Stampede in Vijay's Rally: ನಟ ವಿಜಯ್ ನಿವಾಸಕ್ಕೆ ಬಾಂಬ್ ಬೆದರಿಕೆ; ಹೈಲರ್ಟ್!
ತಮಿಳುನಾಡು ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿರುವಾಗಲೇ ಮಹಾನ್ ದುರಂತ ಒಂದು ನಡೆದಿದ್ದು, ಟಿವಿಕೆ ಪಕ್ಷ ತಮಿಳುನಾಡಿನ ಕರೂರಿನಲ್ಲಿ ಆಯೋಜಿಸಿದ್ದ ನಟ ಹಾಗೂ ಟಿವಿಕೆ ಮುಖ್ಯಸ್ಥ ವಿಜಯ್ ಅವರ ರ್ಯಾಲಿಯಲ್ಲಿ ದೊಡ್ಡ ಅಪಘಾತ ನಡೆದಿದೆ. ವರದಿಗಳ ಪ್ರಕಾರ, ಕಾಲ್ತುಳಿತದಿಂದ ಇಲ್ಲಿಯವರೆಗೆ 33 ಜನರು ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದ್ದು,ಸಂಸ್ಥಾಪಕ ವಿಜಯ್ ಗೆ ಸಂಕಷ್ಟ ಎದುರಾಗಿದೆ.

ನಟ-ರಾಜಕಾರಣಿ ವಿಜಯ್ -

ಚೆನ್ನೈ: ತಮಿಳುನಾಡಿನ (Tamil Nadu) ಕರೂರಿನಲ್ಲಿ (Karur) ನಟ-ರಾಜಕಾರಣಿ ವಿಜಯ್ (Vijay) ಅವರ ಟಿವಿಕೆ ರ‍್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 40 ಜನ ಸಾವನ್ನಪ್ಪಿ, 100ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಈ ದುರಂತ ನಡೆದ ಒಂದು ದಿನ ನಂತರ, ವಿಜಯ್ ಅವರ ನೀಲಂಕರೈ ಮನೆಗೆ ಬಾಂಬ್ ಬೆದರಿಕೆ ಬಂದಿದ್ದು, ಭದ್ರತೆಯನ್ನು ಹೆಚ್ಚಿಸಲಾಗಿದೆ. ಚೆನ್ನೈ (Chennai) ನಗರ ಪೊಲೀಸ್ ಮತ್ತು CRPF ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಬಾಂಬ್ ಸ್ಕ್ವಾಡ್ ಸ್ನಿಫರ್ ಡಾಗ್‌ಗಳೊಂದಿಗೆ ತಪಾಸಣೆ ನಡೆಸಿದೆ.
ಕರೂರಿನ ವೇಲುಸಾಮಿಪುರಂನಲ್ಲಿ ನಡೆದ ರ‍್ಯಾಲಿಯಲ್ಲಿಗೆ ಟಿವಿಕೆಯು 10,000 ಜನರನ್ನು ನಿರೀಕ್ಷಿಸಿತ್ತು, ಆದರೆ 27,000ಕ್ಕೂ ಹೆಚ್ಚು ಜನರು ಸೇರಿದ್ದರು. 1.2 ಲಕ್ಷ ಚದರ ಅಡಿ ಜಾಗದಲ್ಲಿ 500 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು. ಟಿವಿಕೆಯ ಸಾಮಾಜಿಕ ಜಾಲತಾಣದಲ್ಲಿ ವಿಜಯ್ ಮಧ್ಯಾಹ್ನ 12ಕ್ಕೆ ಬರುತ್ತಾರೆ ಎಂದು ಘೋಷಿಸಿದ್ದರಿಂದ ಬೆಳಿಗ್ಗೆ 11ರಿಂದಲೇ ಜನ ಸೇರಿದ್ದರು. ಆದರೆ ವಿಜಯ್ ನಾಮಕ್ಕಲ್ ರ‍್ಯಾಲಿ ಮುಗಿಸಿ ಸಂಜೆ 7:40ಕ್ಕೆ ಬಂದರು. ಜನರು ಆಹಾರ-ನೀರು ಇಲ್ಲದೆ ಕಾಯುತ್ತಿದ್ದಾಗ ಗುಂಪು ಒತ್ತಡದಿಂದ ಕಾಲ್ತುಳಿತ ಸಂಭವಿಸಿತು.
VIDEO | Chennai: TVK leader Vijay receives bomb threat, squad arrives with sniffer dogs for thorough search at his Neelankarai residence.
— Press Trust of India (@PTI_News) September 28, 2025
(Full video available on PTI Videos – https://t.co/n147TvrpG7) pic.twitter.com/wG8GBMWTtm
ರ‍್ಯಾಲಿ ಮುಗಿಸಿ ಚೆನ್ನೈಗೆ ಮರಳಿದ ವಿಜಯ್, ಘಟನೆಯಿಂದ ದುಃಖಿತನಾಗಿದ್ದು ಅಸಹನೀಯ ನೋವು ಅನುಭವಿಸುತ್ತಿದ್ದೇನೆ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು. ಅಲ್ಲದೆ ಮೃತಪಟ್ಟವರ ಕುಟುಂಬಗಳಿಗೆ ತಲಾ ₹20 ಲಕ್ಷ, ಗಾಯಾಳುಗಳಿಗೆ ₹2 ಲಕ್ಷ ಪರಿಹಾರ ಘೋಷಿಸಿದ್ದಾರೆ. ಈ ಸರಿಪಡಿಸಲಾಗದ ನಷ್ಟವನ್ನು ಶಮನಗೊಳಿಸಲು ಯಾವುದೇ ಸಾಂತ್ವನದ ಮಾತುಗಳಿಂದ ಸಾಧ್ಯವಿಲ್ಲ ಎಂದು ದುಃಖ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಮತ್ತು ಇತರರು ಸಂತ್ರಸ್ತರಿಗೆ ಸಹಾನುಭೂತಿ ವ್ಯಕ್ತಪಡಿಸಿದ್ದರು.
ಈ ಸುದ್ದಿಯನ್ನು ಓದಿ: Vijay's Rally Stampede: ಕಾಲ್ತುಳಿತ ಹಿಂದೆ ರಾಜಕೀಯ ಪಿತೂರಿ? ಹೈ ಕೋರ್ಟ್ ಮೊರೆ ಹೋಗಲಿರುವ TVK
ತಮಿಳುನಾಡು DGP ಜಿ. ವೆಂಕಟರಮಣ, “ಜನರ ಸಂಖ್ಯೆ 10,000ಕ್ಕಿಂತ ಹೆಚ್ಚಾಗಿ 27,000 ಆಯಿತು. ವಿಜಯ್ ಅವರಿಗೆ 3-10 ಗಂಟೆಯ ನಡುವೆ ಬರಲು ಅನುಮತಿ ನೀಡಲಾಗಿತ್ತು, ಆದರೆ ಬೆಳಿಗ್ಗೆಯಿಂದಲೇ ಜನ ಸೇರಿದ್ದರು” ಎಂದಿದ್ದಾರೆ. ಮದುರೈ ಹೈಕೋರ್ಟ್ ಸೆಪ್ಟೆಂಬರ್ 29ರಂದು TVK ಪಕ್ಷ ಸಲ್ಲಿಸಿರುವ ಅರ್ಜಿಯನ್ನು ಆಲಿಸಲಿದೆ. ಜಿಲ್ಲಾ ಕಲೆಕ್ಟರ್ ಕಚೇರಿ ಹೆಲ್ಪ್‌ಲೈನ್ ಸಂಖ್ಯೆಗಳನ್ನು ಘೋಷಿಸಿದ್ದು, ಸಂತ್ರಸ್ತರಿಗೆ ಸಹಾಯ ಒದಗಿಸುತ್ತಿದೆ.