ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕೌಟುಂಬಿಕ ಕಲಹದ ಕುರಿತು ವಿಡಿಯೋ ಮಾಡಿ, 1,700 ಅಡಿ ಆಳದ ಕಣಿವೆಗೆ ಹಾರಿದ ಗುಜರಾತ್ ವ್ಯಕ್ತಿ

Man Jumps Off Cliff: ಗುಜರಾತ್‌ನ 24 ವರ್ಷದ ಯುವಕನೊಬ್ಬ ಮಹಾರಾಷ್ಟ್ರದ 1,700 ಅಡಿ ಎತ್ತರದ ಕೊಂಕಣಕಡ ಬಂಡೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೂ ಮುನ್ನ 13 ನಿಮಿಷಗಳ ವಿಡಿಯೊವನ್ನು ರೆಕಾರ್ಡ್ ಮಾಡಿದ್ದು, ತನ್ನ ಸಾವಿಗೆ ಮಾಜಿ ಪತ್ನಿ ಮತ್ತು ಆಕೆಯ ಕುಟುಂಬವೇ ಕಾರಣ ಎಂದು ದೂಷಿಸಿದ್ದಾರೆ.

ಬಂಡೆಯಿಂದ ಹಾರಿ ವ್ಯಕ್ತಿ ಆತ್ಮಹತ್ಯೆ

ನವದೆಹಲಿ, ಅ.21: ಗುಜರಾತ್‌ನ 24 ವರ್ಷದ ಯುವಕನೊಬ್ಬ ಮಹಾರಾಷ್ಟ್ರ (Maharashtra) ದ 1,700 ಅಡಿ ಎತ್ತರದ ಕೊಂಕಣಕಡ ಬಂಡೆಯಿಂದ ಕಣಿವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೈವಾಹಿಕ ಕಲಹವೇ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಎನ್ನಲಾಗಿದೆ. ವಿಶ್ವರಾಜ್‌ಸಿನ್ಹ್ ಮಯೂರ್‌ಸಿನ್ಹ್ ಗೋಹಿಲ್ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈತ ಗುಜರಾತ್‌ (Gujarat) ನ ಭಾವನಗರದ ನಿವಾಸಿಯಾಗಿದ್ದು, ಅಂಚೆ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು. ಸಾವಿಗೂ ಮುನ್ನ 13 ನಿಮಿಷಗಳ ವಿಡಿಯೊವನ್ನು ರೆಕಾರ್ಡ್ ಮಾಡಿದ್ದು, ತನ್ನ ಸಾವಿಗೆ ಮಾಜಿ ಪತ್ನಿ ಮತ್ತು ಆಕೆಯ ಕುಟುಂಬವೇ ಕಾರಣ ಎಂದು ದೂಷಿಸಿದ್ದಾರೆ.

ಗೋಹಿಲ್ ಈ ವರ್ಷ ಫೆಬ್ರವರಿ 8 ರಂದು ವಿವಾಹವಾಗಿದ್ದರು. ಆದರೆ ಅವರ ದಾಂಪತ್ಯವು ಕೇವಲ ಎಂಟು ತಿಂಗಳಲ್ಲೇ ಕೊನೆಗೊಂಡಿತು. ಅವರ ಪತ್ನಿ ಸೆಪ್ಟೆಂಬರ್ 12 ರಂದು ಕೌಟುಂಬಿಕ ಹಿಂಸಾಚಾರದ ದೂರು ದಾಖಲಿಸಿದ್ದರು. ಸಾವಿಗೂ ಮುನ್ನ ಮಾಡಿದ್ದ ವಿಡಿಯೊದಲ್ಲಿ ಅವರು, ವೈವಾಹಿಕ ಸಂಘರ್ಷ ಮತ್ತು ನಡೆಯುತ್ತಿರುವ ಕಾನೂನು ಪ್ರಕ್ರಿಯೆಗಳ ಬಗ್ಗೆ ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ.

“ಇಂದು ನಾನು ಹಳ್ಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲಿದ್ದೇನೆ. ಜೀವನದಲ್ಲಿ ಏನೂ ಉಳಿದಿಲ್ಲ, ಯಾವುದೇ ಭರವಸೆಯೂ ಇಲ್ಲ ಎಂದೆನಿಸಿದಾಗ, ಅದರಲ್ಲೂ ಒಳ್ಳೆಯ ಉದ್ದೇಶದಿಂದ ಆರಂಭವಾದ ಸಂಬಂಧವೇ ಇಂತಹ ಪರಿಸ್ಥಿತಿಗೆ ಕಾರಣವಾದಾಗ, ಅದು ಆತ್ಮವನ್ನೇ ಛಿದ್ರಗೊಳಿಸುತ್ತದೆ. ಮದುವೆ ಎಂಬುದು ಪವಿತ್ರ ಸಂಬಂಧ, ಅದು ಹಲವು ಜನ್ಮಗಳವರೆಗೆ ಉಳಿಯಬೇಕಾದ ಬಂಧ. ಆದರೆ, ಇಂದಿನ ಆಧುನಿಕ ಯುಗದಲ್ಲಿ ಇಬ್ಬರ ಆಲೋಚನೆಗಳು, ಸ್ವಭಾವಗಳು ಮತ್ತು ಅಭ್ಯಾಸಗಳು ಹೊಂದಿಕೆಯಾಗದೆ, ಭಿನ್ನಾಭಿಪ್ರಾಯಗಳು ಅಥವಾ ಜಗಳಗಳು ಉಂಟಾದಾಗ ಜನರು ವಿಚ್ಛೇದನ ಪಡೆಯುತ್ತಾರೆ” ಎಂದು ಅವರು ವಿಡಿಯೊದಲ್ಲಿ ಹೇಳಿದ್ದಾರೆ.

ಮದುವೆಗೆ ಒಪ್ಪದ ಮಾವನ ಮಗ; ಡೆತ್‌ನೋಟ್‌ ಬರೆದಿಟ್ಟು ನದಿಗೆ ಹಾರಿ ಶಿಕ್ಷಕಿ ಆತ್ಮಹತ್ಯೆ

ಇದಲ್ಲದೆ, ತಮ್ಮ ಮಾಜಿ ಪತ್ನಿ ಮತ್ತು ಆಕೆಯ ಕುಟುಂಬದ ವಿರುದ್ಧ ಹಲವು ಆರೋಪಗಳನ್ನೂ ಮಾಡಿದ್ದಾರೆ. ಪ್ರತಿದಿನ ನಡೆಯುತ್ತಿದ್ದ ಭಿನ್ನಾಭಿಪ್ರಾಯಗಳು ಹಾಗೂ ಜಗಳಗಳನ್ನು ತಮ್ಮ ಪತ್ನಿ ಮತ್ತು ಆಕೆಯ ಕುಟುಂಬದವರು ಕೌಟುಂಬಿಕ ಹಿಂಸೆ ಎಂದು ಬಿಂಬಿಸುತ್ತಿದ್ದರು ಎಂದು ಅವರು ಆರೋಪಿಸಿದ್ದಾರೆ.

ಆಗ ಇಂತಹ ಬಿರುಗಾಳಿ ಎದ್ದೇಳಲಿದೆ ಎಂಬ ಕಲ್ಪನೆಯೂ ನನಗಿರಲಿಲ್ಲ. ನನ್ನ ಮನೆಯಲ್ಲಿ ಅಂತಹ ಯಾವುದೇ ಘಟನೆ ನಡೆದಿಲ್ಲ. ಆದರೂ, ನಾನು, ನನ್ನ ತಾಯಿ ಮತ್ತು ನನ್ನ ಸಹೋದರ ಸೇರಿ ನನ್ನ ಪತ್ನಿಯ ಮೇಲೆ ಹಲ್ಲೆ ನಡೆಸಿ, ಹೊಡೆದಿದ್ದೇವೆ ಎಂದು ಪ್ರಕರಣದಲ್ಲಿ ಆರೋಪಿಸಲಾಗಿದೆ. ಇದು ಸಂಪೂರ್ಣ ಸುಳ್ಳು ಮತ್ತು ಕಟ್ಟುಕಥೆ. ಎಫ್‌ಐಆರ್ ದಾಖಲಿಸುವಾಗ ಪೊಲೀಸರು ಯಾವುದೇ ಸಾಕ್ಷ್ಯ ಅಥವಾ ವೈದ್ಯಕೀಯ ವರದಿಗಳನ್ನೂ ಕೇಳುವುದಿಲ್ಲ ಎಂದು ಅವರು ಹೇಳಿದ್ದಾರೆ. ಮಾನಸಿಕ, ಆರ್ಥಿಕ ಮತ್ತು ಸಾಮಾಜಿಕ ಒತ್ತಡದಿಂದಾಗಿ ತಾನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರೇರೇಪಿಸಲಾಗಿದೆ ಎಂದು ಗೋಹಿಲ್ ಆರೋಪಿಸಿದ್ದಾರೆ.

ತಮ್ಮ ಪತ್ನಿಯ ತಂದೆ-ತಾಯಿ ಬಲವಂತವಾಗಿ ಆಕೆಯನ್ನು ತಮ್ಮ ಮನೆಯಿಂದ ಕರೆದೊಯ್ದರು ಎಂದೂ ಗೋಹಿಲ್ ಹೇಳಿದ್ದಾರೆ. ನನಗೆ ಮತ್ತು ನನ್ನ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಅವರು ವಿಡಿಯೊದಲ್ಲಿ ಹೇಳಿದ್ದಾರೆ. ಸಂಬಂಧ ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.