Kodagu News: ಸೂರ್ಲಬ್ಬಿ ವಿದ್ಯಾರ್ಥಿನಿ ಕೊಲೆ ಪ್ರಕರಣ; ಅಪರಾಧಿಗೆ ಮರಣದಂಡನೆ ವಿಧಿಸಿದ ಕೊಡಗು ಜಿಲ್ಲಾ ಕೋರ್ಟ್
Surlabbi girl student Murder Case: 2024ರ ಮೇನಲ್ಲಿ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿ ಬಳಿ ಮೀನಾ ಎಂಬ ಎಸ್ಎಸ್ಎಲ್ಸಿ ವಿದ್ಯಾರ್ಥಿನಿಯನ್ನು ಪ್ರಕಾಶ್ ಎಂಬಾತ ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿದ್ದ. ಮದುವೆಗೆ ನಿರಾಕರಿಸಿದ ಕಾರಣಕ್ಕೆ ಹೇಯ ಕೃತ್ಯ ಎಸಗಿದ್ದ. ಇದೀಗ ಅಪರಾಧಿಗೆ ಗಲ್ಲುಶಿಕ್ಷೆ ವಿಧಿಸಲಾಗಿದೆ.
-
ಮಡಿಕೇರಿ: ಮದುವೆಗೆ ನಿರಾಕರಿಸಿದ ಕಾರಣಕ್ಕೆ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯ ಶಿರಚ್ಛೇದನ ಮಾಡಿ ಬರ್ಬರವಾಗಿ ಕೊಲೆ (Surlabbi girl student Murder Case) ಮಾಡಿದ್ದ ಅಪರಾಧಿಗೆ ಕೊಡಗು (Kodagu) ಜಿಲ್ಲಾ ನ್ಯಾಯಾಲಯ ಗಲ್ಲುಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಸೂರ್ಲಬ್ಬಿ ಗ್ರಾಮದ ನಿವಾಸಿ ಪ್ರಕಾಶ್ ಮರಣದಂಡನೆಗೆ ಗುರಿಯಾದ ಅಪರಾಧಿ.
2024ರ ಮೇನಲ್ಲಿ ಸೂರ್ಲಬ್ಬಿ ಬಳಿ ಮೀನಾ ಎಂಬ ಎಸ್ಎಸ್ಎಲ್ಸಿ ವಿದ್ಯಾರ್ಥಿನಿಯನ್ನು ಈತ ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿದ್ದನು. ಕೃತ್ಯ ಎಸಗಿದ ಬಳಿಕ ಬಾಲಕಿಯ ರುಂಡ ಹಾಗೂ ಕೋವಿಯೊಂದಿಗೆ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ದಟ್ಟ ಅರಣ್ಯದಲ್ಲಿ ಬಂಧಿಸಿದ್ದರು. ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಈ ಭೀಕರ ಪ್ರಕರಣದ ವಿಚಾರಣೆ ನಡೆಸಿದ ಮಡಿಕೇರಿಯ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸುರೇಂದ್ರ ಅವರು ಅಪರಾಧಿಗೆ ಗಲ್ಲುಶಿಕ್ಷೆ ಪ್ರಕಟಿಸಿದ್ದಾರೆ.
ತೀರ್ಪು ಪ್ರಕಟಿಸುವ ವೇಳೆ ನ್ಯಾಯಾಧೀಶರು ಅತ್ಯಂತ ಮಾರ್ಮಿಕವಾಗಿ ನುಡಿದಿದ್ದು, "ಶಿರಚ್ಛೇದನ ಮಾಡುವ ಮೂಲಕ ಒಬ್ಬ ಬಾಲಕಿಯ ಧ್ವನಿಯನ್ನು ಮುಚ್ಚಿಸಬಹುದು, ಆದರೆ ನ್ಯಾಯದ ಧ್ವನಿಯನ್ನು ಎಂದಿಗೂ ಮುಚ್ಚಿಡಲು ಸಾಧ್ಯವಿಲ್ಲ" ಎಂದು ಅಭಿಪ್ರಾಯಪಟ್ಟು ಅಪರಾಧಿಗೆ ಮರಣದಂಡನೆ ವಿಧಿಸಿದ್ದಾರೆ.
ಮರವೊಂದರಲ್ಲಿ ಪತ್ತೆಯಾಗಿತ್ತು ಬಾಲಕಿಯ ರುಂಡ
ಹತ್ಯೆಯ ಬಳಿಕ ಪೊಲೀಸರು ಪ್ರಕಾಶ್ನನ್ನು ಬಂಧಿಸಿದ್ದರಾದರೂ ಬಾಲಕಿಯ ರುಂಡ ತಕ್ಷಣಕ್ಕೆ ಪತ್ತೆಯಾಗಿರಲಿಲ್ಲ. ಪೊಲೀಸರು ಅರಣ್ಯ ಪ್ರದೇಶದಲ್ಲಿ ತೀವ್ರ ಶೋಧ ನಡೆಸಿದಾಗ, ಕೃತ್ಯ ನಡೆದ ಸ್ಥಳದಿಂದ ಸ್ವಲ್ಪ ದೂರದಲ್ಲಿದ್ದ ಮರವೊಂದರಲ್ಲಿ ರುಂಡ ಪತ್ತೆಯಾಗಿತ್ತು. ತಂಗಿಯ ರುಂಡವನ್ನು ಕಂಡು ಆಕ್ರೋಶಗೊಂಡಿದ್ದ ಮೀನಾ ಸಹೋದರ ದಿಲೀಪ್, ಕೋವಿ ಹಿಡಿದು ಆರೋಪಿಯನ್ನು ಶೂಟ್ ಮಾಡಲು ಮುಂದಾಗಿದ್ದ ಘಟನೆಯೂ ನಡೆದಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ದಿಲೀಪ್ಗೆ ನೀರು ಕುಡಿಸಿ, ಸಮಾಧಾನಪಡಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದರು.
ಪತಿಯನ್ನು ಹುಡುಕಿಕೊಂಡು ಬಂದ ಗರ್ಭಿಣಿ ಮೇಲೆ ಮೆಣಸಿನ ಪುಡಿ ಎರಚಿದ ದುಷ್ಕರ್ಮಿಗಳು; ಸ್ಪಾದಲ್ಲಿ ಎಳೆದಾಡಿ ಹಲ್ಲೆ
ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿ ಸರ್ಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿಯ ಏಕೈಕ ವಿದ್ಯಾರ್ಥಿನಿಯಾಗಿದ್ದ ಮೀನಾ, ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ತನ್ನ ಶಾಲೆಗೆ ಶೇ. 100ರಷ್ಟು ಫಲಿತಾಂಶ ತಂದುಕೊಟ್ಟಿದ್ದಳು. ಪರೀಕ್ಷೆಯಲ್ಲಿ ಪಾಸಾದ ಸಂಭ್ರಮದಲ್ಲಿ ಶಾಲೆಗೆ ಹೋಗಿ ಖುಷಿಯಿಂದ ಮನೆಗೆ ಮರಳುತ್ತಿದ್ದ ವೇಳೆ ದಾರಿಯಲ್ಲಿ ಅಡ್ಡಗಟ್ಟಿದ್ದ ಪ್ರಕಾಶ್, ದುಷ್ಕೃತ್ಯ ಎಸಗಿದ್ದ