ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Murder Case: ಪತ್ನಿಯ ಜೊತೆ ಸಲಿಗೆ ಬೆಳೆಸಿದ ಗೆಳೆಯನಿಗೆ ಇರಿದು ಹತ್ಯೆ

ಗೆಳೆಯ ಪತ್ನಿಯ ಮನೆಗೆ ಬಂದಾಗ ಆರೋಪಿ ಜಗಳವಾಡಿ, ಆತನಿಗೆ ಹಲವು ಬಾರಿ ಇರಿದಿದ್ದಾನೆ. ನಂತರ ಅಪರಾಧ ನಡೆದ ಸ್ಥಳದಲ್ಲಿಯೇ ಕುಳಿತಿದ್ದು, ತಪ್ಪಿಸಿಕೊಳ್ಳಲು ಯಾವುದೇ ಪ್ರಯತ್ನ ಮಾಡಿರಲಿಲ್ಲ. ದಾರಿಹೋಕರೊಬ್ಬರು ತಕ್ಷಣ ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದರು.

ಪತ್ನಿಯ ಜೊತೆ ಸಲಿಗೆ ಬೆಳೆಸಿದ ಗೆಳೆಯನಿಗೆ ಇರಿದು ಹತ್ಯೆ

ಸಾಂದರ್ಭಿಕ ಚಿತ್ರ

ಹರೀಶ್‌ ಕೇರ ಹರೀಶ್‌ ಕೇರ Feb 24, 2025 7:47 AM

ಬೆಂಗಳೂರು: ತನ್ನ ಪತ್ನಿಯ ಜೊತೆಗೆ ಸಲಿಗೆಯಿಂದ ವರ್ತಿಸುತ್ತಿದ್ದ ಗೆಳೆಯನನ್ನು ಅನೈತಿಕ ಸಂಬಂಧದ (Illeagal relationship) ಶಂಕೆ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಚಾಕುವಿನಿಂದ (Stabbing) ಇರಿದು ಹತ್ಯೆ (Murder Case) ಮಾಡಿದ ಘಟನೆ ವರ್ತೂರು (Bengaluru Crime news) ಬಳಿಯ ಕೊಡತಿಯಲ್ಲಿ ನಡೆದಿದೆ. ಚಿತ್ರದುರ್ಗ ಮೂಲದ ಕಿಶೋರ್ ಮೃತ ವ್ಯಕ್ತಿ. ಕೆಜಿಎಫ್ ಮೂಲದ ಸತೀಶ್ ರೆಡ್ಡಿ ಬಂಧಿತ ಆರೋಪಿ. ಮೃತ ವ್ಯಕ್ತಿ ಮತ್ತು ಆರೋಪಿ ಇಬ್ಬರೂ ಆಪ್ತ ಸ್ನೇಹಿತರಾಗಿದ್ದರು.

ಕಿಶೋರ್, ಸಂತೋಷ್ ರೆಡ್ಡಿಯ ಪತ್ನಿಗೆ ಆಪ್ತರಾಗಿದ್ದರು ಮತ್ತು ನಿಯಮಿತವಾಗಿ ಅವರ ಮನೆಗೆ ಭೇಟಿ ನೀಡುತ್ತಿದ್ದರು ಎಂದು ವರದಿಯಾಗಿದೆ. ರೆಡ್ಡಿ ಕಿಶೋರ್‌ನನ್ನು ತನ್ನ ಮನೆಗೆ ಬರದಂತೆ ಎಚ್ಚರಿಸಿದ್ದ. ಸಂತೋಷ್ ಪತ್ನಿ ಕೊಡತಿಯಲ್ಲಿ ಬಾಡಿಗೆ ಮನೆಯಲ್ಲಿ ತನ್ನ ಮಕ್ಕಳು ಮತ್ತು ತಾಯಿಯೊಂದಿಗೆ ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದರು. ಕಿಶೋರ್ ಆಕೆಯನ್ನು ನೋಡಲು ನಿಯಮಿತವಾಗಿ ಬರುತ್ತಿದ್ದ. ಮನೆ ಮಾಲೀಕರಿಗೆ ಅವನನ್ನು ತನ್ನ ಸಹೋದರ ಎಂದು ಪರಿಚಯಿಸಿದ್ದರು.

ಶುಕ್ರವಾರ ಸಂಜೆ 7.30ರ ಸುಮಾರಿಗೆ ಸಂತೋಷ್ ರೆಡ್ಡಿ ಚಾಕುವಿನೊಂದಿಗೆ ಬಂದು ತನ್ನ ಪತ್ನಿಯ ಮನೆಯ ಬಳಿ ಹೊಂಚು ಹಾಕಿದ್ದ. ಕಿಶೋರ್ ಬಂದಾಗ, ಜಗಳವಾಡಿ, ಆತನಿಗೆ ಹಲವು ಬಾರಿ ಇರಿದಿದ್ದಾನೆ. ನಂತರ ರೆಡ್ಡಿ ಅಪರಾಧ ನಡೆದ ಸ್ಥಳದಲ್ಲಿಯೇ ಕುಳಿತಿದ್ದು, ತಪ್ಪಿಸಿಕೊಳ್ಳಲು ಯಾವುದೇ ಪ್ರಯತ್ನ ಮಾಡಿರಲಿಲ್ಲ. ದಾರಿಹೋಕರೊಬ್ಬರು ತಕ್ಷಣ ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದರು. ಪೊಲೀಸರು ಅಪರಾಧ ನಡೆದ ಸ್ಥಳದಿಂದ ಆರೋಪಿಯನ್ನು ಕರೆದೊಯ್ದರು. ಆರೋಪಿ ಸಂತೋಷ್ ಪತ್ನಿ ಕಿಶೋರ್‌ನನ್ನು ಆಸ್ಪತ್ರೆಗೆ ದಾಖಲಿಸಿದ್ದಳು.

ಕೆರೆಗೆ ತೆರಳಿದ ಬಾಲಕರಿಬ್ಬರು ಮುಳುಗಿ ಸಾವು

ಹಾವೇರಿ: ಬಹಿರ್ದೆಸೆ ಮುಗಿಸಿದ ಬಳಿಕ ಕೆರೆಗೆ ತೆರಳಿ ಕೈಕಾಲು ತೊಳೆಯುತ್ತಿದ್ದ ವೇಳೆ ಕಾಲು ಜಾರಿ ಬಿದ್ದು ಬಾಲಕರಿಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಹಾವೇರಿಯಲ್ಲಿ ನಡೆದಿದೆ. ಹಾವೇರಿಯ ಹಾನಗಲ್ ತಾಲೂಕಿನ ಕೊಪ್ಪರಸಿಕೊಪ್ಪ ಗ್ರಾಮದಲ್ಲಿ ಜಗದೀಶ್ ನಾಗೋಜಿ ಎಂಬುವರ ಪುತ್ರ ನಿಖಿಲ್ ನಾಗೋಜಿ(11) ಮತ್ತು ಪ್ರಕಾಶ್ ಚೋಳಪ್ಪನವರ್ ಎಂಬುವರ ಪುತ್ರ ಧನುಷ್ ಚೋಳಪ್ಪನವರ್ (13) ಎಂಬವರೇ ಮೃತ ಬಾಲಕರಾಗಿದ್ದಾರೆ.

ಈ ಇಬ್ಬರು ಗ್ರಾಮದ ಕಾರ್ಯಕ್ರಮವೊಂದಕ್ಕೆ ತೆರಳಿ, ಬಹಿರ್ದೆಸೆ ಮುಗಿಸಿ, ಕೆರೆಗೆ ಕೈಕಾಲು ತೊಳೆಯಲು ದೊಡ್ಡಕೆರೆಗೆ ಹೋಗಿದ್ದರು. ಈ ವೇಳೆಯಲ್ಲಿ ಕಾಲುಜಾರಿ ಕೆರೆಗೆ ಬಿದ್ದ ಒಬ್ಬನನ್ನು ರಕ್ಷಣೆ ಮಾಡಲು ಹೋಗಿ, ಇಬ್ಬರು ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟಿದ್ದವರ ಮೇಲೆ ಹರಿದ ಬಸ್‌, ಇಬ್ಬರು ಬಲಿ

ಹಾಸನ: ಪಾದಯಾತ್ರೆ ಮೂಲಕ ಧರ್ಮಸ್ಥಳಕ್ಕೆ (Dharmasthala) ಹೋಗುತ್ತಿದ್ದವರ ಮೇಲೆ ಖಾಸಗಿ ಬಸ್ ಹರಿದ (Road Accident) ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹಾಸನ (Hassan news) ತಾಲೂಕಿನ ಕೆಂಚಟ್ಟಹಳ್ಳಿ ಬಳಿ ನಡೆದಿದೆ. ಮಂಡ್ಯ (Mandya news) ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಆನಗೋಳು ಗ್ರಾಮದ ಸುರೇಶ್ (60), ಕುಮಾರ್ (55) ಮೃತ ದುರ್ದೈವಿಗಳು.

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ದಿನೇಶ್‌ ಎಂಬುವರನ್ನು ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮೂವರು ಪಾದಯಾತ್ರೆ ಮೂಲಕ ಧರ್ಮಸ್ಥಳಕ್ಕೆ ಹೋಗುತ್ತಿದ್ದರು. ದಾರಿ ಮಧ್ಯೆ ಖಾಸಗಿ ಬಸ್ ಪಾದಯಾತ್ರಿಗಳ ಮೇಲೆ ಹರಿದಿದೆ. ಶಾಂತಿಗ್ರಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಆತಂಕಗೊಂಡ ಬಸ್‌ ಚಾಲಕ ಬಸ್ಸನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಇದೀಗ ಬೆಂಗಳೂರು, ಮೈಸೂರು, ಮಂಡ್ಯ ಮುಂತಾದ ಕಡೆಗಳಿಂದ ಧರ್ಮಸ್ಥಳದತ್ತ ಪಾದಯಾತ್ರಿಗಳು ತೆರಳುವ ಸಮಯವಾಗಿದೆ. ಈ ಮಾರ್ಗದಲ್ಲಿ ಎಚ್ಚರದಿಂದ ನಡೆಯುವಂತೆ ಹಾಗೂ ವಾಹನ ಚಲಾಯಿಸುವಂತೆ ಪೊಲೀಸರು ಎಚ್ಚರಿಸಿದ್ದಾರೆ.

ಇದನ್ನೂ ಓದಿ: Murder Case: ಬೆಂಗಳೂರಲ್ಲಿ ಕಾಂಗ್ರೆಸ್​ ಮುಖಂಡನ ಬರ್ಬರ ಹತ್ಯೆ; ಶಾಸಕ ಹ್ಯಾರಿಸ್ ಜತೆ ಗುರುತಿಸಿಕೊಂಡಿದ್ದ ಹೈದರ್