ನವದೆಹಲಿ: ಉತ್ತರ ಪ್ರದೇಶ (Uttar Pradesh), ದೆಹಲಿ (delhi), ಪಂಜಾಬ್‌ನಲ್ಲಿ (punjab) ದಾಳಿ (terror attack) ನಡೆಸಲು ಸಂಚು ರೂಪಿಸುತ್ತಿದ್ದ ಪಾಕಿಸ್ತಾನ (pakistan) ಮೂಲದ ಭಯೋತ್ಪಾದಕ ಘಟಕವನ್ನು (terror unit) ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ ಪತ್ತೆ ಹಚ್ಚಿದೆ. ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಬಂಧಿಸಲಾಗಿದ್ದು, ಇವರ ಘಟಕವು ಜನದಟ್ಟಣೆಯ ಆಸ್ಪತ್ರೆಗಳು, ರಾಜಕೀಯ ಪಕ್ಷದ ಕಚೇರಿ ಮತ್ತು ಶಾಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಸಂಚು ರೂಪಿಸಿದ್ದವು. ಇವರು ಪಾಕಿಸ್ತಾನ ಮೂಲದ ಭಯೋತ್ಪಾದಕರಾದ ಶಹಜಾದ್ ಭಟ್ಟಿ ಮತ್ತು ಅಬಿದ್ ಜಾಟ್ ಅವರೊಂದಿಗೆ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ.
ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ ಮತ್ತು ವಿಶೇಷ ಕಾರ್ಯಪಡೆ ಜಂಟಿ ಕಾರ್ಯಾಚರಣೆ ನಡೆಸಿ ಬುಧವಾರ ಪಾಕಿಸ್ತಾನದ ಭಯೋತ್ಪಾದಕರ ಜೊತೆ ನಂಟು ಹೊಂದಿದ್ದ ನಾಲ್ವರನ್ನು ಬಂಧಿಸಿದೆ. ಬಂಧಿತರನ್ನು ಮೆಹಕಬ್, ಗಗನ್‌ದೀಪ್ ಸಿಂಗ್ ಅಲಿಯಾಸ್ ಗುರಿ, ಶಾರುಖ್ ಮತ್ತು ಮುಷರಫ್ ಎಂದು ಗುರುತಿಸಲಾಗಿದೆ. ಇವರ ಘಟಕವು ದೆಹಲಿ, ಉತ್ತರ ಪ್ರದೇಶ ಮತ್ತು ಪಂಜಾಬ್‌ನಾದ್ಯಂತ ದಾಳಿಗಳನ್ನು ನಡೆಸಲು ಯೋಜನೆ ರೂಪಿಸಿತ್ತು ಎನ್ನಲಾಗಿದೆ.
ತ್ವಿಶಾ ಶರ್ಮಾ ಸಾವು ಕೇಸ್; ಸಿಬಿಐನಿಂದ ಅತ್ತೆ ಗಿರಿಬಾಲಾ ಸಿಂಗ್ ಬಂಧನ
ಮೆಹಕಬ್ ಮತ್ತು ಗಗನ್‌ದೀಪ್ ಸಿಂಗ್ ಅಲಿಯಾಸ್ ಈಗಾಗಲೇ ಹಲವು ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಅಲ್ಲಿ ವೀಕ್ಷಣೆ ಮಾಡಿ ಬಂದಿದ್ದರು. ಆದರೆ ಶಾರುಖ್ ಮತ್ತು ಮುಷರಫ್ ಅವರು ಆಸ್ಪತ್ರೆ ಸ್ಫೋಟ ನಡೆಸಲು ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಹುಡುಕುತ್ತಿದ್ದರು ಎನ್ನಲಾಗಿದೆ.
ಬಂಧಿತರಿಂದ ವಶ ಪಡಿಸಿಕೊಂಡಿರುವ ದಾಖಲೆಗಳ ಪ್ರಕಾರ ದೆಹಲಿ ಮತ್ತು ಪಂಜಾಬ್‌ನಲ್ಲಿ ಗುರುತಿಸಲಾದ ಕೆಲವು ಸ್ಥಳಗಳ ವಿಡಿಯೋ, ಚಿತ್ರಗಳನ್ನು ಪಾಕಿಸ್ತಾನ ಮೂಲದ ಭಯೋತ್ಪಾದಕರಿಗೆ ಕಳುಹಿಸಲಾಗಿದೆ. ಈ ಘಟಕವು ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ಸಂಗ್ರಹಿಸಿ ಬಳಿಕ ದಾಳಿ ನಡೆಸಬೇಕಿತ್ತು ಎನ್ನುವುದು ತನಿಖೆಯಿಂದ ತಿಳಿದು ಬಂದಿದೆ.
ಗಡಿಯಾಚೆಗಿನ ಭಯೋತ್ಪಾದನೆ ಮತ್ತು ಕ್ರಿಮಿನಲ್ ಜಾಲಗಳನ್ನು ನಿರ್ಮೂಲನೆ ಮಾಡುವಲ್ಲಿ ತನಿಖಾ ಸಂಸ್ಥೆಗಳಿಗೆ ಇದೊಂದು ಪ್ರಮುಖ ಯಶಸ್ಸು ಎಂದೇ ಪರಿಗಣಿಸಲಾಗಿದೆ. ಈವರೆಗೆ ಪಾಕಿಸ್ತಾನ ಮೂಲದ ಭಯೋತ್ಪಾದಕರಿಗೆ ಸಂಬಂಧಿಸಿದ ನಾಲ್ಕು ಪ್ರತ್ಯೇಕ ಘಟಕಗಳನ್ನು ಯುಪಿ ಎಟಿಎಸ್ ಭೇದಿಸಿದೆ. ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ 150 ಕ್ಕೂ ಹೆಚ್ಚು ಶಂಕಿತರನ್ನು ವಿಚಾರಣೆಗೆ ಒಳಪಡಿಸಿದ್ದು, 13 ಮಂದಿಯನ್ನು ಬಂಧಿಸಿದೆ.
ಉತ್ತರಪ್ರದೇಶದ ಭಯೋತ್ಪಾದನಾ ನಿಗ್ರಹ ದಳದೊಂದಿಗೆ ದೆಹಲಿ ಪೊಲೀಸ್ ವಿಶೇಷ ದಳದ ತಂಡಗಳು ಸಹ ಅನೇಕ ದಾಳಿಗಳನ್ನು ನಡೆಸಿ ಪಾಕಿಸ್ತಾನ ಮೂಲದ ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿರುವ ಹಲವರನ್ನು ಬಂಧಿಸಿವೆ. ಒಟ್ಟು ಒಂಬತ್ತು ಮಂಡಿಗಳನ್ನು ಬಂಧಿಸಿ ಅವರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಕೂಡ ವಶಕ್ಕೆ ಪಡೆದಿವೆ.
ಹನಿಟ್ರ್ಯಾಪ್‍ಗೆ ಒಳಗಾಗಿ ಮಿಲಿಟರಿ ಫೋಟೋ ಹಂಚಿಕೊಂಡ ವ್ಯಕ್ತಿ: ಜಮ್ಮು-ಕಾಶ್ಮೀರದಲ್ಲಿ ಆರೋಪಿ ಬಂಧನ
ದೆಹಲಿಯ ಐತಿಹಾಸಿಕ ದೇವಾಲಯ, ದೆಹಲಿ-ಸೋನಿಪತ್ ಹೆದ್ದಾರಿಯಲ್ಲಿರುವ ಜನಪ್ರಿಯ ಧಾಬಾ ಮತ್ತು ಹಿಸಾರ್‌ನಲ್ಲಿರುವ ಮಿಲಿಟರಿ ಶಿಬಿರದ ಮೇಲೆ ದಾಳಿಗಳನ್ನು ನಡೆಸಲು ಇವರು ಯೋಜನೆ ರೂಪಿಸಿದ್ದರು ಎಂಬುದು ತನಿಖೆಯಿಂದ ತಿಳಿದು ಬಂದಿದೆ.