ಮಾಸ್ಕೋ: ಉಕ್ರೇನ್ (Ukraine) ನಡೆಸಿದ ಡ್ರೋನ್ ದಾಳಿಗೆ (Ukrainian drone strike)_ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಸುಮಾರು ಒಂದು ತಿಂಗಳ ಹಿಂದೆಯಷ್ಟೇ ಉದ್ಯೋಗ ಅರಸಿಕೊಂಡು ರಷ್ಯಾಕ್ಕೆ(Russia) ಬಂದಿದ್ದ ಒಡಿಶಾ ಮೂಲದ ವ್ಯಕ್ತಿಯೊಬ್ಬರು ಭಾನುವಾರ ಮಾಸ್ಕೋದಲ್ಲಿ ಡ್ರೋನ್ ದಾಳಿಗೆ (drone attack) ತುತ್ತಾಗಿ ಸಾವನ್ನಪ್ಪಿದ್ದಾರೆ. ಒಡಿಶಾದ ಚಿಕಿಟಿ ಬ್ಲಾಕ್‌ನ ಮಧಬಂಧ ಗ್ರಾಮದ ನಿವಾಸಿ ರಮೇಯ ಮೃತರು. ರಮೇಯ ಅವರ ಸ್ನೇಹಿತರು ಅವರ ಸಾವಿನ ಬಗ್ಗೆ ಕುಟುಂಬಕ್ಕೆ ಮಾಹಿತಿ ನೀಡಿದ್ದು, ಬಳಿಕ ಅವರ ಮೃತದೇಹವನ್ನು ತವರಿಗೆ ತರಲು ಕುಟುಂಬವು ಅಧಿಕಾರಿಗಳನ್ನು ಸಂಪರ್ಕಿಸಿದೆ ಎನ್ನಲಾಗಿದೆ.
ಉದ್ಯೋಗ ಹುಡುಕಿಕೊಂಡು ಒಂದು ತಿಂಗಳ ಹಿಂದೆ ಒಡಿಶಾದ ರಮೇಯ ಅವರು ಮಾಸ್ಕೋಗೆ ಪ್ರಯಾಣ ಬೆಳೆಸಿದ್ದರು. ಆದರೆ ಭಾನುವಾರ ಉಕ್ರೇನಿಯನ್ ಮಾಸ್ಕೋ ಮೇಲೆ ನಡೆಸಿದ ಡ್ರೋನ್ ದಾಳಿಯಲ್ಲಿ ಅವರು ಸಾವನ್ನಪ್ಪಿದ್ದಾರೆ. ಒಡಿಶಾದ ಚಿಕಿಟಿ ಬ್ಲಾಕ್‌ನ ಮಧಬಂಧ ಗ್ರಾಮದ ನಿವಾಸಿಯಾಗಿದ್ದ ರಮೇಯ ಅವರ ಸಾವಿನ ಬಗ್ಗೆ ಅವರ ಸ್ನೇಹಿತ ಕುಟುಂಬಕ್ಕೆ ಮಾಹಿತಿ ನೀಡಿದರು. ಇದರ ಬಳಿಕ ಅವರ ಶವವನ್ನು ಮನೆಗೆ ತರಲು ಕುಟುಂಬವು ಗಂಜಾಂ ಜಿಲ್ಲಾ ಕಲೆಕ್ಟರ್ ಕೀರ್ತಿ ವಾಸನ್ ವಿ. ಅವರನ್ನು ಸಂಪರ್ಕಿಸಿತ್ತು.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಗಂಜಾಂ ಜಿಲ್ಲಾ ಕಲೆಕ್ಟರ್ ಕೀರ್ತಿ ವಾಸನ್ ವಿ., ಮಾಸ್ಕೋದಲ್ಲಿ ರಮೇಯ ಅವರ ಸಾವಿನ ಬಗ್ಗೆ ಮಾಹಿತಿ ಸಿಕ್ಕಿದೆ. ಇದು ದುರದೃಷ್ಟಕರ. ದೆಹಲಿಯಲ್ಲಿರುವ ನಿವಾಸ ಆಯುಕ್ತರ ಕಚೇರಿಯನ್ನು ಸಂಪರ್ಕಿಸಿದ್ದೇವೆ. ಅವರ ಮೃತದೇಹವನ್ನು ಒಡಿಶಾಗೆ ತರಲು ಶಿಷ್ಟಾಚಾರದ ಪ್ರಕಾರ ನಿವಾಸ ಆಯೋಗವು ರಾಜತಾಂತ್ರಿಕ ಮಾರ್ಗಗಳ ಮೂಲಕ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸುತ್ತಿದೆ. ಸಾಧ್ಯವಾದಷ್ಟು ಬೇಗ ಅವರ ಮೃತದೇಹವನ್ನು ತವರಿಗೆ ತರಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.
ಯುಎಇ ಧ್ವಜದ ಮೇಲೆ ಗುಂಡು ಹಾರಿಸಿದ ಇರಾನಿನ ಟಿವಿ ನಿರೂಪಕ
ಮಾಸ್ಕೋ ಪ್ರದೇಶದಲ್ಲಿ ಉಕ್ರೇನಿಯನ್ ಡ್ರೋನ್ ದಾಳಿಯಲ್ಲಿ ಸುಮಾರು ಮೂವರು ಸಾವನ್ನಪ್ಪಿದ್ದಾರೆ. ಇತರ ಕಡೆ ನಡೆದ ದಾಳಿಗಳಲ್ಲಿ 12 ಮಂದಿ ಗಾಯಗೊಂಡಿದ್ದಾರೆ. ಉಕ್ರೇನ್ ನಡೆಸುತ್ತಿರುವ ಬೃಹತ್ ಡ್ರೋನ್ ದಾಳಿಯನ್ನು ಹಿಮ್ಮೆಟ್ಟಿಸಲು ರಷ್ಯಾ ಪ್ರಯತ್ನಿಸುತ್ತಿದೆ. ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಪ್ರಾರಂಭವಾದ ಬಳಿಕ ರಷ್ಯಾ ವಿರುದ್ಧ ನಡೆದ ಅತಿ ದೊಡ್ಡ ದಾಳಿಗಳಲ್ಲಿ ಇದು ಒಂದಾಗಿದೆ ಎಂದು ರಷ್ಯಾದ ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.