ಮುಂಬೈ: ಮಹಾರಾಷ್ಟ್ರ(Maharashtra)ದ ಗುರುಕುಲ(Gurukul)ವೊಂದರಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ (sexual assault) ನೀಡಿದ ಆರೋಪದ ಮೇಲೆ ಮುಖ್ಯಸ್ಥ ಹಾಗೂ ಶಿಕ್ಷನನ್ನು ಬಂಧಿಸಲಾಗಿದೆ. ಬಂಧಿತರನ್ನು ಗುರುಕುಲದ ಮುಖ್ಯಸ್ಥ ಭಗವಾನ್ ಕೊಕಾರೆ ಮಹಾರಾಜ್ (Bhagwan Kokare Maharaj) ಮತ್ತು ಅಲ್ಲಿಯೇ ಕಾರ್ಯ ನಿರ್ವಹಿಸುತ್ತಿದ್ದ ಶಿಕ್ಷಕ ಪ್ರೀತೇಶ್ ಪ್ರಭಾಕರ್ ಕದಂ (Pritesh Prabhakar Kadam) ಎಂದು ಗುರುತಿಸಲಾಗಿದೆ.
ಈ ಪೈಶಾಚಿಕ ಘಟನೆಯು ರತ್ನಗಿರಿ(Ratnagiri)ಯಲ್ಲಿ ನಡೆದಿದೆ. ಇದೇ ವರ್ಷ ಜೂನ್‌ನಲ್ಲಿ ಗುರುಕುಲಕ್ಕೆ ಬಾಲಕಿ ದಾಖಲಾಗಿದ್ದಳು. ಗುರುಕುಲಕ್ಕೆ ಸೇರಿದ ಒಂದೇ ವಾರದಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಲು ಆರಂಭಿಸಲಾಗಿತ್ತು ಎಂದು ವರದಿಗಳು ತಿಳಿಸಿವೆ. ವಿದ್ಯಾರ್ಥಿನಿ ಲೈಂಗಿಕ ಕಿರುಕುಳದ ಬಗ್ಗೆ ತನ್ನ ತಂದೆಗೆ ಹೇಳಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ.
"ನಾನು ಕೊಠಡಿಯಲ್ಲಿ ಒಬ್ಬಂಟಿಯಾಗಿ ಇದ್ದಾಗಲೆಲ್ಲ ಬಂದು ಪಂಚ್ ಮಾಡಿ ಎದೆ ಮುಟ್ಟುತ್ತಿದ್ದ. ಯಾರಿಗಾದರೂ ಹೇಳಿದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ. ನಿನಗೆ ವಿದ್ಯಾಭ್ಯಾಸ ಮುಂದುವರಿಸಲು ಅವಕಾಶ ನೀಡುವುದಿಲ್ಲ ಎಂದು ಬೆದರಿಕೆ ಹಾಕಿದ್ದರು" ಎಂದು ಬಾಲಕಿ ಹೇಳಿದ್ದಾಳೆ. ಅಲ್ಲದೇ "ಪ್ರೀತೇಶ್ ಪ್ರಭಾಕರ್ ಕದಮ್, ಈ ಬಗ್ಗೆ ಎಲ್ಲಿಯಾದರು ಬಾಯಿ ಬಿಟ್ಟರೆ, ಕೊಕರೆಯವರ ಸಂಪರ್ಕಗಳನ್ನು ಬಳಸಿಕೊಂಡು ನಿನ್ನ ತಂದೆಯನ್ನು ಸಿಲುಕಿಸುತ್ತೇನೆ. ನಿನ್ನ ಹಾಗೂ ನಿನ್ನ ಸಹೋದರನನ್ನು ಕೊಲ್ಲುತ್ತೇನೆ ಎಂದು ಬೆದರಿಸಿದ್ದರು" ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ.
ಈ ಸುದ್ದಿಯನ್ನು ಓದಿ: Afghanistan-Pakistan war: ಪಾಕ್ - ಅಫ್ಘಾನ್ ಗಡಿಯಲ್ಲಿ 12 ನಾಗರಿಕರು ಹತ್ಯೆ, 100ಕ್ಕೂ ಹೆಚ್ಚು ಜನರಿಗೆ ಗಾಯ
ಇನ್ನು ಮಗಳಿಗೆ ಲೈಂಗಿಕ ಕಿರುಕುಳ ನೀಡಿದ ಈ ಇಬ್ಬರು ಕಿರಾತಕರ ವಿರುದ್ಧ ತಂದೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಸದ್ಯ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಸಿಕೊಂಡು ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದಾರೆ.
ವಿದ್ಯಾರ್ಥಿನಿಗೆ ಕ್ಯಾಂಪಸ್‌ನಲ್ಲೆ ಕಿರುಕುಳ
ಎರಡು ದಿನಗಳ ಹಿಂದಷ್ಟೇ ದೆಹಲಿಯ ಸೌತ್ ಏಷಿಯನ್ ಯುನಿವರ್ಸಿಟಿಯಲ್ಲಿ (SAU) ಓದುತ್ತಿದ್ದ 18 ವರ್ಷದ ವಿದ್ಯಾರ್ಥಿನಿ ಮೇಲೆ ಕ್ಯಾಂಪಸ್‌ನಲ್ಲೆ ಓರ್ವ ಭದ್ರತಾ ಸಿಬ್ಬಂದಿ ಸೇರಿದಂತೆ ನಾಲ್ವರು ಆರೋಪಿಗಳು ಲೈಂಗಿಕ ಮತ್ತು ದೈಹಿಕ ಕಿರುಕುಳ ನೀಡಿದ ಪ್ರಕರನ ಬೆಳಕಿಗೆ ಬಂದಿತ್ತು. ಈ ವೇಳೆ ಆಕೆಯ ಬಟ್ಟೆಗಳನ್ನು ಬಿಚ್ಚಿ ಗರ್ಭಪಾತ ಮಾತ್ರೆ ಸೇವಿಸುವಂತೆ ಒತ್ತಾಯಿಸಲಾಗಿತ್ತು ಎಂದು ವರದಿಯಾಗಿದೆ.
ನಾಪತ್ತೆಯಾದ ಒಂದು ದಿನದ ನಂತರ ಅಕ್ಟೋಬರ್ 13ರಂದು, ಪ್ರಥಮ ವರ್ಷದ ಬಿ.ಟೆಕ್ ವಿದ್ಯಾರ್ಥಿನಿ ಕ್ಯಾಂಪಸ್‌ನಲ್ಲೇ ಬಟ್ಟೆ ಹರಿದು ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು ಎಂದು ಪೊಲೀಸರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ(PTI) ವರದಿ ಮಾಡಿದೆ. ಈ ಸಂಬಂಧ ಎಫ್ಐಆರ್ ದಾಖಲಸಲಾಗಿದ್ದು, ತಲೆಮರೆಸಿಕೊಂಡಿರುವ ನಾಲ್ವರೂ ಆರೋಪಿಗಳಿಗಾಗಿ ಪೊಲೀಸರು ಶೋಧಕಾರ್ಯ ನಡೆಸಿದ್ದಾರೆ.