ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Afghanistan-Pakistan war: ಪಾಕ್ - ಅಫ್ಘಾನ್ ಗಡಿಯಲ್ಲಿ 12 ನಾಗರಿಕರು ಹತ್ಯೆ, 100ಕ್ಕೂ ಹೆಚ್ಚು ಜನರಿಗೆ ಗಾಯ

Pakistani Forces: ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಪಾಕ್ ಪಡೆಗಳು ಲಘು ಮತ್ತು ಭಾರೀ ಶಸ್ತ್ರಾಸ್ತ್ರಗಳನ್ನು ಬಳಸಿ ಗುಂಡಿನ ದಾಳಿ ನಡೆಸಿದೆ ಎಂದು ಅಫ್ಘಾನಿಸ್ತಾನದ ವಿದೇಶಾಂಗ ಸಚಿವಾಲಯದ ಅಧಿಕೃತ ವಕ್ತಾರ ಜಬಿಹುಲ್ಲಾ ಮುಜಾಹಿದ್ ಆರೋಪಿಸಿದ್ದಾರೆ. ಇದೀಗ ಪಾಪಿ ಪಾಕ್ ಮತ್ತೆ ದಾಳಿ ನಡೆಸಿದ್ದು, ಕಂದಹಾರ್‌ನ ಸ್ಪಿನ್ ಬೋಲ್ಡಾಕ್ ಜಿಲ್ಲೆಯಲ್ಲಿ ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನಿ ಪಡೆಗಳು ಭಾರೀ ಶಸ್ತ್ರಾಸ್ತ್ರಗಳೊಂದಿಗೆ ದಾಳಿ ನಡೆಸಿವೆ.

12 ಅಫ್ಘಾನ್ ನಾಗರಿಕರ ಹತ್ಯೆ

-

Profile Sushmitha Jain Oct 15, 2025 4:52 PM

ಕಂದಹಾರ್: ಪಾಕಿಸ್ತಾನ(Pakistan) ಮತ್ತು ಅಫ್ಘಾನಿಸ್ತಾನದ(Afghanistan) ನಡುವೆ ಗಡಿ ಸಂಘರ್ಷ ತೀವ್ರಗೊಂಡಿದ್ದು, ಎರಡು ರಾಷ್ಟ್ರಗಳಲ್ಲಿಯೂ ಉದ್ವಿಗ್ನತೆ ಹೆಚ್ಚಾಗಿದೆ. ದಿನದಿಂದ ದಿನಕ್ಕೆ ಈ ಘರ್ಷಣೆ ಭೀಕರತೆಯ ಸ್ವರೂಪವನ್ನು ಪಡೆದುಕೊಳ್ಳುತ್ತಿದ್ದು, ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ನಡೆಸಿದ ವಾಯುದಾಳಿಗೆ ಪ್ರತಿಯಾಗಿ, ಅಫ್ಘನ್ ಪಡೆಗಳು ಪಾಕ್ ಸೇನೆ ಮೇಲೆ ಪ್ರತಿ ದಾಳಿ ನಡೆಸುತ್ತಿದೆ. ಇದೀಗ ಪಾಕ್ ಸೇನೆ ಅಫ್ಘಾನಿಸ್ತಾನದ(Afghanistan-Pakistan war) ಕಂದಹಾರ್ ಪ್ರಾಂತ್ಯದ ಸ್ಪಿನ್ ಬೋಲ್ಡಾಕ್ ಜಿಲ್ಲೆಯ ಮೇಲೆ ದಾಳಿ ನಡೆಸಿದ್ದು, ಈ ಸಂಘರ್ಷದಲ್ಲಿ 12 ನಾಗರಿಕರು ಹತರಾಗಿದ್ದಾರೆ. 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಅಫ್ಘಾನ್ ಅಧಿಕಾರಿಯೊಬ್ಬರು ಗಡಿಯಲ್ಲಿ ರಾತ್ರಿಯಿಡೀ ನಡೆದ ಘರ್ಷಣೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಪಾಕ್ ಪಡೆಗಳು ಲಘು ಮತ್ತು ಭಾರೀ ಶಸ್ತ್ರಾಸ್ತ್ರಗಳನ್ನು ಬಳಸಿ ಗುಂಡಿನ ದಾಳಿ ನಡೆಸಿದೆ ಎಂದು ಅಫ್ಘಾನಿಸ್ತಾನದ ವಿದೇಶಾಂಗ ಸಚಿವಾಲಯದ ಅಧಿಕೃತ ವಕ್ತಾರ ಜಬಿಹುಲ್ಲಾ ಮುಜಾಹಿದ್ ಆರೋಪಿಸಿದ್ದಾರೆ. ಇದೀಗ ಪಾಪಿ ಪಾಕ್ ಮತ್ತೇ ದಾಳಿ ನಡೆಸಿದ್ದು, ಕಂದಹಾರ್‌ನ ಸ್ಪಿನ್ ಬೋಲ್ಡಾಕ್ ಜಿಲ್ಲೆಯಲ್ಲಿ ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನಿ ಪಡೆಗಳು ಭಾರೀ ಶಸ್ತ್ರಾಸ್ತ್ರಗಳೊಂದಿಗೆ ದಾಳಿ ನಡೆಸಿವೆ. ಈ ಘರ್ಷನೆಯಲ್ಲಿ 12 ಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪಿದ್ದು, 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಮುಜಾಹಿದ್ ತಿಳಿಸಿದ್ದಾರೆ. ಅಲ್ಲದೇ ಈ ಪ್ರತೀಕಾರದ ದಾಳಿಯಲ್ಲಿ ಅನೇಕ ಪಾಕಿಸ್ತಾನಿ ಸೈನಿಕರು ಹತ್ಯೆಯಾಗಿದ್ದು, ಪಾಕಿಸ್ತಾನಿ ಮಿಲಿಟರಿ ಕಟ್ಟಡಗಳು ಸೇರಿದಂತೆ ಅವರ ಶಿಬಿರ ಕೇಂದ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ: Supreme Court: ಹಸಿರು ಪಟಾಕಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅಸ್ತು; ಷರತ್ತು ಅನ್ವಯ

ಇನ್ನು ತಾಲಿಬಾನ್ ದಾಳಿಗೆ ತತ್ತರಿಸುವ ಪಾಕಿಸ್ತಾನ, ತನ್ನ ಸೇನೆಯನ್ನು ಸಮರ್ಥಿಸುವ ಕೆಲಸ ಮಾಡಿದ್ದು, ಅಫ್ಘಾನ್ ತಾಲಿಬಾನ್ ಮತ್ತು ಫಿತ್ನಾ ಅಲ್-ಖವಾರಿಜ್ ಕುರ್ರಾಮ್‌ನಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಮುಂದಿನ ದಿನಗಳಲ್ಲಿ, ಪಾಕಿಸ್ತಾನಿ ಸೇನೆ ತಕ್ಕ ಉತ್ತರ ನೀಡಿರುವುದಾಗಿ ಪಾಕಿಸ್ತಾನ ಸ್ಥಳೀಯ ಮಾಧ್ಯಮ PTV ವರದಿ ಮಾಡಿದೆ. ಈ ದಾಳಿಯಲ್ಲಿ ಶಂಸದರ್ ಪೋಸ್ಟ್‌ನಲ್ಲಿ ನಾಲ್ಕನೇ ಟ್ಯಾಂಕರ್ ನ್ನು ನಾಶಪಡಿಸಿದ್ದು, ಪಾಕಿಸ್ತಾನ ಸೇನೆಯ ಈ ಮಹತ್ವದ ಕಾರ್ಯಾಚರಣೆಯಲ್ಲಿ ಫಿತ್ನಾ ಅಲ್-ಖವಾರಿಜ್‌ನ ಪ್ರಮುಖ ಕಮಾಂಡರ್‌ನ ಹತ್ಯೆಯಾಗಿರುವುದಾಗಿ ಹೇಳಿಕೊಂಡಿದೆ. ಈ ಹಿಂದೆ ಕೂಡ ಅಫ್ಘಾನ್ ಪಡೆಗಳ ಅಪ್ರಚೋದಿತ ದಾಳಿಗಳಿಗೆ ಪ್ರತಿಕ್ರಿಯೆಯಾಗಿ 19 ಅಫ್ಘಾನ್ ಮಿಲಿಟರಿ ಪೋಸ್ಟ್‌ಗಳು ಮತ್ತು ಭಯೋತ್ಪಾದಕ ಅಡಗುತಾಣಗಳನ್ನು ವಶಕ್ಕೆ ಪಡೆದಿರುವುದಾಗಿ ಪಾಕಿಸ್ತಾನ ಹೇಳಿಕೊಂಡಿತ್ತು.

ಇನ್ನು ಈ ಹಿಂದೆ ತಾಲಿಬಾನ್ ಸರ್ಕಾರದ ವಕ್ತಾರ ಜಬೀವುಲ್ಲಾ ಮುಜಾಹಿದ್ ಇದೀಗ ಪಾಕಿಸ್ತಾನ ಸೇನೆ ಹಾಗೂ ಅಲ್ಲಿನ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದು, ಅಫ್ಘಾನಿಸ್ತಾನದ ರಕ್ಷಣೆಗೆ ನಾವು ಯಾವ ಕ್ರಮವನ್ನು ತೆಗೆದುಕೊಳ್ಳಲು ಸಿದ್ಧ ಎಂದು ಹೇಳಿದ್ದು, ಅಫ್ಘಾನಿಸ್ತಾನದ ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಮತ್ತು ಸ್ವಾತಂತ್ರ್ಯಕ್ಕೆ ಯಾವುದೇ ರೀತಿಯ ಉಲ್ಲಂಘನೆಯಾದಲ್ಲಿ ತಿರುಗಿ ಉತ್ತರವನ್ನು ನೀಡದೆ ಸುಮ್ಮನೆ ಇರೋದಿಲ್ಲ ಅನ್ನೋ ಖಡಕ್ ಸಂದೇಶವನ್ನು ಪಾಕಿಸ್ತಾನದ ನಾಯಕರಿಗೆ ಹಾಗೂ ಅಲ್ಲಿನ ಸೇನಾಧಿಕಾರಿಗಳಿಗೆ ಕೊಟ್ಟಿದೆ.

2021ರಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ಪಾಕಿಸ್ತಾನ ಮತ್ತು ತಾಲಿಬಾನ್ ನಡುವಿನ ಸಂಬಂಧಗಳು ಹದಗೆಟ್ಟಿವೆ. ಗಡಿಯಾಚೆಯ ದಾಳಿಗಳು ಮತ್ತು ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ (ಟಿಟಿಪಿ) ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿರುವ ಆರೋಪಗಳಿಂದಾಗಿ ಎರಡೂ ರಾಷ್ಟ್ರಗಳ ನಡುವೆ ಉದ್ವಿಗ್ನತೆ ಹೆಚ್ಚಿದೆ. ಪಾಕಿಸ್ತಾನದಲ್ಲಿನ ಭಯೋತ್ಪಾದನೆಗೆ ತಾಲಿಬಾನ್ ಪ್ರತ್ಯಕ್ಷ ಅಥವಾ ಪರೋಕ್ಷ ಬೆಂಬಲ ನೀಡುತ್ತಿದೆ ಎಂದು ಇಸ್ಲಾಮಾಬಾದ್ ಆರೋಪಿಸುತ್ತಿದೆ. ಇದೇ ವೇಳೆ ಲಕ್ಷಾಂತರ ಅಫ್ಘಾನ್ ನಿರಾಶ್ರಿತರನ್ನು ಗಡಿಪಾರು ಮಾಡುವ ಪಾಕಿಸ್ತಾನದ ನಿರ್ಧಾರ ಕಾಬೂಲ್‌ನೊಂದಿಗೆ ಸಂಬಂಧ ಹದಗೆಡಿಸಿದೆ.