ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕೆಲಸಕ್ಕೆ ಸೇರಿದ ನಾಲ್ಕೇ ದಿನಕ್ಕೆ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಸೆಕ್ಯೂರಿಟಿ ಗಾರ್ಡ್; ಗುಜರಾತಿನಲ್ಲಿ ಬೆಚ್ಚಿ ಬೀಳಿಸುವ ಘಟನೆ

ವಸತಿ ಕಟ್ಟಡದ ಭದ್ರತಾ ಸಿಬ್ಬಂದಿಯೊಬ್ಬ ಮಹಿಳೆ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ಗುಜರಾತ್ ನಲ್ಲಿ ನಡೆದಿದೆ. ಕಟ್ಟಡದ ಟೆರೇಸ್ ಮೇಲೆ ಬಾಡಿಗೆದಾರ ಮಹಿಳೆಯ ಸೆಕ್ಯುರಿಟಿ ಗಾರ್ಡ್ ಅತ್ಯಾಚಾರ ನಡೆಸಿ ಟೆರೇಸ್ ಗೆ ಬೀಗ ಹಾಕಿ ಆರೋಪಿ ಪರಾರಿಯಾಗಿದ್ದು ಬಳಿಕ ಆತನನ್ನು ಬಂಧಿಸಲಾಗಿದೆ. ಆರೋಪಿಯನ್ನು ಉತ್ತರ ಪ್ರದೇಶದ ಹಾರ್ದೋಯ್ ಜಿಲ್ಲೆಯ ಆರೋಪಿ ಧರಮ್ ಸಿಂಗ್ ಎಂದು ಗುರುತಿಸಲಾಗಿದೆ.

ಸಂಗ್ರಹ ಚಿತ್ರ

ಅಹಮದಾಬಾದ್: ವಸತಿ ಕಟ್ಟಡ ಸೆಕ್ಯುರಿಟಿ ಗಾರ್ಡ್ (Security guard arrest) ವೊಬ್ಬ ಬಾಡಿಗೆದಾರ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ (physical abuse case) ಎಸಗಿ ಪರಾರಿಯಾಗಿದ್ದು ಬಳಿಕ ಬಂಧಿಸಿರುವ ಘಟನೆ ಗುಜರಾತ್ (gujarat crime) ನಲ್ಲಿ ನಡೆದಿದೆ. ಉತ್ತರ ಪ್ರದೇಶದ (Uttar Pradesh) ಹಾರ್ದೋಯ್ ಜಿಲ್ಲೆಯ ಧರಮ್ ಸಿಂಗ್ ಎಂಬಾತ ವಸತಿ ಕಟ್ಟಡ ಟೆರೇಸ್ ಮೇಲೆ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಬಳಿಕ ಟೆರೇಸ್‌ಗೆ ಬೀಗ ಹಾಕಿ ಪರಾರಿಯಾಗಿದ್ದಾನೆ. ಬಳಿಕ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಧರಮ್ ಸಿಂಗ್ ಕೆಲಸಕ್ಕೆ ಸೇರಿ ಕೇವಲ ನಾಲ್ಕು ದಿನಗಳಾಗಿತ್ತು ಎನ್ನಲಾಗಿದೆ.

ಗುಜರಾತ್ ನ ಅಹಮದಾಬಾದ್ ನ ಆನಂದನಗರ ಪ್ರದೇಶದ ವಸತಿ ಸೊಸೈಟಿಯ ಟೆರೇಸ್‌ನಲ್ಲಿ ಮಹಿಳಾ ಬಾಡಿಗೆದಾರರ ಮೇಲೆ ಅತ್ಯಾಚಾರ ಎಸಗಿದ ಧರಮ್ ಸಿಂಗ್ ನನ್ನು ಭಾನುವಾರ ಬಂಧಿಸಲಾಗಿದೆ. ಘಟನೆಯ ಬಳಿಕ ಆತನನ್ನು ನೇಮಕ ಮಾಡಿರುವ ನೇಮಕಾತಿ ಸಂಸ್ಥೆಯ ಕುರಿತು ಪೊಲೀಸರು ತನಿಖೆ ಪ್ರಾರಂಭಿಸಿದ್ದು, ಆರೋಪಿಯ ಹಿನ್ನಲೆ ಪರಿಶೀಲನೆ ನಡೆಸುವಲ್ಲಿ ಸಂಸ್ಥೆ ನಿರ್ಲಕ್ಷ್ಯ ವಹಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

NETF ಅಧ್ಯಕ್ಷರನ್ನು ಭೇಟಿಯಾದ ಸಚಿವ ಪ್ರಲ್ಹಾದ್‌ ಜೋಶಿ; ಪರೀಕ್ಷಾ ವ್ಯವಸ್ಥೆ ಸುಧಾರಣೆ ಕ್ರಮಗಳ ಬಗ್ಗೆ ಚರ್ಚೆ

ಘಟನೆಯ ಕುರಿತು ಮಾಹಿತಿ ನೀಡಿರುವ ಜಂಟಿ ಪೊಲೀಸ್ ಆಯುಕ್ತ (ಸೆಕ್ಟರ್ -1) ನೀರಜ್ ಬದ್ಗುಜರ್, ಶನಿವಾರ ತಡರಾತ್ರಿ ವೇಳೆಯಲ್ಲಿ ಮಹಿಳೆ ಟೆರೇಸ್ ಮೇಲೆ ಹೋಗಿದ್ದು ಈ ಸಂದರ್ಭದಲ್ಲಿ ಅಲ್ಲಿದ್ದ ಧರಮ್ ಸಿಂಗ್ ಆಕೆಯನ್ನು ಉಸಿರುಗಟ್ಟಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಬಳಿಕ ಟೆರೇಸ್‌ಗೆ ಬೀಗ ಹಾಕಿ ಪರಾರಿಯಾಗಿದ್ದಾನೆ ಎಂದು ತಿಳಿಸಿದರು.



ಧರಮ್ ಸಿಂಗ್ ಲಿಫ್ಟ್ ಮತ್ತು ಮೆಟ್ಟಿಲುಗಳನ್ನು ಬಳಸಿ ಟೆರೇಸ್‌ಗೆ ಹೋಗುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ಕೇವಲ ನಾಲ್ಕು ದಿನಗಳ ಹಿಂದೆ ಆ ಸೊಸೈಟಿಯ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡಲು ಪ್ರಾರಂಭಿಸಿದ್ದಾನೆ. ಘಟನೆಯ ಬಳಿಕ ಆತ ತನ್ನ ಮೊಬೈಲ್ ಫೋನ್ ಅನ್ನು ಸ್ವಿಚ್ ಆಫ್ ಮಾಡಿ ಬಂಧನದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ ಎಂದು ಅವರು ತಿಳಿಸಿದರು.

ಮಾಹಿತಿ ತಿಳಿದ ತಕ್ಷಣವೇ ಪೊಲೀಸರು ಸ್ಥಳೀಯ ಅಪರಾಧ ವಿಭಾಗ ಮತ್ತು ಅಪರಾಧ ವಿಭಾಗದ ಸಿಬ್ಬಂದಿಗಳನ್ನೊಳಗೊಂಡ ಹತ್ತು ತಂಡಗಳನ್ನು ರಚಿಸಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಶೋಧ ಕಾರ್ಯಾಚರಣೆ ಪ್ರಾರಂಭಿಸಿದರು. ಭಾನುವಾರ ಬೆಳಗ್ಗೆ 7- 8 ಗಂಟೆಯ ಸುಮಾರಿಗೆ ಹೆಬತ್‌ಪುರ ಪ್ರದೇಶದ ಬಳಿ ಸಿಂಗ್ ನನ್ನು ಬಂಧಿಸಲಾಗಿದೆ ಎಂದರು.

ಸಿಂಗ್ ಈ ಹಿಂದೆ ಆನಂದನಗರ ಪ್ರದೇಶದ ವಸತಿ ಸಮಾಜಕ್ಕೆ ಸೇರುವ ಮೊದಲು ಅಹಮದಾಬಾದ್‌ನ ವಿವಿಧ ಕಂಪೆನಿಗಳಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡಿದ್ದರು. ಆತನ ನೇಮಕಾತಿಯಲ್ಲಿ ಆಗಿರುವ ವೈಫಲ್ಯಕ್ಕೆ ಭದ್ರತಾ ಸಂಸ್ಥೆ ವಿರುದ್ಧವು ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು.

ಉದ್ಯೋಗದ ಸ್ಥಳದಲ್ಲಿ ಮಾನಸಿಕ ಕಿರುಕುಳ: ಡೆತ್‌ನೋಟ್‌ನಲ್ಲಿ ಸೂಪರ್‌ವೈಸರ್ ಹೆಸರು ಬರೆದಿಟ್ಟು ಮಹಿಳೆ ಆತ್ಮಹತ್ಯೆ

ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಎಫ್‌ಎಸ್‌ಎಲ್ ತಂಡವು ಅಪರಾಧ ಸ್ಥಳಕ್ಕೆ ಭೇಟಿ ನೀಡಿದ್ದು, ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿದೆ. ತನಿಖೆಯ ಭಾಗವಾಗಿ ಡಿಎನ್‌ಎ ಸಂಬಂಧಿತ ವಿಧಿವಿಜ್ಞಾನ ಪರೀಕ್ಷೆಯನ್ನು ಕೂಡ ನಡೆಸುವುದಾಗಿ ಅವರು ಹೇಳಿದರು.

ವಿದ್ಯಾ ಇರ್ವತ್ತೂರು

View all posts by this author