ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಒಡಿಶಾವನ್ನು ಬೆಚ್ಚಿಬೀಳಿಸಿದ ಅತ್ಯಾಚಾರ ಪ್ರಕರಣ: ಹತ್ತು ದಿನಗಳಲ್ಲಿ ಐದು ಸಾಮೂಹಿಕ ಅತ್ಯಾಚಾರ ದೂರು ದಾಖಲು

ಹತ್ತು ದಿನಗಳಲ್ಲಿ ಐದು ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು, ಒಡಿಶಾದಾದ್ಯಂತ ಆತಂಕ ಉಂಟು ಮಾಡಿದೆ. ಇತ್ತೀಚಿನ ಅತ್ಯಾಚಾರ ಪ್ರಕರಣ ಮಯೂರ್‌ಭಂಜ್ ಜಿಲ್ಲೆಯ ಕರಂಜೈ ಪ್ರದೇಶದಲ್ಲಿ ನಡೆದಿದೆ. ಕರಂಜೈ ಪ್ರಕರಣ ಸೇರಿದಂತೆ ಜೂನ್ 15ರಿಂದ ಒಡಿಶಾದಲ್ಲಿ ಕಳೆದ ಹತ್ತು ದಿನಗಳಲ್ಲಿ ಒಟ್ಟು ಐದು ಸಾಮೂಹಿಕ ಅತ್ಯಾಚಾರ ಪ್ರಕರಣಗಳು ನಡೆದಿದೆ.

ಭುವನೇಶ್ವರ: ಹತ್ತು ದಿನಗಳಲ್ಲಿ ಐದು ಅತ್ಯಾಚಾರ (physical abuse case) ಪ್ರಕರಣಗಳು ದಾಖಲಾಗಿದ್ದು, ಒಡಿಶಾದಾದ್ಯಂತ (odisha) ಆತಂಕ ಉಂಟು ಮಾಡಿದೆ. ಇತ್ತೀಚಿನ ಅತ್ಯಾಚಾರ ಪ್ರಕರಣ ಮಯೂರ್‌ಭಂಜ್ (Mayurbhanj) ಜಿಲ್ಲೆಯ ಕರಂಜೈ ಪ್ರದೇಶದಲ್ಲಿ ನಡೆದಿದೆ. ಜೂನ್ 25 ರಂದು ದೇವಸ್ಥಾನದಿಂದ ಮನೆಗೆ ಹಿಂದಿರುಗುತ್ತಿದ್ದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಮೂವರು ವ್ಯಕ್ತಿಗಳು ಆಕೆಯನ್ನು ತಡೆದು, ಹತ್ತಿರದ ಕಾಡಿಗೆ ಕರೆದೊಯ್ದು, ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಒಬ್ಬ ಶಂಕಿತನನ್ನು ಪೊಲೀಸರು ಬಂಧಿಸಿದ್ದಾರೆ. ಇತರ ಇಬ್ಬರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಮಯೂರ್‌ಭಂಜ್ ಜಿಲ್ಲೆಯ ಕರಂಜೈ ಪ್ರದೇಶದಲ್ಲಿ ಜೂನ್ 25 ರಂದು ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು ಪ್ರಕರಣಕ್ಕೆ ಸಂಬಂಧಿಸಿ ಮಲಾರ್ಪಾದ ಗ್ರಾಮದ ಬಿಕಾಶ್ ಪಾತ್ರ ಎಂಬಾತನನ್ನು ಬಂಧಿಸಲಾಗಿದೆ. ಇತರ ಇಬ್ಬರಿಗಾಗಿ ಶೋಧ ಕಾರ್ಯ ಮುಂದುವರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕರಂಜೈ ಪ್ರಕರಣ ಸೇರಿದಂತೆ ಜೂನ್ 15ರಿಂದ ಈವರೆಗೆ ಒಟ್ಟು ಐದು ಸಾಮೂಹಿಕ ಅತ್ಯಾಚಾರ ಪ್ರಕರಣಗಳು ನಡೆದಿದೆ.

  1. ಗಂಜಾಂ ಜಿಲ್ಲೆಯ ಗೋಪಾಲಪುರ ಬೀಚ್ ಬಳಿ, ಜೂನ್ 17ರಂದು ಮಹಿಳೆಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿ ಹತ್ತು ಮಂದಿಯನ್ನು ಬಂಧಿಸಲಾಗಿದೆ. ಮಹಿಳೆ ತನ್ನ ಸ್ನೇಹಿತನೊಂದಿಗೆ ಬೀಚ್‌ಗೆ ಹೋಗಿದ್ದಾಗ ಈ ಘಟನೆ ನಡೆದಿದೆ. ಆರೋಪಿ ಸ್ನೇಹಿತನನ್ನು ಎಳೆದೊಯ್ದು ಕಟ್ಟಿಹಾಕಿ ಬಳಿಕ ಹಲವು ಮಂದಿ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಶಂಕಿತ ಹತ್ತು ಮಂದಿ ಕೂಡ ಈಗ ಪೊಲೀಸರ ಬಂಧನದಲ್ಲಿದ್ದಾರೆ.
  2. ಕಿಯೋಂಜಾರ್ ಜಿಲ್ಲೆಯ ಟೆಂಟ್ಲಪಾಶಿ ಗ್ರಾಮದಲ್ಲಿ ಜೂನ್ 18ರಂದು ಬೆಳಗ್ಗೆ 17 ವರ್ಷದ ಬಾಲಕಿ ಶವ ಆಕೆಯ ಮನೆಯ ಸಮೀಪದ ಭತ್ತದ ಗದ್ದೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೃತದೇಹದಲ್ಲಿ ಗಾಯದ ಗುರುತುಗಳಿದ್ದುದರಿಂದ ಆಕೆಯ ಸಾವಿಗೆ ಮುನ್ನ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿದ್ದು, ಈ ಕುರಿತು ತನಿಖೆ ನಡೆಸಲಾಗುತ್ತಿದೆ.
  3. ಮಯೂರ್‌ಭಂಜ್ ಜಿಲ್ಲೆಯ ಬರಿಪಾದದಲ್ಲಿ ಜೂನ್ 19ರಂದು 31 ವರ್ಷದ ಮಹಿಳೆ ಪತಿ ಜತೆ ಬರಿಪಾದ ಸದರ್ ಪೊಲೀಸ್ ಠಾಣೆಗೆ ಬಂದು ಸಾಮೂಹಿಕ ಅತ್ಯಾಚಾರ ನಡೆದಿರುವುದಾಗಿ ದೂರು ದಾಖಲಿಸಿದ್ದಾರೆ. ಪರಿಚಿತ ನಾಲ್ವರು ಮನೆಯಲ್ಲಿ ಪತ್ನಿಯೊಬ್ಬಳೇ ಇದ್ದಾಗ ಮನೆಗೆ ನುಗ್ಗಿ ಆಕೆಯ ಮೇಲೆ ಅತ್ಯಾಚಾರ ನಡೆಸಿರುವುದಾಗಿ ಮಹಿಳೆಯ ಪತಿ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ.
  4. ಗಂಜಾಂ ಜಿಲ್ಲೆಯ ಬೆರ್ಹಾಂಪುರದಲ್ಲಿ ಜೂನ್ 25ರಂದು ಕ್ಲಿನಿಕ್ ಮಾಲೀಕ 17 ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿರುವುದಾಗಿ ಆರೋಪಿಸಲಾಗಿದೆ. ಆರೋಪಿಯು ಬಾಲಕಿಗೆ ಬಿಎಸ್ಸಿ ನರ್ಸಿಂಗ್ ಅಧ್ಯಯನಕ್ಕೆ ಸಹಾಯ ಮಾಡುವುದಾಗಿ ಮತ್ತು ಉಚಿತ ವಸತಿ ಒದಗಿಸುವುದಾಗಿ ಭರವಸೆ ನೀಡಿದ್ದ ಎನ್ನಲಾಗಿದೆ. ಈ ಕುರಿತು ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಜೂ.27ರಿಂದ 29ರವರಗೆ ಪೋಟೋ ಟುಡೇ ವಸ್ತು ಪ್ರದರ್ಶನ

ಕಳೆದ ಹತ್ತು ದಿನಗಳಲ್ಲಿ ಗಂಜಾಂ, ಕಿಯೋಂಜಾರ್ ಮತ್ತು ಮಯೂರ್ಭಂಜ್ ಜಿಲ್ಲೆಗಳಲ್ಲಿ ನಡೆದ ಈ ಐದು ಅತ್ಯಾಚಾರ ಪ್ರಕರಣಗಳು ಸಾರ್ವಜನಿಕ ಕಳವಳವನ್ನು ಉಂಟು ಮಾಡಿದೆ. ಒಡಿಶಾದಲ್ಲಿ ಮಹಿಳೆಯರ ಮೇಲಿನ ಅಪರಾಧಗಳನ್ನು ತಡೆಗಟ್ಟುವ ಕ್ರಮಗಳು ಮತ್ತು ಕಾನೂನು ಜಾರಿ ಪ್ರತಿಕ್ರಿಯೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ವಿದ್ಯಾ ಇರ್ವತ್ತೂರು

View all posts by this author