Bank Robbery Case: ಮಂಗಳೂರು ಕೋಟೆಕಾರು ಬ್ಯಾಂಕ್ ದರೋಡೆ ಕೇಸ್; ಮಧುರೈ ಮೂಲದ ಮೂವರು ಖದೀಮರು ಅರೆಸ್ಟ್
Bank Robbery Case: ದರೋಡೆ ನಡೆಸಿದ ಬಳಿಕ ದರೋಡೆಕೋರರು ತಲಪಾಡಿ ಟೋಲ್ ಮೂಲಕ ಕೇರಳಕ್ಕೆ ಪರಾರಿಯಾಗಿದ್ದರು. ಇದೀಗ ಮಧುರೈ ಸಮೀಪ ಮೂವರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು: ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ ದರೋಡೆ ಪ್ರಕರಣಕ್ಕೆ (Bank Robbery Case) ಸಂಬಂಧಿಸಿ ಮೂವರು ಖದೀಮರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ಮಧುರೈ ಸಮೀಪ ದರೋಡೆಕೋರರನ್ನು ಪೊಲೀಸರ ತಂಡ ಅರೆಸ್ಟ್ ಮಾಡಿದೆ.
ಮಧುರೈ ಮೂಲದ ಮುರುಗನ್ಡಿ, ಮಣಿವಣ್ಣನ್ ಹಾಗೂ ಪ್ರಕಾಶ್ ಅಲಿಯಾಸ್ ಜೋಷ್ವಾ ಬಂಧಿತ ಆರೋಪಿಗಳು. ಬಂಧಿತರಿಂದ ಫಿಯೆಟ್ ಕಾರು ಸಹಿತ ಎರಡು ಚೀಲದಲ್ಲಿದ್ದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
ದರೋಡೆ ನಡೆಸಿದ ಬಳಿಕ ದರೋಡೆ ಕೋರರು ತಲಪಾಡಿ ಟೋಲ್ ಮೂಲಕ ಕೇರಳಕ್ಕೆ ಪರಾರಿಯಾಗಿದ್ದರು. ಕೇರಳದ ಟೋಲ್ನಲ್ಲಿ ಕಾರು ಪಾಸ್ ಆಗಿರುವುದು ಪತ್ತೆಯಾಗಿತ್ತು. ಇದೀಗ ಮಧುರೈ ಸಮೀಪ ಮೂವರು ಖದೀಮರನ್ನು ಮಂಗಳೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಏನಿದು ಪ್ರಕರಣ?
ಉಲ್ಲಾಳದ ಕೋಟೆಕಾರು ಸಹಕಾರ ಬ್ಯಾಂಕ್‌ನಲ್ಲಿ ಜ.17ರಂದು 12 ಕೋಟಿ ಮೌಲ್ಯದ ನಗದು, ಚಿನ್ನಾಭರಣಗಳನ್ನು ದರೋಡೆ ಮಾಡಲಾಗಿತ್ತು. ಮಧ್ಯಾಹ್ನ ಕೋಟೆಕಾರು ಸಹಕಾರ ಬ್ಯಾಂಕ್‌ಗೆ ನುಗಿದ್ದ ದರೋಡೆಕೋರರು ಕೇವಲ 5 ನಿಮಿಷದಲ್ಲಿ ಹಣದ ಮೂಟೆ ಕಟ್ಟಿಕೊಂಡು ಹೋಗಿದ್ದರು. ಕೋಟೆಕಾರು ಬ್ಯಾಂಕ್ ದರೋಡೆ ಮಾಡಲು ಈ ಗ್ಯಾಂಗ್ ಮೊದಲೇ ಸ್ಕೆಚ್ ಹಾಕಿಕೊಂಡು ಬಂದಿತ್ತು. ದರೋಡೆಕೋರರು ಓರ್ವ ಬ್ಯಾಂಕ್ ಸಿಬ್ಬಂದಿಯ ಮೊಬೈಲ್ ಕಿತ್ತುಕೊಂಡು ಎಸ್ಕೇಪ್ ಆಗಿದ್ದ. ಬ್ಯಾಂಕ್ ಸಿಬ್ಬಂದಿಯ ಮೊಬೈಲ್ ಕಸಿದು ಕೊಂಡು ಹೋದ ದರೋಡೆಕೋರರು ಮಂಗಳೂರು ಪೊಲೀಸರು ನಮ್ಮನ್ನ ಟ್ರ್ಯಾಕ್ ಮಾಡುತ್ತಾರೆ ಅನ್ನೋದು ಚೆನ್ನಾಗಿ ಗೊತ್ತಿದೆ. ಆ ಮೊಬೈಲ್ ಅನ್ನು ಪೊಲೀಸರು ಟ್ರ್ಯಾಕ್ ಮಾಡಿದಾಗ ಸ್ಫೋಟಕ ಮಾಹಿತಿ ಬಯಲಾಗಿತ್ತು.
ಬ್ಯಾಂಕ್ ಸಿಬ್ಬಂದಿ ಮೊಬೈಲ್ ಕಿತ್ತುಕೊಂಡ ದರೋಡೆಕೋರರು ಇಡೀ ನಗರ ಸುತ್ತಿ, ಕದ್ರಿ ರಸ್ತೆ ಬಳಿ ಮೊಬೈಲ್ ಎಸೆದು ಪರಾರಿಯಾಗಿದ್ದರು. ಪೊಲೀಸರ ತನಿಖೆಯ ಹಾದಿ ತಪ್ಪಿಸೋಕ್ಕೆ ಈ ಕಿಲಾಡಿ ಪ್ಲಾನ್ ಮಾಡಿದ್ದರು. ಬ್ಯಾಂಕ್ ಬಗ್ಗೆ ಪಿನ್ ಟು ಪಿನ್ ಮಾಹಿತಿ ಕಲೆ ಹಾಕಿದ್ದ ಖದೀಮರಿಗೆ ಬ್ಯಾಂಕ್ ಸಿಬ್ಬಂದಿಯೇ ಶಾಮೀಲಾಗಿರುವ ಶಂಕೆಯೂ ವ್ಯಕ್ತವಾಗಿತ್ತು. ಖದೀಮರ ಒಂದು ತಂಡ ಮೊಬೈಲ್ ಎಸೆದು ಪರಾರಿಯಾದ ಮೇಲೆ ಬಂಟ್ವಾಳ ರಸ್ತೆಯ ಮೂಲಕ ಕೇರಳಕ್ಕೆ ಪ್ರವೇಶಿಸಿದ್ದರು. ಕೇರಳದ ಟೋಲ್ನಲ್ಲಿ ಕಾರು ಹೋಗಿರುವುದು ಕೂಡ ಪತ್ತೆಯಾಗಿತ್ತು. ಇದೀಗ ಮಧುರೈ ಬಳಿ ಮೂವರು ಖದೀಮರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.