Murder Case: ಪತಿಯಿಂದ ನಡುರಸ್ತೆಯಲ್ಲಿ ಪತ್ನಿಯ ಬರ್ಬರ ಕೊಲೆ, ಶವದ ಮೇಲೆ ಕಾರು ಹತ್ತಿಸಿ ವಿಕೃತಿ
ಆರೋಪಿ ಪತಿ ಎರ್ಟಿಗಾ ಕಾರಿನಲ್ಲಿ ಪತ್ನಿಯನ್ನು ಕರೆದುಕೊಂಡು ಬಂದು, ಬಳೂರಗಿ ಗ್ರಾಮದ ಬಳಿ ನಿಲ್ಲಿಸಿದ್ದಾನೆ. ಬಳಿಕ ಪತ್ನಿಯನ್ನು ಕಾರಿನಿಂದ ಬಲವಂತವಾಗಿ ಕೆಳಗಿಳಿಸಿ, ನಡುರಸ್ತೆಯಲ್ಲೇ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಅಷ್ಟೇ ಅಲ್ಲದೇ ಶವದ ಮೇಲೆ ಕಾರು ಹಾಯಿಸಿ ವಿಕೃತಿ ಮೆರೆದಿದ್ದಾನೆ.
ಸಾಂದರ್ಭಿಕ ಚಿತ್ರ -
ಕಲಬುರಗಿ, ಮಾ.26: ರಾಜ್ಯದಲ್ಲಿ ಬೆಚ್ಚಿ ಬೀಳಿಸುವಂತಹ ಕೊಲೆಯೊಂದು ನಡೆದಿದೆ. ಪತಿಯೊಬ್ಬ ಹಾಡಹಗಲೇ ಕತ್ತು ಕೊಯ್ದು ಪತ್ನಿಯನ್ನು ಬರ್ಬರವಾಗಿ ಹತ್ಯೆ (Murder Case) ಮಾಡಿದ್ದಲ್ಲದೆ, ಪತ್ನಿಯ ಶವದ ಮೇಲೆ ಕಾರು ಹರಿಸಿ ವಿಕೃತಿ ಮೆರೆದಿದ್ದಾನೆ. ಘಟನೆ ಕಲಬುರಗಿ (Kalaburagi) ಜಿಲ್ಲೆಯ ಅಫಜಲಪುರ (Afzalpur) ತಾಲೂಕಿನ ಬಳೂರಗಿ ಗ್ರಾಮದ ಬಳಿ ನಡೆದಿದೆ.
ಕೊಲೆಯಾದ ಮಹಿಳೆಯನ್ನು ಶೈಲಾ (28) ಎಂದು ಗುರುತಿಸಲಾಗಿದೆ. ಕೊಲೆ ಮಾಡಿದ ಪತಿ ಅಕ್ಷಯ ಎಂದು ತಿಳಿದುಬಂದಿದೆ. ಕೊಲೆ ಮಾಡುತ್ತಿರುವ ಭಯಾನಕ ದೃಶ್ಯವನ್ನು ಯಾರೋ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದು, ಎದೆ ಝಲ್ ಎನ್ನಿಸುವಂತಿದೆ.
ಆರೋಪಿ ಪತಿ ಎರ್ಟಿಗಾ ಕಾರಿನಲ್ಲಿ ಪತ್ನಿಯನ್ನು ಕರೆದುಕೊಂಡು ಬಂದು, ಬಳೂರಗಿ ಗ್ರಾಮದ ಬಳಿ ನಿಲ್ಲಿಸಿದ್ದಾನೆ. ಬಳಿಕ ಪತ್ನಿಯನ್ನು ಕಾರಿನಿಂದ ಬಲವಂತವಾಗಿ ಕೆಳಗಿಳಿಸಿ, ನಡುರಸ್ತೆಯಲ್ಲೇ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಅಷ್ಟೇ ಅಲ್ಲದೇ ಶವದ ಮೇಲೆ ಕಾರು ಹಾಯಿಸಿ ವಿಕೃತಿ ಮೆರೆದಿದ್ದಾನೆ.
Murder Case: ಸೊಸೆಯನ್ನು ಕಾಮದಾಹಕ್ಕೆ ಬಳಸಿಕೊಂಡ ಅಪ್ಪ ಮಗನಿಂದಲೇ ಸುಪಾರಿ ಹತ್ಯೆ!
ಈ ಸಂಬಂಧ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪತಿಯನ್ನ ವಶಕ್ಕೆ ಪಡೆದಿದ್ದಾರೆ. ಮೂಲತಃ ಅಕ್ಷಯ ಮತ್ತು ಶೈಲ ಮಹಾರಾಷ್ಟ್ರದವರು ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಎಸ್ಪಿ ಬೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ.