ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kerala Robbery: ಬ್ಯಾಂಕ್‌ ಸಿಬ್ಬಂದಿಯನ್ನು ಟಾಯ್ಲೆಟ್‌ನಲ್ಲಿ ಕೂಡಿ ಹಾಕಿ 15 ಲಕ್ಷ ರೂ. ದೋಚಿದ ದರೋಡೆಕೋರ

ಕೇರಳದಲ್ಲಿ ಹಾಡಹಗಲೇ ವ್ಯಕ್ತಿಯೊಬ್ಬ ಹೆಲ್ಮೆಟ್‌ ಧರಿಸಿ ಬ್ಯಾಂಕ್‌ಗೆ ನುಗ್ಗಿ, ಸಿಬ್ಬಂದಿಗಳನ್ನು ಚಾಕುವಿನಿಂದ ಬೆದರಿಸಿದ್ದಾನೆ. ನಂತರ ಸಿಬ್ಬಂದಿಗಳನ್ನು ಶೌಚಾಲಯದೊಳಗೆ ಕೂಡಿಹಾಕಿ, 15 ಲಕ್ಷ ರೂ. ದೋಚಿಕೊಂಡು ಪರಾರಿಯಾಗಿದ್ದಾನೆ. ಈ ಇಡೀ ಘಟನೆ ಕೇವಲ 5 ನಿಮಿಷದೊಳಗೆ ನಡೆದಿದೆ.

ಹೆಲ್ಮೆಟ್‌ ಹಾಕಿ ಬ್ಯಾಂಕ್‌ನಲ್ಲಿ ದರೋಡೆ ಮಾಡಿದ ಕಳ್ಳ

ತಿರುವನಂತಪುರಂ: ಕೇರಳದಲ್ಲಿ ನಡೆದ ಆಘಾತಕಾರಿ ಘಟನೆ ಒಂದು ನಡೆದಿದ್ದು, ಹಾಡಹಗಲೇ ವ್ಯಕ್ತಿಯೊಬ್ಬ (Kerala Robbery) ಹೆಲ್ಮೆಟ್‌ ಧರಿಸಿ ಬ್ಯಾಂಕ್‌ಗೆ ನುಗ್ಗಿ, ಸಿಬ್ಬಂದಿಗಳನ್ನು ಚಾಕುವಿನಿಂದ ಬೆದರಿಸಿದ್ದಾನೆ. ನಂತರ ಸಿಬ್ಬಂದಿಗಳನ್ನು ಶೌಚಾಲಯದೊಳಗೆ ಕೂಡಿಹಾಕಿ, 15 ಲಕ್ಷ ರೂ. ದೋಚಿಕೊಂಡು ಪರಾರಿಯಾಗಿದ್ದಾನೆ. ಈ ಇಡೀ ಘಟನೆ ಕೇವಲ 5 ನಿಮಿಷದೊಳಗೆ ನಡೆದಿದೆ. ಸದ್ಯ ಇಡೀ ಆರೋಪಿಯು ದರೋಡೆ ಮಾಡಿರುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೊಲೀಸರು ಆರೋಪಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.

ಆರೋಪಿಯು ಹೆಲ್ಮೆಟ್‌ ಧರಿಸಿ ಚಾಕುವನ್ನು ಹಿಡಿದು ಬ್ಯಾಂಕ್‌ನೊಳಗೆ ಪ್ರವೇಶಿಸುತ್ತಾನೆ. ಹಿಂದಿಯಲ್ಲಿ ಮಾತನಾಡುತ್ತಾ ಚಾಕು ತೋರಿಸಿ ಬ್ಯಾಂಕ್ ಮ್ಯಾನೇಜರ್ ಮತ್ತು ಇನ್ನೊಬ್ಬ ಸಿಬ್ಬಂದಿಯನ್ನು ಬೆದರಿಸಿ ಶೌಚಾಲಯದೊಳಗೆ ಬೀಗ ಹಾಕಿದ್ದಾನೆ. ನಂತರ ಕೌಂಟರ್‌ನಲ್ಲಿ ಇರಿಸಲಾಗಿದ್ದ 47 ಲಕ್ಷ ರೂ.ಗಳಿಂದ 15 ಲಕ್ಷ ರೂ.ಗಳನ್ನು ಕದ್ದಿದ್ದಾನೆ. ಕದ್ದ ಹಣವನ್ನು ಬ್ಯಾಗ್‌ನಲ್ಲಿರಿಸಿ ಸ್ಕೂಟರ್‌ನಲ್ಲಿ ಪರಾರಿಯಾಗಿದ್ದಾನೆ.



ಘಟನೆಯ ನಂತರ ಬ್ಯಾಂಕಿನವರು ಪೊಲೀಸರಿಗೆ ದೂರು ನೀಡಿದ್ದಾರೆ. ಹಗಲು ದರೋಡೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ದರೋಡೆಕೋರನು ಹಿಂದಿಯಲ್ಲಿ ಮಾತನಾಡುತ್ತಿದ್ದ. ನಗದು ಕೌಂಟರ್‌ನಲ್ಲಿ 47 ಲಕ್ಷ ರೂ.ಗಳ ಬಂಡಲ್‌ಗಳಿದ್ದವು. ಕಳ್ಳನು ಕೇವಲ ಮೂರು ಬಂಡಲ್‌ಗಳಲ್ಲಿರುವ 15 ಲಕ್ಷ ಹಣವನ್ನು ತೆಗೆದುಕೊಂಡು ಹೋಗಿದ್ದಾನೆ. ಸಿಸಿಟಿವಿಯನ್ನು ಆಧಾರಿಸಿ ತನಿಖೆ ನಡೆಸಲಾಗುತ್ತಿದೆ. ಶೀಘ್ರವೇ ಕಳ್ಳನನ್ನು ಪತ್ತೆ ಮಾಡುತ್ತೇವೆ ಎಂದು ತ್ರಿಶೂರ್ ಗ್ರಾಮೀಣ ಎಸ್‌ಪಿ ಬಿ. ಕೃಷ್ಣ ಕುಮಾರ್ ಅವರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Bank Robbery Case: ಮಂಗಳೂರು ಕೋಟೆಕಾರು ಬ್ಯಾಂಕ್ ದರೋಡೆ ಕೇಸ್;‌ ಮಧುರೈ ಮೂಲದ ಮೂವರು ಖದೀಮರು ಅರೆಸ್ಟ್

ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಕೇರಳ ಬಿಜೆಪಿಯ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್, ಕೇರಳದ ಕಾನೂನು ಮತ್ತು ಸುವ್ಯವಸ್ಥೆಯನ್ನು ಟೀಕಿಸಿದ್ದಾರೆ. ಇದು ರಾಜ್ಯ ಸರ್ಕಾರದ ವೈಫಲ್ಯ ಎಂದು ಕರೆದರು ಕರೆದಿದ್ದಾರೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಗೃಹ ಇಲಾಖೆಯಿಂದ ಕೆಳಗಿಳಿಯಬೇಕೆಂದು ಒತ್ತಾಯಿಸಿದರು.