ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮದುವೆ ನಿರಾಕರಿಸಿದಕ್ಕೆ ವಿಡಿಯೊ ಕಾಲ್‌ ಮಾಡಿ ಯುವತಿ ಆತ್ಮಹತ್ಯೆ: ಕರೆ ಕಟ್ ಮಾಡದೇ 23 ನಿಮಿಷ ಲೈವ್ ನೋಡ್ತಾ ನಿಂತ ಪ್ರಿಯಕರ!

Woman Ends Life During Video Call: ಮದುವೆಯಾಗುವುದಾಗಿ ನಂಬಿಸಿ ವಂಚಿಸಿದಲ್ಲದೆ, ಖಾಸಗಿ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ ಪ್ರಿಯಕರನಿಗೆ ವಿಡಿಯೊ ಕಾಲ್ ಮಾಡುತ್ತಲೇ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ನಾಗಪುರದಲ್ಲಿ ನಡೆದಿದೆ.

ಮದುವೆ ನಿರಾಕರಿಸಿದಕ್ಕೆ ವಿಡಿಯೊ ಕಾಲ್‌ ಮಾಡಿ ಯುವತಿ ಆತ್ಮಹತ್ಯೆ

ಚಾಟ್‌ಜಿಪಿಟಿ ರಚಿತ ಚಿತ್ರ -

Ramesh Ballamoole
Ramesh Ballamoole Sep 23, 2026 6:56 PM

ಮುಂಬೈ, ಸೆ. 23: ಪ್ರಿಯಕರ ಮದುವೆಯಾಗಲು ನಿರಾಕರಿಸಿದ್ದಷ್ಟೇ ಅಲ್ಲದೆ, ಖಾಸಗಿ ಚಿತ್ರಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಕ್ಕೆ ಮನನೊಂದ 32 ವರ್ಷದ ಯುವತಿಯೊಬ್ಬಳು ವಿಡಿಯೊ ಕಾಲ್‌ನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ (Crime News) ಶರಣಾಗಿರುವ ಅತ್ಯಂತ ದಾರುಣ ಘಟನೆ ಮಹಾರಾಷ್ಟ್ರದ ನಾಗಪುರ ನಗರದ ಧಂತೋಲಿ ವ್ಯಾಪ್ತಿಯಲ್ಲಿ ನಡೆದಿದೆ.

ಸುಮಾರು 11 ವರ್ಷಗಳಿಂದ ಪ್ರೀತಿಸುತ್ತಿದ್ದ ಯುವಕ ಕೊನೆಕ್ಷಣದಲ್ಲಿ ಮದುವೆಗೆ ನಿರಾಕರಿಸಿದ್ದಲ್ಲದೆ, ಯುವತಿ ನೇಣು ಬಿಗಿದುಕೊಳ್ಳುತ್ತಿದ್ದಾಗಲೂ ಆಕೆಯನ್ನು ತಡೆಯಲು ಯಾವುದೇ ಪ್ರಯತ್ನ ಮಾಡದಿರುವುದು ಹಾಗೂ ಆಕೆ ಮೃತಪಟ್ಟ ಮೇಲೆಯೂ ಸತತ 23 ನಿಮಿಷಗಳ ಕಾಲ ವಿಡಿಯೊ ಕಾಲ್‌ನಲ್ಲೇ ಇದ್ದದ್ದು ಈ ಘಟನೆಯ ಮತ್ತಷ್ಟು ಕೂತುಹಲ ಹೆಚ್ಚಿಸಿದ್ದು, ಆತನ ಮನಸ್ಥಿತಿ ಕಂಡು ಇಡೀರಾಜ್ಯವೇ ಬೆಚ್ಚಿಬಿದ್ದಿದೆ.

11 ವರ್ಷಗಳ ಪ್ರೀತಿ, ಮದುವೆಗೆ ನಿರಾಕರಣೆ

ಪೊಲೀಸರು ಹಾಗೂ ಮೃತರ ಕುಟುಂಬಸ್ಥರು ನೀಡಿದ ಮಾಹಿತಿ ಪ್ರಕಾರ, ನಾಗಪುರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತಿದ್ದ ಯುವತಿ ಮತ್ತು ಅಮರಾವತಿ ಮೂಲದ ಸಚಿನ್‌ ಡಟಾಹ್‌ 2015ರಿಂದ ಪ್ರೀತಿಸುತ್ತಿದ್ದರು. ಸಚಿನ್‌ ಸಧ್ಯ ಪುಣೆಯಲ್ಲಿ ಪಿಎಚ್‌ಡಿ ಮಾಡುತ್ತಿದ್ದಾನೆ. ಸಚಿನ್‌ ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳಸಿದ್ದ. ಇತ್ತೀಚಿಗೆ ಆಕೆಯ ಮನೆಗೆ ತೆರಳಿ ಮದುವೆಯಾಗವುದಾಗಿ ತಾಯಿಗೂ ಭರವಸೆ ನೀಡಿದ್ದ. ಆದರೆ ಆತನ ಕುಟುಂಬಸ್ಥರು ಈ ಮದುವೆಗೆ ಒಪ್ಪದಿದ್ದಾಗ ಆ ವಿಷಯವನ್ನು ಯುವತಿಯಿಂದ ಮುಚ್ಚಿಟ್ಟು ಆಕೆಯೊಂದಿಗೆ ಸಲುಗೆಯಿಂದಲೇ ಇರುತ್ತಿದ್ದ. ಯುವತಿ ಮದುವಗೆ ಒತ್ತಾಯಿಸಿದಾಗಲೆಲ್ಲ ಜಾರಿಕೊಳ್ಳುತ್ತಿದ್ದ ಸಚಿನ್, ಕೊನೆಗೆ ಮದುವೆಯಾಗಲು ನಿರಾಕರಿಸಿದ್ದಾನೆ. ಅಷ್ಟೇ ಅಲ್ಲದೆ ಹೆಚ್ಚು ಒತ್ತಾಯಿಸಿದರೆ ಆಕೆಯ ಖಾಸಗಿ ಫೋಟೊ ಮತ್ತು ವಿಡಿಯೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುವುದಾಗಿ ಬೆದರಿಕೆ ಹಾಕಲು ಪ್ರಾರಂಭಿಸಿದ್ದ.

ಒಂದೇ ಮರಕ್ಕೆ ನೇಣು ಬಿಗಿದುಕೊಂಡು ವಿವಾಹಿತ ಮಹಿಳೆ-ಯುವಕ ಆತ್ಮಹತ್ಯೆ!

ವಿಡಿಯೊ ಕಾಲ್‌ನಲ್ಲೇ ದುರಂತ ಅಂತ್ಯ

ಸಚಿನ್ ನೀಡುತ್ತಿದ್ದ ಮಾನಸಿಕ ಕಿರುಕುಳ ಮತ್ತು ಮದುವೆ ನಿರಾಕರಣೆಯಿಂದ ತೀವ್ರ ಖಿನ್ನತೆಗೊಳಗಾಗಿದ್ದ ಯುವತಿ, ಸೆಪ್ಟೆಂಬರ್ 19ರ ರಾತ್ರಿ ಸಚಿನ್‌ಗೆ ವಿಡಿಯೊ ಕರೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾಳೆ. ಕರೆ ಚಾಲನೆಯಲ್ಲಿರುವಾಗಲೇ ಆಕೆ ಫ್ಯಾನ್‌ಗೆ ಸೀರೆಯಿಂದ ನೇಣು ಬಿಗಿದುಕೊಂಡರೂ, ಆಕೆಯನ್ನು ಸಮಾಧಾನಪಡಿಸುವ ಅಥವಾ ತಡೆಯುವ ಯಾವುದೇ ಪ್ರಯತ್ನವನ್ನು ಸಚಿನ್ ಮಾಡಲಿಲ್ಲ. ದುರಂತವೆಂದರೆ, ಆಕೆ ಕೊನೆಯುಸಿರೆಳೆದ ನಂತರವೂ ಸುಮಾರು 23 ನಿಮಿಷಗಳ ಕಾಲ ಆ ವಿಡಿಯೋ ಕರೆ ಆನ್‌ ಆಗಿಯೇ ಇತ್ತು ಎಂದು ಪೊಲೀಸರ ತಿಳಿಸಿದ್ದಾರೆ.

ಘಟನೆ ಬೆಳಕಿಗೆ ಬಂದ ತಕ್ಷಣ ಕುಟುಂಬಸ್ಥರು ಧಂತೋಲಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಮೃತರ ತಾಯಿಯ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿ ಸಚಿನ್‌ ಡಹಾಟ್‌ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಹಾಗೂ ಮಾನಸಿಕ ಕಿರುಕುಳದ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಯ ವಿಡಿಯೊ ಕಾಲ್‌ ರೆಕಾರ್ಡಿಂಗ್‌ಗಳು ಹಾಗೂ ಮೊಬೈಲ್‌ ಫೋನ್‌ಗಳನ್ನು ತಾಂತ್ರಿಕ ತನಿಖೆಗಾಗಿ ಪೊಲೀಸರು ವಶಪಡಿಸಿಕೊಂಡಿದ್ದು, ತೆಲೆಮರಿಸಿಕೊಂಡಿರುವ ಆರೋಪಿಯ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.

ಕ್ರೈಂ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.