Bigg Boss Kannada 12: ರಜತ್‌ನ ಮನೆಯಿಂದ ಆಚೆ ಕಳುಹಿಸಿಯೇ ಹೋಗ್ತೇನೆ! ಗಿಲ್ಲಿ ನಟ ಓಪನ್ ಚಾಲೆಂಜ್
Gilli Nata: ಬಿಗ್ ಬಾಸ್ ಮನೆಯಲ್ಲಿ ಇವತ್ತು ಸ್ನೇಹಿತರಾಗಿದ್ದವರು ನಾಳೆ ಶತ್ರುಗಳಾಗುತ್ತಾರೆ, ಇವತ್ತು ಶತ್ರುಗಳಾಗಿದ್ದವರು, ಮತ್ತೆ ಸ್ನೇಹಿತರಾಗುತ್ತಾರೆ. ಇದಕ್ಕೆ ಗಿಲ್ಲಿ ಹಾಗೂ ರಜತ್ ಕಥೆಯೂ ಅದೇ ಆಗಿದೆ. ಈ ಹಿಂದೆ ಗಿಲ್ಲಿ ಪರ ಅದಷ್ಟೋ ಬಾರಿ ಸ್ಟ್ಯಾಂಡ್ ತೆಗೆದುಕೊಳ್ಳುತ್ತಿದ್ದ ರಜತ್ ಅವರು ಈಗ ಗಿಲ್ಲಿಯನ್ನೇ ಮನೆಯನ್ನ ಆಚೆ ಕಳುಹಿಸಿ ಹೊರಗೆ ಹೋಗ್ತೀನಿ ಅಂತ ಪಣ ತೊಟ್ಟಿದ್ದಾರೆ. ರಜತ್ ಅವರ ಪಾಪದ ಕೊಡ ತುಂಬುತ್ತಿದೆ ಎಂದು ಗಿಲ್ಲಿ ಹೇಳಿದ್ದಾರೆ.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ (Bigg Boss Kannada 12) ಮನೆಯಲ್ಲಿ ಇವತ್ತು ಸ್ನೇಹಿತರಾಗಿದ್ದವರು ನಾಳೆ ಶತ್ರುಗಳಾಗುತ್ತಾರೆ, ಇವತ್ತು ಶತ್ರುಗಳಾಗಿದ್ದವರು, ಮತ್ತೆ ಸ್ನೇಹಿತರಾಗುತ್ತಾರೆ. ಇದಕ್ಕೆ ಗಿಲ್ಲಿ (Gilli Nata) ಹಾಗೂ ರಜತ್ (Rajath) ಕಥೆಯೂ ಅದೇ ಆಗಿದೆ. ಈ ಹಿಂದೆ ಗಿಲ್ಲಿ ಪರ ಅದಷ್ಟೋ ಬಾರಿ ಸ್ಟ್ಯಾಂಡ್ ತೆಗೆದುಕೊಳ್ಳುತ್ತಿದ್ದ ರಜತ್ ಅವರು ಈಗ ಗಿಲ್ಲಿಯನ್ನೇ ಮನೆಯನ್ನ ಆಚೆ ಕಳುಹಿಸಿ ಹೊರಗೆ ಹೋಗ್ತೀನಿ ಅಂತ ಪಣ ತೊಟ್ಟಿದ್ದಾರೆ. ರಜತ್ ಅವರ ಪಾಪದ ಕೊಡ ತುಂಬುತ್ತಿದೆ ಎಂದು ಗಿಲ್ಲಿ ಹೇಳಿದ್ದಾರೆ.
ಯಾರ ಪಾಪದ ಕೊಡ ತುಂಬಿದೆ?
ನಿಮ್ಮ ಪ್ರಕಾರ ಯಾರ ಪಾಪದ ಕೊಡ ತುಂಬಿದೆ? ಅಂತ ಸುದೀಪ್ ಪ್ರಶ್ನೆ ಇಟ್ಟರು. ಗಿಲ್ಲಿ ಅವರು ರಜತ್‌ಗೆ ಈ ಮಾತು ಹೇಳಿದರು. ಕಾರಣ ಕೊಟ್ಟಿದ್ದು ಹೀಗೆ. ಮಾತು ಮಾತಿಗೂ ಅರ್ಧ ಜನಕ್ಕೆ ಗೇಮ್ ಟಾಸ್ಕ್ ಬುಕ್ ಅರ್ಥ ಆಗಲ್ಲ ಅನ್ನೋದು ಅಂತಾರೆ ಎಂದಿದ್ದಾರೆ. ಅದಕ್ಕೆ ರಜತ್ ಅವರು ನಾನು ಲೆಕ್ಕ ಹಾಕೊಂಡಿಲ್ಲ. ಟಾಸ್ಕ್ ಆಡಿ ಗೆಲ್ಲಿರೋದು ಎಂದಿದ್ದಾರೆ.
ಇದನ್ನೂ ಓದಿ: Bigg Boss Kannada 12: ವೈಲ್ಡ್ ಕಾರ್ಡ್ ಸ್ಪರ್ಧಿಗಳ ಬಗ್ಗೆ ಅಶ್ವಿನಿ, ಧ್ರುವಂತ್ ದೂರು! ಕ್ಲಾಸ್ ತೆಗೆದುಕೊಂಡ ಕಿಚ್ಚ
ಅದಕ್ಕೆ ಗಿಲ್ಲಿ, ನಾನು 10 ಟಾಸ್ಕ್‌ನಲ್ಲಿ 8 ಟಾಸ್ಕ್ ಗೆದ್ದಿದ್ದೇನೆ. ಮೊದಲನೇ ಟಾಸ್ಕ್‌ನಲ್ಲಿ ಒಂದು ಬಾಲ್ ಹಾಕದೇ ಸೈಡ್‌ನಲ್ಲಿ ಕುಳಿತುಕೊಂಡಿದ್ರು ಎಂದಿದ್ದಾರೆ. ಆ ಬಳಿಕ ರಜತ್ ಇದ್ದವರು, ನಾನು ಇಲ್ಲಿ ಬಂದಿರೋದು ಸೋಲೋ ಆಗಿ. ಯಾರ್ಯಾರು ನಂಗೆ ಈ ಬಿರುದು ಕೊಟ್ಟಿದ್ದಾರೋ, ಮನೆಯಿಂದ ಆಚೆ ಕಳುಹಿಸಿಯೇ ನಾನು ಆಚೆ ಹೋಗೋದು ಎಂದರು.
ಗಿಲ್ಲಿ ಕೂಡ ಈ ಮಾತಿಗೆ, ನಾನು ಈಗ ಒಂದು ಮಾತು ಹೇಳ್ತೀನಿ. ರಜತ್ ಅವರನ್ನ ಮನೆಯಿಂದ ಕಳುಹಿಸಿಯೇ ನಾನು ಆಚೆ ಹೋಗೋದು ಎಂದಿದ್ದಾರೆ.
ಕಲರ್ಸ್ ಕನ್ನಡ ಪ್ರೋಮೋ
ಗಿಲ್ಲಿ ಪರ ಸ್ಟ್ಯಾಂಡ್
‘ಬಿಗ್ ಬಾಸ್’ನಲ್ಲಿ ಕಳೆದ ವಾರ ಕಾವ್ಯ ಶೈವ ಗಿಲ್ಲಿ ನಟನನ್ನೇ ನಾಮಿನೇಟ್ ಮಾಡಿಬಿಟ್ಟಿದ್ದರು. ಸಾಲದಕ್ಕೆ ರಜತ್ ಅವರನ್ನು ಕೂಡ ನಾಮಿನೇಟ್ ಮಾಡಿದ್ದರು. ಆದರೆ, ಇಬ್ಬರನ್ನೂ ನಾಮಿನೇಟ್ ಮಾಡಲು ಕಾರಣ ಮಾತ್ರ ಒಂದೇ, ಅದುವೇ ಗಿಲ್ಲಿ ಕಾಮಿಡಿ. ಕಾವ್ಯ ಕೊಟ್ಟ ಕಾರಣಗಳು ಪ್ರೇಕ್ಷಕರಿಗೆ ಯಾಕೋ ಸರಿ ಅನಿಸಲಿಲ್ಲ. ಆದರೆ, ರಜತ್ ಗಿಲ್ಲಿ ಪರ ಸ್ಟ್ಯಾಂಡ್ ತಗೊಂಡಿದ್ದರು.
ಇದನ್ನೂ ಓದಿ: Bigg Boss Kannada 12: ಸೂರಜ್‌ಗೆ ರಾಶಿಕಾ ಕ್ಯಾಪ್ಟನ್ ಆಗಿದ್ದೇ ತಪ್ಪಾಯ್ತಾ? ಜನ ಮರುಳೋ ಜಾತ್ರೆ ಮರುಳೋ?
ರಜತ್ ಮತ್ತು ಚೈತ್ರಾ ಕುಂದಾಪುರ ಅವರು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ನೀಡಿದರು. ಅವರು ಬರುವುದಕ್ಕೂ ಮುನ್ನ ಗಿಲ್ಲಿ ನಟ ಸಖತ್ ಶೈನ್ ಆಗುತ್ತಿದ್ದರು. ಈಗ ಅವರ ಬಗ್ಗೆ ಮನೆಮಂದಿಗೆ ಇರುವ ಅಭಿಪ್ರಾಯವನ್ನು ಬದಲಾಯಿಸಲು ಚೈತ್ರಾ ಮತ್ತು ರಜತ್ ಅವರು ಪ್ರಯತ್ನಿಸಿದ್ದೂ ಇದೆ. ಇಷ್ಟು ದಿನಗಳ ಕಾಲ ಗಿಲ್ಲಿ ಅವರನ್ನು ನಾಮಿನೇಟ್ ಮಾಡಲು ಬಿಗ್ ಬಾಸ್ ಮನೆಯ ಸದಸ್ಯರು ನೀಡಿದ ಕಾರಣ ಸೂಕ್ತವಾಗಿಲ್ಲ ಎಂದು ರಜತ್ ಅವರು ಅಭಿಪ್ರಾಯಪಟ್ಟಿದ್ದರು.