Murder Case: ಪ್ರಿಯತಮೆಯನ್ನು ಕೊಂದು, ರುಂಡ ಕತ್ತರಿಸಿ ದೇಹವನ್ನು ಚರಂಡಿಗೆ ಎಸೆದ ನೀಚ!
ನೋಯ್ಡಾದಲ್ಲಿ ಪ್ರಿಯತಮೆಯನ್ನು ಹತ್ಯೆ ಮಾಡಿ, ತಲೆ, ತೋಳುಗಳಿಲ್ಲದ ಶವವನ್ನು ಚರಂಡಿಯಲ್ಲಿ ಎಸೆದ ಆಘಾತಕಾರಿ ಘಟನೆ ನಡೆದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಸಂಬಂಧದ ಕಲಹವೇ ಕೃತ್ಯಕ್ಕೆ ಕಾರಣ ಎನ್ನಲಾಗುತ್ತಿದೆ. ಘಟನೆಯ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಪ್ರಿಯತಮೆಯನ್ನು ಕೊಂದು ದೇಹವನ್ನು ಚರಂಡಿಗೆ ಎಸೆದ ಆರೋಪಿ (ಸಂಗ್ರಹ ಚಿತ್ರ) -
ನವದೆಹಲಿ: ಪ್ರಿಯತಮೆಯನ್ನು ಹತ್ಯೆ ಮಾಡಿ ಆಕೆಯ ಶವವನ್ನು ನಗರದ ಐಷಾರಾಮಿ ಪ್ರದೇಶದಲ್ಲಿ ಎಸೆದಿದ್ದ ವ್ಯಕ್ತಿಯನ್ನು ನೋಯ್ಡಾ (Noida) ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ನವೆಂಬರ್ 6 ರಂದು ಸೆಕ್ಟರ್ -82 ಬಳಿಯ ಚರಂಡಿಯಲ್ಲಿ ಯುವತಿಯೊಬ್ಬಳ ಶವ ಪತ್ತೆಯಾಗಿದೆ. ಪೊಲೀಸರು ಸ್ಥಳಕ್ಕೆ ತಲುಪಿ, ಆಕೆಯ ಶವವನ್ನು ಚರಂಡಿಯಿಂದ ಹೊರತೆಗೆದು ತನಿಖೆ ಆರಂಭಿಸಿದರು (Crime News). ನೋಯ್ಡಾದಲ್ಲಿ ಯುವತಿಯ ತಲೆಯಿಲ್ಲದ, ತೋಳಿಲ್ಲದ ದೇಹವನ್ನು ಚರಂಡಿಗೆ ಎಸೆಯಲಾಗಿತ್ತು. ಆದರೆ, ಆಕೆಯ ಕೈಗಳು ಮತ್ತು ತಲೆ ದಂಕೌರ್ ಪಟ್ಟಣದಲ್ಲಿ ಪತ್ತೆಯಾಗಿದೆ. ನಂತರ ಪೊಲೀಸರು ಮೃತಪಟ್ಟ ಯುವತಿಯ ಗುರುತು ಪತ್ತೆ ಕಾರ್ಯಾಚರಣೆ ಮಾಡಲು ಪ್ರಾರಂಭಿಸಿದರು.
ಆರೋಪಿ ವ್ಯಕ್ತಿಯನ್ನು ಬಂಧಿಸಿದಾಗ, ಅವನು ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ವಿಚಾರಣೆ ವೇಳೆ ವಾಹನದೊಳಗೆ ಯುವತಿಯನ್ನು ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆ ವ್ಯಕ್ತಿ ಮತ್ತು ಅವನ ಪ್ರೇಮಿ ಇಬ್ಬರೂ ಪಶ್ಚಿಮ ಬಂಗಾಳದ ನಿವಾಸಿಗಳಾಗಿದ್ದರು.
ಆರೋಪಿಯು ತನ್ನ ಪ್ರಿಯತಮೆಯ ಶಿರಚ್ಛೇದ ಮಾಡಿ, ಆಕೆಯ ಕೈಗಳನ್ನು ಕತ್ತರಿಸಿ, ಆಕೆಯ ದೇಹವನ್ನು ನೋಯ್ಡಾದಲ್ಲಿ ಎಸೆದಿದ್ದಾನೆ. ಆಕೆಯ ತಲೆ ಮತ್ತು ಕೈಗಳನ್ನು ದಂಕೌರ್‌ನಲ್ಲಿ ಪಟ್ಟಣದಲ್ಲಿ ಎಸೆದಿದ್ದಾನೆ. ಆತನ ಬಂಧನಕ್ಕೂ ಮುನ್ನ, ಯುವತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು. ಅಪರಾಧಿಯನ್ನು ಗುರುತಿಸಲು ಹತ್ತಿರದ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಸ್ಕ್ಯಾನ್ ಮಾಡಿದ್ದರು.
ಇದನ್ನೂ ಓದಿ: Kerala News: ಕಾರಾಗೃಹದಲ್ಲೇ ಜೈಲರ್ ಮೇಲೆ ಕೈದಿಗಳಿಂದ ಡೆಡ್ಲಿ ಅಟ್ಯಾಕ್!
ಸಹಪಾಠಿಗೆ ಗುಂಡು ಹಾರಿಸಿದ 11ನೇ ತರಗತಿ ವಿದ್ಯಾರ್ಥಿ
ಗುರುಗ್ರಾಮ ನಗರದ ಸೆಕ್ಟರ್ 48 ರಿಂದ ಆಘಾತಕಾರಿ ಘಟನೆಯೊಂದು ನಡೆದಿದೆ. ಇಲ್ಲಿನ ಫ್ಲಾಟ್ ಒಂದರಲ್ಲಿ 11ನೇ ತರಗತಿಯ ವಿದ್ಯಾರ್ಥಿಯೊಬ್ಬ ತನ್ನ ತಂದೆಯ ಪರವಾನಗಿ ಪಡೆದ ಪಿಸ್ತೂಲಿನಿಂದ ತನ್ನ ಸಹಪಾಠಿಯೊಬ್ಬನಿಗೆ ಗುಂಡು ಹಾರಿಸಿದ್ದಾನೆ. ಪೊಲೀಸರ ಪ್ರಕಾರ, ಗುಂಡು ವಿದ್ಯಾರ್ಥಿಯ ಕುತ್ತಿಗೆಗೆ ತಗುಲಿದ್ದು, ಆತನ ಸ್ಥಿತಿ ಇನ್ನೂ ಗಂಭೀರವಾಗಿದೆ. ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಸದರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಘಟನೆಯ ನಂತರ ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಸ್ಥಳದಿಂದ ಒಂದು ಪಿಸ್ತೂಲ್, ಎರಡು ಮ್ಯಾಗಜೀನ್‌ಗಳು, 70 ಕಾರ್ಟ್ರಿಡ್ಜ್‌ಗಳು ಮತ್ತು ಒಂದು ಗುಂಡನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ರಾತ್ರಿ 9:30ರ ಸುಮಾರಿಗೆ ಈ ಘಟನೆ ನಡೆದಿದೆ. ಆರೋಪಿಯ ಬಾಡಿಗೆ ಫ್ಲಾಟ್‌ನಲ್ಲಿ ಮೂವರು ಸಹಪಾಠಿಗಳು ಇದ್ದರು. ಈ ವೇಳೆ ಜಗಳ ನಡೆದಿದೆ. ಒಬ್ಬ ವಿದ್ಯಾರ್ಥಿ, ಮತ್ತೊಬ್ಬ ವಿದ್ಯಾರ್ಥಿ ಮೇಲೆ ಗುಂಡು ಹಾರಿಸಿದ್ದಾನೆ. ಮಾಹಿತಿ ಪಡೆದ ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸ್ ತಂಡ, ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದರೆ, ಇತರ ಇಬ್ಬರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡ 17 ವರ್ಷದ ವಿದ್ಯಾರ್ಥಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಪ್ರಕಾರ, ತನ್ನ ಮಗನ ಶಾಲಾ ಸ್ನೇಹಿತ ಶನಿವಾರ ಭೇಟಿಯಾಗಲು ಅವನನ್ನು ಆಹ್ವಾನಿಸಿದ್ದ. ಆರಂಭದಲ್ಲಿ ಬರುವುದಿಲ್ಲ ಎಂದು ಹೇಳಿದ್ದಾನಂತೆ. ಆದರೆ ಸ್ನೇಹಿತ ಒತ್ತಾಯಿಸಿ ಅವನನ್ನು ಕರೆದುಕೊಂಡು ಬರುವುದಾಗಿ ಹೇಳಿದ್ದಾನೆ. ನಂತರ ಆಕೆ, ತನ್ನ ಮಗನನ್ನು ಹೋಗಲು ಬಿಟ್ಟಳು. ಆಕೆಯ ಮಗ ಖೇರ್ಕಿ ದೌಲಾ ಟೋಲ್‌ನಲ್ಲಿ ತನ್ನ ಸ್ನೇಹಿತನನ್ನು ಭೇಟಿಯಾದನು. ಸುಮಾರು ಎರಡು ತಿಂಗಳ ಹಿಂದೆ, ತನ್ನ ಮಗ ಸ್ನೇಹಿತನೊಂದಿಗೆ ಜಗಳವಾಡಿದ್ದನು. ಇದಕ್ಕೆ ಸೇಡು ತೀರಿಸಿಕೊಳ್ಳಲು, ತನ್ನ ಮಗನ ಸ್ನೇಹಿತ ಅವನನ್ನು ಅವನ ಮನೆಗೆ ಕರೆದೊಯ್ದು, ಇನ್ನೊಬ್ಬ ಸ್ನೇಹಿತನೊಂದಿಗೆ ಗುಂಡು ಹಾರಿಸಿದ್ದಾನೆ ಎಂದು ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾಳೆ.