ವಡೋದರಾ: ವೀರ್ಯಾಣು ಸಂಖ್ಯೆ ಕಡಿಮೆ ಇರುವ ವ್ಯಕ್ತಿಯೊಬ್ಬ ಮಗು ಪಡೆಯಲು ನೀಚತನ ಮೆರೆದಿದ್ದಾನೆ. ಪತ್ನಿಯ ಮೇಲೆ ಅತ್ಯಾಚಾರ(Physical Abuse) ಮಾಡಲು ತಂದೆ ಮತ್ತು ಸಹೋದರನಿಗೆ ಅವಕಾಶ ನೀಡಿದ ಆಘಾತಕಾರಿ ಘಟನೆ ಗುಜರಾತ್‍ನ ವಡೋದರದಲ್ಲಿ ನಡೆದಿದೆ. ಈ ಸಂಬಂಧ 40 ವರ್ಷದ ಮಹಿಳೆಯೊಬ್ಬರು ಪತಿ, ಮಾವ ಹಾಗೂ ಭಾವನ ವಿರುದ್ಧ ದೂರು ನೀಡಿದ್ದಾರೆ. ಮಹಿಳೆ ನವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ತನ್ನ ಪತಿಯ ವಿರುದ್ಧ ಬ್ಲ್ಯಾಕ್‌ಮೇಲ್ ಆರೋಪ ಹೊರಿಸಿದ್ದಾರೆ. ಈ ಘಟನೆಗಳನ್ನು ಬಹಿರಂಗಪಡಿಸಿದರೆ ತನ್ನ ಖಾಸಗಿ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಡುವುದಾಗಿ ಪತಿ ಬೆದರಿಕೆ ಹಾಕಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಮಹಿಳೆ ನೀಡಿರುವ ದೂರಿನಲ್ಲಿ, ಸಂತ್ರಸ್ತೆಗೆ ಫೆಬ್ರವರಿ 2024 ರಂದು ವಿವಾಹವಾಗಿದೆ. ವಿವಾಹವಾಗಿ ಗಂಡನ ಮನೆಗೆ ಬಂದ ಮಹಿಳೆ ಮೇಲೆ ಮಾವ ಅತ್ಯಾಚಾರ ಮಾಡಿದ್ದಾನೆ. ಆಕೆ ಕಿರುಚಿದ್ದಕ್ಕೆ ಪತಿಯೇ ಕಪಾಳಮೋಕ್ಷ ಮಾಡಿದ್ದಲ್ಲದೆ, ಮಗುವಿಗಾಗಿ ತನ್ನ ಆಸೆಯನ್ನು ಪೂರೈಸಲು ಮೌನವಾಗಿರುವಂತೆ ಹೇಳಿದ್ದಾನೆ. ಒಂದು ವೇಳೆ ವಿಚಾರವನ್ನು ಯಾರ ಬಳಿಯಾದರೂ ಹೇಳಿದರೆ ಆಕೆಯ ನಗ್ನ ಚಿತ್ರಗಳನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದಾನೆ. ತನ್ನ ಮಾವ ತನ್ನ ಮೇಲೆ ಹಲವು ಬಾರಿ ಅತ್ಯಾಚಾರ ಮಾಡಿದ್ದಾನೆ. ಆದರೆ, ತಾನು ಗರ್ಭಿಣಿಯಾಗಲಿಲ್ಲ ಎಂದು ಸಂತ್ರಸ್ತೆ ತಿಳಿಸಿದ್ದಾಳೆ.
ಈ ಸುದ್ದಿಯನ್ನೂ ಓದಿ: Viral Video: ಮರಿಗಳನ್ನು ಕಾಪಾಡಲು ತಾಯಿ ಕರಡಿಯ ಪರದಾಟ ನೋಡಿದ್ರೆ ನೀವೂ ಕಂಬನಿ ಮಿಡಿಯುವಿರಿ; ಹೃದಯಸ್ಪರ್ಶಿ ವಿಡಿಯೊ ವೈರಲ್
ಡಿಸೆಂಬರ್ 2024 ರಲ್ಲಿ ಆಕೆಯ ವಿವಾಹಿತ ಭಾವ ಕೂಡ ಆಕೆಯ ಕೋಣೆಗೆ ನುಗ್ಗಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದು, ಇದೇ ಕೃತ್ಯವನ್ನು ಹಲವಾರು ಬಾರಿ ಪುನರಾವರ್ತಿಸಿದ್ದಾನೆ. ಸಂತ್ರಸ್ತೆ ಜೂನ್ 2025ರಲ್ಲಿ ಗರ್ಭಿಣಿಯಾದಳು, ಆದರೆ ಆಗಸ್ಟ್‌ನಲ್ಲಿ ಗರ್ಭಪಾತಕ್ಕೊಳಗಾದಳು. ಜುಲೈ ತಿಂಗಳಲ್ಲಿ ಪೊಲೀಸರಿಗೆ ದೂರು ನೀಡಿದ್ದಾಳೆ. ಪ್ರಾಥಮಿಕ ತನಿಖೆಯ ನಂತರ, ಪೊಲೀಸರು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.