ಮದುವೆಗೆ ಒಪ್ಪದ ಮಾವನ ಮಗ; ಡೆತ್ನೋಟ್ ಬರೆದಿಟ್ಟು ನದಿಗೆ ಹಾರಿ ಶಿಕ್ಷಕಿ ಆತ್ಮಹತ್ಯೆ
Koppal News: ಆತ್ಮಹತ್ಯೆಗೂ ಮುನ್ನ ಡೆತ್ನೋಟ್ ಬರೆದಿಟ್ಟಿರುವ ಶಿಕ್ಷಕಿ, ಸುಮಾರು 14 ವರ್ಷಗಳಿಂದ ತನ್ನ ಸಂಬಂಧಿಯೊಬ್ಬರನ್ನು ಪ್ರೀತಿ ಮಾಡುತ್ತಿರುವುದಾಗಿ ಉಲ್ಲೇಖಿಸಿದ್ದಾಳೆ. ಆದರೆ, ಮದುವೆಗೆ ಯುವಕನ ಮನೆಯಲ್ಲಿ ಒಪ್ಪದ ಹಿನ್ನೆಲೆಯಲ್ಲಿ ಶಿಕ್ಷಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
-
ಕೊಪ್ಪಳ: ಖಾಸಗಿ ಶಾಲಾ ಶಿಕ್ಷಕಿಯೊಬ್ಬರು ತುಂಗಭದ್ರಾ ಜಲಾಶಯದ ಹಿನ್ನೀರಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಜಿಲ್ಲೆಯಲ್ಲಿ (Koppal News) ನಡೆದಿದೆ. ಕೊಪ್ಪಳ ತಾಲೂಕಿನ ಕಾತರಕಿ ಗ್ರಾಮದ ಖಾಸಗಿ ಶಾಲಾ ಶಿಕ್ಷಕಿ ಸಂಗೀತ ಮೇಟಿ ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕಿ. ಅ.19 ರಂದು ಕೊಪ್ಪಳಕ್ಕೆ ಹೋಗಿಬರುವುದಾಗಿ ಹೇಳಿ ಸಂಗೀತ ಹೋಗಿದ್ದರು. ಇಂದು ಬೆಳಗ್ಗೆ ವಿಜಯನಗರ ಜಿಲ್ಲೆಯ ಗಡಿ ಭಾಗದಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ಆತ್ಮಹತ್ಯೆಗೂ ಮುನ್ನ ಡೆತ್ನೋಟ್ ಬರೆದಿಟ್ಟಿರುವ ಸಂಗೀತ, ಸುಮಾರು 14 ವರ್ಷಗಳಿಂದ ತನ್ನ ಸಂಬಂಧಿ ವಿಕಾಸ್ನನ್ನು ಪ್ರೀತಿ ಮಾಡುತ್ತಿರುವುದಾಗಿ ಉಲ್ಲೇಖಿಸಿದ್ದಾಳೆ. ಪ್ರೀತಿ ವಿಚಾರ ಇಬ್ಬರ ಮನೆಯವರಿಗೂ ಗೊತ್ತಿತ್ತು. ಆದರೆ ಮದುವೆ ವಿಚಾರಕ್ಕೆ ವಿಕಾಸ್ ಮನೆಯಲ್ಲಿ ಗೊಂದಲವಿತ್ತು. ವಿಕಾಸ್ ಸಹೋದರ ವಸಂತ್ ಹಾಗೂ ಆತನ ಪತ್ನಿ ರೇಣುಕಾ ಮದುವೆಗೆ ಅಡ್ಡಿ ಮಾಡುತ್ತಿದ್ದಾರೆ. ಈ ಮೂವರಿಗೂ ಗಲ್ಲು ಶಿಕ್ಷೆ ಆಗಬೇಕು ಎಂದು ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದಾರೆ.
ಮಂಡ್ಯದಲ್ಲಿ ಕಾರಿನ ಚಕ್ರಕ್ಕೆ ಸಿಲುಕಿ 3 ವರ್ಷದ ಕಂದಮ್ಮ ದಾರುಣ ಸಾವು
ಮಂಡ್ಯ: ಆಯುಧ ಪೂಜೆಯ ಅಂಗವಾಗಿ ವಾಹನಕ್ಕೆ ಪೂಜೆ ನೆರವೇರಿಸಿ ಕಾರನ್ನು ಪಾರ್ಕಿಂಗ್ನಿಂದ ತೆಗೆಯುತ್ತಿದ್ದ ವೇಳೆ ಚಕ್ರದಡಿಗೆ ಸಿಲುಕಿ ಮೂರು ವರ್ಷದ ಪುಟ್ಟ ಬಾಲಕನೊಬ್ಬ ಸ್ಥಳದಲ್ಲೇ ಪ್ರಾಣಬಿಟ್ಟಿರುವ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಯರಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ ಸಂಪತ್ ಕುಮಾರ್ ಎಂಬುವವರ ಮೂರು ವರ್ಷದ ಮಗ ಕಂದನ್ ಎಸ್.ಗೌಡ ಮೃತಪಟ್ಟ ದುರ್ದೈವಿ.
ಆಯುಧ ಪೂಜೆ ಪೂರ್ಣಗೊಂಡ ನಂತರ, ಕಾರನ್ನು ಬೇರೆಡೆ ನಿಲುಗಡೆ ಮಾಡುವ ಸಲುವಾಗಿ ಸಂಪತ್ ಅವರ ಬಾವ ಸಂಜಯ್ ವಾಹನವನ್ನು ಚಲಾಯಿಸಲು ಮುಂದಾಗಿದ್ದಾರೆ. ಕಾರು ನಿಧಾನವಾಗಿ ಮುಂದಕ್ಕೆ ಚಲಿಸುತ್ತಿದ್ದಾಗ, ಹೊರಗಡೆ ಆಟವಾಡುತ್ತಿದ್ದ ಕಂದನ್ ಕಾರಿನ ಎಡಭಾಗದ ಬಾಗಿಲಿನಿಂದ ಒಳಗೆ ಹತ್ತಲು ಯತ್ನಿಸಿದ್ದಾನೆ.
ಹೊಸ ಕಾರು ಖರೀದಿ ಸಂಭ್ರಮ ಕ್ಷಣದಲ್ಲಿ ಮಾಯ; ಶೋರೂಮ್ನಿಂದ ನೇರವಾಗಿ ರಸ್ತೆಗೆ ನುಗ್ಗಿದ ಕಾರು, ಇಬ್ಬರಿಗೆ ಗಾಯ! Video
ಮಗು ಕಾರು ಹತ್ತಲು ಯತ್ನಿಸುತ್ತಿರುವುದು ಚಾಲನಾ ಸೀಟಿನಲ್ಲಿದ್ದ ಮಾವ ಸಂಜಯ್ ಅವರ ಗಮನಕ್ಕೆ ಬಂದಿಲ್ಲ. ವಾಹನವನ್ನು ಚಲಾಯಿಸುತ್ತಿದ್ದಂತೆಯೇ ನಿಯಂತ್ರಣ ತಪ್ಪಿ ಬಾಲಕ ಕಾರಿನ ಚಕ್ರದಡಿಗೆ ಬಿದ್ದಿದ್ದಾನೆ. ಪರಿಣಾಮವಾಗಿ ಮಗುವಿನ ಮೇಲೆ ವಾಹನ ಹರಿದು ತೀವ್ರ ರಕ್ತಸ್ರಾವ ಸಂಭವಿಸಿದೆ. ತಕ್ಷಣವೇ ಆತಂಕಗೊಂಡ ಕುಟುಂಬಸ್ಥರು ಗಂಭೀರ ಸ್ಥಿತಿಯಲ್ಲಿದ್ದ ಪುಟ್ಟ ಕಂದನನ್ನು ರಕ್ಷಿಸಿ, ಮದ್ದೂರಿನ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲು ಯತ್ನಿಸಿದರು. ಆದರೆ ಆಸ್ಪತ್ರೆ ತಲುಪುವ ಮಾರ್ಗಮಧ್ಯದಲ್ಲೇ ಮಗು ಕೊನೆಯುಸಿರೆಳೆದಿದೆ ಎಂದು ತಿಳಿದುಬಂದಿದೆ.