ಯಾಸಕ ಅಮಾನತು
ಈ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆಕ್ರೋಶಕ್ಕೆ ಕಾರಣವಾಗಿದೆ. ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ ಈ ಬಗ್ಗೆ ದೂರು ದಾಖಲಿಸಿದೆ. ಪ್ರಕರಣದ ಗಂಭೀರತೆಯನ್ನು ಗಮನಿಸಿದ ವಿಶ್ವವಿದ್ಯಾಲಯ ಆಡಳಿತವು ತಕ್ಷಣ ಕ್ರಮ ಕೈಗೊಂಡು ಪ್ರೊಫೆಸರ್ ಅವರನ್ನು ಅಮಾನತು ಮಾಡಿದೆ.
ಉಪನ್ಯಾಸಕ -
ಬೆಂಗಳೂರು, ಮಾ.28: ಕಾಲೇಜು ಉಪನ್ಯಾಸಕರೊಬ್ಬರು (Lecturer) ವಿದ್ಯಾರ್ಥಿಯನ್ನು ತರಗತಿಯಲ್ಲಿ ʼಟೆರರಿಸ್ಟ್ʼ (terrorist) ಎಂದು ಕರೆದು ನಿಂದಿಸಿದ ಘಟನೆ ನಡೆದಿದೆ. ಪ್ರತಿಷ್ಠಿತ ಪಿಇಎಸ್ ವಿಶ್ವವಿದ್ಯಾಲಯದಲ್ಲಿ (PES University) ಈ ಆರೋಪ ಕೇಳಿ ಬಂದಿದ್ದು, ಉಪ್ಯಾಸಕರನ್ನು ಕಾಲೇಜು ಆಡಳಿತ ಮಂಡಳಿ ಅಮಾನತು ಮಾಡಿದೆ.
ಈ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆಕ್ರೋಶಕ್ಕೆ ಕಾರಣವಾಗಿದೆ. ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ ಈ ಬಗ್ಗೆ ದೂರು ದಾಖಲಿಸಿದೆ. ಪ್ರಕರಣದ ಗಂಭೀರತೆಯನ್ನು ಗಮನಿಸಿದ ವಿಶ್ವವಿದ್ಯಾಲಯ ಆಡಳಿತವು ತಕ್ಷಣ ಕ್ರಮ ಕೈಗೊಂಡು ಪ್ರೊಫೆಸರ್ ಅವರನ್ನು ಅಮಾನತು ಮಾಡಿದೆ.
ಮಾರ್ಚ್ 24ರಂದು ಈ ಘಟನೆ ನಡೆದಿದ್ದು ಒಂದು ನಿಮಿಷದ ವಿಡಿಯೋದಲ್ಲಿ ದೇಶಪಾಂಡೆ ಅವರು ಟೆರರಿಸ್ಟ್ ಪದವನ್ನು ಹಲವು ಬಾರಿ ಬಳಸಿರುವುದು ಹಾಗೂ ಇತರ ಅವಮಾನಕಾರಿ ಭಾಷೆಯನ್ನು ಬಳಸಿರುವುದು ಕಾಣುತ್ತದೆ. ವಿದ್ಯಾರ್ಥಿಯೊಬ್ಬರ ದೂರು ಆಧರಿಸಿ, ಉಪಕುಲಪತಿಗಳ ಪತ್ರದ ಪ್ರಕಾರ, PES ವಿಶ್ವವಿದ್ಯಾಲಯವು ವಿವರವಾದ ತನಿಖೆ ನಡೆಯುವವರೆಗೆ ಅವರನ್ನು ಅಮಾನತು ಮಾಡಿದೆ.
Professor at PES University abuses student, calls him a “terrorist” in front of an entire classroom. The incident was recorded by another student. Prof Muralidhar Deshpande has been suspended pending investigation. NSUI has also filed a formal complaint with the police. pic.twitter.com/5LVRayns5t
— Deepak Bopanna (@dpkBopanna) March 28, 2026
NSUI ಸಾರ್ವಜನಿಕ ಕ್ಷಮೆಯಾಚನೆ ಕೋರಿ ಪೊಲೀಸ್ ದೂರು ಸಲ್ಲಿಸಿದ್ದು, SIO ಎಫ್‌ಐಆರ್ ದಾಖಲಿಸಲು ಒತ್ತಾಯಿಸಿದೆ. ಪೊಲೀಸರು ಇನ್ನೂ ಅಧಿಕೃತ ಪ್ರಕರಣ ದಾಖಲಿಸದೇ, ನ್ಯಾಯಾಲಯದ ಅನುಮತಿ ಇಲ್ಲದೆ ಪೊಲೀಸ್ ಕ್ರಮ ಕೈಗೊಳ್ಳಲಾದ ಅಪರಾಧ ವರದಿ ದಾಖಲಿಸಿದ್ದಾರೆ.
Terrorist: ಒಸಾಮಾ ಬಿನ್ ಲಾಡೆನ್ ಥರ ವೇಷ, ಭಯೋತ್ಪಾದನೆಗೆ ಪ್ರಚೋದನೆ: ಬಳ್ಳಾರಿಯ ಉಗ್ರ ಸೇರಿದಂತೆ 12 ಶಂಕಿತರ ಬಂಧನ
ಪ್ರೊಫೆಸರ್ ಹೇಳಿದ್ದೇನು?
“ನಿನಗೆ ನಾಚಿಕೆ ಇಲ್ಲವೇ?” ಎಂದು ಪ್ರೊಫೆಸರ್ ದೇಶಪಾಂಡೆ ವಿದ್ಯಾರ್ಥಿಗೆ ಕೈತೋರಿಸಿ ಕೇಳುತ್ತಿರುವುದು ವಿಡಿಯೊದಲ್ಲಿ ದಾಖಲಾಗಿದೆ. ನಾನು ಇವತ್ತು ಕ್ಲಾಸಿನಲ್ಲಿ ಸಿಟ್ಟಾಗಬಾರದು ಎಂದು ಭಾವಿಸಿಕೊಂಡಿದ್ದೆ. ನಿಮ್ಮಂಥವರಿಂದಲೇ ಇರಾನ್ ಯುದ್ಧದ ರೀತಿಯ ಘಟನೆಗಳು ನಡೆಯುವುದು, ಡೊನಾಲ್ಡ್ ಟ್ರಂಪ್ ಬಂದು ನಿನ್ನಂಥವರನ್ನು ಕರೆದುಕೊಂಡು ಹೋಗುತ್ತಾರೆ, ನೀನು ನರಕಕ್ಕೆ ಹೋಗ್ತೀಯಾ ಎಂದು ಸಿಟ್ಟಿನಿಂದ ಬೈದಿದ್ದಾರೆ.
ವಿದ್ಯಾರ್ಥಿಯಿಂದ ದೂರು ಸ್ವೀಕರಿಸಲಾಗಿದೆ. ವಿಷಯದ ವಿವರವಾದ ತನಿಖೆ ಪೂರ್ಣಗೊಳ್ಳುವವರೆಗೆ ನಿಮಗೆ ತಕ್ಷಣದಿಂದಲೇ ಅಮಾನತು ವಿಧಿಸಲಾಗಿದೆ ಎಂದು PES ವಿಶ್ವವಿದ್ಯಾಲಯದ ಉಪಕುಲಪತಿಗಳು ಸಹಿ ಮಾಡಿರುವ ಪತ್ರದಲ್ಲಿ, ಅಪರಾಧದ ವಿವರವನ್ನು ಉಲ್ಲೇಖಿಸದೆ ಹೇಳಲಾಗಿದೆ.
Terrorist Arrest: ಜಾಮೀನು ಪಡೆದು ಪರಾರಿಯಾಗಿದ್ದ ಶಂಕಿತ ಉಗ್ರ ಬೆಂಗಳೂರಿನಲ್ಲಿ ಸೆರೆ