Road Accident: ಮೆಟ್ರೋ ಕಾಮಗಾರಿ ವೇಳೆ ದುರಂತ, ಆಟೋ ಚಾಲಕ ಸಾವು
18 ಚಕ್ರದ ದೊಡ್ಡ ಲಾರಿಯಲ್ಲಿ ವಯಾಡೆಕ್ಟ್ ಸಾಗಿಸುತ್ತಿದ್ದರು. ಈ ವೇಳೆ ಲಾರಿ ತುಂಡಾಗಿ ಬೃಹತ್ ವಯಾಡೆಕ್ಟ್ ನೆಲಕ್ಕುರುಳಿದೆ. ಏಕಾಏಕಿ ಆಟೋ ಮೇಲೆ ವಯಾಡೆಕ್ಟ್ ಬಿದ್ದ ಪರಿಣಾಮ ಆಟೋ ಚಾಲಕ ಖಾಸಿಂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕ್ರೇನ್ ತರಿಸಿ ವಯಾಡಕ್ಟ್ ಅನ್ನು ತೆಗೆಯಬೇಕಾಯಿತು. ಅಷ್ಟರಲ್ಲಿ ಖಾಸಿಂ ಮೃತಪಟ್ಟಿದ್ದರು.


ಬೆಂಗಳೂರು: ಬೆಂಗಳೂರಿನಲ್ಲಿ (Bengaluru) ನಮ್ಮ ಮೆಟ್ರೋ ಕಾಮಗಾರಿ (Namma Metro Work) ವೇಳೆ ಮತ್ತೊಂದು ದುರಂತ ಸಂಭವಿಸಿದೆ. ಟ್ರ್ಯಾಕ್‌ಗೆ ಹಾಕುವ ಬೃಹತ್ ತಡೆಗೋಡೆ ಬಿದ್ದು ವ್ಯಕ್ತಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಬೆಂಗಳೂರಿನ ಯಲಹಂಕ ಬಳಿಯ ಕೋಗಿಲು ಕ್ರಾಸ್ ಸಮೀಪ ದುರಂತ ಸಂಭವಿಸಿದೆ. ಆಟೋ ಮೇಲೆ ವಯಾಡೆಕ್ಟ್ ಬಿದ್ದು ಚಾಲಕ ಖಾಸಿಂ ಎಂಬವರು ಸ್ಥಳದಲ್ಲೇ (Auto Driver Death) ಸಾವನ್ನಪ್ಪಿದ್ದಾರೆ. ಲಾರಿಯಲ್ಲಿ ವಯಾಡೆಕ್ಟ್ ಸಾಗಿಸುವಾಗ ಉರುಳಿ ಬಿದ್ದು ದುರಂತ ಸಂಭವಿಸಿದೆ.
18 ಚಕ್ರದ ದೊಡ್ಡ ಲಾರಿಯಲ್ಲಿ ವಯಾಡೆಕ್ಟ್ ಸಾಗಿಸುತ್ತಿದ್ದರು. ಈ ವೇಳೆ ಲಾರಿ ತುಂಡಾಗಿ ಬೃಹತ್ ವಯಾಡೆಕ್ಟ್ ನೆಲಕ್ಕುರುಳಿದೆ. ಏಕಾಏಕಿ ಆಟೋ ಮೇಲೆ ವಯಾಡೆಕ್ಟ್ ಬಿದ್ದ ಪರಿಣಾಮ ಆಟೋ ಚಾಲಕ ಖಾಸಿಂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕ್ರೇನ್ ತರಿಸಿ ಅದರ ಮೂಲಕ ವಯಾಡಕ್ಟ್ ಅನ್ನು ತೆಗೆಯಬೇಕಾಯಿತು. ಅಷ್ಟರಲ್ಲಿ ಖಾಸಿಂ ಮೃತಪಟ್ಟಿದ್ದರು.
ಅಪಘಾತದ ವಿಚಾರಕ್ಕೆ ತಾಯಿ- ಮಗನ ಕತ್ತು ಹಿಸುಕಿ ಕೊಲೆ
ಬೆಳಗಾವಿ: ತಾಯಿ ಮತ್ತು ಮಗನನ್ನು ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಅಥಣಿ ತಾಲೂಕಿನ ಕೊಡಗಾನೂರ ಗ್ರಾಮದ ಗಾನಖೋಡಿಯ ಗದ್ದೆಯಲ್ಲಿ ನಡೆದಿದೆ. ನಂದಗಾಂವ ಗ್ರಾಮದ ತಾಯಿ ಚಂದ್ರವ್ವ ಅಪ್ಪಾರಾಯ ಇಚೇರಿ (65), ಮಗ ವಿಠಲ ಅಪ್ಪಾರಾಯ ಇಚೇರಿ (42) ಮೃತರು. ಪಕ್ಕದ ಹೊಲದವರು ಜಾನುವಾರುಗಳಿಗೆ ಮೇವು ತರಲು ಹೋದಾಗ ಈ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ಹಲವು ತಿಂಗಳ ಹಿಂದೆ ಚಂದ್ರವ್ವ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದರು. ಪರಿಹಾರ ಹಾಗೂ ಆಸ್ಪತ್ರೆ ಖರ್ಚು ನೀಡಬೇಕು ಎಂದು ಕೋರ್ಟ್ ಮೆಟ್ಟಿಲು ಹತ್ತಿದ್ದರು. ಈ ಪ್ರಕರಣ ಹಿಂಪಡೆಯುವಂತೆ ಮಾತುಕತೆ ಕೂಡ ಆಗಿತ್ತು. ಹಣ ಕೊಡುವ ದಿನ ಸಮೀಪ ಬಂದಿದ್ದರಿಂದ ಶನಿವಾರ ರಾತ್ರಿ ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಸ್ಥಳಕ್ಕೆ ಅಥಣಿ ಡಿವೆಎಸ್‌ಪಿ ಪ್ರಶಾಂತ ಮುನ್ನೋಳ್ಳಿ, ಸಿಪಿಐ ಸಂತೋಷ ಹಳ್ಳೂರ, ಪಿಎಸ್‌ಐಗಳಾದ ಕುಮಾರ ಹಾಡಕರ, ಗಿರಿಮಲ್ಲಪ್ಪ ಉಪ್ಪಾರ, ಶಿವಾನಂದ ಕಾರಜೋಳ, ತನಿಖಾ ಸಹಾಯಕರಾದ ಮಲ್ಲಯ್ಯ ಹಿರೇಮಠ, ಸುಭಾಷ ಬಬಲೇಶ್ವರ ಹಾಗೂ ಬೆರಳಚ್ಚು ಹಾಗೂ ಶ್ವಾನದಳದ ತಂಡ ಸೇರಿದಂತೆ ಇತರ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಸಮುದ್ರದ ಅಲೆಗೆ ಸಿಲುಕಿ ಮುಂಬೈ ಮೂಲದ ವಿದ್ಯಾರ್ಥಿ ಸಾವು, ಮತ್ತೋರ್ವ ನಾಪತ್ತೆ!