Kavya Gowda: ರಾಧಾ ರಮಣ ಖ್ಯಾತಿಯ ನಟಿ ಕಾವ್ಯಾ ಗೌಡಗೆ ಸಂಬಂಧಿಯಿಂದಲೇ ರೇ*ಪ್ ಬೆದರಿಕೆ, ಪತಿಯ ಮೇಲೂ ಹಲ್ಲೆ
Radha Ramana: ‘ರಾಧಾ ರಮಣ’ , ‘ಗಾಂಧಾರಿ’ ಮುಂತಾದ ಧಾರಾವಾಹಿಗಳಲ್ಲಿ ಮಿಂಚಿದ ಚೆಲುವೆ ಕಾವ್ಯ ಗೌಡ, ಕಾವ್ಯಾ ಗೌಡ ಮತ್ತು ಅವರ ಪತಿ ಸೋಮಶೇಖರ್ ಮೇಲೆ ಅವರ ಸಂಬಂಧಿಕರೇ ಹಲ್ಲೆ ನಡೆಸಿದ್ದಾರೆ. ಸಂಬಂಧಿ ರವಿಕುಮಾರ್ ಸೋಮಶೇಖರ್ ಮೇಲೆ ಹಲ್ಲೆ ನಡೆಸಿ, ಕಾವ್ಯಾ ಅವರಿಗೆ ಬೆದರಿಕೆ ಹಾಕಿದ್ದಾರೆ. ಕಾವ್ಯಾ ಗೌಡ ಅವರು ಬಣ್ಣದ ಲೋಕದಿಂದ ದೂರ ಉಳಿದು ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಇದೀಗ ದಂಪತಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಾವ್ಯ ಗೌಡ -
‘ರಾಧಾ ರಮಣ’ (Radha Ramana), ‘ಗಾಂಧಾರಿ’ ಮುಂತಾದ ಧಾರಾವಾಹಿಗಳಲ್ಲಿ (Serial) ಮಿಂಚಿದ ಚೆಲುವೆ ಕಾವ್ಯ ಗೌಡ (Kavya Gowda). ಕಾವ್ಯಾ ಗೌಡ ಮತ್ತು ಅವರ ಪತಿ ಸೋಮಶೇಖರ್ ಮೇಲೆ ಅವರ ಸಂಬಂಧಿಕರೇ ಹಲ್ಲೆ ನಡೆಸಿದ್ದಾರೆ. ಸಂಬಂಧಿ ರವಿಕುಮಾರ್ (Ravikumar) ಸೋಮಶೇಖರ್ ಮೇಲೆ ಹಲ್ಲೆ ನಡೆಸಿ, ಕಾವ್ಯಾ ಅವರಿಗೆ ಬೆದರಿಕೆ ಹಾಕಿದ್ದಾರೆ. ಕಾವ್ಯಾ ಗೌಡ ಅವರು ಬಣ್ಣದ ಲೋಕದಿಂದ ದೂರ ಉಳಿದು ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಇದೀಗ ಮೂಲಗಳ ಪ್ರಕಾರ ದಂಪತಿ ಆಸ್ಪತ್ರೆಗೆ (Hospital) ದಾಖಲಾಗಿದೆ.
ಏನಿದು ಗಲಾಟೆ?
ಸೋಮಶೇಖರ್ ಹಾಗೂ ನಂದೀಶ್ ಸಹೋದರರು. ಸೋಮಶೇಖರ್- ಕಾವ್ಯಾ ದಂಪತಿ ಮತ್ತು ನಂದೀಶ್ -ಪ್ರೇಮಾ ದಂಪತಿ ಒಂದೇ ಮನೆಯಲ್ಲಿ ವಾಸವಿದ್ದರು. ಈ ಇಬ್ಬರ ನಡುವೆ ಕೆಲವು ದಿನಗಳಿಂದ ಮನಸ್ತಾಪ ಆಗುತ್ತಲೇ ಇತ್ತು ಎನ್ನಲಾಗಿದೆ.
ಇದನ್ನೂ ಓದಿ: Dog Satish: ಧರ್ಮಸ್ಥಳದ ಪಾರ್ಕ್‌ನಲ್ಲಿಯೇ ಬಿರಿಯಾನಿ ಕಬಾಬ್ ತಿಂದಿದ್ದೆ; ಡಾಗ್ ಸತೀಶ್ ಹೊಸ ವಿವಾದ
ಜನಪ್ರಿಯತೆಯನ್ನು ಸಹಿಸದೇ ಈ ಹಲ್ಲೆ ಮಾಡಿದ್ರಾ?
ಕಾವ್ಯಾ ಗೌಡ ಅವರ ಪತಿ ಸೋಮಶೇಖರ್ ಅವರ ಅತ್ತಿಗೆಯ ತಂದೆಯಿಂದ ಹಲ್ಲೆ ನಡೆದಿದೆ . ನಟಿ ಕಾವ್ಯಾ ಗೌಡ ಅವರು ಗಳಿಸಿರುವ ಜನಪ್ರಿಯತೆಯನ್ನು ಸಹಿಸದೇ ಈ ಹಲ್ಲೆ ನಡೆದಿದೆ. ಸೋಮಶೇಖರ್ ಹಾಗೂ ಕಾವ್ಯಾ ಗೌಡ ಅವರ ಮನೆಗೆ ನುಗ್ಗಿ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಲಾಗಿದೆ.
ಇದೇ ವೇಳೆ ಕಾವ್ಯಾ ಗೌಡಗೆ ನಿನ್ನ ರೇ*ಪ್ ಮಾಡ್ತೇನೆ ಎಂದು ಬೆದರಿಸಿ ಹಲ್ಲೆ ಮಾಡಲಾಗಿದೆ. ಸೋಮಶೇಖರ್ ಅವರಿಗೆ ಚಾಕುವಿನಿಂದ ಇರುವ ಹಲ್ಲೆ ಮಾಡಲಾಗಿದ್ದರೆ, ಕಾವ್ಯಾ ಗೌಡ ಮೇಲೆ ದಾಳಿ ಮಾಡಲಾಗಿದೆ . ಸದ್ಯಕ್ಕೆ ಇಬ್ಬರೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ .
ಕಾವ್ಯಾ ಅಕ್ಕ ಭವ್ಯಾ ಗೌಡ ಅವರು ಪ್ರೇಮ, ನಂದಿಶ್, ಪ್ರಿಯಾ, ರವಿಕುಮಾರ್ ವಿರುದ್ಧ ರಾಮಮೂರ್ತಿ ನಗರ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಕಾವ್ಯಾ ಅವರು ಅದೇ ದಿನ ತಮ್ಮ ಮಗಳಿಗೆ ಊಟ ಮಾಡಿಸಲು ಕಿಚನ್‌ಗೆ ತೆರಳಿದ್ದಾಗ ಪ್ರೇಮಾ ಅವರ ತಂದೆ ರವಿಕುಮಾರ್, ಕಾವ್ಯಾ ಅವರ ಪತಿ ಸೋಮಶೇಖರ್‌ಗೆ ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ.
ಇದನ್ನೂ ಓದಿ: Zee Kannada Serial: ಜೀ ಕನ್ನಡದಲ್ಲಿ ಎರಡು ಹೊಸ ಧಾರಾವಾಹಿಗಳು ಬಂದಾಯ್ತು! ಅಂತ್ಯ ಹಾಡೋ ಸೀರಿಯಲ್‌ಗಳು ಯಾವವು?
ನಂದೀಶ್ ಎನ್ನುವವರು ಕಾವ್ಯಾ ಅವರ ಜುಟ್ಟು ಹಿಡಿದಿದ್ದರೆ, ಪ್ರಿಯಾ ಹಾಗೂ ಪ್ರೇಮಾ ಅವರು ಸಾಯಿಸ್ತೀನಿ ಎಂದು ಬೆದರಿಕೆ ಹಾಕಿದ್ದಾರೆ.