ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vasthu Tips: ಮನೆಯಲ್ಲಿ ಆಂಜನೇಯ ಫೋಟೋವನ್ನು ಗೋಡೆಯ ಮೇಲೆ ಹಾಕುವಾಗ ಈ ವಾಸ್ತು ಸಲಹೆಗಳನ್ನು ಪಾಲಿಸಿ

ಹಿಂದೂ ಧರ್ಮದಲ್ಲಿ ವಾಸ್ತು ಶಾಸ್ತ್ರಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ವಾಸ್ತುವಿನಲ್ಲಿ ಅನೇಕ ವಿಷಯಗಳನ್ನು ಹೇಳಲಾಗಿದೆ. ಅವುಗಳನ್ನು ಅನುಸರಿಸುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸುತ್ತದೆ. ನೀವು ಎಲ್ಲವನ್ನೂ ವಾಸ್ತು ಪ್ರಕಾರ ಮಾಡಿದರೆ ನಿಮ್ಮ ಜೀವನವು ತುಂಬಾ ಉತ್ತಮವಾಗಿರುತ್ತದೆ. ಇದಕ್ಕೆ ದೇವರ ಫೋಟೋವೂ ಹೊರತಾಗಿಲ್ಲ.. ನಾವಿಂದು ನಿಮಗೆ ಆಂಜನೇಯ ಸ್ವಾಮಿ ಫೋಟೋ ಎಲ್ಲಿ ಹಾಕಬೇಕು ಎಂಬುದನ್ನು ತಿಳಿಸಿದ್ದೇವೆ.

ಮನೆಯಲ್ಲಿ ಹನುಮಾನ್ ಫೋಟೋ ಹಾಕಲು ಇಲ್ಲಿದೆ ವಾಸ್ತು ಟಿಪ್ಸ್...

ಹನುಮಾನ್ -

Profile
Sushmitha Jain Dec 14, 2025 8:11 AM

ಬೆಂಗಳೂರು: ಮನೆ ಅಂದ ಮೇಲೆ ದೇವರ ಮನೆ(Devara Mane)- ದೇವರ ಕೋಣೆ ಇದ್ದೇ ಇರುತ್ತದೆ. ಆದರೆ ಪೂಜೆ ಸ್ಥಳಕ್ಕೆ ನಿರ್ದಿಷ್ಟ ಜಾಗ ಇದ್ದರೂ, ಹೆಚ್ಚಿನ ಜನರು ಮನೆಯ ಗೋಡೆಯ ಮೇಲೆ ದೇವರ ಫೋಟೋಗಳನ್ನು(God Photo) ನೇತು ಹಾಕುತ್ತಾರೆ. ಆದರೆ ಹೀಗೆ ಮಾಡುವುದು ವಾಸ್ತು ಶಾಸ್ತ್ರಕ್ಕೆ(Vastu Shastra) ವಿರುದ್ಧವಾಗಿದ್ದು,
ಮನೆಯ ಗೋಡೆಯ ಮೇಲೆ ದೇವರ ಫೋಟೋವನ್ನು ಹಾಕುವುದಾದರೆ ಅದಕ್ಕೆ ಸಂಬಂಧಿಸಿದ ಕೆಲವು ನಿಯಮಗಳನ್ನು ಗಮನದಲ್ಲಿಟ್ಟುಕೊಳ್ಳುವುದು ತುಂಬಾನೇ ಮುಖ್ಯವಾಗಿರುತ್ತದೆ. ದೇವರ ಫೋಟೋವನ್ನು ನಾವು ಗೋಡೆಯ ಮೇಲೆ ತಪ್ಪಾದ ದಿಕ್ಕಿನಲ್ಲಿ ಹಾಕಿದರೆ ಅದರಿಂದ ನಕಾರಾತ್ಮಕ ಫಲಿತಾಂಶಗಳನ್ನು ಪಡೆದುಕೊಳ್ಳಬೇಕಾಗುತ್ತದೆ. ಇದರಿಂದ ಮನೆಯಲ್ಲೂ ಸಾಕಷ್ಟು ಸಮಸ್ಯೆಗಳು ತಲೆದೂರಲು ಪ್ರಾರಂಭವಾಗುತ್ತದೆ. ಹಾಗೂ ಇದರಿಂದ ಬಡತನ, ದಾರಿದ್ರ್ಯ ಕೂಡ ಉಂಟಾಗುತ್ತದೆ.

ಹೌದು ದೇವರ ಕೋಣೆಯನ್ನು ಸರಿಯಾದ ದಿಕ್ಕಿನಲ್ಲಿ ನಿರ್ಮಿಸಬೇಕು, ಕೆಲವೊಂದು ವಿಗ್ರಹಗಳನ್ನು ಮಾತ್ರ ದೇವರ ಕೋಣೆಯಲ್ಲಿ ಇಡಬೇಕು ಎಂದು ಹಿಂದೂ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಅದೇ ರೀತಿ ವಾಸ್ತು ನಿಯಮಗಳು ದೇವರ ಫೋಟೋಗೂ ಅನ್ವಯ ಆಗಲಿದೆ. ದೇವರ ಫೋಟೋವನ್ನು ಗೋಡೆಯ ಮೇಲೆ ಹಾಕುವುದರಿಂದ ನಿಮಗೆ ದೇವರ ಆಶೀರ್ವಾದ ಸಿಗಬಹುದು. ಆದರೆ, ಅದನ್ನು ಸರಿಯಾದ ರೀತಿಯಲ್ಲಿ ಹಾಕದೇ ಇದ್ದರೆ ಅದು ನಮ್ಮ ಜೀವನಕ್ಕೆ ಮುಳ್ಳಿನಂತಾಗಬಹುದು. ಆದ್ದರಿಂದ ನೀವು ಮನೆಯಲ್ಲಿ ದೇವರ ಫೋಟೋವನ್ನು ಗೋಡೆಗೆ ಹಾಕುತ್ತಿದ್ದರೆ ವಾಸ್ತು ನಿಯಮಗಳನ್ನು(Vastu Tips) ತಪ್ಪದೇ ಪಾಲಿಸಿ..

ಇದಕ್ಕೆ ಆಂಜನೇಯ ಸ್ವಾಮಿ ಫೋಟೋ ಕೂಡ ಹೊರತಾಗಿಲ್ಲ... ಹಾಗಾದ್ರೆ ಮನೆಯ ಯಾವ ದಿಕ್ಕಿನಲ್ಲಿ ಆಂಜನೇಯ ಸ್ವಾಮಿ ಫೋಟೋ ಇಡಬೇಕು, ಅದರಿಂದ ಸಿಗುವ ಫಲಗಳೇನು..? ಇತ್ಯಾದಿ ಮಾಹಿತಿ ಇಲ್ಲಿದೆ.

Astro Tips: ಸೂರ್ಯ ತೇಜಸ್ಸು ಸಿಗಬೇಕಾದರೆ ಭಾನುವಾರ ಹೀಗೆ ಪೂಜಿಸಿ

ಎಲ್ಲರ ಮನೆಯಲ್ಲೂ ಶ್ರೀರಾಮನ ಬಂಟ ಹನುಮಂತನ ಫೋಟೋ ಇದ್ದೇ ಇರುತ್ತದೆ. ಆದರೆ ಹನುಮಂತನನ್ನು ಪೂಜಿಸಲು ಕೆಲವು ನಿಯಮಗಳಿರುವಂತೆಯೇ ಮನೆಯಲ್ಲಿ ಹನುಮಂತನ ಫೋಟೋ ಇಡಲು ಕೂಡ ಕೆಲವು ನಿಯಮಗಳಿವೆ ಎಂದು ವಾಸ್ತುಶಾಸ್ತ್ರ ಹೇಳುತ್ತದೆ. ಮತ್ತು ನಿಮ್ಮ ಮನೆಯಲ್ಲಿ ಈಗಾಗಲೇ ಆಂಜನೇಯನ ಚಿತ್ರ(Anjaneya) ಇದ್ದರೆ ಅಥವಾ ಮುಂದೆ ಅದನ್ನು ಹಿಡಬೇಕು ಎಂದು ಅಂದುಕೊಂಡಿದ್ದರೆ , ವಾಸ್ತುವಿನ ಈ ನಿಯಮಗಳನ್ನು ಅನುಸರಿಸಬೇಕಾಗುತ್ತದೆ.


ದಕ್ಷಿಣ ದಿಕ್ಕು


ವಾಸ್ತು ಶಾಸ್ತ್ರದ ಪ್ರಕಾರ, ಹನುಮಂತನ ವಿಗ್ರಹ ಅಥವಾ ಫೋಟೋವನ್ನು ದಕ್ಷಿಣ ದಿಕ್ಕಿನತ್ತ ದೃಷ್ಟಿ ಇರುವ ರೀತಿಯಲ್ಲಿ ಇಡಬೇಕು. ಹನುಮಂತ ಕಾಲ ವಿನಾಶಕ ಮತ್ತು ದುಷ್ಟರನ್ನು ಯಮಲೋಕಕ್ಕೆ ಕರೆತರುತ್ತಾನೆ ಎಂದು ಶಾಸ್ತ್ರದಲ್ಲಿ ಉಲ್ಲೇಖಿತವಾಗಿದ್ದು, ಆದ್ದರಿಂದ ಆಂಜನೇಯನ ಮುಖವು ದಕ್ಷಿಣ ದಿಕ್ಕಿಗೆ ಇರಬೇಕು.

ಮನೆಯಲ್ಲಿನ ವಾಸ್ತು ದೋಷ ನಿವಾರಣೆ ಮಾಡಿ, ನಕಾರಾತ್ಮಕತೆಯನ್ನು ದೂರಗೊಳಿಸಲು ದಕ್ಷಿಣ ದಿಕ್ಕಿನಲ್ಲಿ ಆಂಜನೇಯ ಸ್ವಾಮಿ ಮುಖ ಮಾಡಿರುವ ಫೋಟೋ ಹಾಕಬೇಕು. ಇದರಿಂದ ಮನೆಯಲ್ಲಿ ಸಕಾರಾತ್ಮಕತೆ ಹೆಚ್ಚಾಗುತ್ತದೆ.

ಬೆಡ್ ರೂಂನಲ್ಲಿ ಆಂಜನೇಯನ ಫೋಟೋ ಹಿಡುವುದು ಸೂಕ್ತವಲ್ಲ

ಮನೆಯಲ್ಲಿ ಮಲಗುವ ಕೋಣೆಯಲ್ಲಿ ಹನುಮಂತನ ಚಿತ್ರವನ್ನು ಇಡಬಾರದು ಎನ್ನಲಾಗಿದ್ದು,
ಸೂರ್ಯನ ಮಗಳು ಸುವರ್ಚಲಾಳನ್ನು ಹನುಮಂತ ಮದುವೆಯಾದದ್ದು ಸೂರ್ಯ ದೇವರಿಂದ ಜ್ಞಾನವನ್ನು ಪಡೆಯಲು. ಆದರೆ ಎಂದಿಗೂ ಗೃಹಸ್ಥ ಜೀವನದಲ್ಲಿ ಬಾಳಲಿಲ್ಲ. ಆದ್ದರಿಂದಲೇ ಹನುಮಂತನನ್ನು ಬಾಲ ಬ್ರಹ್ಮಚಾರಿ ಎಂದು ಕರೆಯುತ್ತಾರೆ. ಬ್ರಹ್ಮಚಾರಿಯಾಗಿರುವುದರಿಂದ ಮನೆಯವರು ಮಲಗುವ ಕೋಣೆಯಲ್ಲಿ ಆಂಜನೇಯನ ಚಿತ್ರವನ್ನು ಹಾಕಬಾರದು.