Jr NTR: ಪಕ್ಕೆಲುಬಿಗೆ ಗಾಯವಾಗಿದ್ದರೂ ಗೆಳೆಯ ರಿಷಬ್ ಶೆಟ್ಟಿಗಾಗಿ ʼಕಾಂತಾರ: ಚಾಪ್ಟರ್ 1ʼ ಇವೆಂಟ್‌ನಲ್ಲಿ ಭಾಗಿಯಾದ ಜೂ. ಎನ್‌ಟಿಆರ್
Rishabh Shetty: ರಿಷಬ್ ಶೆಟ್ಟಿ-ಹೊಂಬಾಳೆ ಫಿಲ್ಮ್ಸ್ ಕಾಂಬಿನೇಷನ್‌ನ ʼಕಾಂತಾರ: ಚಾಪ್ಟರ್ 1' ರಿಲೀಸ್‌ಗೆ ಸಜ್ಜಾಗಿದೆ. ಪ್ರಮೋಷನ್ ಭಾಗವಾಗಿ ಚಿತ್ರತಂಡ ಹೈದರಾಬಾದ್‌ನಲ್ಲಿ ಆಯೋಜಿಸಿದ್ದ ಪ್ರೀ-ರಿಲೀಸ್ ಇವೆಂಟ್‌ನಲ್ಲಿ ಟಾಲಿವುಡ್ ನಟ ಜೂ. ಎನ್‌ಟಿಆರ್ ಪಾಲ್ಗೊಂಡು ಗಮನ ಸೆಳೆದರು.

-

ಹೈದರಾಬಾದ್: ʼಕಾಂತಾರ: ಚಾಪ್ಟರ್ 1' (Kantara Chapter 1) ರಿಲೀಸ್‌ಗೆ ದಿನಗಣನೆ ಆರಂಭವಾಗಿದೆ. ಅಕ್ಟೋಬರ್ 2ರಂದು ವಿಶ್ವಾದ್ಯಂತ ತೆರೆಗೆ ಬರಲಿದ್ದು, ಚಿತ್ರತಂಡ ಪ್ರಚಾರ ಕಾರ್ಯದಲ್ಲಿ ನಿರತವಾಗಿದೆ. ರಿಷಬ್ ಶೆಟ್ಟಿ (Rishabh Shetty)-ಹೊಂಬಾಳೆ ಫಿಲ್ಮ್ಸ್ (Hombale Films) ಕಾಂಬಿನೇಷನ್‌ನ ಈ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದು, ಟ್ರೈಲರ್, ಹಾಡಿನ ಮೂಲಕ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ರಿಲೀಸ್‌ಗೆ ಬೆರಳೆಣಿಕೆಯ ದಿನವಷ್ಟೇ ಬಾಕಿ ಇರುವ ಹಿನ್ನೆಲೆಯಲ್ಲಿ ಸಿನಿಮಾತಂಡ ಸೆಪ್ಟೆಂಬರ್ 28ರಂದು ಹೈದರಾಬಾದ್‌ನಲ್ಲಿ ಪ್ರೀ-ರಿಲೀಸ್ ಇವೆಂಟ್ ಆಯೋಜಿಸಿತು. ಇದರಲ್ಲಿ ಮುಖ್ಯ ಅತಿಥಿಯಾಗಿ ರಿಷಬ್ ಶೆಟ್ಟಿ ಅವರ ಗೆಳೆಯ ಟಾಲಿವುಡ್ ಸೂಪರ್ ಸ್ಟಾರ್ ಜೂ. ಎನ್‌ಟಿಆರ್ (Jr NTR) ಭಾಗವಹಿಸಿದರು. ಆ ಮೂಲಕ ಗೆಳೆಯನ ಚಿತ್ರಕ್ಕೆ ಶುಭ ಹಾರೈಸಿದರು. ಜೂ. ಎನ್‌ಟಿಆರ್ ಪಕ್ಕೆಲುಬು ನೋವಿನಿಂದ ಬಳಲುತ್ತಿದ್ದರೂ ರಿಷಬ್ ಶೆಟ್ಟಿ-ರುಕ್ಮಿಣಿ ವಸಂತ್ ನಟನೆಯ ʼಕಾಂತಾರ: ಚಾಪ್ಟರ್ 1' ಚಿತ್ರಕ್ಕೆ ಬೆಂಬಲ ನೀಡಲು ಆಗಮಿಸಿದ್ದು ಗಮನ ಸೆಳೆಯಿತು.
ಇತ್ತೀಚೆಗೆ ಚಿತ್ರೀಕರಣ ನಡೆಸುವಾಗ ಆದ ಆಘಾತದಿಂದ ಜೂ. ಎನ್‌ಟಿಆರ್ ಅವರ ಪಕ್ಕೆಲುಬಿಗೆ ಗಾಯವಾಗಿದೆ. ಈಗಲೂ ಅವರು ಆ ನೋವಿನಿಂದ ಬಳಲುತ್ತಿದ್ದಾರೆ ಎನ್ನುವುದಕ್ಕೆ ಕಾರ್ಯಕ್ರಮದೇ ವಿಡಿಯೊ ಸಾಕ್ಷಿ ಒದಗಿಸಿದೆ.
ವೈರಲ್ ವಿಡಿಯೊ ಇಲ್ಲಿದೆ:
ಈ ಸುದ್ದಿಯನ್ನೂ ಓದಿ: Rishab Shetty: ಹೈದರಾಬಾದ್‌ನಲ್ಲಿ ಕನ್ನಡದಲ್ಲೇ ಮಾತನಾಡಿದ ರಿಷಬ್ ಶೆಟ್ಟಿ; ತೆಲುಗು ಪ್ರೇಕ್ಷಕರು ಗರಂ
ಕಾರ್ಯಕ್ರಮದ ವಿಡಿಯೊ ತುಣುಕುಗಳು ಇನ್‌ಸ್ಟಾಗ್ರಾಮ್‌ನಲ್ಲಿ ಹರಿದಾಡುತ್ತಿದ್ದು, ಅದರಲ್ಲಿ ನೋವಿನಿಂದ ಬಳಲುತ್ತಿರುವ ಜೂ. ಎನ್‌ಟಿಆರ್ ತಮ್ಮ ಹೊಟ್ಟೆಯ ಮೇಲ್ಭಾಗವನ್ನು ಒತ್ತಿ ಹಿಡಿದು ಸೋಫಾದಲ್ಲಿ ಕೂರುತ್ತಿರುವುದು ಕಂಡುಬಂದಿದೆ. ಕೂತ ಬಳಿಕವೂ ಅವರು ಸ್ವಲ್ಪ ಹೊತ್ತು ಪಕ್ಕೆಲುಬನ್ನು ಒತ್ತಿ ಹಿಡಿದಿದ್ದಾರೆ. ಸದ್ಯ ಈ ವಿಡಿಯೊ ನೋಡಿ ಅವರ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ತಮ್ಮ ನೆಚ್ಚಿನ ನಟನಿಗೆ ಏನಾಯ್ತು ಎಂದು ಪ್ರಶ್ನಿಸುತ್ತಿದ್ದಾರೆ. ಇನ್ನೊಂದು ವಿಡಿಯೊದಲ್ಲಿ ಅಭಿಮಾನಿಯೊಬ್ಬ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ವೇದಿಕೆಗೆ ನುಗ್ಗಿದ್ದಾನೆ. ಆಗಲೂ ಜೂ. ಎನ್‌ಟಿಆರ್ ಮುಖದಲ್ಲಿ ನೋವು ಕಾಣಿಸಿಕೊಂಡಿದೆ. ಸದ್ಯ ಈ ವಿಡಿಯೊಗಳು ಅಭಿಮಾನಿ ಬಳಗದಲ್ಲಿ ಕಳವಳವನ್ನುಂಟು ಮಾಡಿದ್ದು, ಅವರು ಆದಷ್ಟು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಲವರು ಹಾರೈಸಿದ್ದಾರೆ.
ಜೂ. ಎನ್‌ಟಿಆರ್ ಹೇಳಿದ್ದೇನು?
ತಮಗಾಗಿರುವ ಗಾಯದ ಬಗ್ಗೆ ಜೂ. ಎನ್‌ಟಿಆರ್ ಅಭಿಮಾನಿಗಳ ಬಳಿ ಹೇಳಿಕೊಂಡಿದ್ದಾರೆ. ಗಾಯದಿಂದಾಗಿ ತುಂಬ ಹೊತ್ತು ನಿಂತುಕೊಂಡಿರಲು ಸಾಧ್ಯವಾಗುತ್ತಿಲ್ಲ ಎಂದು ಅವರು ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ. ʼʼತುಂಬ ಸಮಯ ನಿಂತಿರಲು ಕಷ್ವಾಗುತ್ತದೆ ಬಿಟ್ಟರೆ ಬೇರೇನೂ ಸಮಸ್ಯೆ ಇಲ್ಲ. ಚೆನ್ನಾಗಿ ಮಾತನಾಡಬಲ್ಲೆ. ದಯವಿಟ್ಟು ಸುರಕ್ಷಿತವಾಗಿರಿ. ಮನೆಯಲ್ಲಿ ನಿಮಗಾಗಿ ಕುಟುಂಬ ಕಾಯುತ್ತಿದೆ. ವಿಜಯ ದಶಮಿಯ ಶುಭಾಶಯಗಳುʼʼ ಎಂದು ಹೇಳಿದ್ದಾರೆ. ಇತ್ತೀಚೆಗೆ ಜಾಹೀರಾತೊಂದರ ಚಿತ್ರೀಕರಣ ನಡೆಯುತ್ತಿದ್ದಾಗ ಏಟಾಗಿ ಅವರ ಪಕ್ಕೆಲುಬಿಗೆ ಗಾಯವಾಗಿದೆ ಎಂದು ಮೂಲಗಳು ತಿಳಿಸಿವೆ. ಸ್ವಲ್ಪ ದಿನಗಳ ಕಾಲ ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದಾರೆ.
I really like the way Jr. NTR speaks every time about fans safety … it feels like it’s very necessary for everyone to give some kind of statement to society #NTR pic.twitter.com/Ci4Lh4Mbgo
— Lakshmi (@Itsmelakshmi06) September 28, 2025
<blockquote class="twitter-tweet"><p lang="en" dir="ltr">I really like the way Jr. NTR speaks every time about fans safety … it feels like it’s very necessary for everyone to give some kind of statement to society <a href="https://twitter.com/hashtag/NTR?src=hash&ref_src=twsrc%5Etfw">#NTR</a> <a href="https://t.co/Ci4Lh4Mbgo">pic.twitter.com/Ci4Lh4Mbgo</a></p>— Lakshmi (@Itsmelakshmi06) <a href="https://twitter.com/Itsmelakshmi06/status/1972417947659624576?ref_src=twsrc%5Etfw">September 28, 2025</a></blockquote> <script async src="https://platform.twitter.com/widgets.js" charset="utf-8"></script>
ಆರೋಗ್ಯ ಸಮಸ್ಯೆ ಇದ್ದರೂ ಜೂ. ಎನ್‌ಟಿಆರ್ ತಮ್ಮ ಗೆಳೆಯ ರಿಷಬ್ ಶೆಟ್ಟಿಗಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಿಷಬ್ ಶೆಟ್ಟಿ ವೇದಿಕೆಯಲ್ಲಿ ಜೂ. ಎನ್‌ಟಿಆರ್ ಅವರನ್ನು ಗೆಳೆಯ ಮತ್ತು ಸಹೋದರ ಎಂದು ಸಂಬೋಧಿಸಿ ತಮ್ಮಿಬ್ಬರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದ್ದಾರೆ. ಮೊದಲಿನಿಂದಲೂ ಇವರಿಬ್ಬರ ಮಧ್ಯೆ ಉತ್ತಮ ಒಡನಾಟವಿದೆ. ಕೆಲವು ದಿನಗಳ ಹಿಂದೆ ಜೂ. ಎನ್‌ಟಿಆರ್ ಅವರು ರಿಷಬ್ ಶೆಟ್ಟಿ ಅವರ ಹುಟ್ಟೂರಾದ ಕುಂದಾಪುರಕ್ಕೆ ಭೇಟಿ ನೀಡಿದ್ದರು. ಜೂ. ಎನ್‌ಟಿಆರ್ ಸದ್ಯ ರುಕ್ಮಿಣಿ ವಸಂತ್ ಜತೆಗೆ ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಿದ್ದಾರೆ.