ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಪ್ರಿಯಕರನ ಹೊಟ್ಟೆ ಸೀಳಿ ಖಾಸಗಿ ಅಂಗ ಕತ್ತರಿಸಿ ಕೊಂದ ನಾಲ್ವರಿಗೆ ಜೀವಾವಧಿ ಶಿಕ್ಷೆ

ಪ್ರಿಯಕರನ ಹೊಟ್ಟೆ ಸೀಳಿ ಖಾಸಗಿ ಅಂಗ ಕತ್ತರಿಸಿ ಕೊಂದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರಿಗೆ ಬಿಹಾರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ರೋಹ್ತಾಸ್ ಜಿಲ್ಲೆಯ ಭಗವಾನ್‌ಪುರ ಗ್ರಾಮದಲ್ಲಿ 2019ರಲ್ಲಿ ನಡೆದ ಈ ಘಟನೆ ಸಂಪೂರ್ಣ ಗ್ರಾಮವನ್ನೇ ಬೆಚ್ಚಿ ಬೀಳಿಸಿತ್ತು. ಗೆಳತಿಯನ್ನು ಭೇಟಿ ನೀಡಲು ಹೋಗಿದ್ದ ಯುವಕನನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು.

ಸಂಗ್ರಹ ಚಿತ್ರ

ಬಿಹಾರ: ಪ್ರಿಯಕರನ ಹೊಟ್ಟೆ ಸೀಳಿ ಖಾಸಗಿ ಅಂಗ ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿ ಬಿಹಾರ ನ್ಯಾಯಾಲಯವು (Bihar court) ನಾಲ್ವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ರೋಹ್ತಾಸ್ ಜಿಲ್ಲೆಯ (Rohtas district) ಭಗವಾನ್‌ಪುರ ಗ್ರಾಮದಲ್ಲಿ 2019ರಲ್ಲಿ ನಡೆದ ಈ ಘಟನೆ ಸಂಪೂರ್ಣ ಗ್ರಾಮವನ್ನೇ ಬೆಚ್ಚಿ ಬೀಳಿಸಿತ್ತು. ಗೆಳತಿಯನ್ನು ಭೇಟಿ ಮಾಡಲು ಹೋಗಿದ್ದ ಯುವಕನನ್ನು ಯುವತಿಯ ಪತಿ, ತಂದೆ ಮತ್ತು ಸಹೋದರ ಸೇರಿ ಬರ್ಬರವಾಗಿ ಹತ್ಯೆ (Murder case) ಮಾಡಿದ್ದರು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಧೀಶರು ಇದೊಂದು ಘೋರ ಅಪರಾಧ. ಅತ್ಯಂತ ಕ್ರೂರ ಎಂದು ಹೇಳಿ ಆರೋಪಿಗಳಿಗೆ ಶಿಕ್ಷೆ ಘೋಷಿಸಿದರು.

2019ರ ಮಾರ್ಚ್ ತಿಂಗಳಲ್ಲಿ ಭಗವಾನ್‌ಪುರ ಗ್ರಾಮವನ್ನು ಬೆಚ್ಚಿಬೀಳಿಸಿದ ಘಟನೆ ಇದಾಗಿದೆ. ರೋಹ್ತಾಸ್ ಜಿಲ್ಲೆಯಲ್ಲಿ ಪ್ರೇಮ ಪ್ರಕರಣವೊಂದು ಸೇಡು, ಕೊಲೆಯಲ್ಲಿ ಅಂತ್ಯಗೊಂಡಿತ್ತು. ಸುಮಾರು ಏಳೂವರೆ ವರ್ಷಗಳ ಹಿಂದೆ ಮನ್ನು ಕುಮಾರ್ ಎಂಬಾತನನ್ನು ಗೆಳತಿ, ಆಕೆಯ ಪತಿ, ತಂದೆ, ಸಹೋದರ ಸೇರಿ ಕೊಲೆ ಮಾಡಿದ್ದರು.

ಇನ್‌ಸ್ಟಾಗ್ರಾಮ್‌ ಪೋಸ್ಟ್‌, 6 ಪ್ಯಾಕ್‌; ಜಿಮ್‌ ಈಗ ಮತಾಂತರದ ಕೇಂದ್ರ: ಹಿಂದೂ ಮಹಿಳೆಯರೇ ಟಾರ್ಗೆಟ್‌

ಗೆಳತಿಯನ್ನು ಭೇಟಿ ಮಾಡಲು ಕರೆದ ಮನ್ನುವನ್ನು ಕೊಂದ ಆರೋಪಿಗಳು ಆತನ ಹೊಟ್ಟೆಯನ್ನು ಚಾಕುವಿನಿಂದ ಸೀಳಿ ಅವನ ಜನನಾಂಗಗಳನ್ನು ಕತ್ತರಿಸಿ ಸಾಸಿವೆ ಗಿಡದಲ್ಲಿ ನೇತು ಹಾಕಿದ್ದರು. ಇದು ಸ್ಥಳೀಯರು ಮಾತ್ರವಲ್ಲ ಪೊಲೀಸರಿಗೂ ಆಘಾತ ನೀಡಿತ್ತು. ಗ್ರಾಮದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಈ ಕುರಿತು ಮೃತನ ತಂದೆ ಅಶೋಕ್ ಚೌಧರಿ ಎಂಬವರು ಸ್ಥಳೀಯ ಅಗರೆರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಬಳಿಕ ಆರೋಪಿಗಳನ್ನು ಬಂಧಿಸಲಾಗಿತ್ತು.

47 ಲಕ್ಷ ರೂ. ಬಹುಮಾನ ಹೊಂದಿದ್ದ 9 ಮಾವೋವಾದಿಗಳು ಶರಣು; ರಾಯ್‌ಪುರ ಪೊಲೀಸ್ ವಲಯ ಈಗ ನಕ್ಸಲ್ ಮುಕ್ತ

ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಧೀಶರು ಇದೊಂದು ಅತ್ಯಂತ ಕ್ರೂರ ಅಪರಾಧ. ಮೃತನಿಗೆ ನ್ಯಾಯ ನೀಡಲು ಮತ್ತು ಅಂತಹ ಹಿಂಸಾತ್ಮಕ ಕೃತ್ಯಗಳನ್ನು ತಡೆಯಲು ಶಿಕ್ಷೆ ಅಗತ್ಯ ಎಂದು ಹೇಳಿದರು.

ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ತಪ್ಪಿತಸ್ಥರೆಂದು ಘೋಷಿಸಿದ ನ್ಯಾಯಾಲಯ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಆರೋಪಿಗಳಿಗೆ ತಲಾ 5,000 ರೂಪಾಯಿ ದಂಡವನ್ನೂ ವಿಧಿಸಿದೆ.

ವಿದ್ಯಾ ಇರ್ವತ್ತೂರು

View all posts by this author