ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮದುವೆಯಾಗುವಂತೆ ಪೀಡಿಸಿ ಇನ್‌ಫ್ಲುಯೆನ್ಸರ್ ಮನೆಗೆ ನುಗ್ಗಿದ ಅಭಿಮಾನಿ; ಹೊಡೆದು ಕೊಂದ ಕುಟುಂಬಸ್ಥರು!

Crime News: ಪ್ರೀತಿ ಎಲ್ಲಿ ಹೇಗೆ ಹುಟ್ಟುತ್ತೆ ಎಂದು ಹೇಳಲಾಗುವುದಿಲ್ಲ, ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್‌ ಮಾಡ್ತಿದ್ದ ಇನ್‌ಫ್ಲುಯೆನ್ಸರ್ ಮೇಲೆ ಯುವಕನೊಬ್ಬನಿಗೆ ಒನ್‌ ಸೈಡ್‌ ಲವ್‌ ಆಗಿದ್ದು, ಹುಚ್ಚಾಟಕ್ಕೆ ತನ್ನ ಪ್ರಾಣವನ್ನೇ ಕಳೆದುಕೊಂಡ ಘಟನೆ ದೆಹಲಿಯಲ್ಲಿ ನಡೆದಿದೆ.

ಸಂಗ್ರಹ ಚಿತ್ರ

ನವದೆಹಲಿ: ಪ್ರೀತಿ ಎಲ್ಲಿ ಹೇಗೆ ಹುಟ್ಟುತ್ತೆ ಎಂದು ಹೇಳಲಾಗುವುದಿಲ್ಲ, ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್‌ ಮಾಡ್ತಿದ್ದ ಇನ್‌ಫ್ಲುಯೆನ್ಸರ್ ಮೇಲೆ ಯುವಕನೊಬ್ಬನಿಗೆ ಒನ್‌ ಸೈಡ್‌ ಲವ್‌ ಆಗಿದ್ದು, ಹುಚ್ಚಾಟಕ್ಕೆ ತನ್ನ ಪ್ರಾಣವನ್ನೇ ಕಳೆದುಕೊಂಡ ಘಟನೆ ದೆಹಲಿಯಲ್ಲಿ ನಡೆದಿದೆ. (Crime News) ಇನ್‌ಸ್ಟಾಗ್ರಾಮ್‌ನಲ್ಲಿ 6 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿರುವ ನೇಹಾ ಬಿಷ್ತ್ (Neha Bisht) ಅವರು ತಮ್ಮ ಸಂಗಾತಿಯೊಟ್ಟಿಗೆ ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು.

ನೇಹಾ ಬಿಷ್ತ್ ಅವರನ್ನು ಉತ್ತರ ಪ್ರದೇಶಧ ಘಾಜಿಪುರ ಮೂಲದ ಅಭಿನವ್‌ ಎಂಬಾತ ಏಕಪಕ್ಷೀಯವಾಗಿ ಪ್ರೀತಿಸುತ್ತಿದ್ದ. ಆಕೆಯ ಮದುವೆ ವಿಚಾರ ತಿಳಿದು ತೀವ್ರ ಅಸಮಾಧಾನಗೊಂಡಿದ್ದನು. ಇದೇ ಕಾರಣಕ್ಕೆ ಚೆನ್ನೈನಿಂದ ದೆಹಲಿಗೆ ಬಂದಿದ್ದ ಆತ, ನವೆಂಬರ್ 7 ರಂದು ಮದ್ಯದ ಅಮಲಿನಲ್ಲಿ ನೇಹಾ ಅವರ ಮನೆಗೆ ಬಲವಂತವಾಗಿ ನುಗ್ಗಿ ತನ್ನನ್ನೇ ಮದುವೆಯಾಗುವಂತೆ ಪಟ್ಟು ಹಿಡಿದಿದ್ದಾನೆ ಎನ್ನಲಾಗಿದೆ.

ಇದರಿಂದ ತೀವ್ರ ಆಕ್ರೋಶಗೊಂಡ ನೇಹಾ ಕುಟುಂಬಸ್ಥರು ಹಾಗೂ ಸ್ಥಳೀಯರು ಅಭಿನವ್‌ನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ, ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನವೆಂಬರ್ 15 ರಂದು ಅಭಿನವ್ ಮೃತಪಟ್ಟಿದ್ದಾನೆ. ನೇಹಾ ಬಿಷ್ತ್ ತಂದೆ, ಪಕ್ಕದ ಮನೆಯವರ ಮೇಲೂ ಪ್ರಕರಣ ದಾಖಲಾಗಿದೆ. ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತನಿಖೆಯ ವೇಳೆ ಅಭಿನವ್ ಕೆಲವು ತಿಂಗಳ ಹಿಂದೆಯೂ ಅಭಿಮಾನಿಯ ಸೋಗಿನಲ್ಲಿ ನೇಹಾ ಅವರ ಮನೆಗೆ ಭೇಟಿ ನೀಡಿದ್ದ ಎಂಬುದು ತಿಳಿದುಬಂದಿದೆ. ಆದರೆ, ನೇಹಾ ಅವರಿಗೆ ಅಭಿನವ್ ಯಾರೆಂಬುದೇ ತಿಳಿದಿರಲಿಲ್ಲ ಎಂದು ವಿಚಾರಣೆಯಲ್ಲಿ ಆಕೆ ಹೇಳಿದ್ದಾಳೆ. ಸದ್ಯ ನೇಹಾ ತಂದೆಯ ಬಂಧನವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಫಿಟ್‌ನೆಸ್ ಇನ್‌ಫ್ಲುಯೆನ್ಸರ್‌ಗೆ ನಿರಂತರ ಕಿರುಕುಳ

ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಬೆಂಗಳೂರಿನ ಫಿಟ್‌ನೆಸ್ ಇನ್‌ಫ್ಲುಯೆನ್ಸರ್ ಒಬ್ಬರಿಗೆ ಸುಮಾರು ಒಂದು ವರ್ಷದಿಂದ ನಿರಂತರವಾಗಿ ಮಾನಸಿಕ ಹಾಗೂ ಲೈಂಗಿಕ ಕಿರುಕುಳ ನೀಡುತ್ತಿದ್ದ ಹರಿಯಾಣ ಮೂಲದ ಯುವಕನೊಬ್ಬನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಸುಧೀರ್ ಕುಮಾರ್ ಎಂದು ಗುರುತಿಸಲಾಗಿದೆ. ಕಳೆದ 15 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿರುವ ಹರಿಯಾಣ ಮೂಲದ 34 ವರ್ಷದ ಫಿಟ್‌ನೆಸ್ ಇನ್‌ಫ್ಲುಯೆನ್ಸರ್ ಹಾಗೂ ಪೌಷ್ಟಿಕತಜ್ಞೆಗೆ 2025ರ ಮಾರ್ಚ್ ತಿಂಗಳಿನಿಂದ ಆರೋಪಿ ಸುಧೀರ್ ಕುಮಾರ್ ಕಿರುಕುಳ ನೀಡಲು ಆರಂಭಿಸಿದ್ದನು.

ಉತ್ತರಾಖಂಡ ಕಾಂಗ್ರೆಸ್‌ ನಾಯಕನ ವಿರುದ್ಧ ಲೈಂಗಿಕ ಕಿರುಕುಳ ಆರೋಪ; ಡಿಎನ್‌ಎ ಟೆಸ್ಟ್‌ಗೆ ಮಹಿಳೆ ಆಗ್ರಹ: ಮತ್ತೆ ಸದ್ದು ಮಾಡಿದ ʼಜೆನ್ನಿ ಎಪಿಸೋಡ್‌ʼ

ಯುವತಿ ಎಚ್ಚರಿಕೆ ನೀಡಿದರೂ ಸುಮ್ಮನಾಗದ ಆರೋಪಿ, ವಾಟ್ಸಾಪ್ ಮೂಲಕ ಅಶ್ಲೀಲ ಸಂದೇಶಗಳನ್ನು ಕಳುಹಿಸಿ ಲೈಂಗಿಕ ದೌರ್ಜನ್ಯದ ಬೆದರಿಕೆ ಹಾಕಿದ್ದನು. ಇನ್‌ಸ್ಟಾಗ್ರಾಮ್‌ನಲ್ಲಿ ಬ್ಲಾಕ್ ಮಾಡಿದರೂ, ಹಲವು ನಕಲಿ ಖಾತೆಗಳನ್ನು ತೆರೆದು ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ನಿರಂತರವಾಗಿ ಪ್ರಚೋದನಕಾರಿ ಸಂದೇಶಗಳನ್ನು ಕಳುಹಿಸಿದ್ದಾನೆ. ಅಷ್ಟೇ ಅಲ್ಲದೇ ಆಕೆಯನ್ನು ಹಿಂಬಾಲಿಸಿಕೊಂಡು ಹೋಗುತ್ತಿದ್ದ. ನಿರಂತರ ಕಿರುಕುಳದಿಂದ ಬೇಸತ್ತ ಇನ್‌ಫ್ಲುಯೆನ್ಸರ್ ಬೆಂಗಳೂರು ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಆತನ ಬಂಧನವಾಗಿದೆ.

Vishakha Bhat Heggar

View all posts by this author