Viral News: 100 ಕ್ಕೂ ಹೆಚ್ಚು ಹೈ-ಪವರ್ ಅಯಸ್ಕಾಂತ ನುಂಗಿದ 13 ವರ್ಷದ ಬಾಲಕ
13-year-old boy swallows magnets: 13 ವರ್ಷದ ಬಾಲಕನೊಬ್ಬ ಇಂಟರ್ನೆಟ್‌ನಲ್ಲಿ ಇ-ಕಾಮರ್ಸ್ ಮಾರುಕಟ್ಟೆಯಿಂದ ಹೈ-ಪವರ್ ಅಯಸ್ಕಾಂತಗಳನ್ನು ಖರೀದಿಸಿ ನುಂಗಿರುವ ಆಘಾತಕಾರಿ ಘಟನೆ ನ್ಯೂಜಿಲ್ಯಾಂಡ್‍ನಲ್ಲಿ ನಡೆದಿದೆ. ಸರ್ಜರಿ ಮೂಲಕ 100ಕ್ಕೂ ಹೆಚ್ಚು ಆಯಸ್ಕಾಂತಗಳನ್ನು ವೈದ್ಯರು ಹೊರತೆಗೆದಿದ್ದಾರೆ.
-
Priyanka P
Oct 25, 2025 4:10 PM
ವೆಲ್ಲಿಂಗ್ಟನ್: 13 ವರ್ಷದ ಬಾಲಕನೊಬ್ಬ ಇಂಟರ್ನೆಟ್‌ನಲ್ಲಿ ಇ-ಕಾಮರ್ಸ್ ಮಾರುಕಟ್ಟೆಯಿಂದ ಹೈ-ಪವರ್ ಅಯಸ್ಕಾಂತಗಳನ್ನು ಖರೀದಿಸಿ ನುಂಗಿರುವ ಆಘಾತಕಾರಿ ಘಟನೆ ನ್ಯೂಜಿಲ್ಯಾಂಡ್‍ನಲ್ಲಿ (New Zealand) ನಡೆದಿದೆ. 100 ಕ್ಕೂ ಹೆಚ್ಚು ಅಯಸ್ಕಾಂತಗಳನ್ನು (Magnets) ನುಂಗಿದ ನಂತರ ಬಾಲಕ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಈ ವೇಳೆ ವೈದ್ಯರು ಅವನ ಕರುಳಿನ ಒಂದು ಭಾಗವನ್ನು ತೆಗೆದುಹಾಕಬೇಕಾಯಿತು. ಈ ಸುದ್ದಿ ಇದೀಗ ವೈರಲ್ (Viral News) ಆಗಿದೆ.
2014 ರಿಂದ ದೇಶೀಯ ಅಥವಾ ವೈಯಕ್ತಿಕ ಬಳಕೆಗಾಗಿ ಸಣ್ಣ, ಹೈ-ಪವರ್ ಅಯಸ್ಕಾಂತಗಳ ಮಾರಾಟವನ್ನು ನ್ಯೂಜಿಲ್ಯಾಂಡ್ ನಿಷೇಧಿಸಿದ ನಂತರವೂ ಈ ಆತಂಕಕಾರಿ ಘಟನೆ ಸಂಭವಿಸಿದೆ. ಜನಪ್ರಿಯ ಆನ್‌ಲೈನ್ ಮಾರುಕಟ್ಟೆಯಾದ ಟೆಮುನಿಂದ ಆರ್ಡರ್ ಮಾಡಿದ್ದ 100ಕ್ಕೂ ಹೆಚ್ಚು ಆಯಸ್ಕಾಂತಗಳನ್ನು ಬಾಲಕ ನುಂಗಿದ್ದ. ಶಸ್ತ್ರಚಿಕಿತ್ಸೆಗೆ ಒಂದು ವಾರದ ಮೊದಲು ಆ ಹದಿಹರೆಯದ ಬಾಲಕ ಸುಮಾರು 80 ರಿಂದ 100 ಸಣ್ಣ ಆಯಸ್ಕಾಂತಗಳನ್ನು ನುಂಗಿದ್ದ ಎಂದು ಟೌರಂಗಾ ಆಸ್ಪತ್ರೆಯ ಶಸ್ತ್ರಚಿಕಿತ್ಸಕರು ತಿಳಿಸಿದಿದ್ದಾರೆ. ಅವೆಲ್ಲವನ್ನೂ ಬಾಲಕ ಆನ್ಲೈನ್ ಮಾರುಕ್ಟಟೆಯಾದ ಟೆಮುವಿನಲ್ಲಿ ಖರೀದಿಸಿದ್ದನು.
A 13-year-old boy in New Zealand swallowed up to 100 high-power magnets he bought on Temu, forcing surgeons to remove tissue from his intestines, doctors said on Friday.
— The New Vision (@newvisionwire) October 24, 2025
DETAILS || #VisionUpdates 👉👉https://t.co/VPLdel8rTc pic.twitter.com/7qaXe2Flpa
ನಾಲ್ಕು ದಿನಗಳ ಕಾಲ ಸಾಮಾನ್ಯ ಹೊಟ್ಟೆನೋವಿನಿಂದ ಆಸ್ಪತ್ರೆಗೆ ದಾಖಲಾದ 13 ವರ್ಷದ ಬಾಲಕನ ಪ್ರಕರಣವನ್ನು ನಾವು ಪರಿಶೀಲಿಸುತ್ತಿದ್ದೇವೆ ಎಂದು ವೈದ್ಯರ ತಂಡ ಹೇಳಿತ್ತು. ಬಾಲಕ ಸುಮಾರು ಒಂದು ವಾರದ ಹಿಂದೆ ಸುಮಾರು 80–100 5x2mm ಹೈ-ಪವರ್ (ನಿಯೋಡೈಮಿಯಮ್) ಆಯಸ್ಕಾಂತಗಳನ್ನು ಸೇವಿಸಿದ್ದಾಗಿ ಬಹಿರಂಗಪಡಿಸಿದ್ದಾನೆ. ಇವುಗಳನ್ನು ವಿದೇಶಿ ಆನ್‌ಲೈನ್ ಮಾರುಕಟ್ಟೆಯಿಂದ (ಟೆಮು) ಖರೀದಿಸಲಾಗಿತ್ತು.
ಇದನ್ನೂ ಓದಿ: Crime News: ರಕ್ಷಕನೇ ಭಕ್ಷಕನಾದ! ಎಸ್‌ಐ ವಿರುದ್ಧ ಅತ್ಯಾಚಾರ ಆರೋಪ; ಅಂಗೈನಲ್ಲಿ ಡೆತ್‌ನೋಟ್ ಬರೆದಿಟ್ಟು ವೈದ್ಯೆ ಸೂಸೈಡ್
ಈ ಅಯಸ್ಕಾಂತಗಳನ್ನು ದೇಶೀಯ ಅಥವಾ ವೈಯಕ್ತಿಕ ಬಳಕೆಗಾಗಿ ಮಾರಾಟ ಮಾಡುವುದನ್ನು ನ್ಯೂಜಿಲೆಂಡ್ ಕಾನೂನಿನಿಂದ ನಿಷೇಧಿಸಲಾಗಿದ್ದರೂ, ಶಿಕ್ಷಣ ಸಂಸ್ಥೆಗಳು ಅವುಗಳನ್ನು ಬೋಧನಾ ಉದ್ದೇಶಗಳಿಗಾಗಿ ಅಥವಾ ಇತರ ಉತ್ಪನ್ನಗಳಲ್ಲಿ ಬಳಸುವುದಕ್ಕಾಗಿ ಇನ್ನೂ ಅನುಮತಿ ಇದೆ. ಈ ಅಯಸ್ಕಾಂತಗಳನ್ನು ಮಕ್ಕಳ ಸ್ನೇಹಿ ಆಟಿಕೆಗಳಾಗಿ ಪ್ರಚಾರ ಮಾಡಲಾಗಿದೆ ಮತ್ತು ಫಿಡ್ಜೆಟ್ ಆಟಿಕೆಗಳಾಗಿ ಅಥವಾ ವಿವಿಧ ಆಕಾರಗಳನ್ನು ರಚಿಸಲು ಬಳಸಬಹುದಾದ ಸೆಟ್‌ಗಳಲ್ಲಿ ಬರುತ್ತವೆ.
ಅವು ಹೆಚ್ಚಾಗಿ ಪ್ರಕಾಶಮಾನವಾದ ಸಣ್ಣ ಚೆಂಡುಗಳ ರೂಪದಲ್ಲಿರುತ್ತವೆ. ನೋಡಲು ಆಕರ್ಷಕವಾಗಿರುವುದರಿಂದ ಮಕ್ಕಳು ಸುಲಭವಾಗಿ ನುಂಗಿಬಿಡುತ್ತಾರೆ. ವಾಸ್ತವವಾಗಿ, ಸಣ್ಣವಿರುವ ಹಾಗೂ ಹೆಚ್ಚಿನ ಶಕ್ತಿಯ ಅಯಸ್ಕಾಂತಗಳು ತುಂಬಾ ಅಪಾಯಕಾರಿಯಾಗಿದ್ದು, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‍ನಲ್ಲಿ ಅವುಗಳನ್ನು ಮಾರಾಟ ಮಾಡಲು ನಿಷೇಧಿಸಲಾಗಿದೆ ಎಂದು ಆಕ್ಲೆಂಡ್ ವಿಶ್ವವಿದ್ಯಾಲಯದ ಪ್ರೊಫೆಸರ್ ಅಲೆಕ್ಸ್ ಸಿಮ್ಸ್ ಹೇಳಿದರು. ಮಕ್ಕಳು ಆನ್‌ಲೈನ್ ಮಾರುಕಟ್ಟೆಗಳ ಮೂಲಕ ಕಡಿಮೆ ಬೆಲೆಗೆ ಅಯಸ್ಕಾಂತಗಳನ್ನು ಪಡೆಯಬಹುದಾಗಿದೆ. ಹೀಗಾಗಿ ಈ ಘಟನೆಯು ಬಹಳ ಆತಂಕಕಾರಿಯಾಗಿದೆ ಎಂದು ವೈದ್ಯರು ಹೇಳಿದ್ದಾರೆ.