ನಿತೀಶ್ ಕಟಾರಾ ಕೊಲೆ ಪ್ರಕರಣದ (Nitish Katara Murder Convict) ಅಪರಾಧಿಗಳಲ್ಲಿ ಒಬ್ಬನಾದ ಸುಖದೇವ್ ಪೆಹಲ್ವಾನ್ ಇಂದು ಸಾವನ್ನಪ್ಪಿದ್ದಾನೆ. ಕೊಲೆ ಅಪರಾಧದ ಶಿಕ್ಷೆ ಮುಗಿಸಿ ಜೈಲಿನಿಂದ ಬಿಡುಗಡೆಯಾದ ತಿಂಗಳುಗಳ ನಂತರ ಉತ್ತರ ಪ್ರದೇಶದ ಖುಷಿನಗರ ಜಿಲ್ಲೆಯಲ್ಲಿ ಸಂಭವಿಸಿದ (Road accident) ಅಪಘಾತದಲ್ಲಿ ಆತ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಮಂಗಳವಾರ ತುರ್ಕಪಟ್ಟಿ ಪ್ರದೇಶದಲ್ಲಿ ಕಾರೊಂದು ಅವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದ್ದು, ಮತ್ತೊಬ್ಬ ವ್ಯಕ್ತಿ ಕೂಡ ಸಾವನ್ನಪ್ಪಿದ್ದಾರೆ. ಮಹೀಂದ್ರಾ ಸ್ಕಾರ್ಪಿಯೋ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.
ಅಪಘಾತವಾದ ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿಗೆ ತಲುಪುವಷ್ಟರಲ್ಲಿಆತ ಮೃತಪಟ್ಟಿದ್ದಾನೆ. ಇನ್ನಿಬ್ಬರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರು ಕಾರನ್ನು ವಶಪಡಿಸಿಕೊಂಡಿದ್ದು, ಆರೋಪಿ ಚಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ. ಸದ್ಯ ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದೆ.
ನಿತೀಶ್ ಕಟಾರ ಕೊಲೆ ಪ್ರಕರಣ
ದೇಶವನ್ನೇ ಬೆಚ್ಚಿಬೀಳಿಸಿದ್ದ ನಿತೀಶ್ ಕಟಾರಾ ಕೊಲೆ ಪ್ರಕರಣದಲ್ಲಿ ಪೆಹಲ್ವಾನ್ ಕೂಡ ಶಿಕ್ಷೆಗೊಳಗಾದ ಆರೋಪಿಗಳಲ್ಲಿ ಒಬ್ಬನಾಗಿದ್ದ. ಭಾರತಿ ಜತೆ ಪ್ರೇಮ ಸಂಬಂಧ ಹೊಂದಿದ್ದ ವಿಚಾರವಾಗಿ ಕ್ರಿಮಿನಲ್ ರಾಜಕಾರಣಿ ಡಿಪಿ ಯಾದವ್ ಪುತ್ರ ನಿತೀಶ್ ಕಟಾರನನ್ನು ಘಾಜಿಯಾಬಾದ್‌ನ ಮದುವೆ ಪಾರ್ಟಿಯಿಂದ ಅಪಹರಿಸಿದ್ದ ಯಾದವ್ ಹಾಗೂ ಆತನ ಸೋದರ ಸಂಬಂಧಿ ವಿಶಾಲ್ ಯಾದವ್, 2002 ಫೆಬ್ರವರಿ 17ರಂದು ಕಟಾರ ಕೊಲೆ ಮಾಡಲಾಗಿತ್ತು.
ಪೆಹಲ್ವಾನ್ ಜೊತೆಗೆ, ಯಾದವ್ ಅವರ ಮಗ ವಿಕಾಸ್ ಯಾದವ್ ಮತ್ತು ಸೋದರಳಿಯ ವಿಶಾಲ್ ಯಾದವ್ ಕೂಡ ಈ ಪ್ರಕರಣದಲ್ಲಿ ದೋಷಿಗಳಾಗಿದ್ದರು. 2016 ರಲ್ಲಿ ಸುಪ್ರೀಂ ಕೋರ್ಟ್ ಯಾದವ್ ಸೋದರಸಂಬಂಧಿಗಳಿಗೆ 25 ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ಅವರ ಸಹಚರನಾಗಿದ್ದ ಪೆಹಲ್ವಾನ್‌ಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಮಾರ್ಚ್ 2024 ರಲ್ಲಿ ಈತ ಶಿಕ್ಷೆ ಮುಗಿಸಿ ಜೈಲಿನಿಂದ ಹೊರ ಬಂದಿದ್ದ.
ಕೊಲೆ ಪ್ರಕರಣದ ಆರೋಪಿಯೊಬ್ಬ ಕಸ್ಟಡಿಯಲ್ಲಿರರುವಾಗಲೇ ಮೃತಪಟ್ಟ ಘಟನೆ ಭಾನುವಾರ ಕಿಶನ್‌ಗಂಜ್ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಆತನನ್ನು ಐದು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿತ್ತು. ಪೊಲೀಸರ ಪ್ರಕಾರ ಸೋಮವಾರ ಆತನ ಆರೋಗ್ಯ ಹದಗೆಟ್ಟಿತು ಮತ್ತು ಆತನನ್ನು ಕಿಶನ್‌ಗಂಜ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಘಟನೆಯ ನಂತರ, ಮೃತರ ಕುಟುಂಬ ಮತ್ತು ಸ್ಥಳೀಯರು ಆಸ್ಪತ್ರೆಯ ಹೊರಗೆ ಪ್ರತಿಭಟನೆ ಆರಂಭಿಸಿದರು, ಪೊಲೀಸರ ದೌರ್ಜನ್ಯದಿಂದಾಗಿ ಮೃತಪಟ್ಟಿದ್ದಾಗಿ ಅವರು ಆರೋಪಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Missing Case: 2023ರಲ್ಲಿಯೇ ಕೊಲೆಯಾಗಿದ್ದಾಳೆಂದು ಭಾವಿಸಲಾಗಿದ್ದ ಮಹಿಳೆ ಮನೆಗೆ ವಾಪಸ್, ಆಕೆಯ ಕೊಲೆ ಆರೋಪದ ಮೇಲೆ ಜೈಲಿನಲ್ಲಿರುವ ನಾಲ್ವರು
ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ, ಜಿಲ್ಲಾಧಿಕಾರಿ ರೋಹಿತಾಶ್ವ ಸಿಂಗ್ ತೋಮರ್, ಎಸ್ಪಿ ಅಭಿಷೇಕ್ ಅಂದಾಸು ಮತ್ತು ಎಎಸ್ಪಿ ರಾಜೇಶ್ ಚೌಧರಿ ಸ್ಥಳಕ್ಕಾಗಮಿಸಿ ಪರಿಸ್ಥಿತಿ ಅವಲೋಕಿಸಿದರು.