ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಹಾಸ್ಟೆಲ್‌ನಲ್ಲಿ ಚಾಕು ಇರಿತ; ರಷ್ಯಾದಲ್ಲಿ ನಾಲ್ವರು ಭಾರತೀಯ ವಿದ್ಯಾರ್ಥಿಗಳಿಗೆ ಗಾಯ

ರಷ್ಯಾದಲ್ಲಿ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳ ಮೇಲೆ ದಾಳಿಯಾಗಿದ್ದು, ನಾಲ್ವರು ಭಾರತೀಯ ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ನಡೆದಿದೆ. ರಷ್ಯಾದ ವೈದ್ಯಕೀಯ ಕಾಲೇಜು ಹಾಸ್ಟೆಲ್‌ನಲ್ಲಿ ಈ ದಾಳಿ ನಡೆದಿದೆ. ಹದಿ ಹರೆಯದ ಯುವಕನೊಬ್ಬ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದ್ದರಿಂದ ಭಾರತೀಯರು ಸೇರಿದಂತೆ ಹಲವಾರು ಮಂದಿ ಗಾಯಗೊಂಡಿದ್ದಾರೆ.

ಸಂಗ್ರಹ ಚಿತ್ರ

ರಷ್ಯಾ: ಹಾಸ್ಟೆಲ್ ವಿದ್ಯಾರ್ಥಿಗಳ (Hostel Students) ಮೇಲೆ ಹದಿ ಹರೆಯದ ಯುವಕನೊಬ್ಬ ದಾಳಿ (knife attack) ನಡೆಸಿರುವ ಘಟನೆ ರಷ್ಯಾದಲ್ಲಿ (Russia) ನಡೆದಿದೆ. ರಷ್ಯಾದ ಉಫಾದಲ್ಲಿರುವ ಸ್ಟೇಟ್ ಮೆಡಿಕಲ್ ಯೂನಿವರ್ಸಿಟಿಯ ವಸತಿ ನಿಲಯಕ್ಕೆ (medical college hostel) ನುಗ್ಗಿದ ಯುವಕ ಚಾಕುವಿನಿಂದ ಅಲ್ಲಿ ವಾಸಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದ್ದಾನೆ. ಇವರಲ್ಲಿ ನಾಲ್ವರು ಭಾರತೀಯ ವಿದ್ಯಾರ್ಥಿಗಳು ಸೇರಿದಂತೆ ಹಲವಾರು ಮಂದಿ ಗಾಯಗೊಂಡಿದ್ದಾರೆ. ಈ ಘಟನೆ ಶನಿವಾರ ನಡೆದಿರುವುದಾಗಿ ಮಾಸ್ಕೋದಲ್ಲಿರುವ (Moscow) ಭಾರತೀಯ ರಾಯಭಾರ ಕಚೇರಿ (Indian Embassy) ತಿಳಿಸಿದೆ.

ರಷ್ಯಾದ ಬಾಷ್ಕೋರ್ಟೊಸ್ತಾನ್ ಗಣರಾಜ್ಯದ ವಿಶ್ವವಿದ್ಯಾಲಯಕ್ಕೆ ಸೇರಿದ ವಿದೇಶಿ ವಿದ್ಯಾರ್ಥಿಗಳ ವಸತಿ ನಿಲಯದೊಳಗೆ ಶನಿವಾರ ಚಾಕು ಇರಿತದ ಘಟನೆ ನಡೆದಿದೆ. ದಾಳಿ ನಡೆಸಲು ಬಂದವನನ್ನು ತಡೆಯಲು ಯತ್ನಿಸಿದ ಇಬ್ಬರು ಪೊಲೀಸ್ ಅಧಿಕಾರಿಗಳು ಸಹ ಈ ಸಂದರ್ಭದಲ್ಲಿ ಗಾಯಗೊಂಡಿದ್ದಾರೆ.

ಹೋಟೆಲ್‌ನಲ್ಲಿ ಉಳಿದ ಮಾಂಸಾಹಾರ ಮರುಬಳಕೆ: ವಿಡಿಯೊದಲ್ಲಿ ಸೆರೆಯಾಯ್ತು ಬೆಚ್ಚಿ ಬೀಳಿಸುವ ದೃಶ್ಯ

ಈ ಕುರಿತು ಮಾಹಿತಿ ನೀಡಿರುವ ರಷ್ಯಾದ ಆಂತರಿಕ ಸಚಿವಾಲಯ, ಬಾಷ್ಕೋರ್ಟೊಸ್ತಾನ್‌ನ ರಾಜಧಾನಿ ಉಫಾದಲ್ಲಿರುವ ಸ್ಟೇಟ್ ಮೆಡಿಕಲ್ ಯೂನಿವರ್ಸಿಟಿಯ ವಸತಿ ನಿಲಯಕ್ಕೆ ಚಾಕುವಿನೊಂದಿಗೆ ಬಂದ 15 ವರ್ಷದ ಬಾಲಕ ಅಲ್ಲಿ ವಾಸಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದನು. ಬಾಲಕನನ್ನು ಬಂಧಿಸಲು ಬಂದ ಇಬ್ಬರು ಪೊಲೀಸ್ ಅಧಿಕಾರಿಗಳಿಗೂ ಆತ ಇರಿದಿದ್ದಾನೆ. ಅಲ್ಲದೇ ತನ್ನ ಮೇಲೆಯೇ ತಾನು ದೈಹಿಕವಾಗಿ ಹಲ್ಲೆಯನ್ನು ಕೂಡ ನಡೆಸಿದ್ದಾನೆ ಎಂದು ಹೇಳಿದೆ.

ಆಂತರಿಕ ಸಚಿವಾಲಯದ ವಕ್ತಾರೆ ಮೇಜರ್ ಜನರಲ್ ಐರಿನಾ ವೋಲ್ಕ್ ಅವರು ಶಂಕಿತನನ್ನು ಬಂಧಿಸಲಾಗಿದೆ. ಈ ಘಟನೆಯಲ್ಲಿ ಎಷ್ಟು ಮಂದಿಗೆ ಗಾಯವಾಗಿದೆ ಎನ್ನುವ ಕುರಿತು ಸ್ಪಷ್ಟ ಮಾಹಿತಿ ಇಲ್ಲ. ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದರು.

ಘಟನೆಯ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ಇದರಲ್ಲಿ ಪೊಲೀಸ್ ಅಧಿಕಾರಿಗಳು ಆರೋಪಿಯನ್ನು ಬಂಧಿಸಿ ಕರೆದೊಯ್ಯುತ್ತಿರುವುದನ್ನು ಕಾಣಬಹುದು.

ಈ ಕುರಿತು ಪ್ರತಿಕ್ರಿಯಿಸಿರುವ ಭಾರತೀಯ ರಾಯಭಾರ ಕಚೇರಿಯು, ಇದೊಂದು ದುರದೃಷ್ಟಕರ ಘಟನೆ. ನಾಲ್ವರು ಭಾರತೀಯ ವಿದ್ಯಾರ್ಥಿಗಳು ಸೇರಿದಂತೆ ಹಲವಾರು ಮಂದಿ ಗಾಯಗೊಂಡಿದ್ದಾರೆ. ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ರಷ್ಯಾದ ಅಧಿಕಾರಿಗಳೊಂದಿಗೆ ಭಾರತೀಯ ದೂತಾವಾಸದ ಅಧಿಕಾರಿಗಳು ಸಂಪರ್ಕದಲ್ಲಿದ್ದಾರೆ. ಗಾಯಗೊಂಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಮತ್ತು ಹೆಚ್ಚಿನ ಬೆಂಬಲವನ್ನು ಸಂಘಟಿಸಲು ಕಜಾನ್‌ನಲ್ಲಿರುವ ಭಾರತೀಯ ದೂತಾವಾಸದ ಅಧಿಕಾರಿಗಳು ಉಫಾಗೆ ತೆರಳಿದ್ದಾರೆ ಎಂದು ಹೇಳಿದೆ.

ಪ್ರವಾಸಿಗರಿಗೆ ಗುಡ್‌ನ್ಯೂಸ್‌; ಭಾರತದ ಯುಪಿಐ ಸೇವೆ ಶೀಘ್ರದಲ್ಲೇ ಮಲೇಷ್ಯಾದಲ್ಲೂ ಲಭ್ಯ

ಘಟನೆಯ ಕುರಿತು ರಷ್ಯಾದ ಅಧಿಕಾರಿಗಳು ಇನ್ನೂ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಬಂಧಿತ ಬಾಲಕನನ್ನು ರಷ್ಯಾದ ಅಧಿಕಾರಿಗಳೊಂದಿಗೆ ಸಂಪರ್ಕ ಹೊಂದಿರುವ ಬಾಜಾ ಚಾನೆಲ್ ದಾಳಿಕೋರ ನಿಷೇಧಿತ ನವ-ನಾಜಿ ಸಂಘಟನೆಗೆ ಸೇರಿದವನು ಎನ್ನಲಾಗಿದೆ. ಯಾಕೆಂದರೆ ಅವನು ವಸತಿ ನಿಲಯದ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸುತ್ತಿದ್ದಾಗ ಹತ್ಯಾಕಾಂಡದ ಬಗ್ಗೆ ರಾಷ್ಟ್ರೀಯತಾವಾದಿ ಘೋಷಣೆಗಳನ್ನು ಕೂಗುತ್ತಿದ್ದನು ಎನ್ನಲಾಗಿದೆ.

ವಿದ್ಯಾ ಇರ್ವತ್ತೂರು

View all posts by this author