ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಚಾಲಕನಿಲ್ಲದೆ ಚಲಿಸಿದ ಟ್ರ್ಯಾಕ್ಟರ್; ಭೀಕರ ಅಪಘಾತದಿಂದ ವ್ಯಕ್ತಿಯ ಸ್ಥಿತಿ ಗಂಭೀರ

ಇಲ್ಲೊಂದು ವಾಹನವನ್ನು ಯಾರು ಚಲಾಯಿಸದಿದ್ದರೂ ತನ್ನಿಂದ ತಾನಾಗಿಯೇ ಚಲಿಸಿ ವ್ಯಕ್ತಿಯ ಮೇಲೆ ಹರಿದ ಭಯಾನಕ ಘಟನೆ ಗುಜರಾತ್‌ನ ಸಬರ್ಕಾಂತ ಜಿಲ್ಲೆಯ ಹಿಮ್ಮತ್‌ನಗರ ಪ್ರದೇಶದಲ್ಲಿ ನಡೆದಿದೆ. ಈ ಆಘಾತಕಾರಿ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನಿಲ್ಲಿಸಿದ್ದ ಟ್ರ್ಯಾಕ್ಟರ್ ಇದ್ದಕ್ಕಿದ್ದಂತೆ ಚಲಿಸಲು ಆರಂಭಿಸಿದೆ. ಮನೆಯ ಗೇಟ್ ಬಳಿ ನಿಂತಿದ್ದ ವ್ಯಕ್ತಿಯ ಮೇಲೆ ಟ್ಯಾಕ್ಟರ್ ಹರಿದಿದ್ದ ಪರಿಣಾಮ ಆ ವ್ಯಕ್ತಿಯ ಸ್ಥಿತಿ ಗಂಭೀರವಾಗಿದೆ.

ಚಾಲಕನಿಲ್ಲದೆ ಚಲಿಸಿದ ಟ್ರ್ಯಾಕ್ಟರ್; ವ್ಯಕ್ತಿಯ ಸ್ಥಿತಿ ಗಂಭೀರ

ಚಾಲಕನಿಲ್ಲದೆ ಚಲಿಸಿದ ಟ್ರ್ಯಾಕ್ಟರ್ -

Profile
Pushpa Kumari Nov 24, 2025 10:23 PM

ನವದೆಹಲಿ, ನ. 24: ವೇಗವಾಗಿ ವಾಹನ ಓಡಿಸಿದ ಪರಿಣಾಮ ಭೀಕರ ರಸ್ತೆ ಅಪಘಾತ ಸಂಭವಿಸಿದ ಅನೇಕ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತದೆ‌. ಅಜಾಗರೂಕತೆಯಿಂದ ವಾಹನ ಚಲಾಯಿಸುವುದು, ಬ್ರೇಕ್ ಫೆಲ್ಯೂರ್ ಆಗುವುದರಿಂದ ರಸ್ತೆ ಅಪಘಾತ ಆಗುವುದು ಸಾಮಾನ್ಯವಾಗಿದೆ. ಆದರೆ ಇಲ್ಲೊಂದು ವಾಹನವನ್ನು ಯಾರು ಚಲಾಯಿಸದಿದ್ದರೂ ತನ್ನಿಂದ ತಾನಾಗಿಯೇ ಚಲಿಸಿ ವ್ಯಕ್ತಿಯ ಮೇಲೆ ಹರಿದ ಭಯಾನಕ ಘಟನೆ ಗುಜರಾತ್‌ನ ಸಬರ್ಕಾಂತ ಜಿಲ್ಲೆಯ ಹಿಮ್ಮತ್‌ನಗರ ಪ್ರದೇಶದಲ್ಲಿ ನಡೆದಿದೆ. ಈ ಆಘಾತಕಾರಿ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಿಲ್ಲಿಸಿದ್ದ ಟ್ರ್ಯಾಕ್ಟರ್ ಇದ್ದಕ್ಕಿದ್ದಂತೆ ಚಲಿಸಲು ಆರಂಭಿಸಿದೆ. ಮನೆಯ ಗೇಟ್ ಬಳಿ ನಿಂತಿದ್ದ ವ್ಯಕ್ತಿಯ ಮೇಲೆ ಟ್ಯಾಕ್ಟರ್ ಹರಿದಿದ್ದ ಪರಿಣಾಮ ಆ ವ್ಯಕ್ತಿ ಸ್ಥಿತಿ ಗಂಭೀರವಾಗಿದೆ.

ಮೊದಲಿಗೆ ಟ್ರ್ಯಾಕ್ಟರ್ ವಸತಿ ಆವರಣದಲ್ಲಿ ನಿಂತಿತ್ತು. ಅದೇ ಸಮಯಕ್ಕೆ ವ್ಯಕ್ತಿಯೊಬ್ಬರು ಗೇಟ್ ಬಳಿ ನಿಂತಿದ್ದರು. ಆಗ ಇಂತಹ ಒಂದು ಭೀಕರ ಅಪಘಾತ ನಡೆಯುತ್ತದೆ ಎಂಬ ಯಾವ ಸಣ್ಣ ಅರಿವು ಇರಲಿಲ್ಲ. ಕೆಲವು ಕ್ಷಣಗಳ ನಂತರ ನಿಲ್ಲಿಸಿದ್ದ ಟ್ರ್ಯಾಕ್ಟರ್ ಅನಿರೀಕ್ಷಿತವಾಗಿ ಚಲಿಸಲು ಆರಂಭಿಸಿದ್ದ ದೃಶ್ಯಗಳು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಾಣಬಹುದು. ಟ್ಯಾಕ್ಟರ್ ವ್ಯಕ್ತಿಯ ಮೇಲೆ ಹರಿದ ಬಳಿಕ ಅವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡ ವ್ಯಕ್ತಿನ್ನು ಜಯೇಶ್ ಭಾಯ್ ಪಟೇಲ್ ಎಂದು ಗುರುತಿಸಲಾಗಿದೆ.

ಮಿನರಲ್ ವಾಟರ್ ಬಾಟಲಿಗೆ ಟ್ಯಾಪ್ ನೀರು ತುಂಬಿಸಿ ರೈಲಿನಲ್ಲಿ ಮಾರಾಟ; ವಿಡಿಯೊ ಕಂಡು ನೆಟ್ಟಿಗರು ಗರಂ

ಮೊದಲಿಗೆ ಟ್ರ್ಯಾಕ್ಟರ್ ನಿಧಾನವಾಗಿ ಚಲಿಸಿದೆ‌. ಗೇಟ್ ಬಳಿಯಲ್ಲಿಯೇ ಪಟೇಲ್ ನಿಂತಿದ್ದರು. ಅವರ ಬೆನ್ನಿಗೆ ಟ್ರ್ಯಾಕ್ಟರ್ ಹೊಡೆದ ಕಾರಣ ಅವರು ಪಕ್ಕಕ್ಕೆ ಹೋಗಿದ್ದಾರೆ. ವಾಹನದ ಹಿಂಬದಿಯ ಚಕ್ರಗಳು ಅವರಿಗೆ ನೇರವಾಗಿ ಡಿಕ್ಕಿ ಹೊಡೆದವು. ಹೀಗಾಗಿ ಅವರು ಕೆಳಗೆ ಬಿದ್ದಿದ್ದು ಟ್ರ್ಯಾಕ್ಟರ್ ಕೆಳಗೆ ಚಕ್ರಕ್ಕೆ ಸಿಲುಕಿದ್ದಾರೆ. ಬಳಿಕ ನಿಯಂತ್ರಣ ತಪ್ಪಿ ರಸ್ತೆ ದಾಟಿದ್ದ ಟ್ರ್ಯಾಕ್ಟರ್ ವಾಹನವು ಮನೆಯೊಂದರ ಹೊರಗಿನ ಕಾಂಪೌಂಡ್‌ಗೆ ಡಿಕ್ಕಿ ಹೊಡೆದಿದೆ‌.

ಭಯಾನಕ ದೃಶ್ಯವನ್ನು ನೋಡಿದ ವೀಕ್ಷಕರು ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಪಟೇಲ್ ನೆಲದ ಮೇಲೆ ನೋವಿನಿಂದ ಗೋಳಾಡುತ್ತಿರುವುದು ಮತ್ತು ಸಹಾಯಕ್ಕಾಗಿ ಅಳುತ್ತಿರುವುದು ವಿಡಿಯೊದಲ್ಲಿದೆ. ಅವರನ್ನು ತಕ್ಷಣ ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಟ್ರ್ಯಾಕ್ಟರ್ ತನ್ನಷ್ಟಕ್ಕೆ ತಾನೇ ಚಲಿಸಲು ಕಾರಣ ಇನ್ನೂ ಸ್ಪಷ್ಟವಾಗಿ ತಿಳಿದು ಬಂದಿಲ್ಲ.‌ ಆದರೆ ಅಲ್ಲಿನ‌ ಜನರು ಯಾಂತ್ರಿಕ ವೈಫಲ್ಯ ಅಥವಾ ಅನುಚಿತ ಪಾರ್ಕಿಂಗ್ ಎಂದು ಶಂಕಿಸಿದ್ದಾರೆ. ಈ ಗೊಂದಲದ ವಿಡಿಯೋ ವೈರಲ್ ಆಗಿದೆ.