ಕೇರಳ: ಅತ್ಯಾಚಾರ ಸಂತ್ರಸ್ತೆಗೆ (physical abuse victim) ವೈದ್ಯಕೀಯ ವಿಧಿವಿಧಾನದ ಮೂಲಕ 28 ವಾರಗಳ ಗರ್ಭವನ್ನು ಕೊನೆಗೊಳಿಸಲು ಕೇರಳ ಹೈಕೋರ್ಟ್ (kerala high court) ಅನುಮತಿಯನ್ನು ನೀಡಿದೆ. ಆಕೆಯ ದುಃಖ ಮತ್ತು ಭವಿಷ್ಯವನ್ನು ಗಣನೆಗೆ ತೆಗೆದುಕೊಂಡು ಈ ಆದೇಶ ನೀಡಿರುವುದಾಗಿ ಹೇಳಿದ ನ್ಯಾಯಾಲಯ ಇದಕ್ಕಾಗಿ ತಕ್ಷಣ ವ್ಯವಸ್ಥೆ ಮಾಡುವಂತೆ ಸೂಚಿಸಿದೆ. ಗರ್ಭಪಾತ (abortion) ಪ್ರಕ್ರಿಯೆಗೆ ಸಂಬಂಧಿಸಿ ಸಂತ್ರಸ್ತೆ ಮತ್ತು ಆಕೆಯ ತಂದೆ ಲಿಖಿತ ಒಪ್ಪಂದ ಸಲ್ಲಿಸಿದ ಬಳಿಕ ನ್ಯಾಯಾಲಯ ಕೇರಳ ಸರ್ಕಾರಕ್ಕೆ (kerala govt) ಈ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿ ಹರಿಶಂಕರ್ ವಿ ಮೆನನ್ ಅವರು ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯು ಗರ್ಭಧಾರಣೆಯನ್ನು ಮುಂದುವರಿಸಲು ಬಯಸದ ಕಾರಣ ಅರ್ಜಿಯನ್ನು ಅನುಮತಿಸಬೇಕಾಗಿದೆ. ಈ ಪ್ರಕ್ರಿಯೆಯಲ್ಲಿ ಒಂದು ವೇಳೆ ಮಗು ಬದುಕುಳಿದರೆ ರಾಜ್ಯವು ಪ್ರಮಾಣಿತ ರೀತಿಯಲ್ಲಿ ನವಜಾತ ಶಿಶು ಆರೈಕೆಗೆ ವ್ಯವಸ್ಥೆಯನ್ನು ಒದಗಿಸಿಕೊಡಬೇಕು. ಸಂತ್ರಸ್ತೆ ಮಗುವನ್ನು ಬಯಸದಿದ್ದರೆ ಅದನ್ನು ಬಾಲ ನ್ಯಾಯ ಕಾಯ್ದೆಯಡಿಯಲ್ಲಿ ಮಕ್ಕಳ ಆರೈಕೆ ಸಂಸ್ಥೆ ಅಥವಾ ವಿಶೇಷ ದತ್ತು ಸಂಸ್ಥೆಗೆ ಒಪ್ಪಿಸಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಅಪ್ರಾಪ್ತ ಲಿವ್ ಇನ್ ಸಂಗಾತಿಯನ್ನು ಕೊಂದು ಹೂತುಹಾಕಿದ್ದ 16 ವರ್ಷದ ಬಾಲಕನ ಬಂಧನ
ಸಂತ್ರಸ್ತೆಯ ತಂದೆ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿ ಈ ಆದೇಶ ನೀಡಲಾಗಿದೆ. ಸಂತ್ರಸ್ತೆ ಸುಮಾರು 28 ವಾರಗಳ ಗರ್ಭಿಣಿಯಾಗಿದ್ದು, ಮಗುವಿನ ಜನನ ತೂಕ ಸುಮಾರು 1 ಕೆ.ಜಿ. ಇರಲಿದೆ. ಗರ್ಭಪಾತ ಪ್ರಕ್ರಿಯೆಯಲ್ಲಿ ಮಗು ಬದುಕುಳಿಯುವ ಸಾಧ್ಯತೆ ಶೇಕಡಾ 80ರಷ್ಟಿದೆ ಎಂದು ವೈದ್ಯಕೀಯ ಮಂಡಳಿ ನ್ಯಾಯಾಲಯಕ್ಕೆ ತಿಳಿಸಿದೆ.
ಅಕಾಲಿಕವಾಗಿ ಮಗು ಜನನವಾದರೆ ರೆಟಿನೋಪತಿ, ನೆಕ್ರೋಟೈಸಿಂಗ್ ಕೊಲೈಟಿಸ್, ಇಂಟ್ರಾವೆಂಟ್ರಿಕ್ಯುಲರ್ ರಕ್ತಸ್ರಾವ ಮತ್ತು ಉಸಿರಾಟದ ತೊಂದರೆ ಸೇರಿದಂತೆ ವಿವಿಧ ರೀತಿಯ ಸಮಮಸ್ಯೆಗಳನ್ನು ಎದುರಿಸಬಹುದು. ಗರ್ಭಾವಸ್ಥೆಯ ವಯಸ್ಸು 34 ವಾರಗಳ ಸಮೀಪದಲ್ಲಿದ್ದರೆ ಈ ಅಪಾಯವಿರುವುದಿಲ್ಲ. ಆದರೆ ರಕ್ತಸಂಬಂಧದ ತೊಡಕುಗಳು ಎದುರಾಗುವ ಸಾಧ್ಯತೆ ಇರುತ್ತದೆ ಎಡನು ವೈದ್ಯಕೀಯ ಮಂಡಳಿ ತಿಳಿಸಿದೆ.
Kanakapura murder: ಪ್ರೇಯಸಿಯನ್ನು ಗುಂಡಿಟ್ಟು ಕೊಂದು ತೋಟದಲ್ಲಿ ಹೂತುಹಾಕಿದ ಯುವಕ!
ಲೈಂಗಿಕ ದೌರ್ಜನ್ಯ ಪ್ರಕರಣವಾಗಿರುವುದರಿಂದ ಎಫ್ ಐಆರ್ ದಾಖಲಿಸುವುದರೊಂದಿಗೆ ಮಗು ಬದುಕುಳಿಯದಿದ್ದರೆ ಡಿಎನ್‌ಎ ಫಿಂಗರ್‌ಪ್ರಿಂಟಿಂಗ್ ಮತ್ತು ಮ್ಯಾಪಿಂಗ್ ಸೇರಿದಂತೆ ಅಗತ್ಯ ವೈದ್ಯಕೀಯ ಪರೀಕ್ಷೆಗಳಿಗಾಗಿ ಭ್ರೂಣದ ಅಂಗಾಂಶ ಮತ್ತು ರಕ್ತದ ಮಾದರಿಗಳನ್ನು ಸಂರಕ್ಷಿಸಲು ಸರ್ಕಾರಕ್ಕೆ ಸೂಚಿಸಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.