ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮಗಳ ಮದುವೆಗೆ ಮುನ್ನ ಸೂರತ್‌ನ ಕೋಟ್ಯಧಿಪತಿ ಉದ್ಯಮಿ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ? ತನಿಖೆಯಲ್ಲಿ ಹೊರಬಿತ್ತು ಅಸಲಿ ಕಾರಣ

crime news: ಸೂರತ್‌ನ ಬಿಲ್ಡರ್ ಆತ್ಮಹತ್ಯೆ ಪ್ರಕರಣಕ್ಕೆ (self-harming case) ಸಂಬಂಧಿಸಿದಂತೆ ಮಹತ್ವದ ಪ್ರಗತಿ ಕಂಡುಬಂದಿದೆ. ಪೊಲೀಸರು ಅವರ ಪಾರ್ಟ್ನರ್ ಪೂನಂ ಭಡೋರಿಯಾ ಅವರನ್ನು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಬಂಧಿಸಿದ್ದಾರೆ. ಪೂನಂ ಕೂಡ ಪೊಲೀಸರಿಗೆ ಪ್ರತಿ ದೂರು ನೀಡಿದ್ದು, ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಹೇಳಿದ್ದಾರೆ.

ಪೂನಂ ಭಡೋರಿಯಾ ಮತ್ತು ತುಷಾರ್ ಘೇಲಾನಿ (ಸಂಗ್ರಹ ಚಿತ್ರ)

ಗಾಂಧಿನಗರ, ಫೆ. 24: ಗುಜರಾತ್‌ನ ಸೂರತ್‌ನ ಬಿಲ್ಡರ್ ಆತ್ಮಹತ್ಯೆ ಪ್ರಕರಣಕ್ಕೆ (Self Harming Case) ಸಂಬಂಧಿಸಿದಂತೆ ಮಹತ್ವದ ಪ್ರಗತಿ ಕಂಡು ಬಂದಿದೆ. ಬಿಲ್ಡರ್ ತುಷಾರ್ ಘೇಲಾನಿ ಅವರ ಸಾವು ನಗರದಾದ್ಯಂತ ಆಘಾತದ ಅಲೆಗಳನ್ನು ಉಂಟು ಮಾಡಿತ್ತು. ಇದೀಗ ಉಮ್ರಾ ಪೊಲೀಸರು ಅವರ ಪಾರ್ಟನರ್‌ ಪೂನಂ ಭಡೋರಿಯಾನನ್ನು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಬಂಧಿಸಿದ್ದಾರೆ (Crime News).

2026ರ ಜನವರಿ 31ರ ರಾತ್ರಿ ಘೇಲಾನಿ ತನ್ನ ಪರವಾನಗಿ ಪಡೆದ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡಿದ್ದರು. ಗಂಭೀರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಫೆಬ್ರವರಿ 5ರಂದು ಮೃತಪಟ್ಟರು. ಅವರ ಕುಟುಂಬ ನೀಡಿದ ದೂರಿನ ನಂತರ, ಪೊಲೀಸರು ತನಿಖೆಯನ್ನು ಪ್ರಾರಂಭಿಸಿದರು.

ಬಿಲ್ಡರ್‌ನ ಮಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ತನ್ನ ತಂದೆಯು ಪೂನಂ ಭಡೋರಿಯಾ ಜತೆ ಕಳೆದ 15 ವರ್ಷಗಳಿಂದ ಆತ್ಮೀಯ ಸಂಬಂಧ ಹೊಂದಿದ್ದರು. ಆದರೆ ಈ ಸಂಬಂಧವು ಅಂತಿಮವಾಗಿ ತೀವ್ರ ಮಾನಸಿಕ ಮತ್ತು ಆರ್ಥಿಕ ಒತ್ತಡಕ್ಕೆ ಕಾರಣವಾಯಿತು ಎಂದು ಹೇಳಿದ್ದಾರೆ.

ಯುವತಿಯರನ್ನು ವೇಶ್ಯಾವಾಟಿಕೆಗೆ ತಳ್ಳಿ ಕೋಟ್ಯಂತರ ರುಪಾಯಿ ಗಳಿಸಿದ ಚಾಲಾಕಿ ಸಹೋದರಿಯರು ಅಂದರ್‌

ಬ್ಲೂ ಪ್ಯಾಪಿಲ್ಲನ್ ಪ್ರಿ-ಪ್ರೈಮರಿ ಶಾಲೆಯಲ್ಲಿ ಪೂನಂ ಶೇ. 50ರಷ್ಟು ಪಾಲನ್ನು ಪಡೆಯಲು ಒತ್ತಡ ಹೇರಿದ್ದಾಳೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಈ ಉದ್ಯಮದಲ್ಲಿ ಯಾವುದೇ ದಾಖಲೆಗಳ ಹೂಡಿಕೆ ಇಲ್ಲದಿದ್ದರೂ ವ್ಯವಸ್ಥಾಪಕ ಪಾಲುದಾರಳಾಗಿ ಕಾರ್ಯನಿರ್ವಹಿಸಿದ್ದಾಳೆ. 2018 ಮತ್ತು 2024ರ ನಡುವೆ ಆಕೆ ಸುಮಾರು 1.37 ಕೋಟಿ ರು. ಸಂಬಳ ಮತ್ತು ಸವಲತ್ತುಗಳನ್ನು ಪಡೆದಿದ್ದಾಳೆ ಎಂದು ಆರೋಪಿಸಲಾಗಿದೆ. ಇದಲ್ಲದೆ, ಯಾವುದೇ ಬ್ಯಾಂಕಿಂಗ್ ವಹಿವಾಟುಗಳಿಲ್ಲದೆ ಜಾಲಿ ಆರ್ಕೇಡ್‌ನಲ್ಲಿರುವ ಸುಮಾರು 1.06 ಕೋಟಿ ರು. ಮೌಲ್ಯದ ಎರಡು ಅಂಗಡಿಗಳನ್ನು ಆಕೆಯ ಹೆಸರಿಗೆ ವರ್ಗಾಯಿಸಿರುವ ಬಗ್ಗೆಯೂ ದೂರು ಕೇಳಿ ಬಂದಿದೆ.

ಫೆಬ್ರವರಿ 5ರಂದು ನಿಗದಿಯಾಗಿದ್ದ ಘೇಲಾನಿಯ ಪುತ್ರಿಯ ಮದುವೆಗೆ ಸ್ವಲ್ಪ ಮೊದಲು ಪರಿಸ್ಥಿತಿ ಉದ್ವಿಗ್ನ ಹಂತ ತಲುಪಿದೆ ಎನ್ನಲಾಗಿದೆ. ಜನವರಿ 31ರಂದು ನಡೆದ ಫೋನ್ ಕರೆಯಲ್ಲಿ, ಮದುವೆ ಸಮಾರಂಭದಲ್ಲಿ ಕೆಲ ದೃಶ್ಯಗಳನ್ನು ಬಿತ್ತರಿಸಿ ಕುಟುಂಬವನ್ನು ಸಾರ್ವಜನಿಕವಾಗಿ ಅವಮಾನಿಸುವುದಾಗಿ ಪೂನಂ ಬೆದರಿಕೆ ಹಾಕಿದ್ದಳು ಎಂದು ಕುಟುಂಬ ಆರೋಪಿಸಿದೆ.

ತನಿಖೆಯು ನಿರಂತರ ಮಾನಸಿಕ ಮತ್ತು ಆರ್ಥಿಕ ಒತ್ತಡದತ್ತ ಬೊಟ್ಟು ಮಾಡುತ್ತಿದೆ ಎಂದು ಎಸಿಪಿ ಝಡ್‌ಆರ್ ದೇಸಾಯಿ ಹೇಳಿದ್ದಾರೆ. ಶಾಲೆ ಮತ್ತು ಆಸ್ತಿ ದಾಖಲೆಗಳ ಪರಿಶೀಲನೆಯಲ್ಲಿ ಹಲವು ಅನುಮಾನಾಸ್ಪದ ವಹಿವಾಟುಗಳು ಕಂಡುಬಂದಿವೆ ಎಂದು ದೇಸಾಯಿ ತಿಳಿಸಿದ್ದಾರೆ. ಪೂನಂ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆಯ ಪ್ರಕರಣವನ್ನು ದಾಖಲಿಸಲಾಗಿದೆ.

ಘೇಲಾನಿ ಅವರ ಮರಣದ ಒಂಬತ್ತು ದಿನಗಳ ನಂತರ, ಪೂನಂ ಭಡೋರಿಯಾ ಪೊಲೀಸ್ ದೂರು ದಾಖಲಿಸಿ, ಬಿಲ್ಡರ್ ಆತ್ಮಹತ್ಯೆಯಿಂದ ಸಾವಿಗೀಡಾಗಿಲ್ಲ, ಬದಲಿಗೆ ಕೊಲೆಯಾಗಿದ್ದಾರೆ ಎಂದು ಪ್ರತಿಪಾದಿಸಿದರು. ಘೇಲಾನಿ ಅವರ ಕುಟುಂಬದ ವಿರುದ್ಧ ಅವರು ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.