ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Kerala Horror: ಯುವಕನಿಂದ ಬರ್ಬರ ಹತ್ಯಾಕಾಂಡ; ಪ್ರೇಯಸಿಯನ್ನೂ ಸೇರಿಸಿ ಕುಟುಂಬದ ಐವರ ಕೊಲೆ

ಆರೋಪಿಯ ಹೆಸರು ಅಫಾನ್.‌ ಸೋಮವಾರ ತಿರುವನಂತಪುರಂ ಜಿಲ್ಲೆಯ ಮೂರು ಗ್ರಾಮಗಳಲ್ಲಿ ಈತ ಐದು ಜನರನ್ನು ಕೊಂದಿದ್ದಾನೆ. ಕೊಲೆ ಆದವರಲ್ಲಿ ನಾಲ್ವರು ಕುಟುಂಬ ಸದಸ್ಯರು. ನಂತರ ವೆಂಜರಮೂಡು ಪೊಲೀಸ್ ಠಾಣೆಗೆ ಹಾಜರಾಗಿ ಹತ್ಯೆಗಳನ್ನು ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಯುವಕನಿಂದ ಬರ್ಬರ ಹತ್ಯಾಕಾಂಡ; ಪ್ರೇಯಸಿಯನ್ನೂ ಸೇರಿಸಿ ಕುಟುಂಬದ ಐವರ ಕೊಲೆ

ಆರೋಪಿ ಅಫಾನ್

ಹರೀಶ್‌ ಕೇರ ಹರೀಶ್‌ ಕೇರ Feb 25, 2025 9:22 AM

ತಿರುವನಂತಪುರಂ: ಕೇರಳದಲ್ಲಿ 23 ವರ್ಷದ ಯುವಕನೊಬ್ಬ (Kerala man) ತನ್ನದೇ ಕುಟುಂಬದ ಐವರನ್ನು (kills five members) ದಾರುಣವಾಗಿ ಕೊಂದು ಹಾಕಿದ್ದಾನೆ. ಬರ್ಬರ ಕೊಲೆಗಳ (Mass murders) ನಂತರ ಈತ ಪೊಲೀಸ್‌ ಸ್ಟೇಶನ್‌ಗೆ ಬಂದು ಶರಣಾಗಿದ್ದು, ತಾನು ಆರು ಮಂದಿಯನ್ನು ಕೊಂದಿರುವುದಾಗಿ ಹೇಳಿದ್ದಾನೆ. ಆದರೆ ಆತನ ತಾಯಿ ತೀವ್ರ ಗಾಯಗಳೊಂದಿಗೆ ಬದುಕುಳಿದಿದ್ದಾಳೆ. ಈತನಿಂದ ಕೊಲೆಯಾದವರಲ್ಲಿ ಇವನ ಪ್ರೇಯಸಿಯೂ (Lover) ಸೇರಿದ್ದಾಳೆ.

ಆರೋಪಿಯ ಹೆಸರು ಅಫಾನ್.‌ ಸೋಮವಾರ ತಿರುವನಂತಪುರಂ ಜಿಲ್ಲೆಯ ಮೂರು ಗ್ರಾಮಗಳಲ್ಲಿ ಈತ ಐದು ಜನರನ್ನು ಕೊಂದಿದ್ದಾನೆ. ಕೊಲೆ ಆದವರಲ್ಲಿ ನಾಲ್ವರು ಕುಟುಂಬ ಸದಸ್ಯರು. ನಂತರ ವೆಂಜರಮೂಡು ಪೊಲೀಸ್ ಠಾಣೆಗೆ ಹಾಜರಾಗಿ ಹತ್ಯೆಗಳನ್ನು ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಆತನ ತಾಯಿ ಶೆಮಿ ಕ್ಯಾನ್ಸರ್ ರೋಗಿ ಕೂಡ ಆಗಿದ್ದು, ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ.

ತಿರುವನಂತಪುರಂ ಗ್ರಾಮಾಂತರ ಎಸ್ಪಿ ಕೆ ಎಸ್ ಸುದರ್ಶನ್ ಅವರು ಐದು ಸಾವುಗಳನ್ನು ದೃಢಪಡಿಸಿದ್ದಾರೆ. ಮೃತಪಟ್ಟವರು ಆರೋಪಿಯ 13 ವರ್ಷದ ಸಹೋದರ ಅಹ್ಸಾನ್, ಅಜ್ಜಿ ಸಲ್ಮಾ ಬೀವಿ, ತಂದೆಯ ಚಿಕ್ಕಪ್ಪ ಲತೀಫ್, ಚಿಕ್ಕಮ್ಮ ಶಾಹಿಹಾ ಮತ್ತು ಆರೋಪಿಯ ಗೆಳತಿ ಫರ್ಶಾನಾ. ಎರಡು ಪೊಲೀಸ್ ಠಾಣೆಗಳಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ. ಆರೋಪಿಯ ಹೇಳಿಕೆಯನ್ನು ವಿವರವಾಗಿ ದಾಖಲಿಸಿದ ನಂತರವೇ ಕೊಲೆಗಳ ಉದ್ದೇಶವನ್ನು ಕಂಡುಹಿಡಿಯಬೇಕಿದೆ. ಹಣಕಾಸಿನ ಸಮಸ್ಯೆ ಇದ್ದಿರಬಹುದು. ಕುಟುಂಬದ ಚಿನ್ನ ಕಾಣೆಯಾಗಿದೆ. ಅಪರಾಧ ಸ್ಥಳದಿಂದ ಸುತ್ತಿಗೆಯನ್ನು ವಶಪಡಿಸಿಕೊಳ್ಳಲಾಗಿದೆ. ಬೆಳಿಗ್ಗೆ 10ರಿಂದ ಸಂಜೆ ಆರು ಗಂಟೆಯ ನಡುವೆ ಕೊಲೆಗಳು ನಡೆದಿವೆ ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.

ಕೊಲೆಗಳ ಬಳಿಕ ತಾನು ವಿಷ ಸೇವಿಸಿದ್ದೇನೆ ಎಂದು ಆರೋಪಿ ಹೇಳಿಕೊಂಡಿದ್ದು, ಅವನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರ ಪ್ರಕಾರ, ಅಫಾನ್ ಮೊದಲು ಬೆಳಿಗ್ಗೆ ಪಂಗೋಡ್ ಮೂಲದ ತನ್ನ ತಂದೆಯ ತಾಯಿ ಸಲ್ಮಾ ಬೀವಿಯನ್ನು ಕೊಂದಿದ್ದಾನೆ. ನಂತರ ಅವನು ಎಸ್ ಎನ್ ಪುರಂ ಎಂಬ ಇನ್ನೊಂದು ಹಳ್ಳಿಗೆ ಹೋಗಿ ಅಲ್ಲಿ ತಂದೆ ರಹೀಂ ಅವರ ಸಹೋದರ ಲತೀಫ್ ಮತ್ತು ಅವರ ಪತ್ನಿ ಶಾಹಿದಾರನ್ನು ಕೊಂದಿದ್ದಾನೆ. ಪುಲ್ಲಂಪಾರದಲ್ಲಿರುವ ಮನೆಯಲ್ಲಿ ಸಂಜೆ ಕೊಲೆಗಳು ನಡೆದಿವೆ. ನಂತರ ಈತ 13 ವರ್ಷದ ಕಿರಿಯ ಸಹೋದರ ಅಫ್ಸಾನ್ ಮತ್ತು ಇನ್ನೊಬ್ಬ ಮಹಿಳೆ ಫರ್ಸಾನಾರನ್ನು ಕೊಂದುಹಾಕಿದ್ದಾನೆ. ತಾಯಿಯ ಮೇಲೂ ದಾಳಿ ನಡೆಸಿದ್ದು, ಅವರು ಗಾಯಗೊಂಡಿದ್ದಾರೆ.

ಅಫಾನ್‌ನ ಮನೆಯಲ್ಲಿ ಪತ್ತೆಯಾದ ಶವಗಳ ತಲೆಯ ಮೇಲೆ ಭಾರೀ ಗಾಯಗಳಾಗಿವೆ. ಕೊಲೆಯ ಪ್ರಚೋದನೆ ಇನ್ನೂ ಪತ್ತೆಯಾಗಿಲ್ಲ. ಸ್ಥಳೀಯರಾದ ಶಾಜಿ, ಅಫಾನ್‌ನ ಸ್ನೇಹಿತೆ ಫರ್ಸಾನಾ ಕಳೆದ ಎರಡು ದಿನಗಳಿಂದ ಮನೆಯಲ್ಲಿದ್ದರು. ಕುಟುಂಬದಲ್ಲಿ ಫಾನ್‌ ಸೇರಿದಂತೆ ಯಾರೂ ಅಪರಾಧ ಚಟುವಟಿಕೆಗಳು ಅಥವಾ ಮಾದಕ ದ್ರವ್ಯ ಸೇವನೆಯ ಹಿನ್ನೆಲೆ ಹೊಂದಿರಲಿಲ್ಲ.

ಆರೋಪಿಯ ತಂದೆ ಅಬ್ದುಲ್ ರಹೀಂ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದಾರೆ. ತನಗೆ ಹಣಕಾಸಿನ ಸಮಸ್ಯೆಗಳಿವೆ, ಆದರೆ ಅದು ತನ್ನ ಮಗನಿಗೆ ಸಂಬಂಧಿಸಿದ್ದಲ್ಲ. ಅಫಾನ್‌ ವಿಸಿಟಿಂಗ್ ವೀಸಾದಲ್ಲಿ ಆರು ತಿಂಗಳ ಕಾಲ ಸೌದಿಗೆ ಹೋಗಿದ್ದ ಮತ್ತು ಸಂತೋಷದಿಂದಲೇ ಹಿಂತಿರುಗಿದ್ದ. ಆಸ್ತಿಯನ್ನು ಮಾರಾಟ ಮಾಡಿ ಸಾಲ ತೀರಿಸಿದ್ದೆವು. ಅದನ್ನು ಆತ ವಿರೋಧಿಸಿರಲಿಲ್ಲ. ಆತನಿಗಿರುವ ಲವ್‌ ಅಫೇರ್‌ ಬಗ್ಗೆ ನಮಗೆ ಗೊತ್ತಿತ್ತು. ಆದರೆ ನಾವು ಅದಕ್ಕೆ ವಿರುದ್ಧವಾಗಿರಲಿಲ್ಲ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: Murder Case: ಬರ್ಬರ ಕೃತ್ಯ; ಅಪರಿಚಿತ ಮಹಿಳೆಯ ರೇಪ್‌ ಮಾಡಿ ಕೊಲೆ