ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮದುವೆಯಾದ ಒಂದು ತಿಂಗಳಲ್ಲೇ ಅತ್ತೆಗೆ ವಿಷ ಕುಡಿಸಿ, ನಗದು-ಆಭರಣಗಳೊಂದಿಗೆ ನವವಿವಾಹಿತೆ ಪರಾರಿ

Crime News: ನವವಿವಾಹಿತೆಯೊಬ್ಬಳು ಅತ್ತೆಗೆ ವಿಷ ಕುಡಿಸಿ, ನಗದು-ಆಭರಣಗಳೊಂದಿಗೆ ಪರಾರಿಯಾಗಿರುವ ಘಟನೆ ರಾಜಸ್ಥಾನದ ಅಲ್ವಾರ್‌ನಲ್ಲಿ ನಡೆದಿದೆ. ಹೀಗೆ ಪರಾರಿಯಾದ ಮಹಿಳೆಯನ್ನು ರೇಕಾ ಎಂದು ಗುರುತಿಸಲಾಗಿದೆ. 2025ರ ಮೇ 26ರಂದು ಪಂಜಾಬ್‌ನ ಗುರುದ್ವಾರದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ರೇಖಾಳನ್ನು ವಿವಾಹವಾದ ವಿಕ್ರಮ್‌ಜೀತ್ ಮದುವೆಗೆ ಐದು ಲಕ್ಷ ರುಪಾಯಿಗೂ ಹೆಚ್ಚು ಖರ್ಚು ಮಾಡಿದ್ದರು.

ಅತ್ತೆಗೆ ವಿಷ ಕುಡಿಸಿ, ನಗದು-ಆಭರಣಗಳೊಂದಿಗೆ ನವವಿವಾಹಿತೆ ಪರಾರಿ

ಅತ್ತೆಗೆ ವಿಷ ಕುಡಿಸಿ, ನಗದು-ಆಭರಣಗಳೊಂದಿಗೆ ಪರಾರಿಯಾದ ರೇಖಾ (ಸಂಗ್ರಹ ಚಿತ್ರ) -

Priyanka P
Priyanka P Apr 1, 2026 6:34 PM

ಜೈಪುರ, ಏ. 1: ನವವಧುವೊಬ್ಬಳು ಅತ್ತೆಗೆ ವಿಷ ಕುಡಿಸಿ, ನಗದು-ಆಭರಣಗಳೊಂದಿಗೆ ಪರಾರಿಯಾಗಿರುವ ಘಟನೆ ರಾಜಸ್ಥಾನದ (Rajasthan) ಅಲ್ವಾರ್‌ನಲ್ಲಿ ನಡೆದಿದೆ. ನವವಿವಾಹಿತೆ ರೇಖಾ ಕೌರ್ ಈ ಆಘಾತಕಾರಿ ದ್ರೋಹ ಎಸಗಿದ್ದಾಳೆ. ಈ ಘಟನೆಯು ಆಕೆಯ ಪತಿ ವಿಕ್ರಮ್‌ಜೀತ್ ಸಿಂಗ್ ಮತ್ತು ಅವರ ಕುಟುಂಬವನ್ನು ತೀವ್ರ ಆಘಾತಕ್ಕೆ ತಳ್ಳಿದೆ (Crime News). 2025ರ ಮೇ 26ರಂದು ಪಂಜಾಬ್‌ನ ಗುರುದ್ವಾರದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ರೇಖಾಳನ್ನು ವಿಕ್ರಮ್‌ಜೀತ್ ವರಿಸಿದ್ದರು. ಮದುವೆಗೆ ಅವರು ಐದು ಲಕ್ಷ ರುಪಾಯಿಗೂ ಹೆಚ್ಚು ಖರ್ಚು ಮಾಡಿದ್ದರು.

ಅದಾಗ್ಯೂ ಇದು ರೇಖಾಳಿಗೆ ಇದು ಎರಡನೇ ಮದುವೆಯಾಗಿತ್ತು. ಆಕೆ ಮತ್ತು ಆಕೆಯ ಚಿಕ್ಕಮ್ಮ ಪಿಂಕಿ ಕೌರ್ ಮೊದಲ ಪತಿಯಿಂದ ವಿಚ್ಛೇದನ ದೊರೆತಿದೆ ಎಂದು ಭರವಸೆ ನೀಡಿದ ಮೇರೆಗೆ, ಜೋಡಿ 2025ರ ಮೇ 9ರಂದು ನ್ಯಾಯಾಲಯದಿಂದ ಅನುಮೋದಿತ ಲಿವ್-ಇನ್ ರಿಲೇಷನ್‌ಶಿಪ್‌ ಒಪ್ಪಂದಕ್ಕೆ ಸಹಿ ಹಾಕಿದ್ದತ್ತು.

ರೇಖಾ ಮೊದಲ ಪತಿಯಿಂದ ಇಬ್ಬರು ಮಕ್ಕಳನ್ನು ಹೊಂದಿದ್ದಾಳೆ. ನಂತರ ಎರಡನೇ ವಿವಾಹವಾದಳು. ಮದುವೆಯಾದ ಕೂಡಲೇ ಅವಳ ನಡವಳಿಕೆ ಬದಲಾಯಿತು.

ಸಮೋಸಾ ತಿಂದು ಹಣ ಪಾವತಿಸುವ ಬದಲು ಹೋಟೆಲ್ ಮಾಲಕನ ಬೆರಳನ್ನೇ ಕಚ್ಚಿ ತುಂಡರಿಸಿದ ಗ್ರಾಹಕ!

2025ರ ಜೂನ್ 23ರಂದು ಅತ್ತೆಗೆ ಬಡಿಸಿದ ಖಿಚಡಿ ಊಟದಲ್ಲಿ ಫಿನಾಯಿಲ್ ಬೆರೆಸಿದ್ದಳು. ಕುಟುಂಬಸ್ಥರು ಕೂಡಲೇ ಅಸ್ವಸ್ಥಗೊಂಡ ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ಈ ವೇಳೆ ರೇಖಾ ನಗದು ಹಾಗೂ ಲಕ್ಷಾಂತರ ಮೌಲ್ಯದ ಆಭರಣಗಳ ಸಹಿತ ಪರಾರಿಯಾಗಿದ್ದಾಳೆ ಎಂದು ಆರೋಪಿಸಲಾಗಿದೆ.

ಹರಿಯಾಣದ ಸಿರ್ಸಾದ ತನ್ನ ಚಿಕ್ಕಮ್ಮ ಪಿಂಕಿ ಕೌರ್ ಸಹಾಯದಿಂದ ರೇಖಾ ಇದೇ ರೀತಿ ಹಲವು ಯುವಕರನ್ನು ವಂಚಿಸಿದ್ದಾಳೆ ಎಂಬ ವಿಚಾರ ತನಿಖೆಯಿಂದ ತಿಳಿದುಬಂದಿದೆ. ಇನ್ನು ಪೊಲೀಸರ ಸಹಾಯ ಪಡೆಯಲು ವಿಕ್ರಮ್‌ಜೀತ್ ಮಾಡಿದ ಪ್ರಯತ್ನಗಳು ಆರಂಭದಲ್ಲಿ ವಿಫಲವಾದವು. ಅವರು 2025ರ ಜುಲೈ 14ರಂದು ಅರಾವಳಿ ವಿಹಾರ್ ಪೊಲೀಸ್ ಠಾಣೆಗೆ ದೂರು ನೀಡಿದರು. ಆದರೆ ತಕ್ಷಣ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ತರುವಾಯ, ಇಬ್ಬರ ವಿರುದ್ಧ ಕ್ರಮಕ್ಕಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು ಎನ್ನಲಾಗಿದೆ.

ಅಂದಹಾಗೆ, ಈ ಹಿಂದೆಯೇ ಮದುವೆಯಾಗಿದ್ದರೂ ಕಾನೂನುಬದ್ಧವಾಗಿ ಮದುವೆಯನ್ನು ಸುಗಮಗೊಳಿಸಬಹುದೆಂದು ರೇಖಾ ತನಗೆ ಮನವರಿಕೆ ಮಾಡಿಕೊಟ್ಟಿದ್ದಳು ಎಂದು ವಿಕ್ರಮ್‌ಜೀತ್ ಹೇಳಿದರು. ʼʼನಾನು ಅವಳನ್ನು ಸಂಪೂರ್ಣವಾಗಿ ನಂಬಿದ್ದೆ. ಆದರೆ, ವಾರಗಳಲ್ಲಿ ಎಲ್ಲವೂ ಬದಲಾಯಿತು. ವಿಷಪ್ರಾಶನ, ಕಳ್ಳತನ, ಸುಳ್ಳು, ಎಲ್ಲವೂ ಪೂರ್ವಯೋಜಿತವಾಗಿತ್ತುʼʼ ಎಂದು ಅವರು ತಿಳಿಸಿದರು.

ರೇಖಾ ಮತ್ತು ಆಕೆಯ ಚಿಕ್ಕಮ್ಮ ಪಿಂಕಿ ಹರಿಯಾಣ ಮತ್ತು ರಾಜಸ್ಥಾನದಲ್ಲಿ ಹಲವು ಪುರುಷರನ್ನು ಗುರಿಯಾಗಿಸಿಕೊಂಡು ವಂಚನೆಯಲ್ಲಿ ತೊಡಗಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಈ ಬಗ್ಗೆ ತನಿಖೆ ಮುಂದುವರಿದಿದ್ದು, ನ್ಯಾಯಾಲಯದ ಪ್ರಕ್ರಿಯೆಯ ನಂತರ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.