ಇರಾಕ್ ಬಳಿ ನಡೆದ ಟ್ಯಾಂಕರ್ ದಾಳಿಯಲ್ಲಿ ಸಾವನ್ನಪ್ಪಿದ ಮುಂಬೈ ಮೂಲದ ಎಂಜಿನಿಯರ್
ಎರಡು ದಿನಗಳ ಹಿಂದೆ ಇರಾಕ್ ಬಳಿ ಟ್ಯಾಂಕರ್ ಮೇಲೆ ನಡೆದ ದಾಳಿಯಲ್ಲಿ ಭಾರತೀಯ ಮೂಲದ ಎಂಜಿನಿಯರ್ ಸಾವನ್ನಪ್ಪಿರುವ ಘಟನೆ ನಡೆದಿದೆ. ಮುಂಬೈನ ಕಂಡಿವಲಿ ಪೂರ್ವದ ನಿವಾಸಿ ದೇವಾನಂದನ್ ಪ್ರಸಾದ್ ಸಿಂಗ್ ಮೃತರು. ಇವರು ಅಮೆರಿಕ ಸ್ವಾಮ್ಯದ ಕಚ್ಚಾ ತೈಲ ಟ್ಯಾಂಕರ್ ಸಫೇಸಿಯಾ ವಿಷ್ಣುದಲ್ಲಿ ಹೆಚ್ಚುವರಿ ಮುಖ್ಯ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಸಂಗ್ರಹ ಚಿತ್ರ -
ನವದೆಹಲಿ: ಸರಕು ಹಡಗುಗಳಲ್ಲಿ (Cargo ship) ಸಿಬ್ಬಂದಿಯೊಂದಿಗೆ ಸಮುದ್ರದಲ್ಲಿದ್ದ ಮುಂಬೈನ (mumbai) ಎಂಜಿನಿಯರ್ (Engineer) ಒಬ್ಬರು ಇರಾಕ್ (Iraq) ಬಳಿ ನಡೆದ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಮುಂಬೈನ (Mumbai) ಕಂಡಿವಲಿ ಪೂರ್ವದ ನಿವಾಸಿ ದೇವಾನಂದನ್ ಪ್ರಸಾದ್ ಸಿಂಗ್ (50) ಮೃತರು. ಇವರು ಅಮೆರಿಕ ಸ್ವಾಮ್ಯದ ಕಚ್ಚಾ ತೈಲ ಟ್ಯಾಂಕರ್ (US-owned crude oil tanker) ಸಫೇಸಿಯಾ ವಿಷ್ಣುದಲ್ಲಿ ಹೆಚ್ಚುವರಿ ಮುಖ್ಯ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಎರಡು ದಿನಗಳ ಹಿಂದೆ ಇರಾಕ್ (Iraq) ಬಳಿ ನೀರೊಳಗಿನ ಡ್ರೋನ್ ಒಂದು ದೇವಾನಂದನ್ ಪ್ರಸಾದ್ ಸಿಂಗ್ ಅವರಿದ್ದ ತೈಲ ಟ್ಯಾಂಕರ್‌ಗೆ ಡಿಕ್ಕಿ ಹೊಡೆದಿತ್ತು.
ದೇವಾನಂದನ್ ಪ್ರಸಾದ್ ಸಿಂಗ್ ಅವರು ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ 2019ರಲ್ಲಿ ಬಿಹಾರದಿಂದ ಮುಂಬೈಗೆ ಸ್ಥಳಾಂತರಗೊಂಡಿದ್ದರು. ಸಾಗರ ಎಂಜಿನಿಯರ್ ಆಗಿದ್ದ ಅವರು ಸರಕು ಹಡಗುಗಳಲ್ಲಿ ಸಣ್ಣ ಸಿಬ್ಬಂದಿಯೊಂದಿಗೆ ಪ್ರಯಾಣಿಸಿ ಅವರನ್ನು ನೋಡಿಕೊಳ್ಳುತ್ತಿದ್ದರು.
ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ ಆರೋಗ್ಯದಲ್ಲಿ ಏರುಪೇರಾಗಿರುವುದನ್ನು ಒಪ್ಪಿಕೊಂಡ ಇರಾನ್; ಮುಂದೇನು?
ಇರಾಕ್ ಬಳಿ ಎರಡು ದಿನಗಳ ಹಿಂದೆ ನೀರೊಳಗಿನ ಡ್ರೋನ್ ಒಂದು ದೇವಾನಂದನ್ ಅವರಿದ್ದ ತೈಲ ಟ್ಯಾಂಕರ್‌ಗೆ ಡಿಕ್ಕಿ ಹೊಡೆದಿತ್ತು. ಈ ಸ್ಫೋಟದಲ್ಲಿ ಭಾರತೀಯ ನಾವಿಕ ಸಾವನ್ನಪ್ಪಿದ್ದಾರೆ. ಡ್ರೋನ್ ಡಿಕ್ಕಿಯಾದ ಬಳಿಕ ಭಾರಿ ಸದ್ದಿನೊಂದಿಗೆ ಕಪ್ಪು ದಟ್ಟ ಹೊಗೆ ಆವರಿಸಿದ್ದು, ಭಾರಿ ಗಾತ್ರದ ಬೆಂಕಿಯ ಉಂಡೆ ಕಾಣಿಸಿಕೊಂಡಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಮೆರಿಕ ಸ್ವಾಮ್ಯದ ಕಚ್ಚಾ ತೈಲ ಟ್ಯಾಂಕರ್‌ನಲ್ಲಿ ಹೆಚ್ಚುವರಿ ಮುಖ್ಯ ಎಂಜಿನಿಯರ್ (ಸೂಪರಿಂಟೆಂಡೆಂಟ್) ಆಗಿದ್ದ ದೇವಾನಂದನ್ ಪ್ರಸಾದ್ ಸಿಂಗ್, ಮಧ್ಯಪ್ರಾಚ್ಯದಲ್ಲಿ ಅಮೆರಿಕ- ಇರಾನ್ ಯುದ್ಧದ ನಡುವೆ ಕಾರ್ಯ ನಿರ್ವಹಿಸುತ್ತಿದ್ದರು. ಇಸ್ಲಾಮಿಕ್ ರಾಷ್ಟ್ರ ಇರಾನ್ ಈ ದಾಳಿಯನ್ನು ನಡೆಸಿರುವುದಾಗಿ ಹೇಳಿದೆ. ಪರ್ಷಿಯನ್ ಕೊಲ್ಲಿಯಲ್ಲಿ ಎರಡು ಹಡಗುಗಳ ಮೇಲೆ ಸಂಘಟಿತ ನೀರೊಳಗಿನ ಡ್ರೋನ್ ದಾಳಿಯನ್ನು ನಡೆಸಲಾಗಿದೆ ಎಂದು ತಿಳಿಸಿತ್ತು. ಇದರಲ್ಲಿ ಒಂದು ಸಿಂಗ್ ಅವರು ಕಾರ್ಯ ನಿರ್ವಹಿಸುತ್ತಿದ್ದ ಕಚ್ಚಾ ತೈಲ ಟ್ಯಾಂಕರ್ ಸಫೀಸಿಯಾ ವಿಷ್ಣು ಕೂಡ ಸೇರಿದೆ.
ಇರಾನ್ ದಾಳಿಯ ಬಳಿಕ ತಕ್ಷಣ ಸಿಂಗ್ ಅವರನ್ನು ಚಿಕಿತ್ಸೆಗೆ ದಾಖಲಿಸಲಾಗಿದ್ದು, ಆದರೆ ಅವರು ಸಾವನ್ನಪ್ಪಿದ್ದಾರೆ. ಬೆಂಕಿ ಹೊತ್ತಿಕೊಂಡ ಹಡಗಿನಿಂದ ಇತರ ಹದಿನೈದು ಭಾರತೀಯರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಯಾರೂ ಮಹಿಳೆಯರನ್ನು ನೇಮಿಸಿಕೊಳ್ಳುವುದಿಲ್ಲ" ‘ಕಡ್ಡಾಯ ಮುಟ್ಟು ರಜೆ ಬಗ್ಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ!
ಘಟನೆಯ ಬಳಿಕ ಸಮುದ್ರ ಸಂಸ್ಥೆಗಳು ಮತ್ತು ಅಧಿಕಾರಿಗಳು ತೈಲ ಟ್ಯಾಂಕರ್ ಮೇಲಿನ ದಾಳಿಯ ಕುರಿತು ತನಿಖೆ ಮಾಡಲು ಔಪಚಾರಿಕ ಪ್ರಕ್ರಿಯೆಗಳನ್ನು ಪ್ರಾರಂಭಿಸಿದೆ. ಹಡಗು ಸಂಸ್ಥೆಯ ಆಡಳಿತ ಮಂಡಳಿ ಮತ್ತು ಪಾಲುದಾರರು ಸಿಂಗ್ ಸಾವಿಗೆ ಸಂತಾಪ ಸೂಚಿಸಿದ್ದು, ಅವರ ಕುಟುಂಬಕ್ಕೆ ಸಾಧ್ಯವಿರುವ ಎಲ್ಲ ಸಹಾಯ ಮತ್ತು ಬೆಂಬಲವನ್ನು ನೀಡುವುದಾಗಿ ತಿಳಿಸಿದೆ. ಸಿಂಗ್ ಅವರ ಸಾವಿನ ಬಗ್ಗೆ ಬಾಗ್ದಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ದಾಳಿಯ ದಿನವೇ ಗುರುತಿಸಿ ಮಾಹಿತಿಯನ್ನು ದೃಢಪಡಿಸಿತ್ತು.