ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Crime News: ಬೆತ್ತಲೆ ವ್ಯಕ್ತಿಯಿಂದ ಮೊಬೈಲ್‌ ಅಂಗಡಿ ದರೋಡೆ, ಬೆಂಗಳೂರಿನಲ್ಲಿ ನಡೆದ ಘಟನೆ

ಕಳ್ಳ ಗೋಡೆಯನ್ನು ಕೊರೆದು ಮಾಸ್ಕ್ ಮಾತ್ರ ಧರಿಸಿ ಮೊಬೈಲ್‌ ಅಂಗಡಿಯೊಳಗೆ ತೆವಳುತ್ತಾ ಒಳಗೆ ಬಂದಿದ್ದಾನೆ. ಕೃತ್ಯ ಪಕ್ಕದ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. 85 ಮೊಬೈಲ್ ಫೋನ್‌ಗಳ ಜೊತೆಗೆ ಅಂಗಡಿಯಲ್ಲಿದ್ದ 30,000 ರೂ. ಹಣವನ್ನೂ ಕದ್ದಿದ್ದಾನೆ.

ಬೆತ್ತಲೆ ವ್ಯಕ್ತಿಯಿಂದ ಮೊಬೈಲ್‌ ಅಂಗಡಿ ದರೋಡೆ, ಬೆಂಗಳೂರಿನಲ್ಲಿ ನಡೆದ ಘಟನೆ

ಸಾಂದರ್ಭಿಕ ಚಿತ್ರ

ಹರೀಶ್‌ ಕೇರ ಹರೀಶ್‌ ಕೇರ May 16, 2025 6:05 PM

ಬೆಂಗಳೂರು: ವ್ಯಕ್ತಿಯೊಬ್ಬ ಬೆತ್ತಲೆಯಾಗಿ ಮೊಬೈಲ್ ಅಂಗಡಿಯೊಂದಕ್ಕೆ (‌Mobile Shop) ನುಗ್ಗಿ ಕನಿಷ್ಠ 85 ಮೊಬೈಲ್ ಫೋನ್‌ಗಳನ್ನು ದೋಚಿ (Theft case) ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ (Bengaluru news) ನಡೆದಿದೆ. ಹೊಂಗಸಂದ್ರ ಮುಖ್ಯ ರಸ್ತೆಯಲ್ಲಿರುವ ಸೇವಾ ಹೆಲ್ತ್ ಕೇರ್ ಎದುರಿನ ಹನುಮಾನ್ ಟೆಲಿಕಾಂ ಮೊಬೈಲ್ ಅಂಗಡಿಯಲ್ಲಿ ಈ ದರೋಡೆ ನಡೆದಿದೆ. ಮೇ 9ರಂದು ಬೆಳಗಿನ ಜಾವ 1.30 ರಿಂದ 3 ಗಂಟೆಯ ನಡುವೆ, ಕಳ್ಳ ಗೋಡೆಯನ್ನು ಕೊರೆದು ಮಾಸ್ಕ್ ಮಾತ್ರ ಧರಿಸಿ ತೆವಳುತ್ತಾ ಒಳಗೆ ಬಂದಿದ್ದಾನೆ. ಈ ಕೃತ್ಯ ಪಕ್ಕದ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ನೆರೆಯ ಅಂಗಡಿಯ ಮಾಲೀಕ ವಾಸನ್ ರಾಮ್, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವಾಗ ದರೋಡೆಯಾಗಿರುವುದು ಗಮನಕ್ಕೆ ಬಂದಿದೆ. ಕೂಡಲೇ ರಾಜಸ್ಥಾನದಲ್ಲಿದ್ದ ಮೊಬೈಲ್ ಅಂಗಡಿ ಮಾಲೀಕ ದಿನೇಶ್‌ಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಅಸ್ಸಾಂ ಮೂಲದ ಕಳ್ಳನನ್ನು ಬಂಧಿಸಿ, ಸುಮಾರು 25 ಲಕ್ಷ ರೂಪಾಯಿ ಮೌಲ್ಯದ ಕದ್ದ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿ ಕ್ಯಾಶ್ ಬಾಕ್ಸ್‌ನಿಂದ 30,000 ರೂಪಾಯಿಗಳನ್ನು ತೆಗೆದುಕೊಂಡಿದ್ದಾನೆ. ನಾನು ಮನೆಯಲ್ಲಿ ಇಲ್ಲದ ಕಾರಣ, ವಾಸನ್ ರಾಮ್ ಪೊಲೀಸರಿಗೆ ದೂರು ನೀಡಿದರು. ನನ್ನ ಅಂಗಡಿಯ ಹಿಂದೆ ಖಾಲಿ ಜಾಗವಿದೆ. ಕಳ್ಳನು ರಂಧ್ರ ಕೊರೆಯಲು ಉಳಿ ಮತ್ತು ಸುತ್ತಿಗೆಯನ್ನು ಬಳಸಿದ್ದಾನೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರವೇ ಅವನು ಸಂಪೂರ್ಣವಾಗಿ ಬೆತ್ತಲೆಯಾಗಿದ್ದಾನೆಂದು ನನಗೆ ಅರಿವಾಯಿತು ಎಂದು ದಿನೇಶ್ ತಿಳಿಸಿದ್ದಾರೆ.

ಕಳ್ಳ ರಂಧ್ರದ ಮೂಲಕ ನುಸುಳಲು ಪ್ರಯತ್ನಿಸುವಾಗ ಅವನ ಬಟ್ಟೆಗಳು ಅಲ್ಲಿ ಸಿಕ್ಕಿಹಾಕಿಕೊಂಡ ಪರಿಣಾಮ ಆತ ಅವುಗಳನ್ನು ತೆಗೆದು ಅಂಗಡಿಯೊಳಗೆ ಪ್ರವೇಶಿಸಿದ್ದ. ಹೊರಗೆ ಹೋದ ನಂತರ ತನ್ನ ಬಟ್ಟೆಗಳನ್ನು ಮತ್ತೆ ಧರಿಸಿ ಅಲ್ಲಿಂದ ತೆರಳಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಅವನ ಚಲನವಲನಗಳು ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಅವನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬೊಮ್ಮನಹಳ್ಳಿ ಪೊಲೀಸರು ಕಳ್ಳತನದ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Road Accident: ಡಿವೈಡರ್‌ಗೆ ಬಸ್‌ ಡಿಕ್ಕಿ, ದೇವನಹಳ್ಳಿ ಏರ್‌ಪೋರ್ಟ್‌ ಸಿಬ್ಬಂದಿ ಸಾವು