ಟಿ20 ವಿಶ್ವಕಪ್ ಟೂರ್ನಿಯಲ್ಲಿನ ತಮ್ಮ ಕಹಿ ಅನುಭವವನ್ನು ತೆರೆದಿಟ್ಟ ಸಂಜು ಸ್ಯಾಮ್ಸನ್!
ಭಾರತ ತಂಡದ ಐಸಿಸಿ ಟಿ20 ವಿಶ್ವಕಪ್ ಗೆಲುವಿನಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸಿದ ಸಂಜು ಸ್ಯಾಮ್ಸನ್, ಟೂರ್ನಿಯ ಆರಂಭಿಕ ಹಂತದಲ್ಲಿ ತಾವು ಮಾನಸಿಕವಾಗಿ ಅನುಭವಿಸಿದ್ದ ಕಹಿ ಅನುಭವನ್ನು ತೆರೆದಿಟ್ಟಿದ್ದಾರೆ. ಭಾರತದ ಪ್ಲೇಯಿಂಗ್ XI ನಿಂದ ಪದೇ-ಪದೆ ಹೊರಗುಳಿದ ನಂತರದ ಸಮಯದಲ್ಲಿ "ಸಂಪೂರ್ಣವಾಗಿ ಮುರಿದುಹೋದ" ಅನುಭವವಾಗಿತ್ತು ಎಂದು ಬಹಿರಂಗಪಡಿಸಿದ್ದಾರೆ.
ಟಿ20 ವಿಶ್ವಕಪ್ ಟೂರ್ನಿಯಲ್ಲಿನ ತಮ್ಮ ಕಹಿ ಅನುಭವ ಹಂಚಿಕೊಂಡ ಸಂಜು ಸ್ಯಾಮ್ಸನ್. -
ನವದೆಹಲಿ: ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡ, 2026ರ ಐಸಿಸಿ ಟಿ20 ವಿಶ್ವಕಪ್ (ICC T20 World Cup 2026) ಟೂರ್ನಿಯಲ್ಲಿ ಪ್ರಶಸ್ತಿ ಗೆಲುವಿನ ಹಿಂದೆ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ (Sanju samson) ಕೂಡ ಇದ್ದಾರೆ. ಇವರು ಈ ಟೂರ್ನಿಯ ನಿರ್ಣಾಯಕ ಹಂತದಲ್ಲಿ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಭಾರತ ತಂಡ (India) ಮೂರನೇ ಚುಟುಕು ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಆದರೆ, ಈ ಟೂರ್ನಿಯ ಆರಂಭಿಕ ಹಂತದಲ್ಲಿ ಪ್ಲೇಯಿಂಗ್ XIನಲ್ಲಿ ಅವಕಾಶ ಸಿಗದೇ ಇದ್ದಾಗ ಅನುಭವಿಸಿದ್ದ ಮಾನಸಿಕ ಕಹಿ ಅನುಭವನ್ನು ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಬಹಿರಂಗಪಡಿಸಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಟಿ20ಐ ಸರಣಿಯಲ್ಲಿ ವೈಫಲ್ಯ ಅನುಭವಿಸಿದ ಬಳಿಕ ಇಶಾನ್ ಕಿಶನ್ ಅವರನ್ನು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿ ಪರಿಗಣಿಸಲಾಗಿತ್ತು. ಆದರೆ, ಅಭಿಷೇಕ್ ಶರ್ಮಾ ಅನಾರೋಗ್ಯಕ್ಕೆ ತುತ್ತಾದ ಬಳಿಕ ಸಂಜುಗೆ ಲೀಗ್ ಹಂತದಲ್ಲಿ ಕೇವಲ ನಮೀಬಿಯಾ ಎದು ಆಡಲು ಅವಕಾಶ ಸಿಕ್ಕಿತ್ತು. ಇಲ್ಲಿ ಅವರು ವಿಫಲರಾಗಿದ್ದರು. ನಂತರ ಸೂಪರ್-8ರ ಹಂತದಲ್ಲಿ ಜಿಂಬಾಬ್ವೆ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಗಮನವನ್ನು ಸೆಳೆದಿದ್ದರು. ನಂತರ ವೆಸ್ಟ್ ಇಂಡೀಸ್ ವಿರುದ್ಧ ಅಜೇಯ 97 ರನ್, ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್ ಹಾಗೂ ನ್ಯೂಜಿಲೆಂಡ್ ಎದುರು ಫೈನಲ್‌ನಲ್ಲಿ ತಲಾ 89 ರನ್‌ಗಳನ್ನು ಬಾರಿಸಿದ್ದರು. ಆ ಮೂಲಕ ಈ ಟೂರ್ನಿಯಲ್ಲಿ 321 ರನ್‌ಗಳನ್ನು ಸಿಡಿಸಿ ಟೂರ್ನಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ʻಫೈಯರ್ ಅಂಡ್ ಫೈಯರ್ʼ: ಅಭಿಷೇಕ್ ಶರ್ಮಾ ಜೊತೆಗಿನ ಜೊತೆಯಾಟದ ಬಗ್ಗೆ ಸಂಜು ಸ್ಯಾಮ್ಸನ್ ಪ್ರತಿಕ್ರಿಯೆ!
ಶನಿವಾರ ಇಂಡಿಯಾ ಟುಡೇ ಕಾನ್ಲೇವ್‌ನಲ್ಲಿ ಮಾತನಾಡಿದ ಸಂಜು ಸ್ಯಾಮ್ಸನ್, “ನನ್ನ ಕನಸು ತುಂಬಾ ಹತ್ತಿರದಲ್ಲಿದೆ ಎಂಬುದನ್ನು ತಿಳಿದಿದ್ದರಿಂದ ನಾನು ಅತ್ಯಂತ ಆತುರದಲ್ಲಿ ಇದ್ದೆ. ಆದರೆ ತಂಡ ಇನ್ನೂ ಕೆಲ ಸಂಯೋಜನೆಗಳನ್ನು ಪ್ರಯತ್ನಿಸುತ್ತಿದೆಯೆ? ಆದ್ದರಿಂದ, ನಾನು ಪ್ಲೇಯಿಂಗ್ XIನಲ್ಲಿ ಇದ್ದೇನಾ ಅಥವಾ ಇಲ್ಲವೇ? ಎಂಬ ಭಾವನೆ ನನ್ನ ಮನಸ್ಸಿನಲ್ಲಿ ತಿರುಗುತ್ತಿತ್ತು. ನನ್ನ ಕನಸು ವಿಶ್ವಕಪ್ ಗೆಲ್ಲುವುದಾಗಿದ್ದರೂ, ನಾನು ಪ್ಲೇಯಿಂಗ್ Xiನಲ್ಲಿ ಇರಲಿಲ್ಲ; ಆದ್ದರಿಂದ ನನಗೆ ಸಂಪೂರ್ಣವಾಗಿ ಮುರಿದು ಹೋಗಿದ್ದ ಭಾವನೆ ಉಂಟಾಗಿತ್ತು . ಸುಮಾರು 5-6 ದಿನಗಳ ಕಾಲ ನಾನು ತನ್ನನ್ನು ಸಿದ್ದತೆಯಲ್ಲಿ ತೊಡಗಿಸಿಕೊಂಡೆ, ಏಕೆಂದರೆ ಯಾವ ಪಂದ್ಯದಲ್ಲಿ ನಿಮಗೆ ಅವಕಾಶ ಸಿಗಬಹುದು ಹಾಗೂ ಯಾವ ಪ್ರತಿಫಲ ನಿಮಗೆ ಸಿಗಬಹುದು ಎಂಬುದು ನನಗೆ ತಿಳಿದಿರಲಿಲ್ಲ," ಎಂದು ಹೇಳಿದ್ದಾರೆ.
ʻಒಂದೇ ಒಂದು ಫೋನ್ ಕರೆ ಇಶಾನ್ ಕಿಶನ್‌ರ ಅದೃಷ್ಟ ಬದಲಿಸಿತುʼ: ಸೂರ್ಯಕುಮಾರ್ ಯಾದವ್!
"ನನಗಾಗಿ ನಾನು ಉತ್ತಮವಾದುದನ್ನು ಮಾಡುವುದಕ್ಕಿಂತ ಇತರರಿಗಾಗಿ ಒಳ್ಳೆಯ ಕೆಲಸವನ್ನು ಮಾಡುವಂತಹ ಹುಡುಗ ನಾನಾಗಿದ್ದೇನೆ. ನ್ಯೂಜಿಲೆಂಡ್ ವಿರುದ್ದದ ಟಿ20ಐ ಸರಣಿಯಲ್ಲಿ ತಂಡದಲ್ಲಿನ ನನ್ನ ಸ್ಥಾನಕ್ಕಾಗಿ ನಾನು ನಮ್ಮವರ ಎದುರು ಪೈಪೋಟಿ ನಡೆಸಬೇಕಾಗಿತ್ತು ಹಾಗೂ ಇದರಿಂದ ನಾನು ಆರಾಮದಾಯಕವಾಗಿರಲಿಲ್ಲ," ಎಂದು ಸಂಜು ಸ್ಯಾಮ್ಸನ್ ತಿಳಿಸಿದ್ದಾರೆ.