ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಅಪ್ರಾಪ್ತನನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿಸಿದರು, ಸಹಾಯಕ್ಕಾಗಿ ಅಂಗಲಾಚಿದರು ಯಾರೂ ಬರಲಿಲ್ಲ..

16 ವರ್ಷದ ಬಾಲಕನನ್ನ ಬಾಲಕನನ್ನು ವಿವಸ್ತ್ರಗೊಳಿಸಿ, ಹಗ್ಗಗಳಿಂದ ಕಟ್ಟಿ 1.5 ಕಿ.ಮೀ. ದೂರದವರೆಗೆ ಬೆತ್ತಲೆಯಾಗಿ ಮೆರವಣಿಗೆ ಮಾಡಿಸಿದ ಘಟನೆ ಉಜ್ಜಯಿನಿಯಲ್ಲಿ ನಡೆದಿದೆ. ಅಪ್ರಾಪ್ತ ಬಾಲಕಿಯೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ ಬಾಲಕಿಯ ಮನೆಯವರು ಈ ರೀತಿ ಮಾಡಿದ್ದಾರೆ. ಇವರಿಬ್ಬರು ಮೂರು ತಿಂಗಳ ಹಿಂದೆ ಓಡಿ ಹೋಗಿದ್ದು, ಬಳಿಕ ಪೊಲೀಸರ ಮುಂದೆ ಶರಣಾಗಿದ್ದರು.

ಸಂಗ್ರಹ ಚಿತ್ರ

ಉಜ್ಜಯಿನಿ: ಅಪ್ರಾಪ್ತ ಬಾಲಕಿಯ ಜೊತೆ ಸಂಬಂಧ ಹೊಂದಿದ್ದಕ್ಕಾಗಿ 16 ವರ್ಷದ ಬಾಲಕನನ್ನ ವಿವಸ್ತ್ರಗೊಳಿಸಿ, ಹಗ್ಗಗಳಿಂದ ಕಟ್ಟಿ 1.5 ಕಿ.ಮೀ. ದೂರದವರೆಗೆ ಬೆತ್ತಲೆಯಾಗಿ ಮೆರವಣಿಗೆ (Nake parad) ಮಾಡಿಸಿದ ಘಟನೆ ಮಧ್ಯಪ್ರದೇಶದ (Madya Pradesh) ಉಜ್ಜಯಿನಿಯಲ್ಲಿ (Ujjain) ನಡೆದಿದೆ. ಬಾಲಕ ಮತ್ತು ಬಾಲಕಿ ಕಳೆದ ಮೂರು ತಿಂಗಳ ಹಿಂದೆ ಓಡಿ ಹೋಗಿದ್ದು, ಬಳಿಕ ಪೊಲೀಸರ ಮುಂದೆ ಶರಣಾಗಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಬಾಲಕನನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದ ಘಟನೆ ಇದೀಗ ಆಕ್ರೋಶಕ್ಕೆ ಕಾರಣವಾಗಿದೆ.

ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದ ಘಟನೆಯ ಕುರಿತು ಗುರುವಾರ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊವೊಂದನ್ನು ಹಂಚಿಕೊಳ್ಳಲಾಗಿದೆ. ಇದರಲ್ಲಿ 16 ವರ್ಷದ ಬಾಲಕನನ್ನು ವಿವಸ್ತ್ರಗೊಳಿಸಿ, ಹಗ್ಗಗಳಿಂದ ಕಟ್ಟಿ, ಸುಮಾರು 1.5 ಕಿ.ಮೀ. ದೂರದವರೆಗೆ ಮೆರವಣಿಗೆ ಮಾಡಲಾಗಿದೆ. ಇದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

10 ಕೋಟಿ ರುಪಾಯಿ ನೀಡುವಂತೆ ಪಂಜಾಬಿ- ಬಾಲಿವುಡ್ ಖ್ಯಾತ ಗಾಯಕನಿಗೆ ಬಿಷ್ಣೋಯ್ ಗ್ಯಾಂಗ್ ಕೊಲೆ ಬೆದರಿಕೆ

ಉಜ್ಜಯಿನಿಯ ಮಕ್ಸಿ ರಸ್ತೆಯ ಪನ್ವಾಸ ನಿವಾಸಿ ಅಪ್ರಾಪ್ತ ಬಾಲಕ ಅದೇ ಪ್ರದೇಶದ ಅಪ್ರಾಪ್ತ ಬಾಲಕಿಯೊಂದಿಗೆ ಸಂಬಂಧ ಹೊಂದಿದ್ದನು. ಇವರಿಬ್ಬರು ಮೂರು ತಿಂಗಳ ಹಿಂದೆ ಓಡಿಹೋಗಿದ್ದರು. ಬಳಿಕ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದರು. ಅನಂತರ ಬಾಲಕಿಯನ್ನು ಬಾಲಾಪರಾಧಿ ಗೃಹದಲ್ಲಿ ಇರಿಸಲಾಗಿದ್ದು, ಬಾಲಕನನ್ನು ಜೈಲಿಗೆ ಕಳುಹಿಸಲಾಗಿತ್ತು.

ಸುಮಾರು ಒಂದು ತಿಂಗಳ ಹಿಂದೆ ಬಿಡುಗಡೆಯಾದ ಬಾಲಕ ತನ್ನ ವಿಶೇಷ ಚೇತನ ತಾಯಿ ಮತ್ತು ಚಿಕ್ಕಮ್ಮನೊಂದಿಗೆ ದೇವಾಸ್‌ಗೆ ವಾಸಿಸಲು ತೆರಳಿದನು. ತಾಯಿಯ ಆರೋಗ್ಯ ಕೆಟ್ಟಿದ್ದರಿಂದ ಬಾಲಕ ತನ್ನ ಸ್ನೇಹಿತನನ್ನು ಭೇಟಿಯಾಗಿ ಚಿಕಿತ್ಸೆಗೆ ಹಣ ವ್ಯವಸ್ಥೆ ಮಾಡಲು ಉಜ್ಜಯಿನಿಯ ಶ್ರೀ ಸಿಂಥೆಟಿಕ್ಸ್ ಪ್ರದೇಶಕ್ಕೆ ಮರಳಿದ್ದಾನೆ. ಇದನ್ನು ಕಂಡ ಬಾಲಕಿಯ ಮನೆಯವರು ಬಾಲಕನ ಮೇಲೆ ಹಲ್ಲೆ ನಡೆಸಿ, ವಿವಸ್ತ್ರಗೊಳಿಸಿ ಮೆರವಣಿಗೆ ನಡೆಸಿದ್ದಾರೆ.

88 ಪ್ರಕರಣಗಳಲ್ಲಿ ಪೊಲೀಸಿನವರೇ ಶಾಮೀಲಾಗಿರುವುದು ಅಕ್ಷಮ್ಯ ಅಪರಾಧ: ಸಿಎಂ ತರಾಟೆ

ಭೋಲಾ ಬೈರಾಗಿ, ಸೀಮಾ ಬೈರಾಗಿ, ರಾಹುಲ್ ಬೈರಾಗಿ, ರುದ್ರಾಕ್ಷ ಬೈರಾಗಿ ಮತ್ತು ವಿಷ್ಣು ಬೈರಾಗಿ ಎಂಬವರು ತನ್ನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ್ದು, ಶಂಕರಪುರ ಪ್ರದೇಶದಿಂದ ಪನ್ವಾಸ ಪೊಲೀಸ್ ಠಾಣೆಗೆ ಬೆತ್ತಲೆಯಾಗಿ ಮೆರವಣಿಗೆ ಮಾಡಿಸಿದರು. ಮರಳಿ ಉಜ್ಜಯಿನಿಗೆ ಬಂದರೆ ಕೊಲ್ಲುವುದಾಗಿ ಬೆದರಿಕೆ ಕೂಡ ಹಾಕಿದ್ದಾರೆ. ಇದನ್ನು ನೋಡುತ್ತಿದ್ದವರಿಂದ ಸಹಾಯಕ್ಕಾಗಿ ಬೇಡಿಕೊಂಡೆ ಆದರೆ ಯಾರೂ ಸಹಾಯ ಮಾಡಲಿಲ್ಲ ಎಂದು ಬಾಲಕ ಉಜ್ಜಯಿನಿ ಪೊಲೀಸ್ ನಿಯಂತ್ರಣ ಕೊಠಡಿಗೆ ದೂರು ನೀಡಿದ್ದಾನೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ನಾಲ್ವರನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಲೋಕ್ ಶರ್ಮಾ ತಿಳಿಸಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author