Narendra Modi: "ಅಂಗಡಿಗಳ ಹೊರಗೆ 'ಸ್ವದೇಶಿ' ಬೋರ್ಡ್‌ಗಳನ್ನು ಇರಿಸಿ"; ಸುಂಕ ನೀತಿಗೆ ಸೆಡ್ಡು ಹೊಡೆಯಲು ಮೋದಿ ಅಸ್ತ್ರ
ವ್ಯಾಪಾರಿಗಳು ತಮ್ಮ ಸಂಸ್ಥೆಗಳ ಹೊರಗೆ ಸ್ವದೇಶಿ ಸರಕುಗಳನ್ನು ಮಾರಾಟ ಮಾಡುತ್ತಾರೆ ಎಂದು ಹೇಳುವ ದೊಡ್ಡ ಫಲಕವನ್ನು ಇಡಬೇಕು" ಎಂದು ಪ್ರಧಾನಿ ಹೇಳಿದ್ದಾರೆ. ಅಮೆರಿಕ ವಿಧಿಸಿರುವ ಸುಂಕದ ವಿರುದ್ಧ ಭಾರತ ಸಮರ ಸಾರಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಸ್ವದೇಶಿ ಅಥವಾ ದೇಶೀಯ ಸರಕುಗಳ ಬಳಕೆಗೆ ಒತ್ತು ನೀಡಿದ್ದಾರೆ.


ನವದೆಹಲಿ: ಅಮೆರಿಕ ವಿಧಿಸಿರುವ ಸುಂಕದ ವಿರುದ್ಧ ಭಾರತ ಸಮರ ಸಾರಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮತ್ತೊಮ್ಮೆ ಸ್ವದೇಶಿ ಅಥವಾ ದೇಶೀಯ ಸರಕುಗಳ ಬಳಕೆಗೆ ಒತ್ತು ನೀಡಿದ್ದಾರೆ. ಭಾರತೀಯ ಸರಕುಗಳ ಮೇಲೆ ಶೇಕಡಾ 50 ರಷ್ಟು ಯುಎಸ್ ಸುಂಕ ಪ್ರಾರಂಭವಾಗುವ ಎರಡು ದಿನಗಳ ಮೊದಲು ಪ್ರಧಾನಿಯವರ ಹೇಳಿಕೆ ಬಂದಿದೆ. ಭಾರತದಿಂದ ತನ್ನ ಪ್ರಮುಖ ರಫ್ತು ಮಾರುಕಟ್ಟೆಗೆ ಸರಕುಗಳ ಮೇಲೆ ಶೇಕಡಾ 50 ರಷ್ಟು ಅಮೆರಿಕನ್ ಸುಂಕವನ್ನು ವಿಧಿಸಲು ಟ್ರಂಪ್ ಆಡಳಿತವು ನಿಗದಿಪಡಿಸಿದ ಗಡುವು ಆಗಸ್ಟ್ 27 ಆಗಿದೆ.
ವ್ಯಾಪಾರಿಗಳು ತಮ್ಮ ಸಂಸ್ಥೆಗಳ ಹೊರಗೆ ಸ್ವದೇಶಿ ಸರಕುಗಳನ್ನು ಮಾರಾಟ ಮಾಡುತ್ತಾರೆ ಎಂದು ಹೇಳುವ ದೊಡ್ಡ ಫಲಕವನ್ನು ಇಡಬೇಕು" ಎಂದು ಪ್ರಧಾನಿ ಹೇಳಿದ್ದಾರೆ. ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮೋದಿ ಈಗ ನವರಾತ್ರಿ, ವಿಜಯ ದಶಮಿ (ದಸರಾ), ಧಂತೇರಸ್, ದೀಪಾವಳಿ, ಈ ಎಲ್ಲಾ ಹಬ್ಬಗಳು ಬರಲಿವೆ, ಇವು ನಮ್ಮ ಸಂಸ್ಕೃತಿಯ ಆಚರಣೆಗಳು ಆದರೆ ಅವು ಸ್ವಾವಲಂಬನೆಯ ಆಚರಣೆಗಳೂ ಆಗಿರಬೇಕು. ಆದ್ದರಿಂದ, ನಾವು ನಮ್ಮ ಜೀವನದಲ್ಲಿ ಒಂದು ಮಂತ್ರವನ್ನು ಅಳವಡಿಸಿಕೊಳ್ಳಬೇಕು ಎಂಬ ನನ್ನ ವಿನಂತಿಯನ್ನು ಮತ್ತೊಮ್ಮೆ ನಿಮಗೆ ಪುನರುಚ್ಚರಿಸಲು ಬಯಸುತ್ತೇನೆ: ನಾವು ಏನೇ ಖರೀದಿಸಿದರೂ ಅದು 'ಭಾರತದಲ್ಲಿ ತಯಾರಿಸಲ್ಪಟ್ಟ ವಸ್ತುಗಳನ್ನು ನಾವು ಬಳಸಬೇಕು ಎಂದು ಅವರು ಸೂಚನೆ ನೀಡಿದ್ದಾರೆ.
ವ್ಯವಹಾರಗಳು ಇತರ ದೇಶಗಳಿಂದ ಬರುವ ವಸ್ತುಗಳನ್ನು ಮಾರಾಟ ಮಾಡುವುದನ್ನು ತಡೆಯುವಂತೆ ನಾನು ಪ್ರೋತ್ಸಾಹಿಸುತ್ತೇನೆ. ಈ ಸಣ್ಣ ಆದರೆ ಪರಿಣಾಮಕಾರಿ ಹೆಜ್ಜೆಗಳು ನಮ್ಮ ರಾಷ್ಟ್ರದ ಪ್ರಗತಿ ಮತ್ತು ಸಮೃದ್ಧಿಯನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಅವರು ಹೇಳಿದ್ದಾರೆ. ನಮ್ಮ ಎಲ್ಲಾ ಅಂಗಡಿಗಳಲ್ಲಿ ನಾನು ಸ್ವದೇಶಿ ಉತ್ಪನ್ನಗಳನ್ನು ಮಾತ್ರ ಮಾರುತ್ತೇನೆ ಎಂದು ಬೋರ್ಡ್ ಹಾಕಿ ಎಂದು ಮೋದಿ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: PM Modi: ವಿಶ್ವದಲ್ಲೇ ಭಾರತ ಈಗ ಮೂರನೇ ಅತಿದೊಡ್ಡ ಮೆಟ್ರೋ ಜಾಲವನ್ನು ಹೊಂದಿದೆ- ಮೋದಿ
ಅಮೆರಿಕ ಹಾಗೂ ಭಾರತದ ನಡುವಿನ ಸುಂಕ ಸಮರದ ಬಳಿಕ ಮೋದಿ ಅವರಿಂದ ಈ ಹೇಳಿಕೆ ಆಗಿದೆ. ಸಣ್ಣ ಉದ್ಯಮಿಗಳು, ರೈತರು ಮತ್ತು ಜಾನುವಾರು ಸಾಕಣೆದಾರರಿಗೆ ಯಾವುದೇ ಹಾನಿಯಾಗಲು ತಮ್ಮ ಸರ್ಕಾರ ಬಿಡುವುದಿಲ್ಲ ಎಂದು ಹೇಳಿದ್ದಾರೆ. ಒಳಬರುವ "ಒತ್ತಡ" ಏನೇ ಇರಲಿ, ಭಾರತವು ಅದನ್ನು ಸಹಿಸಿಕೊಳ್ಳುತ್ತದೆ ಮತ್ತು ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಲೇ ಇರುತ್ತದೆ ಎಂದು ಮೋದಿ ತಿಳಿಸಿದ್ದಾರೆ.