Greater Noida Dowry Case: ನೋಯ್ಡಾ ವರದಕ್ಷಿಣೆ ಕೊಲೆ ಕೇಸ್- ಮರ್ಸಿಡಿಸ್ ಚಲಾಯಿಸುತ್ತಿರುವ ವಿಡಿಯೊ ವೈರಲ್!
ಆಗಸ್ಟ್ 22ರಂದು ಗ್ರೇಟರ್ ನೋಯ್ಡಾದಲ್ಲಿ ವರದಕ್ಷಿಣೆ ಕಿರುಕುಳದಿಂದಾಗಿ ಯುವತಿಯೊಬ್ಬರನ್ನು ಜೀವಂತವಾಗಿ ಸುಟ್ಟುಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನೂ ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ನಿಕ್ಕಿ ಭಾಟಿ (26) ಅವರ ತಂದೆ ಭಿಕಾರಿ ಸಿಂಗ್ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ, ನಿಕ್ಕಿಯ ಪತಿ, ಆತನ ಸಹೋದರ, ತಾಯಿ ಮತ್ತು ತಂದೆಯನ್ನು ಬಂಧಿಸಿದ್ದಾರೆ. ಈ ಕೃತ್ಯದ ಕಂಪ್ಲೀಟ್ ಚಿತ್ರಣ ಇಲ್ಲಿದೆ.

ನಿಕ್ಕಿ ಭಾಟಿ

ನೋಯ್ಡಾ: ಗ್ರೇಟರ್ ನೋಯ್ಡಾದಲ್ಲಿ (Greater Noida) ವರದಕ್ಷಿಣೆಗಾಗಿ (Dowry) 26 ವರ್ಷದ ನಿಕ್ಕಿಯನ್ನು ಆಕೆಯ ಪತಿ ವಿಪಿನ್ ಭಾಟಿ ಮತ್ತು ಸಂಬಂಧಿಕರು ಕೊಂದ (killed) ಘಟನೆಯಲ್ಲಿ ಕಳೆದ 24 ಗಂಟೆಗಳಲ್ಲಿ ಹಲವು ಬೆಳವಣಿಗೆಗಳು ನಡೆದಿವೆ. ಆಗಸ್ಟ್ 21 ರಂದು ನಿಕ್ಕಿಯನ್ನು ಹಿಂಸಿಸಿ ಬೆಂಕಿ ಹಚ್ಚಲಾಗಿತ್ತು. ಅವರನ್ನು ನೋಯ್ಡಾದ ಫೋರ್ಟಿಸ್ ಆಸ್ಪತ್ರೆಯಿಂದ ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟರು. ಈ ದಾರುಣ ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್(Viral Video) ಆಗಿವೆ.
ಘಟನೆಯ ಪ್ರಮುಖ ಬೆಳವಣಿಗೆಗಳು
- ಶನಿವಾರ (ಆಗಸ್ಟ್ 23), ನಿಕ್ಕಿಯ ಸಹೋದರಿ ಕಾಂಚನ್ ಅವರ ದೂರಿನ ಆಧಾರದ ಮೇಲೆ ವಿಪಿನ್ ಭಾಟಿಯನ್ನು ಬಂಧಿಸಲಾಯಿತು.
- ಭಾನುವಾರ (ಆಗಸ್ಟ್ 24), ಆತನ ತಾಯಿ ದಯಾ (55) ಬಂಧನಕ್ಕೊಳಗಾದರು.
- ಸೋಮವಾರ (ಆಗಸ್ಟ್ 25), ಸಂತ್ರಸ್ತೆಯ ಸೋದರ ಮಾವ ರೋಹಿತ್ ಭಾಟಿ (28) ಮತ್ತು ಆಕೆಯ ಮಾವ ಸತ್ಯ ವೀರ್ (55) ಅವರನ್ನು ಅವರನ್ನು ಕಾಸ್ನಾ ಪೊಲೀಸರು ಬಂಧಿಸಿದರು. ಈ ಇಬ್ಬರು ಆಗಸ್ಟ್ 21 ರಿಂದ ತಲೆಮರೆಸಿಕೊಂಡಿದ್ದರು. ಈ ಬಂಧನದೊಂದಿಗೆ, ಎಫ್‌ಐಆರ್‌ನಲ್ಲಿ ಉಲ್ಲೇಖಿತ ಎಲ್ಲ ನಾಲ್ವರು ಆರೋಪಿಗಳು ವಶದಲ್ಲಿದ್ದಾರೆ.
- ಕಾಂಚನ್, ರೋಹಿತ್‌ನ ಪತ್ನಿ ಸಾಮಾಜಿಕ ಜಾಲತಾಣದಲ್ಲಿ ದೃಶ್ಯಾವಳಿಗಳನ್ನು ಹಂಚಿಕೊಂಡಿದ್ದಾರೆ—ಒಂದರಲ್ಲಿ ವಿಪಿನ್ ನಿಕ್ಕಿಯ ಕೂದಲನ್ನು ಎಳೆಯುತ್ತಿರುವುದು, ಇನ್ನೊಂದರಲ್ಲಿ ಆಕೆಗೆ ಬೆಂಕಿ ಹೊತ್ತಿಕೊಂಡಿರುವುದು ಕಾಣಿಸುತ್ತದೆ.
- ಭಾನುವಾರ, ಸಾಕ್ಷ್ಯ ಸಂಗ್ರಹಕ್ಕಾಗಿ ವಿಪಿನ್‌ನನ್ನು ಘಟನಾಸ್ಥಳಕ್ಕೆ ಕರೆದೊಯ್ಯುವಾಗ, ಆತ ಸಬ್-ಇನ್‌ಸ್ಪೆಕ್ಟರ್‌ನ ಬಂದೂಕು ಕಸಿದುಕೊಂಡು ಓಡಲು ಯತ್ನಿಸಿದ. ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿದರು. ಆತ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಈ ಸುದ್ದಿಯನ್ನು ಓದಿ: Viral Video: ರಸ್ತೆಯ ಮಧ್ಯದಲ್ಲಿ ಅನಿರೀಕ್ಷಿತವಾಗಿ ಇಳಿದ ಹಾಟ್ ಏರ್ ಬಲೂನ್; ವಿಡಿಯೊ ವೈರಲ್
- “ನನಗೆ ಯಾವುದೇ ಪಶ್ಚಾತ್ತಾಪವಿಲ್ಲ, ನಿಕ್ಕಿ ಸ್ವಯಂ ಆತ್ಮಹತ್ಯೆ ಮಾಡಿಕೊಂಡಳು” ಎಂದು ಪತಿ ವಿಪಿನ್ ಹೇಳಿದ್ದಾನೆ. ಆದರೆ, ತನಿಖೆಯಲ್ಲಿ ಆತ ನಿಕ್ಕಿಯ ಇನ್‌ಸ್ಟಾಗ್ರಾಮ್ ರೀಲ್ಸ್ ಮತ್ತು ಬ್ಯೂಟಿ ಪಾರ್ಲರ್ ಮರುಪ್ರಾರಂಭದ ವಿಷಯದಲ್ಲಿ ವಾಗ್ವಾದದಿಂದ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ.
- ನಿಕ್ಕಿಯ ಮರ್ಸಿಡಿಸ್ ಕಾರು ಚಲಾಯಿಸುತ್ತಿರುವ ಹಳೆಯ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Nikki's sister kanchan is posting dumb videos of their Mercedes to cry on insta pic.twitter.com/iAfjgwBdRR
— KARNA (@S_Karna002) August 25, 2025
- ರಾಷ್ಟ್ರೀಯ ಮಹಿಳಾ ಆಯೋಗವು ಈ ಕೃತ್ಯವನ್ನು ಖಂಡಿಸಿ, 75 ವರ್ಷಗಳ ಸ್ವಾತಂತ್ರ್ಯದ ನಂತರವೂ ಇಂತಹ ಘಟನೆಗಳು ಸಮಾಜವನ್ನು ಬೆಚ್ಚಿಬೀಳಿಸಿವೆ ಎಂದಿದೆ.
- ಸಂತ್ರಸ್ತೆಯ ತಂದೆ ಆರೋಪಿಗಳನ್ನು ಎನ್‌ಕೌಂಟರ್ ಮಾಡಬೇಕು ಮತ್ತು ಅವರ ಮನೆಯನ್ನು ಧ್ವಂಸಗೊಳಿಸುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಒತ್ತಾಯಿಸಿದರು. ವಿಪಿನ್ ಮದುವೆಯ ಸಮಯದಲ್ಲಿ ಸ್ಕಾರ್ಪಿಯೋ, ಬುಲೆಟ್ ಬೈಕ್ ಮತ್ತು ಚಿನ್ನಕ್ಕೆ ಬೇಡಿಕೆಯಿಟ್ಟಿದ್ದ. ನಾವು ಎಲ್ಲವನ್ನೂ ನೀಡಿದ್ದೇವೆ ಎಂದು ಅವರು ಹೇಳಿದರು, ಆದರೆ ಮದುವೆಯಾದ ಒಂಬತ್ತು ವರ್ಷಗಳ ನಂತರ 36 ಲಕ್ಷ ರೂ. ವರದಕ್ಷಿಣೆ ಬೇಡಿಕೆಯ ಮೇರೆಗೆ ಅವರು ಆಕೆಯನ್ನು ಕೊಂದಿದ್ದಾರೆ. ಈ ಜೋಡಿ 2016 ರಲ್ಲಿ ವಿವಾಹವಾಗಿತ್ತು.