Lokayukta Raid: ಇ-ಖಾತೆಗೆ 25 ಸಾವಿರ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಕಂದಾಯಾಧಿಕಾರಿ, ಮಾಜಿ ಸದಸ್ಯ!
ನಿವೇಶನವೊಂದರ ಇ-ಖಾತೆ ಮಾಡಿಕೊಡಲು 50 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟು, ಮೊದಲ ಕಂತಿನ 25 ಸಾವಿರ ರೂಪಾಯಿ ಸ್ವೀಕರಿಸುವ ವೇಳೆ ನಗರಸಭೆಯ ಕಂದಾಯಾಧಿ ಕಾರಿ ಹಾಗೂ ಮಾಜಿ ನಗರಸಭೆ ಸದಸ್ಯ ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ. ನಗರಸಭೆಯ ಕಂದಾ ಯಾಧಿಕಾರಿ ನಾಗರಾಜು ಮೊದಲ ಆರೋಪಿಯಾಗಿ (ಎ1) ಹಾಗೂ 12ನೇ ವಾರ್ಡ್ನ ಮಾಜಿ ನಗರಸಭೆ ಸದಸ್ಯ ಮೌಲ ಮಧ್ಯವರ್ತಿಯಾಗಿ ಎರಡನೇ ಆರೋಪಿಯಾಗಿ (ಎ2) ಗುರುತಿಸಲ್ಪಟ್ಟಿದ್ದಾರೆ.
-
ಶಿಡ್ಲಘಟ್ಟ: ನಿವೇಶನವೊಂದರ ಇ-ಖಾತೆ ಮಾಡಿಕೊಡಲು 50 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟು, ಮೊದಲ ಕಂತಿನ 25 ಸಾವಿರ ರೂಪಾಯಿ ಸ್ವೀಕರಿಸುವ ವೇಳೆ ನಗರಸಭೆಯ ಕಂದಾಯಾಧಿ ಕಾರಿ ಹಾಗೂ ಮಾಜಿ ನಗರಸಭೆ ಸದಸ್ಯ ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ.
ನಗರಸಭೆಯ ಕಂದಾಯಾಧಿಕಾರಿ ನಾಗರಾಜು ಮೊದಲ ಆರೋಪಿಯಾಗಿ (ಎ1) ಹಾಗೂ 12ನೇ ವಾರ್ಡ್ನ ಮಾಜಿ ನಗರಸಭೆ ಸದಸ್ಯ ಮೌಲ ಮಧ್ಯವರ್ತಿಯಾಗಿ ಎರಡನೇ ಆರೋಪಿಯಾಗಿ (ಎ2) ಗುರುತಿಸಲ್ಪಟ್ಟಿದ್ದಾರೆ.
ಇದನ್ನೂ ಓದಿ: Lokayukta Raid: ನಿವೃತ್ತ ಮುಖ್ಯ ಶಿಕ್ಷಕರಿಂದ ಹಣ ಪಡೆಯುವಾಗ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದ ಸೂಪರಿಂಟೆಂಡೆಂಟ್
ಇ-ಖಾತೆ ಮಾಡಿಸಿಕೊಡುವ ಸಂಬಂಧ ಹಣಕ್ಕೆ ಬೇಡಿಕೆ ಇಟ್ಟಿರುವ ಕುರಿತು ಮಾಹಿತಿ ಪಡೆದ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ರೂಪಿಸಿದ್ದರು. ಅದರಂತೆ ಸೋಮವಾರ 25 ಸಾವಿರ ರೂಪಾಯಿ ಹಣ ಸ್ವೀಕರಿಸುವ ಸಂದರ್ಭದಲ್ಲಿ ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಲೋಕಾಯುಕ್ತರ ಕಾರ್ಯಾಚರಣೆಯ ಸುದ್ದಿ ಹರಡುತ್ತಿದ್ದಂತೆ ನಗರಸಭೆ ಕಚೇರಿ ಮುಂಭಾಗ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದರು. ಅಧಿಕಾರಿ ಮತ್ತು ಮಾಜಿ ಜನಪ್ರತಿನಿಧಿ ಯೊಬ್ಬರು ಲಂಚದ ಆರೋಪದಲ್ಲಿ ಸಿಕ್ಕಿಬಿದ್ದಿರುವ ಘಟನೆ ನಗರದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳು ಮುಂದಿನ ತನಿಖೆ ಕೈಗೊಂಡಿದ್ದಾರೆ.