Viral Video: ರೈಲ್ವೆ ಹಳಿ ಮೇಲೆ ಉರುಳಿದ ಟ್ರಕ್; ತಪ್ಪಿದ ಭಾರೀ ಅನಾಹುತ, ವಿಡಿಯೋ ನೋಡಿ
Truck Accident: ಅತಿ ವೇಗದ ಡಂಪರ್ ಟ್ರಕ್ ನಿಯಂತ್ರಣ ತಪ್ಪಿ, ಸೇತುವೆಯ ಬೇಲಿಯನ್ನು ಮುರಿದು ಸುಮಾರು 25 ಅಡಿ ರೈಲ್ವೆ ಹಳಿಗೆ ಉರುಳಿ ಬಿದ್ದದೆ. ಉತ್ತರ ಪ್ರದೇಶದ ರಾಮನಗರದಲ್ಲಿ ಈ ಘಟನೆ ನಡೆದಿದ್ದು, ಅಮೃತಸರದಿಂದ ಬಿಹಾರಕ್ಕೆ ಪ್ರಯಾಣಿಸುತ್ತಿದ್ದ ಗರೀಬ್ ರಥ ಎಕ್ಸ್‌ಪ್ರೆಸ್ ಹಳಿಯಲ್ಲಿ ಹಾದು ಹೋಗುವಾಗ ಈ ಘಟನೆ ಸಂಭವಿಸಿತ್ತು.
ಸಾಂಧರ್ಬಿಕ ಚಿತ್ರ -
ಲಖನೌ: ಅತಿ ವೇಗದ ಡಂಪರ್ ಟ್ರಕ್ ನಿಯಂತ್ರಣ ತಪ್ಪಿ, ಸೇತುವೆಯ ಬೇಲಿಯನ್ನು ಮುರಿದು ಸುಮಾರು 25 ಅಡಿ ರೈಲ್ವೆ ಹಳಿಗೆ ಉರುಳಿ ಬಿದ್ದದೆ. ಉತ್ತರ ಪ್ರದೇಶದ (Uttar Pradesh) ರಾಮನಗರದಲ್ಲಿ ಈ ಘಟನೆ ನಡೆದಿದ್ದು, ಅಮೃತಸರದಿಂದ ಬಿಹಾರಕ್ಕೆ ಪ್ರಯಾಣಿಸುತ್ತಿದ್ದ ಗರೀಬ್ ರಥ ಎಕ್ಸ್‌ಪ್ರೆಸ್ ಹಳಿಯಲ್ಲಿ ಹಾದು ಹೋಗುವಾಗ ಈ ಘಟನೆ ಸಂಭವಿಸಿತ್ತು. ಫ್ಲೈವುಡ್ಗಳನ್ನು ತುಂಬಿದ್ದ ಟ್ರಕ್ ಅದಾಗಿತ್ತು. ಅಪಘಾತದ ಸಮಯದಲ್ಲೇ (Viral Video) ಗರೀಬ್ ರಥ ಎಕ್ಸ್‌ಪ್ರೆಸ್ ಪಕ್ಕದ ಹಳಿ ಮೇಲೆ ಹೋಗಿದೆ. ಕೂಡಲೇ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಅಧಿಕಾರಿಗಳ ಪ್ರಕಾರ, ರಾತ್ರಿ 9 ಗಂಟೆ ಸುಮಾರಿಗೆ ಪ್ಲೈವುಡ್ ಹಾಳೆಗಳಿಂದ ತುಂಬಿದ್ದ ಟ್ರಕ್ ಮೇಲ್ಸೇತುವೆಯನ್ನು ದಾಟುತ್ತಿದ್ದಾಗ ಈ ಘಟನೆ ಸಂಭವಿಸಿದೆ. ನಿಯಂತ್ರಣ ತಪ್ಪಿದ ವಾಹನವು ಸೇತುವೆಯ ತಡೆಗೋಡೆಯನ್ನು ಡಿಕ್ಕಿ ಹೊಡೆದು ಕೆಳಗಿನ ಹಳಿಗೆ ಬಿದ್ದಿದೆ. ಟ್ರಕ್ ಉರುಳಿ ಬಿದ್ದಿದ್ದರಿಂದ ರೈಲ್ವೆಯ ವಿದ್ಯುತ್ ತಂತಿಗಳಿಗೆ ಹಾನಿಯಾಗಿದ್ದು, ಇದರಿಂದಾಗಿ ರೈಲು ಸಂಚಾರವನ್ನು ತಕ್ಷಣವೇ ಸ್ಥಗಿತಗೊಳಿಸಲಾಯಿತು ಎಂದು ಪೊಲೀಸ್ ವರಿಷ್ಠಾಧಿಕಾರಿ ಅರ್ಪಿತ್ ವಿಜಯವರ್ಗಿಯಾ ಹೇಳಿದ್ದಾರೆ. ರೈಲ್ವೆ ಎಂಜಿನಿಯರ್‌ಗಳು ಕೂಡಲೇ ಸ್ಥಳಕ್ಕೆ ಆಗಮಿಸಿ ಅವಶೇಷಗಳನ್ನು ತೆರವುಗೊಳಿಸಲು ಮತ್ತು ಹಾನಿಗೊಳಗಾದ ವಿದ್ಯುತ್ ಲೈನ್‌ಗಳನ್ನು ಸರಿಪಡಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಅಪಘಾತದ ವಿಡಿಯೋ
#WATCH | Barabanki, UP | A dumper truck broke through the bridge railing and fell onto a railway track in the Ramnagar PS area. Garib Rath Express, travelling from Amritsar to Bihar on the adjacent track, narrowly escaped a collision. (26.11)
— ANI (@ANI) November 26, 2025
SP Barabanki Arpit Vijayvargiya… pic.twitter.com/PJnCG34sIO
ರೈಲ್ವೆ ಎಂಜಿನಿಯರ್‌ಗಳು ಕೂಡಲೇ ಸ್ಥಳಕ್ಕೆ ಆಗಮಿಸಿ ಅವಶೇಷಗಳನ್ನು ತೆರವುಗೊಳಿಸಲು ಮತ್ತು ಹಾನಿಗೊಳಗಾದ ವಿದ್ಯುತ್ ಮೂಲಸೌಕರ್ಯವನ್ನು ಸರಿಪಡಿಸಲು ಪುನಃಸ್ಥಾಪನೆ ಕಾರ್ಯವನ್ನು ಪ್ರಾರಂಭಿಸಿದರು.ನಜ್ಜುಗುಜ್ಜಾದ ಕ್ಯಾಬಿನ್ ಒಳಗೆ ಸಿಲುಕಿದ್ದ ಟ್ರಕ್ ಚಾಲಕನನ್ನು ಪೊಲೀಸರು, ರೈಲ್ವೆ ಸಿಬ್ಬಂದಿ ಮತ್ತು ವಿಪತ್ತು ನಿರ್ವಹಣಾ ಘಟಕಗಳ ಜಂಟಿ ತಂಡ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Viral News: ಚಾಲಕನಿಲ್ಲದೆ ಚಲಿಸಿದ ಟ್ರ್ಯಾಕ್ಟರ್; ಭೀಕರ ಅಪಘಾತದಿಂದ ವ್ಯಕ್ತಿಯ ಸ್ಥಿತಿ ಗಂಭೀರ
ನವೆಂಬರ್ 4 ರಂದು ಛತ್ತೀಸ್‌ಗಢದ ಬಿಲಾಸ್‌ಪುರ ನಿಲ್ದಾಣದ ಬಳಿ ಪ್ಯಾಸೆಂಜರ್ ರೈಲು ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಐವರು ಸಾವನ್ನಪ್ಪಿದ್ದರು. ಬಿಲಾಸ್‌ಪುರಕ್ಕೆ ಹೋಗುತ್ತಿದ್ದಾಗ ಸಂಜೆ 4 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿತ್ತು. ಗಟೋರಾ ಮತ್ತು ಬಿಲಾಸ್ಪುರ್ ರೈಲು ನಿಲ್ದಾಣಗಳ ನಡುವೆ ಇದ್ದಾಗ ಪ್ರಯಾಣಿಕ ರೈಲು ಹಿಂದಿನಿಂದ ಸರಕು ರೈಲಿಗೆ ಡಿಕ್ಕಿ ಹೊಡೆದಿತ್ತು. ಅಪಘಾತದ ಬಗ್ಗೆ ಮಾಹಿತಿ ಪಡೆದ ರೈಲ್ವೆ ಆಡಳಿತವು ತಕ್ಷಣವೇ ರಕ್ಷಣಾ ತಂಡಗಳು ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದವು.